Rohit Sharma: ಪಂದ್ಯ ಮುಗಿದ ಬಳಿಕ ಕೊಹ್ಲಿ ಬಗ್ಗೆ ರೋಹಿತ್ ಶರ್ಮಾ ಆಡಿದ ಮಾತುಗಳೇನು ಗೊತ್ತೇ?

| Updated By: Vinay Bhat

Updated on: Oct 24, 2022 | 8:07 AM

Virat Kohli, India vs Pakistan: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆಲ್ಲಲು ಮುಖ್ಯ ಕಾರಣ ವಿರಾಟ್ ಕೊಹ್ಲಿ- ಹಾರ್ದಿಕ್ ಪಾಂಡ್ಯ ಶತಕದ ಜೊತೆಯಾಟ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಏನು ಹೇಳಿದರು ಕೇಳಿ.

Rohit Sharma: ಪಂದ್ಯ ಮುಗಿದ ಬಳಿಕ ಕೊಹ್ಲಿ ಬಗ್ಗೆ ರೋಹಿತ್ ಶರ್ಮಾ ಆಡಿದ ಮಾತುಗಳೇನು ಗೊತ್ತೇ?
rohit sharma post match presentation
Follow us on

ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup) ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ರಣ ರೋಚಕವಾಗಿತ್ತು. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಈ ಹೈವೋಲ್ಟೇಜ್ ಕದನದಲ್ಲಿ ಟೀಮ್ ಇಂಡಿಯಾ 4 ವಿಕೆಟ್​ಗಳ ಜಯ ಸಾಧಿಸಿತು. ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ (Virat Kohli) 53 ಎಸೆತಗಳಲ್ಲಿ 6 ಫೋರ್, 4 ಸಿಕ್ಸರ್​ನೊಂದಿಗೆ ಅಜೇಯ 82 ರನ್ ಚಚ್ಚಿದರು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ರೋಹಿತ್ ಪಡೆ ಶುಭಾರಂಭ ಮಾಡಿದೆ. ಭಾರತ ಗೆಲ್ಲಲು ಮುಖ್ಯ ಕಾರಣ ಕೊಹ್ಲಿಹಾರ್ದಿಕ್ ಪಾಂಡ್ಯ ಶತಕದ ಜೊತೆಯಾಟ. ಅದರರಲ್ಲೂ ಕೊನೆಯ ಎಸೆತದ ವರೆಗೂ ನಿಂತ ಕೊಹ್ಲಿ ಅಮೋಘ ಆಟವಾಡಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಏನು ಹೇಳಿದರು ಕೇಳಿ.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಪಂದ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ರೋಹಿತ್, ”ನಾನು ಡ್ರೆಸ್ಸಿಂಗ್ ರೂಮ್​ನಲ್ಲಿದ್ದೆ. ನನ್ನಲ್ಲಿ ಮಾತನಾಡಲು ಏನೂ ಪದಗಳು ಉಳಿದಿಲ್ಲ. ಈರೀತಿಯ ಪಂದ್ಯದಲ್ಲಿ ನೀವು ಈರೀತಿಯ ಆಟವನ್ನು ನಿರೀಕ್ಷಿಸಬೇಕು. ನಾವು ಪಂದ್ಯವನ್ನು ಬಿಟ್ಟುಕೊಡದೆ ಎಷ್ಟು ಸಮಯ ಸಾಧ್ಯವೋ ಅಷ್ಟು ಹೊತ್ತು ಪಂದ್ಯದಲ್ಲಿ ಇರಲು ಬಯಸಿದ್ದೆವು. ಕೊಹ್ಲಿಹಾರ್ದಿಕ್ ಜೊತೆಯಾಟ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಪಿಚ್ ಕೂಡ ಅದ್ಭುತವಾಗಿತ್ತು. ಚೆಂಡು ಸ್ವಿಂಗ್ ಮತ್ತು ಸೀಮ್ ಆಗುತ್ತಿದ್ದ ಪರಿಣಾಮ ಬೌಲರ್​ಗೆ ಹೆಚ್ಚು ಉಪಯೋಗವಾಗುತ್ತಿತ್ತು,” ಎಂದು ಹೇಳಿದ್ದಾರೆ.

ಇದನ್ನೂ ಓದಿ
VIDEO: ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡು ಸಂಭ್ರಮಿಸಿದ ರಾಹುಲ್ ದ್ರಾವಿಡ್
Virat Kohli: ಒಂದಲ್ಲ, ಎರಡಲ್ಲ…ಹಲವು ವಿಶ್ವ ದಾಖಲೆಗಳನ್ನು ಉಡೀಸ್ ಮಾಡಿದ ಕಿಂಗ್ ಕೊಹ್ಲಿ
Virat Kohli: ಕಿಂಗ್ ಕೊಹ್ಲಿಯ ಸಿಡಿಲಬ್ಬರಕ್ಕೆ ಸಚಿನ್, ರೋಹಿತ್ ಶರ್ಮಾ ದಾಖಲೆ ಧೂಳೀಪಟ
India vs Pakistan: ಪಾಕ್​ಗೆ ಮಣ್ಣು ಮುಕ್ಕಿಸಿ ಹೊಸ ದಾಖಲೆ ಬರೆದ ಪಾಂಡ್ಯ-ಕೊಹ್ಲಿ

 

ಮಾತು ಮುಂದುವರೆಸಿದ ಅವರು, ”ಪಾಕಿಸ್ತಾನ ಪರ ಇಫ್ತಿಖರ್ ಹಾಗೂ ಮಸೂದ್ ಉತ್ತಮ ಜೊತೆಯಾಟ ಆಡಿದರು. ಅಂತಿಮ ಹಂತದಲ್ಲಿ ಅವರಿಂದ ಒಳ್ಳೆಯ ಆಟ ಮೂಡಿಬಂತು. ಆದರೆ, ನಾವು ಈ ಟಾರ್ಗೆಟ್ ಅನ್ನು ಬೆನ್ನಟ್ಟುತ್ತೇವೆ ಎಂಬ ನಂಬಿಕೆ ನನ್ನಲ್ಲಿತ್ತು. ಕೊಹ್ಲಿ ಹಾಗೂ ಪಾಂಡ್ಯ ಇಬ್ಬರಿಗೂ ಸಾಕಷ್ಟು ಅನುಭವವಿದೆ. ಒತ್ತಡಕ್ಕೆ ಒಳಗಾಗದೆ ಪಂದ್ಯ ಗತಿಯನ್ನು ಅರಿತು ತಂತ್ರವನ್ನು ರೂಪಿಸುವುದು ಆ ಸಂದರ್ಭದಲ್ಲಿ ಮುಖ್ಯವಾಗಿತ್ತು,” ಎಂಬುದು ರೋಹಿತ್ ಮಾತು.

”ಒಂದು ಹಂತದಲ್ಲಿ ನಾವು ಈ ಪಂದ್ಯವನ್ನು ಗೆಲ್ಲುವ ಅವಕಾಶ ಕೈಚೆಲ್ಲಿತ್ತು. ಆದರೆ, ವಿರಾಟ್ ಕೊಹ್ಲಿಗೆ ಹ್ಯಾಟ್ಸ್​ ಆಫ್ ಹೇಳಲೇ ಬೇಕು. ಅವರು ಬ್ಯಾಟಿಂಗ್ ಮಾಡಿದ ವೈಖರಿ ಅದ್ಭುತ. ಇಲ್ಲಿಯವರೆಗೆ ಭಾರತ ಪರ ಕೊಹ್ಲಿ ಆಡಿದ ಅತ್ಯುತ್ತಮ ಇನ್ನಿಂಗ್ಸ್ ಇದಾಗಿದೆ. ಎಲ್ಲರಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ನಮಗೆ ಸಿಕ್ಕಂತಹ ಬೆಂಬಲ ಕೂಡ ಉತ್ತಮವಾಗಗಿತ್ತು,” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಕೂಡ ಕೊಹ್ಲಿ, ಇದು ನನ್ನ ಟಿ20 ಅಂತರರಾಷ್ಟ್ರೀಯ ವೃತ್ತಿಬದುಕಿನ ಶ್ರೇಷ್ಠ ಇನಿಂಗ್ಸ್‌ ಎಂದು ಹೇಳಿದ್ದಾರೆ. “ಇದು ನನ್ನ ಟಿ20I ವೃತ್ತಿಬದುಕಿನ ಶ್ರೇಷ್ಠ ಇನಿಂಗ್ಸ್‌ ಎನ್ನಬಹುದು. ಇದಕ್ಕೂ ಮೊದಲು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ಎದುರು 52 ಎಸೆತಗಳಲ್ಲಿ 82 ರನ್‌ ಬಾರಿಸಿದ್ದು ನನ್ನ ಬೆಸ್ಟ್ ಇನಿಂಗ್ಸ್‌ ಆಗಿತ್ತು. ಆದರೆ, ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಹಾಗೂ ತಂಡಕ್ಕೆ ಅಗತ್ಯವಿದ್ದಾದ ಸಂಕಷ್ಟದ ಸಂದರ್ಭದಲ್ಲಿ ಹೊರಬಂದ ಈ ಆಟ ನಿಜಕ್ಕೂ ನನ್ನ ಶ್ರೇಷ್ಠ ಇನಿಂಗ್ಸ್‌ ಎಂದು ಹೇಳಬಹುದು,” ಎಂದು ಕೊಹ್ಲಿ ಪಂದ್ಯದ ಬಳಿಕ ಭಾವುಕರಾಗಿ ನುಡಿದರು.

Published On - 8:07 am, Mon, 24 October 22