AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup Final: ದೇಶಕ್ಕೆ ಮರಳುವ ಖುಷಿಯಲ್ಲಿ ಹೊಟೇಲ್​ನಲ್ಲಿ ಪಾಸ್​ಪೋರ್ಟ್ ಮರೆತ ರೋಹಿತ್ ಶರ್ಮಾ: ಮುಂದೇನಾಯ್ತು?

India vs Sri Lanka, Asia Cup 2023 Final: ಏಷ್ಯಾಕಪ್ ಫೈನಲ್ ಮುಗಿದ ಬಳಿಕ ಟೀಮ್ ಇಂಡಿಯಾ ಆಟಗಾರರು ಭಾರತಕ್ಕೆ ಹಿಂತಿರುಗಲು ಸಜ್ಜಾಗಿದ್ದರು. ಆದರೆ, ರೋಹಿತ್ ಶರ್ಮಾ ಅವರು ತಮ್ಮ ಪಾಸ್‌ಪೋರ್ಟ್ ಅನ್ನು ರೂಮ್​ನಲ್ಲಿಯೇ ಮರೆತು ಬಂದಿದ್ದ ಕಾರಣ, ಆಟಗಾರರು ಬಸ್​ನಲ್ಲಿ ಕೆಲ ಸಮಯ ಕಾಯಬೇಕಾಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Asia Cup Final: ದೇಶಕ್ಕೆ ಮರಳುವ ಖುಷಿಯಲ್ಲಿ ಹೊಟೇಲ್​ನಲ್ಲಿ ಪಾಸ್​ಪೋರ್ಟ್ ಮರೆತ ರೋಹಿತ್ ಶರ್ಮಾ: ಮುಂದೇನಾಯ್ತು?
Rohit Sharma
Vinay Bhat
|

Updated on: Sep 18, 2023 | 10:51 AM

Share

ಕೆಲವು ವರ್ಷಗಳ ಹಿಂದೆ ಚಾಟ್ ಶೋ ಒಂದರಲ್ಲಿ ಟೀಮ್ ಇಂಡಿಯಾದಲ್ಲಿ ಅತಿ ಹೆಚ್ಚು ‘ಮರೆತುಹೋಗುವ’ ಕ್ರಿಕೆಟಿಗರು ಯಾರು ಎಂಬ ಪ್ರಶ್ನೆಯನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಬಳಿ ಕೇಳಲಾಗಿತ್ತು. ಆಗ ಕೊಹ್ಲಿ ಒಂದು ಕ್ಷಣವೂ ಯೋಚಿಸದೆ ತಕ್ಷಣ ಹೇಳಿದ ಹೆಸರು ರೋಹಿತ್ ಶರ್ಮಾ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆ ಏಷ್ಯಾಕಪ್ ಮುಗಿದ ಬಳಿಕ ಭಾರತೀಯ ಆಟಗಾರರು ಏರ್​ಪೋರ್ಟ್​ಗೆ ತೆರಳುವಾಗ ನಡೆಯಿತು.

ಭಾನುವಾರ, ಭಾರತ ದಾಖಲೆಯ 8 ನೇ ಏಷ್ಯಾಕಪ್ ಪ್ರಶಸ್ತಿ ಜಯಿಸಿದ ನಂತರ, ರೋಹಿತ್ ಶರ್ಮಾ ಮರೆವಿನ ಸ್ವಭಾವ ಎಲ್ಲರೂ ಕಂಡರು. ಏಷ್ಯಾಕಪ್ ಫೈನಲ್ ಮುಗಿದ ಬಳಿಕ ಟೀಮ್ ಇಂಡಿಯಾ ಆಟಗಾರರು ಹೆಚ್ಚು ಸಮಯ ವ್ಯರ್ಥ ಮಾಡದೆ ಬೇಗನೇ ಭಾರತಕ್ಕೆ ಹಿಂತಿರುಗಲು ಸಜ್ಜಾಗಿದ್ದರು. ಇದಕ್ಕಾಗಿ ರಾತ್ರಿ ಹೋಟೆಲ್​ನಿಂದ ವಿಮಾನ ನಿಲ್ದಾಣಕ್ಕೆ ಹೊರಡಲು ಬಸ್​ನಲ್ಲಿ ಕೂತು ತಯಾರಾಗಿದ್ದರು. ಆದರೆ, ಬಸ್ ಅನ್ನು ತಡೆದು ರೋಹಿತ್ ಶರ್ಮಾ ಬಾಗಿಲ ಬಳಿ ಕಾಯುತ್ತಿದ್ದರು.

ಇದನ್ನೂ ಓದಿ
Image
ಏಷ್ಯಾಕಪ್ ಮುಗಿದ ಕೆಲವೇ ಗಂಟೆಗಳಲ್ಲಿ ಭಾರತಕ್ಕೆ ಬಂದ ಟೀಮ್ ಇಂಡಿಯಾ: ವಿಡಿಯೋ
Image
ಏಕದಿನ ವಿಶ್ವಕಪ್​ಗೆ ಪರಿಷ್ಕೃತ ಇಂಗ್ಲೆಂಡ್ ತಂಡ ಪ್ರಕಟ
Image
ಕಿಂಗ್ ಕೊಹ್ಲಿಯ ನಡಿಗೆಯನ್ನು ಅಣಕಿಸಿದ ಕಿಶನ್; ವಿಡಿಯೋ ನೋಡಿ
Image
ಐದೇ ದಿನದಲ್ಲಿ ಭಾರತಕ್ಕೆ ಮತ್ತೊಂದು ಪಂದ್ಯ: ಯಾರ ವಿರುದ್ಧ?

ಟ್ರೋಫಿ ಎತ್ತಿ ಹಿಡಿಯುವ ಮುನ್ನ ಪೋಸ್ಟ್ ಮ್ಯಾಚ್​ನಲ್ಲಿ ರೋಹಿತ್ ಶರ್ಮಾ ಹೇಳಿದ್ದೇನು ನೋಡಿ

ರೋಹಿತ್ ಶರ್ಮಾ ಅವರು ತಮ್ಮ ಪಾಸ್‌ಪೋರ್ಟ್ ಅನ್ನು ರೂಮ್​ನಲ್ಲಿಯೇ ಮರೆತು ಬಸ್ ಏರಿದ್ದರು. ಹೀಗಾಗಿ ಹೋಟೆಲ್ ಅಧಿಕಾರಿಯೊಬ್ಬರು ಅವರ ರೂಮ್​ಗೆ ತೆರಳಿ ಪಾಸ್​ಪೂರ್ಟ್ ತಂದು ರೋಹಿತ್​ಗೆ ನೀಡಿದ ನಂತರ ಬಸ್ ಹೊರಟಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ರೋಹಿತ್ ಶರ್ಮಾ ಪಾಸ್​ಪೋರ್ಟ್​ಗಾಗಿ ಕಾಯುತ್ತಿರುವ ವಿಡಿಯೋ:

2017 ರಲ್ಲಿ, ವಿರಾಟ್ ಕೊಹ್ಲಿ ಸಂದರ್ಶನವೊಂದರಲ್ಲಿ ರೋಹಿತ್ ಶರ್ಮಾ ಬಗ್ಗೆ ಹೀಗೆ ಹೇಳಿದ್ದರು, “ರೋಹಿತ್ ಶರ್ಮಾ ಅವರ ರೀತಿ ಯಾರೂ ಮರೆಯುವುದನ್ನು ನಾನು ನೋಡಿಲ್ಲ. ಅವನು ತನ್ನ ಐಪ್ಯಾಡ್, ಪಾಸ್‌ಪೋರ್ಟ್ ಅನ್ನು ಸಹ ಮರೆತುಬಿಡುತ್ತಾರೆ,“ ಎಂದು ಹೇಳಿದ್ದರು.

ಮುಂಬೈಗೆ ಬಂದ ಆಟಗಾರರು:

ಏಷ್ಯಾಕಪ್ ಫೈನಲ್ ಪಂದ್ಯ ಕೆಲವೇ ಗಂಟೆಗಳಲ್ಲಿ ಮುಗಿದ ಕಾರಣ ಭಾರತೀಯ ಆಟಗಾರರು ಶ್ರೀಲಂಕಾದಲ್ಲಿ ಹೆಚ್ಚು ಸಮಯ ಕಳೆಯದೆ ನೇರವಾಗಿ ಏರ್​ಪೋರ್ಟ್​ಗೆ ಬಂದು ಭಾರತಕ್ಕೆ ಮರಳಿದ್ದಾರೆ. ಇಂದು ಮುಂಜಾನೆ ಸುಮಾರು 4 ಗಂಟೆ ಹೊತ್ತಿಗೆ ಟೀಮ್ ಇಂಡಿಯಾ ಪ್ಲೇಯರ್ಸ್ ಮುಂಬೈನ ಕಲಿನಾ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಶುಭ್​ಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಇತರ ಆಟಗಾರರು ತಮ್ಮ ಮನೆಗೆ ತೆರಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ