AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿಯ ಏಷ್ಯಾಕಪ್​ನಲ್ಲಿ ಅತಿ ಹೆಚ್ಚು ರನ್, ವಿಕೆಟ್, ಕ್ಯಾಚ್, ಸಿಕ್ಸರ್ ಹೊಡೆದವರ ಪಟ್ಟಿ ಇಲ್ಲಿದೆ

Asia Cup 2023 Leaderboard: ವಾಸ್ತವವಾಗಿ ಪಲ್ಲೆಕೆಲೆ ಮತ್ತು ಕೊಲಂಬೊದಲ್ಲಿನ ಪ್ರತಿಯೊಂದು ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿತು. ಇದು ಪಂದ್ಯಾವಳಿಯ ಅಂತಿಮ ಲೀಡರ್‌ಬೋರ್ಡ್ ಚಾರ್ಟ್‌ನ ಮೇಲೂ ಪರಿಣಾಮ ಬೀರಿತು. ಹೀಗಾಗಿ ಈ ಕಾಂಟಿನೆಂಟಲ್ ಈವೆಂಟ್​ನ ವಿವಿದ ವಿಭಾಗಗಳಲ್ಲಿ ಯಾರ ಪ್ರದರ್ಶನ ಅದ್ಭುತವಾಗಿತ್ತು ಎಂಬುದನ್ನು ನೋಡುವುದಾದರೆ..

ಈ ಬಾರಿಯ ಏಷ್ಯಾಕಪ್​ನಲ್ಲಿ ಅತಿ ಹೆಚ್ಚು ರನ್, ವಿಕೆಟ್, ಕ್ಯಾಚ್, ಸಿಕ್ಸರ್ ಹೊಡೆದವರ ಪಟ್ಟಿ ಇಲ್ಲಿದೆ
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on: Sep 18, 2023 | 8:05 AM

Share

ಏಷ್ಯಾಕಪ್ (Asia Cup 2023) ಕಾಯುವಿಕೆಗೆ ಕೊನೆಗೂ ಬ್ರೇಕ್ ಬಿದ್ದಿದ್ದು, ಸತತ 5 ವರ್ಷಗಳ ನಂತರ ಭಾರತ ಮತ್ತೊಮ್ಮೆ ಏಷ್ಯಾಕಪ್ ವಶಪಡಿಸಿಕೊಂಡಿದೆ. ಸೆಪ್ಟೆಂಬರ್ 17 ರ ಭಾನುವಾರದಂದು, ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಕಾಳಗದಲ್ಲಿ ಶ್ರೀಲಂಕಾವನ್ನು ಮಣಿಸಿದ ಭಾರತ (India vs Sri lanka) 8ನೇ ಬಾರಿಗೆ ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೊಹಮ್ಮದ್ ಸಿರಾಜ್ (6/21) (Mohammed Siraj) ದಾಳಿಗೆ ನಲುಗಿದ ಇಡೀ ಲಂಕಾ ತಂಡವು 92 ಎಸೆತಗಳಲ್ಲಿ ಕೇವಲ 50 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಈ ಪಂದ್ಯವನ್ನು 10 ವಿಕೆಟ್‌ಗಳಿಂದ ಗೆದ್ದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಏಷ್ಯಾಕಪ್​ಗೆ ಅದ್ಧೂರಿ ತೆರೆಬಿದ್ದಿದೆ. ಇನ್ನು ಈ ಕಾಂಟಿನೆಂಟಲ್ ಈವೆಂಟ್​ನ ವಿವಿದ ವಿಭಾಗಗಳಲ್ಲಿ ಯಾರ ಪ್ರದರ್ಶನ ಅದ್ಭುತವಾಗಿತ್ತು ಎಂಬುದನ್ನು ನೋಡುವುದಾದರೆ..

ವಾಸ್ತವವಾಗಿ ಪಲ್ಲೆಕೆಲೆ ಮತ್ತು ಕೊಲಂಬೊದಲ್ಲಿನ ಪ್ರತಿಯೊಂದು ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿತು. ಇದು ಪಂದ್ಯಾವಳಿಯ ಅಂತಿಮ ಲೀಡರ್‌ಬೋರ್ಡ್ ಚಾರ್ಟ್‌ನ ಮೇಲೂ ಪರಿಣಾಮ ಬೀರಿತು. ಭಾರತದ ಶುಭ್​ಮನ್ ಗಿಲ್ 300 ಪ್ಲಸ್ ರನ್ ಗಳಿಸಿದ ಏಕೈಕ ಆಟಗಾರ ಎನಿಸಿಕೊಂಡರೆ, ಇತರ ಮೂವರು ಆಟಗಾರರು ಮಾತ್ರ 200 ರನ್ ಗಡಿ ತಲುಪುವಲ್ಲಿ ಯಶಸ್ವಿಯಾದರು. ಬೌಲಿಂಗ್‌ನಲ್ಲಿ, ಕೇವಲ ನಾಲ್ವರು ಆಟಗಾರರು ವಿಕೆಟ್‌ಗಳ ವಿಷಯದಲ್ಲಿ ಎರಡಂಕಿಯ ಸಂಖ್ಯೆಯನ್ನು ತಲುಪುವಲ್ಲಿ ಯಶಸ್ವಿಯಾದರೆ, ಒಬ್ಬ ಆಟಗಾರ ಮಾತ್ರ ಪಂದ್ಯಾವಳಿಯಲ್ಲಿ 10ಕ್ಕೂ ಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆ ಬರೆದರು.

ICC ODI Ranking: ಏಷ್ಯಾಕಪ್ ಗೆದ್ದ ಭಾರತ; ಅಗ್ರಸ್ಥಾನಕ್ಕೇರಿದ ಪಾಕಿಸ್ತಾನ..!

ಅತಿ ಹೆಚ್ಚು ರನ್

  • ಶುಭ್​ಮನ್ ಗಿಲ್ – 6 ಇನ್ನಿಂಗ್ಸ್‌ಗಳಲ್ಲಿ 302 ರನ್
  • ಕುಸಾಲ್ ಮೆಂಡಿಸ್ – 6 ಇನ್ನಿಂಗ್ಸ್‌ಗಳಲ್ಲಿ 270 ರನ್
  • ಸದೀರ ಸಮರವಿಕ್ರಮ – 6 ಇನ್ನಿಂಗ್ಸ್‌ಗಳಲ್ಲಿ 215 ರನ್
  • ಬಾಬರ್ ಆಝಂ – 4 ಇನ್ನಿಂಗ್ಸ್‌ಗಳಲ್ಲಿ 207 ರನ್
  • ಮೊಹಮ್ಮದ್ ರಿಜ್ವಾನ್ – 4 ಇನ್ನಿಂಗ್ಸ್‌ಗಳಲ್ಲಿ 195 ರನ್

ಅತಿ ಹೆಚ್ಚು ವಿಕೆಟ್‌ಗಳು

  • ಮಥೀಶ ಪತಿರಾಣ – 6 ಇನ್ನಿಂಗ್ಸ್‌ಗಳಲ್ಲಿ 11 ವಿಕೆಟ್
  • ಮೊಹಮ್ಮದ್ ಸಿರಾಜ್ – 4 ಇನ್ನಿಂಗ್ಸ್‌ಗಳಲ್ಲಿ 10 ವಿಕೆಟ್
  • ದುನಿತ್ ವೆಲ್ಲಾಲಗೆ – 6 ಇನ್ನಿಂಗ್ಸ್‌ಗಳಲ್ಲಿ 10 ವಿಕೆಟ್
  • ಶಾಹೀನ್ ಅಫ್ರಿದಿ – 5 ಇನ್ನಿಂಗ್ಸ್‌ಗಳಲ್ಲಿ 10 ವಿಕೆಟ್
  • ಕುಲ್ದೀಪ್ ಯಾದವ್ – 4 ಇನ್ನಿಂಗ್ಸ್‌ಗಳಲ್ಲಿ 9 ವಿಕೆಟ್
  • ಹ್ಯಾರಿಸ್ ರೌಫ್ – 4 ಇನ್ನಿಂಗ್ಸ್‌ಗಳಲ್ಲಿ 9 ವಿಕೆಟ್
  • ತಸ್ಕಿನ್ ಅಹ್ಮದ್ – 4 ಇನ್ನಿಂಗ್ಸ್‌ಗಳಲ್ಲಿ 9 ವಿಕೆಟ್

ಅತಿ ಹೆಚ್ಚು ಕ್ಯಾಚ್‌

  • ಫಖರ್ ಜಮಾನ್ – 5 ಇನ್ನಿಂಗ್ಸ್‌ಗಳಲ್ಲಿ 4 ಕ್ಯಾಚ್‌
  • ಆಘಾ ಸಲ್ಮಾನ್ – 4 ಇನ್ನಿಂಗ್ಸ್‌ಗಳಲ್ಲಿ 3 ಕ್ಯಾಚ್‌
  • ರೋಹಿತ್ ಶರ್ಮಾ – 5 ಇನ್ನಿಂಗ್ಸ್‌ಗಳಲ್ಲಿ 3 ಕ್ಯಾಚ್‌
  • ಶುಭ್​ಮನ್ ಗಿಲ್ – 5 ಇನ್ನಿಂಗ್ಸ್‌ಗಳಲ್ಲಿ 3 ಕ್ಯಾಚ್‌

ಅತಿ ಹೆಚ್ಚು ಸಿಕ್ಸರ್‌

  • ರೋಹಿತ್ ಶರ್ಮಾ – 5 ಇನ್ನಿಂಗ್ಸ್‌ಗಳಲ್ಲಿ 11 ಸಿಕ್ಸರ್‌ಗಳು
  • ಇಫ್ತಿಕರ್ ಅಹ್ಮದ್ – 3 ಇನ್ನಿಂಗ್ಸ್‌ಗಳಲ್ಲಿ 6 ಸಿಕ್ಸರ್‌ಗಳು
  • ಶುಭ್​ಮನ್ ಗಿಲ್ – 6 ಇನ್ನಿಂಗ್ಸ್‌ಗಳಲ್ಲಿ 6 ಸಿಕ್ಸರ್‌ಗಳು
  • ಮೊಹಮ್ಮದ್ ನಬಿ – 2 ಇನ್ನಿಂಗ್ಸ್‌ಗಳಲ್ಲಿ 5 ಸಿಕ್ಸರ್‌ಗಳು
  • ಕುಸಾಲ್ ಮೆಂಡಿಸ್ – 6 ಇನ್ನಿಂಗ್ಸ್‌ಗಳಲ್ಲಿ 5 ಸಿಕ್ಸರ್‌ಗಳು

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ