ಏಷ್ಯಾಕಪ್ ಮುಗಿದ ಕೆಲವೇ ಗಂಟೆಗಳಲ್ಲಿ ಭಾರತಕ್ಕೆ ಬಂದ ಟೀಮ್ ಇಂಡಿಯಾ: ವಿಡಿಯೋ
Team India arrives in Mumbai: ಏಷ್ಯಾಕಪ್ ಮುಗಿದು ಹೆಚ್ಚು ಸಮಯ ಭಾರತೀಯ ಆಟಗಾರರು ಶ್ರೀಲಂಕಾದಲ್ಲಿ ಸಮಯ ಕಳೆಯದೆ ನೇರವಾಗಿ ಏರ್ಪೋರ್ಟ್ಗೆ ಬಂದು ಭಾರತಕ್ಕೆ ಮರಳಿದ್ದಾರೆ. ಇಂದು ಮುಂಜಾನೆ ಹೊತ್ತಿಗೆ ಟೀಮ್ ಇಂಡಿಯಾ ಪ್ಲೇಯರ್ಸ್ ಮುಂಬೈ ತಲುಪಿದ್ದಾರೆ. ಇಲ್ಲಿದೆ ನೋಡಿ ಆಟಗಾರರು ಆಗಮಿಸುತ್ತಿರುವ ವಿಡಿಯೋ.
ಏಷ್ಯಾಕಪ್ 2023 ಟೂರ್ನಿ (Asia Cup 2023) ಮುಕ್ತಾಯಗೊಂಡಿದ್ದು, ಭಾರತ ತಂಡ ಎಂಟನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿದ ಸಾಧನೆ ಮಾಡಿದೆ. ಭಾನುವಾರ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಶ್ರೀಲಂಕಾ ಬ್ಯಾಟರ್ಗಳು 50 ರನ್ಗೆ ಆಲೌಟ್ ಆದರು. ಭಾರತ 6.1 ಓವರ್ನಲ್ಲಿ ಗುರಿ ಮುಟ್ಟಿ ಎರಡು ಗಂಟೆಗಳ ಒಳಗೆ ಫೈನಲ್ ಪಂದ್ಯವೇ ಮುಗಿದು ಹೋಯಿತು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ತವರಿಗೆ ಹೊರಟರು.
ಏಷ್ಯಾಕಪ್ ಮುಗಿದು ಹೆಚ್ಚು ಸಮಯ ಭಾರತೀಯ ಆಟಗಾರರು ಶ್ರೀಲಂಕಾದಲ್ಲಿ ಸಮಯ ಕಳೆಯದೆ ನೇರವಾಗಿ ಏರ್ಪೋರ್ಟ್ಗೆ ಬಂದು ಭಾರತಕ್ಕೆ ಮರಳಿದ್ದಾರೆ. ಇಂದು ಮುಂಜಾನೆ ಹೊತ್ತಿಗೆ ಟೀಮ್ ಇಂಡಿಯಾ ಪ್ಲೇಯರ್ಸ್ ಮುಂಬೈ ತಲುಪಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಇತರರು ಇಂದು (ಸೆಪ್ಟೆಂಬರ್ 18) ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಬಳಿಕ ತಮ್ಮ ಮನೆಗೆ ತೆರಳಿದರು.
ಏರ್ಪೋರ್ಟ್ನಿಂದ ಆಗಮನಿಸುತ್ತಿರುವ ಟೀಮ್ ಇಂಡಿಯಾ ಆಟಗಾರರ ವಿಡಿಯೋ:
#WATCH | Team India arrived at Mumbai’s Kalina Airport after winning the #AsiaCup2023 finals against Sri Lanka.
India beat Sri Lanka in the Asia Cup final by 10 wickets.
(Visuals from earlier today) pic.twitter.com/hN8rX0GTnM
— ANI (@ANI) September 18, 2023
ಏಷ್ಯಾಕಪ್ 2023 ಫೈನಲ್ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಮೊದಲ ಓವರ್ನಿಂದ ವಿಕೆಟ್ ಕಳೆದುಕೊಂಡು ಸಾಗಿತು. ಕೇವಲ 15.2 ಓವರ್ಗಳಲ್ಲಿ 50 ರನ್ಗೆ ಸರ್ವಪತನ ಕಂಡಿತು. ತಂಡದ ಪರ ಕುಸಲ್ ಮೆಂಡಿಸ್ 17 ರನ್ ಗಳಿಸಿದ್ದು ಗರಿಷ್ಠ ಸ್ಕೋರ್. 5 ಬ್ಯಾಟರ್ಗಳು ಸೊನ್ನೆ ಸುತ್ತಿದರು. ಭಾರತ ಪರ ಸಿರಾಜ್ 6 ವಿಕೆಟ್ ಹಾಗೂ ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರು. ಭಾರತವನ್ನು ಇಶಾನ್ ಕಿಶನ್ (23*) ಹಾಗೂ ಶುಭ್ಮನ್ ಗಿಲ್ (27*) 6.1 ಓವರ್ನಲ್ಲಿ ಗುರಿ ಮುಟ್ಟಿಸಿ 10 ವಿಕೆಟ್ಗಳ ಜಯ ಸಾಧಿಸುವಂತೆ ಮಾಡಿದರು.
ICC ODI Ranking: ಏಷ್ಯಾಕಪ್ ಗೆದ್ದ ಭಾರತ; ಅಗ್ರಸ್ಥಾನಕ್ಕೇರಿದ ಪಾಕಿಸ್ತಾನ..!
ಭಾರತದ ಮುಂದಿನ ಟಾರ್ಗೆಟ್ ಆಸ್ಟ್ರೇಲಿಯಾ:
ಭಾರತ ಕ್ರಿಕೆಟ್ ತಂಡ ಸೆಪ್ಟೆಂಬರ್ 22 ರಿಂದ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯು ಮೊಹಾಲಿ, ಇಂದೋರ್ ಮತ್ತು ರಾಜ್‌ಕೋಟ್‌ನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯಗಳು ಕ್ರಮವಾಗಿ ಸೆ. 22, ಸೆಪ್ಟೆಂಬರ್ 24 ಮತ್ತು ಸೆಪ್ಟೆಂಬರ್ 27 ರಂದು ನಡೆಯಲಿದೆ. ಈ ಏಕದಿನ ಸರಣಿಯನ್ನು ಸ್ಪೋರ್ಟ್ಸ್ 18 ಇಂಗ್ಲಿಷ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಜೊತೆಗೆ ಪಂದ್ಯವನ್ನು JioCinema ದಲ್ಲಿ ಉಚಿತವಾಗಿ ವೀಕ್ಷಿಸಬಹುದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ