ಕಿಂಗ್ ಕೊಹ್ಲಿಯ ನಡಿಗೆಯನ್ನು ಅಣಕಿಸಿದ ಕಿಶನ್; ವಿರಾಟ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ

Team India: ಲಂಕಾ ತಂಡವನ್ನು ಹೀನಾಯವಾಗಿ ಮಣಿಸಿದ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಟ್ರೋಫಿಯೊಂದಿಗೆ ಕುಣಿದು ಕುಪ್ಪಳಿಸಿದರು. ಈ ನಡುವೆ ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಕೆಲಸ ಮಾಡಿದ್ದು, ಇವರಿಬ್ಬರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ಭಾರಿ ವೈರಲ್ ಆಗಿದೆ.

ಕಿಂಗ್ ಕೊಹ್ಲಿಯ ನಡಿಗೆಯನ್ನು ಅಣಕಿಸಿದ ಕಿಶನ್; ವಿರಾಟ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on: Sep 18, 2023 | 8:55 AM

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಭಾನುವಾರ ನಡೆದ ಏಷ್ಯಾಕಪ್ (Asia Cup 2023) ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು (India vs Sri lanka) 10 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಕೇವಲ ಮೂರು ಗಂಟೆಗಳ ಕಾಲ ನಡೆದ ಈ ಫೈನಲ್ ಪಂದ್ಯದಲ್ಲಿ ಭಾರತ ಸುಲಭವಾಗಿ ಗೆಲುವು ಸಾಧಿಸಿತು. ಮಧ್ಯಾಹ್ನ ಮೂರು ಗಂಟೆಗೆ ಆರಂಭವಾದ 50 ಓವರ್​ಗಳ ಪಂದ್ಯ ಕೇವಲ ಮೂರು ಗಂಟೆಗಳಲ್ಲಿ ಮುಕ್ತಾಯವಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 92 ಎಸೆತಗಳನ್ನು ಆಡಿ 50 ರನ್​ಗಳಿಗೆ ಆಲೌಟ್ ಆಯಿತು. ಶ್ರೀಲಂಕಾ ನೀಡಿದ ಗುರಿಯನ್ನು ಭಾರತ ಒಂದೇ ಒಂದು ವಿಕೆಟ್ ನಷ್ಟವಿಲ್ಲದೆ ಪೂರ್ಣಗೊಳಿಸಿ ಎಂಟನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು. ಈ ಪ್ರಶಸ್ತಿ ಗೆದ್ದ ನಂತರ ಟೀಂ ಇಂಡಿಯಾ (Team India) ಆಟಗಾರರ ಮುಖದಲ್ಲಿ ಸಂತಸ ಮನೆ ಮಾಡಿತು. ಲಂಕಾ ತಂಡವನ್ನು ಹೀನಾಯವಾಗಿ ಮಣಿಸಿದ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಟ್ರೋಫಿಯೊಂದಿಗೆ ಕುಣಿದು ಕುಪ್ಪಳಿಸಿದರು. ಈ ನಡುವೆ ಇಶಾನ್ ಕಿಶನ್ (Ishan Kishan) ಹಾಗೂ ವಿರಾಟ್ ಕೊಹ್ಲಿ (Virat Kohli) ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಕೆಲಸ ಮಾಡಿದ್ದು, ಇವರಿಬ್ಬರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ಭಾರಿ ವೈರಲ್ ಆಗಿದೆ.

ನಗಲು ಶುರು ಮಾಡಿದ ಆಟಗಾರರು

ವಾಸ್ತವವಾಗಿ ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರು ಮೈದಾನಕ್ಕಾಗಮಿಸಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಪಂದ್ಯದ ನಂತರ ಕೊಹ್ಲಿ, ಇಶಾನ್ ಕಿಶನ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಶುಭ್​ಮನ್ ಗಿಲ್ ಮೈದಾನದಲ್ಲಿ ಮಾತನಾಡುತ್ತಿದ್ದರು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಇಶಾನ್ ಏನೋ ಹೇಳಿದ್ದು, ವಿರಾಟ್ ಕೊಹ್ಲಿಯನ್ನು ಅನುಕರಿಸಿ ಅವರಂತೆ ನಡೆಯತೊಡಗಿದರು. ಅಂದರೆ ಕೊಹ್ಲಿಯ ನಡಿಗೆಯನ್ನು ಇಶಾನ್ ನಕಲು ಮಾಡುತ್ತಿದ್ದರು. ಇಶಾನ್ ಈ ರೀತಿ ಕೊಹ್ಲಿಯನ್ನು ಅನುಕರಣೆ ಮಾಡುವುದನ್ನು ನೋಡಿ ಗಿಲ್ ಸೇರಿದಂತೆ ಅಲ್ಲಿದ್ದ ಎಲ್ಲಾ ಆಟಗಾರರು ನಗಲು ಶುರು ಮಾಡಿದರು.

ರಾಹುಲ್ ಅಥವಾ ಕಿಶನ್? ಲೈವ್ ಪಂದ್ಯದ ನಡುವೆ ವಾಕ್ಸಮರಕ್ಕಿಳಿದ ಗಂಭೀರ್- ಕೈಫ್..!

ಕಿಶನ್ ಅವರ ಅನುಕರಣೆ ನೋಡಿ ಕೊಹ್ಲಿ ಕೂಡ ನಗತೊಡಗಿದರು. ಇಶಾನ್, ಕೊಹ್ಲಿಯಂತೆ ಸ್ವಲ್ಪ ದೂರ ಕ್ರಮಿಸಿದ ನಂತರ ಹಿಂತಿರುಗಿದರು. ಇದನ್ನು ಗಮನಿಸಿದ ಕೊಹ್ಲಿ, ಇಶಾನ್ ಅವರ ನಡಿಗೆನ್ನು ಕಾಪಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಿಶನ್, ನಾನು ಆ ರೀತಿ ನಡೆಯುವುದಿಲ್ಲ ಎಂದು ಕೊಹ್ಲಿಗೆ ಹೇಳುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಿಕ್ಕ ಅವಕಾಶವನ್ನು ಬಳಸಿಕೊಂಡ ಕಿಶನ್

ಕೆಎಲ್ ರಾಹುಲ್ ಗಾಯಗೊಂಡಿದ್ದರಿಂದ ಈ ಬಾರಿಯ ಏಷ್ಯಾಕಪ್​ನಲ್ಲಿ ಇಶಾನ್​ಗೆ ಅವಕಾಶ ಸಿಕ್ಕಿತ್ತು. ಸೆಪ್ಟೆಂಬರ್ 2ರಂದು ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ತಂಡದ ಪರ ಅದ್ಭುತ ಇನ್ನಿಂಗ್ಸ್ ಆಡಿದ್ದ ಇಶಾನ್​ ಅರ್ಧಶತಕ ಬಾರಿಸಿದ್ದರು. ಇದಾದ ಬಳಿಕ ಇಶಾನ್ ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿ ಕಣಕ್ಕಿಳಿಸಲಾಯಿತು. ಈ ಏಷ್ಯಾಕಪ್‌ನಲ್ಲಿ ಪ್ರತಿ ಪಂದ್ಯವನ್ನೂ ಆಡಿದ ಕಿಶನ್, ತಂಡಕ್ಕೆ ಬ್ಯಾಟಿಂಗ್ ಬೆನ್ನೇಲುಬಾಗಿ ತಮ್ಮನ್ನು ತಾವು ಸಾಭೀತು ಪಡಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲೂ ಕೊಹ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದರು. ಪಾಕಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ವಿರಾಟ್, ಪಾಕ್ ತಂಡವನ್ನು ಮಣಿಸುವಲ್ಲಿ ಪ್ರಮುಖ ರುವಾರಿ ಎನಿಸಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ