ರಾಹುಲ್ ಅಥವಾ ಕಿಶನ್? ಲೈವ್ ಪಂದ್ಯದ ನಡುವೆ ವಾಕ್ಸಮರಕ್ಕಿಳಿದ ಗಂಭೀರ್- ಕೈಫ್..!

2023 ODI World Cup: ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾದ ಕೀಪಿಂಗ್ ಜವಬ್ದಾರಿ ಹೊತ್ತಿರುವ ಕಿಶನ್, ಪಾಕ್ ವಿರುದ್ಧದ ಪಂದ್ಯದಲ್ಲಿ ಕೀಪಿಂಗ್ ಮಾಡಲು ಸಾಧ್ಯವಾಗದಿದ್ದರೂ, ಬ್ಯಾಟಿಂಗ್​ನಲ್ಲಿ ಮಾತ್ರ ಮಿಂಚಿದರು. ಹೀಗಾಗಿ ಇಡೀ ಏಷ್ಯಾಕಪ್ ಹಾಗೂ ವಿಶ್ವಕಪ್​ಗೆ ಕಿಶನ್​ರನ್ನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಬೇಕೆಂಬ ಕೂಗು ಈಗ ಕೇಳಲಾರಂಭಿಸಿದೆ.

ರಾಹುಲ್ ಅಥವಾ ಕಿಶನ್? ಲೈವ್ ಪಂದ್ಯದ ನಡುವೆ ವಾಕ್ಸಮರಕ್ಕಿಳಿದ ಗಂಭೀರ್- ಕೈಫ್..!
ಕೈಫ್- ಗಂಭೀರ್
Follow us
|

Updated on:Sep 04, 2023 | 10:40 AM

ಟೀಂ ಇಂಡಿಯಾದಲ್ಲಿ (Team India) ಸದ್ಯಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಜಾಗಕ್ಕೆ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಕನ್ನಡಿಗ ಕೆಎಲ್ ರಾಹುಲ್ (KL Rahul) ಹಾಗೂ ಯುವ ಆಟಗಾರ ಇಶಾನ್ ಕಿಶನ್ (Ishan Kishan) ಈ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾದ ಕೀಪಿಂಗ್ ಜವಬ್ದಾರಿ ಹೊತ್ತಿರುವ ಕಿಶನ್, ಪಾಕ್ ವಿರುದ್ಧದ ಪಂದ್ಯದಲ್ಲಿ ಕೀಪಿಂಗ್ ಮಾಡಲು ಸಾಧ್ಯವಾಗದಿದ್ದರೂ, ಬ್ಯಾಟಿಂಗ್​ನಲ್ಲಿ ಮಾತ್ರ ಮಿಂಚಿದರು. ಹೀಗಾಗಿ ಇಡೀ ಏಷ್ಯಾಕಪ್ ಹಾಗೂ ವಿಶ್ವಕಪ್​ಗೆ ಕಿಶನ್​ರನ್ನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಬೇಕೆಂಬ ಕೂಗು ಈಗ ಕೇಳಲಾರಂಭಿಸಿದೆ. ಈ ನಡುವೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕಾಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ (Gautam Gambhir) ಹಾಗೂ ಮೊಹಮ್ಮದ್ ಕೈಫ್ (Mohammed Kaif) ಈ ವಿಚಾರವಾಗಿ ತಮ್ಮದೇ ಆದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

81 ಎಸೆತಗಳಲ್ಲಿ 82 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್

ವಾಸ್ತವವಾಗಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟರ್​ಗಳ ವೈಫಲ್ಯದ ನಡುವೆ ಎಲ್ಲರೂ ಮೆಚ್ಚುವಂತಹ ಪ್ರದರ್ಶನ ನೀಡಿದ ಕಿಶನ್, 81 ಎಸೆತಗಳಲ್ಲಿ 82 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಭಾರತಕ್ಕೆ ಕಾಡುತ್ತಿದ್ದ ಮಧ್ಯಮ ಕ್ರಮಾಂಕದ ವೈಫಲ್ಯದ ಸಮಸ್ಯೆಗೂ ಪರಿಹಾರವಾಗಿ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಹಿಂದೆ ವೆಸ್ಟ್ ಪ್ರವಾಸದಲ್ಲೂ ಟೀಂ ಇಂಡಿಯಾ ಪರ ಸ್ಮರಣೀಯ ಇನ್ನಿಂಗ್ಸ್​ಗಳನ್ನು ಆಡಿದ್ದ ಕಿಶನ್ ಸತತ ನಾಲ್ಕು ಅರ್ಧಶತಕಗಳನ್ನು ಸಿಡಿಸಿ ಮಿಂಚಿದ್ದರು. ಹೀಗಾಗಿ ಮುಂಬರುವ ಮಹತ್ವದ ಟೂರ್ನಿಯಲ್ಲಿ ಕಿಶನ್​ಗೆ ಟೀಂ ಇಂಡಿಯಾದ ವಿಕೆಟ್ ಕೀಪಿಂಗ್ ಜವಬ್ದಾರಿ ನೀಡಬೇಕೆಂಬ ಕೂಗು ಜೋರಾಗಿ ಕೇಳಿಬರುತ್ತಿದೆ.

ಭಾರತ- ನೇಪಾಳ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಬರೆಯಲ್ಲಿದ್ದಾರೆ ಕನ್ನಡಿಗ ಜಾವಗಲ್ ಶ್ರೀನಾಥ್

ರಾಹುಲ್ ಮ್ಯಾಚ್ ವಿನ್ನರ್

ಈ ಬಗ್ಗೆ ಭಾರತ-ಪಾಕ್ ಪಂದ್ಯದಲ್ಲಿ ಕಾಮೆಂಟರಿ ಜವಬ್ದಾರಿ ಹೊತ್ತಿದ್ದ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಮತ್ತು ಮೊಹಮ್ಮದ್ ಕೈಫ್, ಫಾರ್ಮ್‌ನಲ್ಲಿರುವ ಇಶಾನ್‌ರನ್ನು ವಿಶ್ವಕಪ್‌ನಲ್ಲಿ ಆಡಿಸಬೇಕೇ ಎಂಬ ಪ್ರಶ್ನೆಗೆ ಪರ- ವಿರೋದದ ಉತ್ತರ ನೀಡಿದರು. ಈ ಹಂತದಲ್ಲಿ ರಾಹುಲ್ ಪರ ಬ್ಯಾಟ್ ಬೀಸಿದ ಕೈಫ್, ‘ಲೋಕೇಶ್ ರಾಹುಲ್ ಮ್ಯಾಚ್ ವಿನ್ನರ್ ಎಂಬುದು ಸಾಬೀತಾಗಿದೆ. ಐದನೇ ಸ್ಥಾನದಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇದು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಗೊತ್ತಿದೆ. ಒಂದು ವೇಳೆ ಲೋಕೇಶ್ ರಾಹುಲ್ ತಂಡಕ್ಕೆ ಫಿಟ್ ಆಗಿ ಮರಳಿದರೆ ಅವರೇ ತಂಡದಲ್ಲಿ ಆಡಲಿದ್ದಾರೆ. ಹೀಗಾಗಿ ಇಶಾನ್ ಮುಂದಿನ ಅವಕಾಶಕ್ಕಾಗಿ ಕಾಯಬೇಕಾಗಿದೆ ಎಂದರು.

ವಿಶ್ವಕಪ್‌ ವಿಷಯ ಬಂದಾಗ, ಹೆಸರು ನೋಡಬೇಡಿ- ಗಂಭೀರ್

ಇದಕ್ಕೆ ತದ್ವಿರುದ್ಧವಾಗಿ ಉತ್ತರಿಸಿದ ಗಂಭೀರ್, ‘ವಿಶ್ವಕಪ್ ಗೆಲ್ಲಲು ಏನು ಬೇಕು? ಹೆಸರು ಅಥವಾ ಫಾರ್ಮ್​?. ರೋಹಿತ್ ಅಥವಾ ವಿರಾಟ್ ಸತತ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರಾ? ಕಿಶನ್ ಸ್ಥಾನದಲ್ಲಿ ರಾಹುಲ್​ ಇದ್ದಿದ್ದರೆ ಇದೇ ಮಾತನ್ನು ಹೇಳುತ್ತಿದ್ದರಾ? ವಿಶ್ವಕಪ್‌ಗೆ ತಯಾರಾಗುವ ವಿಷಯ ಬಂದಾಗ, ಹೆಸರು ನೋಡಬೇಡಿ. ಟ್ರೋಫಿ ಗೆಲ್ಲಲು ಫಾರ್ಮ್‌ನಲ್ಲಿರುವ ಕ್ರಿಕೆಟಿಗರನ್ನು ತಂಡದಲ್ಲಿ ಆಯ್ಕೆ ಮಾಡಿ. ವಿಶ್ವಕಪ್‌ಗೆ ಮುನ್ನ ಭಾರತದ ದುರ್ಬಲ ಜಾಗವೆಂದರೆ ಅದು ಮಧ್ಯಮ ಕ್ರಮಾಂಕ. ಪಾಕಿಸ್ತಾನದ ಪಂದ್ಯದಲ್ಲಿ ಶ್ರೇಯಸ್ ನಾಲ್ಕನೇ ಕ್ರಮಾಂಕದಲ್ಲಿ ವಿಫಲರಾದರು. ಆದರೆ ಇಶಾನ್‌ನಂತಹ ಹೊಸ ಮುಖ ತಂಡಕ್ಕಾಗಿ ಹೋರಾಟದ ಇನ್ನಿಂಗ್ಸ್ ಆಡಿತು.

ಅಲ್ಲದೆ ರಾಹುಲ್‌ಗೆ ಅಷ್ಟು ಏಕದಿನ ಪಂದ್ಯಗಳನ್ನು ಆಡಿದ ಅನುಭವ ಇಲ್ಲದಿರುವುದರಿಂದ ನಾನು ವಿಶ್ವಕಪ್​ನಲ್ಲಿ ಕಿಶನ್​ರನ್ನು ಆಡಿಸಬೇಕೆಂದು ವಾದಿಸುತ್ತೇನೆ​. ಆದರೆ ಈ ಹಿಂದೆ ಗಾಯದ ಸಮಸ್ಯೆಯಿಂದ ತಂಡದಲ್ಲಿ ಸ್ಥಾನ ಕಳೆದುಕೊಂಡ ಅನೇಕ ಆಟಗಾರರಿದ್ದಾರೆ. ಏಕೆಂದರೆ, ಅವರ ಬದಲು ತಂಡಕ್ಕೆ ಬಂದವರು ತುಂಬಾ ಚೆನ್ನಾಗಿ ಪ್ರದರ್ಶನ ನೀಡಿದರು. ಇದು ನಿಜವಾದ ಸತ್ಯ. ನಿಜ… ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲ ಹೆಚ್ಚಿಸಿದ್ದರು. ಆದರೆ ಈ ಪಂದ್ಯದಲ್ಲಿ ಒತ್ತಡದ ನಡುವೆಯೂ ಕಿಶನ್ ಉತ್ತಮವಾಗಿ ಆಡಿದರು ಎಂಬುದನ್ನು ಒಪ್ಪಿಕೊಳ್ಳಲೇಬೇಕು ಎಂದು ಗಂಭೀರ್ ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:38 am, Mon, 4 September 23