IND vs SL 2nd T20: ಇಂದು ಭಾರತ- ಶ್ರೀಲಂಕಾ ದ್ವಿತೀಯ ಟಿ20: ಗೆಲುವಿನ ಓಟ ಮುಂದುವರಿಸುತ್ತಾ ರೋಹಿತ್ ಪಡೆ?

| Updated By: Vinay Bhat

Updated on: Feb 26, 2022 | 9:02 AM

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 62 ರನ್​ಗಳ ಅಮೋಘ ಗೆಲುವು ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿರುವ ಟೀಮ್ ಇಂಡಿಯಾ ಇದೀಗ ದ್ವಿತೀಯ ಪಂದ್ಯಕ್ಕೆ ಸಜ್ಜಾಗಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

IND vs SL 2nd T20: ಇಂದು ಭಾರತ- ಶ್ರೀಲಂಕಾ ದ್ವಿತೀಯ ಟಿ20: ಗೆಲುವಿನ ಓಟ ಮುಂದುವರಿಸುತ್ತಾ ರೋಹಿತ್ ಪಡೆ?
IND vs SL 2nd T20
Follow us on

ರೋಹಿತ್ ಶರ್ಮಾ (Rohit Sharma) ಪರಿಪೂರ್ಣ ನಾಯಕನಾದ ಬಳಿಕ ಸತತ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಭಾರತ ತಂಡ ಇಂದು ಮತ್ತೊಂದು ಕದನಕ್ಕೆ ತಯಾರಾಗಿದೆ. ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 62 ರನ್​ಗಳ ಅಮೋಘ ಗೆಲುವು ಸಾಧಿಸಿ 1-0 ಮುನ್ನಡೆ ಪಡೆದುಕೊಂಡಿರುವ ಟೀಮ್ ಇಂಡಿಯಾ (Team India) ಇದೀಗ ದ್ವಿತೀಯ ಪಂದ್ಯಕ್ಕೆ ಸಜ್ಜಾಗಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಇಂದಿನ ಪಂದ್ಯವೂ ಭಾರತ ಗೆದ್ದರೆ ಮತ್ತೊಂದು ಸರಣಿ ವಶಪಡಿಸಿಕೊಂಡ ಸಾಧನೆ ಮಾಡಲಿದೆ. ವಿರಾಟ್ ಕೊಹ್ಲಿ (Virat Kohli), ರಿಷಭ್ ಪಂತ್, ಕೆಎಲ್ ರಾಹುಲ್ ಹೀಗೆ  ಪ್ರಮುಖ ಆಟಗಾರರ ಅನುಪಸ್ಥಿತಿಯ ನಡುವೆಯೂ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ. ಸತತ ಎರಡು ದಿನಗಳಲ್ಲಿ ಪಂದ್ಯಗಳು ಇರುವುದರಿಂದ ಕೆಲವು ಆಟಗಾರರಿಗೆ ವಿಶ್ರಾಂತಿ ಮತ್ತು ಯುವಪ್ರತಿಭೆಗಳಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಇಶಾನ್ ಕಿಶನ್ ಫಾರ್ಮ್​ಗೆ ಬಂದಿದ್ದು ಲಂಕಾ ವಿರುದ್ಧದ ಮೊದಲ ಟಿ20 ಯಲ್ಲಿ ಅಬ್ಬರಿಸಿದ್ದರು. ಹೀಗಾಗಿ ಇವರ ಮೇಲೆ ಸಾಕಷ್ಟು ನಂಬಿಕೆ ಇಡಲಾಗಿದೆ. ರೋಹಿತ್ ಶರ್ಮಾ ಜೊತೆ ಸೇರಿ ಇವರು ಬೊಂಬಾಟ್ ಆರಂಭ ಒದಗಿಸುತ್ತಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಅವರ ಜಾಗದಲ್ಲಿ ಕಣಕ್ಕಿಳಿಯುತ್ತಿರುವ ಶ್ರೇಯಸ್ ಅಯ್ಯರ್ ಕೂಡ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.

ರೋಹಿತ್ ಶರ್ಮಾ ಹೇಳಿರುವಂತೆ ರವೀಂದ್ರ ಜಡೇಜಾ ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಅದರಂತೆ ಇವರು ನಾಲ್ಕನೇ ಸ್ಥಾನದಲ್ಲಿ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಇಳಿಯಲಿದ್ದಾರೆ. ಉಳಿದ ಬ್ಯಾಟ್ಸ್​ಮನ್​ಗಳಿಗೆ ಕಳೆದ ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ಸಂಜು ಸ್ಯಾಮ್ಸನ್, ದೀಪಕ್ ಹೂಡ, ವೆಂಕಟೇಶ್ ಅಯ್ಯರ್ ಫಿನಿಶಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಬೌಲಂಗ್​ನಲ್ಲಿ ಭಾರತ ಮಾರಕವಾಗಿದೆ. ಜಸ್​ಪ್ರೀತ್ ಬುಮ್ರಾ ತಂಡಕ್ಕೆ ಕಮ್​ಬ್ಯಾಕ್ ಮಾಡಿರುವುದು ಬೌಲರ್​ಗಳ ಬಲ ಹೆಚ್ಚಿಸಿದೆ. ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಾಲ್ ಮತ್ತು ಜಡೇಜಾ ಬೌಲಿಂಗ್​ನಲ್ಲಿ ಕೊಡುಗೆ ನೀಡಲಿದ್ದಾರೆ.

ಪ್ರವಾಸಿ ಶ್ರೀಲಂಕಾ ತಂಡ ಸರಣಿ ಗೆಲುಚಿನ ಆಸೆ ಉಳಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಅನುಭವದ ಕೊರತೆ ಇರುವ ಲಂಕಾ ಬೌಲರ್‌ಗಳು ಶಿಸ್ತಿನ ದಾಳಿ ನಡೆಸುವ ಅನಿವಾರ್ಯತೆ ಇದೆ. ಆತಿಥೇಯರ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ವಿಶೇಷ ತಂತ್ರಗಾರಿಕೆ ರೂಪಿಸುವ ಒತ್ತಡದಲ್ಲಿ ನಾಯಕ ದಸನ್ ಶನಕಾ ಕೂಡ ಇದ್ದಾರೆ. ಲಂಕಾ ತಂಡದ ಬ್ಯಾಟಿಂಗ್ ಕೂಡ ದುರ್ಬಲವಾಗಿದೆ. ಲಖನೌನಲ್ಲಿ ಆರಂಭಿಕ ಕ್ರಮಾಂಕದ ಆಟಗಾರರು ವೈಫಲ್ಯ ಅನುಭವಿಸಿದ್ದರು. ಮಧ್ಯಮಕ್ರಮಾಂಕದ ಚರಿತಾ ಅಸಲಂಕಾ ಅರ್ಧಶತಕ ಗಳಿಸಿದ್ದರು. ಅವರೊಂದಿಗೆ ಉಳಿದ ಬ್ಯಾಟರ್‌ಗಳೂ ರನ್‌ಗಳ ಕಾಣಿಕೆ ನೀಡಿದರೆ ಮಾತ್ರ ಜಯದ ಕನಸು ನನಸಾಗಬಹುದು. ತವರಿನಲ್ಲಿ ಸತತ ಹತ್ತು ಟಿ20 ಪಂದ್ಯಗಳಲ್ಲಿ ಜಯಿಸಿರುವ ಭಾರತದ ಓಟಕ್ಕೆ ತಡೆಯೊಡ್ಡಬಹುದು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್ ಮತ್ತು ಅವೇಶ್ ಖಾನ್.

ಶ್ರೀಲಂಕಾ ತಂಡ: ದಸೂನ್‌ ಶನಕ (ನಾಯಕ), ಪಥುಮ್ ನಿಸಾಂಕ ಕುಸಾಲ್‌ ಮೆಂಡಿಸ್‌, ಚರಿತಾ ಅಸಲಂಕಾ (ಉಪ ನಾಯಕ), ದಿನೆಶ್‌ ಚಂಡಿಮಾಲ್‌, ದನುಷ್ಕ ಗುಣತಿಲಕೆ, ಕಮಿಲ್‌ ಮಿಶ್ರಾ, ಜನಿಥ್‌ ಲಿಯಾಂಗೆ, ಚಮಿಕಾ ಕರುಣರತ್ನೆ, ದುಷ್ಮಾಂತ ಚಮೀರ, ಲಹಿರು ಕುಮಾರ, ಬಿನುರಾ ಫೆರ್ನಾಂಡೊ, ಶಿರನ್ ಫೆರ್ನಾಂಡೊ, ಮಹೀಶ ತೀಕ್ಷಣ, ಜೆಫ್ರೆ ವ್ಯಾಂಡೆರ್ಸೆ, ಪ್ರವೀಣ್‌ ಜಯವಿಕ್ರಮ.

BCCI: ರಣಜಿ ಟ್ರೋಫಿ ಯಶಸ್ಸು; ಉಳಿದ ದೇಶೀ ಪಂದ್ಯಾವಳಿಗಳ ಆಯೋಜನೆಗೆ ಮುಂದಾದ ಬಿಸಿಸಿಐ

Published On - 7:37 am, Sat, 26 February 22