IND vs SL: ಇಂಜುರಿ ಸಮಸ್ಯೆ; ಟಿ20 ಸರಣಿಯಿಂದ ರುತುರಾಜ್ ಔಟ್! ಕನ್ನಡಿಗನಿಗೆ ತಂಡದಲ್ಲಿ ಸ್ಥಾನ
IND vs SL: ತಂಡದ ಯುವ ಆರಂಭಿಕ ಆಟಗಾರ ರಿತುರಾಜ್ ಗಾಯಕ್ವಾಡ್ ಗಾಯದ ಕಾರಣ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.
ಭಾರತ ಕ್ರಿಕೆಟ್ ತಂಡ (Indian cricket team) ಸತತವಾಗಿ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಗೆಲುವು ಸಾಧಿಸುತ್ತಿದೆ. ಆದರೆ ಮೈದಾನದ ಹೊರಗೆ, ತಂಡವು ನಿರಂತರವಾಗಿ ಫಿಟ್ನೆಸ್ ಸಮಸ್ಯೆಗಳನ್ನು ಎದುರಿಸುತ್ತಿದೆ. ತಂಡದ ಹಲವು ಆಟಗಾರರು ನಿರಂತರವಾಗಿ ಗಾಯಗಳೊಂದಿಗೆ ಹೋರಾಡುತ್ತಿದ್ದು, ಈ ಪಟ್ಟಿಗೆ ಮತ್ತೊಬ್ಬ ಆಟಗಾರನ ಹೆಸರು ಸೇರ್ಪಡೆಯಾಗಿದೆ. ತಂಡದ ಯುವ ಆರಂಭಿಕ ಆಟಗಾರ ರಿತುರಾಜ್ ಗಾಯಕ್ವಾಡ್ (Rituraj Gaikwad) ಗಾಯದ ಕಾರಣ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. 26 ಮತ್ತು 27 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯಗಳಲ್ಲಿಯೂ ರಿತುರಾಜ್ ಆಡುವುದಿಲ್ಲ ಎಂದು ವರದಿಯೊಂದು ತಿಳಿಸಿದೆ. ರುತುರಾಜ್ ಬದಲಿಗೆ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ಬ್ಯಾಕಪ್ ಆಗಿ ತಂಡಕ್ಕೆ ಸೇರಿಸಲಾಗಿದೆ.
ರುತುರಾಜ್ ಗಾಯಕ್ವಾಡ್ ಅವರು ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಲಕ್ನೋದಲ್ಲಿ ಆಡಬೇಕಿತ್ತು. ಆದರೆ ಪಂದ್ಯದ ಮೊದಲು ಅವರು ತಮ್ಮ ಬಲ ಮಣಿಕಟ್ಟಿನ ಗಾಯದಿಂದ ಬಳಲುತ್ತಿದ್ದರು. ಈ ಬಗ್ಗೆ ನಾಯಕ ರೋಹಿತ್ ಶರ್ಮಾ ಕೂಡ ಮಾಹಿತಿ ನೀಡಿದ್ದರು. ಮಣಿಕಟ್ಟಿನ ಗಾಯದಿಂದಾಗಿ ರುತುರಾಜ್ ಬ್ಯಾಟಿಂಗ್‌ನಲ್ಲಿ ತೊಂದರೆ ಎದುರಿಸುತ್ತಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ನವೀಕರಣವನ್ನು ನೀಡಿತ್ತು. ವೈದ್ಯಕೀಯ ತಂಡ ಅವರನ್ನು ಪರೀಕ್ಷಿಸುತ್ತಿದೆ ಎಂದು ಮಂಡಳಿ ತಿಳಿಸಿದೆ.
ಮಯಾಂಕ್ ಅಗರ್ವಾಲ್ಗೆ ಅವಕಾಶ
ಇದೀಗ ಈ ವಿಚಾರದಲ್ಲಿ ಹೊಸ ಮಾಹಿತಿ ಏನೆಂದರೆ ಈ ಯುವ ಬ್ಯಾಟ್ಸ್‌ಮನ್ ಸಂಪೂರ್ಣ ಸರಣಿಯಿಂದ ಹೊರಗುಳಿಯಬೇಕಾಗುತ್ತದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ರುತುರಾಜ್ ಬದಲಿಗೆ ಹಿರಿಯ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು ತಕ್ಷಣವೇ ಧರ್ಮಶಾಲಾಗೆ ಬರ ಮಾಡಿಕೊಳ್ಳಲಾಗಿದೆ. ಮಯಾಂಕ್ ಅವರನ್ನು ಬ್ಯಾಕ್‌ಅಪ್ ಓಪನರ್ ಆಗಿ ಟೀಮ್ ಇಂಡಿಯಾದೊಂದಿಗೆ ಲಿಂಕ್ ಮಾಡಲಾಗಿದೆ. ಮಯಾಂಕ್ ಅಗರ್ವಾಲ್ ಪ್ರಸ್ತುತ ಚಂಡೀಗಢದಲ್ಲಿ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿರುವ ಭಾರತೀಯ ಆಟಗಾರರೊಂದಿಗೆ ಇದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಮಯಾಂಕ್ ಅವರನ್ನು ಒಂದು ಬಯೋ ಬಬಲ್‌ನಿಂದ ಇನ್ನೊಂದಕ್ಕೆ ವರ್ಗಾಯಿಸುವುದು ತಂಡದ ನಿರ್ವಹಣೆಗೆ ಸುಲಭವಾಗಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಮಯಾಂಕ್ ಅವರನ್ನು ಬ್ಯಾಕ್‌ಅಪ್ ಆಗಿ ಸೇರಿಸಲಾಗಿತ್ತು.
ಋತುರಾಜ್ ಅವರ ದುರಾದೃಷ್ಟ
ರಿತುರಾಜ್ ಗಾಯಕ್‌ವಾಡ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ನಿರಂತರ ಅಡೆತಡೆಗಳು ಎದುರಾಗುತ್ತಲೇ ಇವೆ. ಇದಕ್ಕೂ ಮೊದಲು, ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯ ಮೊದಲು, ಅವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಹೀಗಾಗಿ ಎಲ್ಲಾ ಮೂರು ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ನಂತರ ವೆಸ್ಟ್ ಇಂಡೀಸ್ ಜೊತೆಗಿನ ಟಿ20 ಸರಣಿಯಲ್ಲಿ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿತ್ತು.
ಕಳೆದ ಕೆಲವು ವರ್ಷಗಳಿಂದ ಆಟಗಾರರ ಫಿಟ್ನೆಸ್ ವಿಚಾರದಲ್ಲಿ ಭಾರತ ತಂಡಕ್ಕೆ ಉತ್ತಮವಾಗಿಲ್ಲ. ಉಪನಾಯಕ ಕೆಎಲ್ ರಾಹುಲ್ ಮತ್ತು ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಗಾಯಗೊಂಡು ಹೊರಗುಳಿದಿದ್ದರು. ಅದೇ ಸಮಯದಲ್ಲಿ, ವಿಂಡೀಸ್ ಟಿ20 ಸರಣಿಯ ನಂತರ, ದೀಪಕ್ ಚಹಾರ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಗಾಯಗೊಂಡರು. ಹೀಗಾಗಿ ಅವರು ಕೂಡ ಈ ಸರಣಿಯಿಂದ ಹೊರಗುಳಿಯಬೇಕಾಯಿತು.
ಇದನ್ನೂ ಓದಿ:Ruturaj Gaikwad: ಬ್ಯಾಕ್ ಟು ಬ್ಯಾಕ್ ಸೆಂಚುರಿ: ಕೊಹ್ಲಿ ದಾಖಲೆ ಸರಿಗಟ್ಟಿದ ರುತುರಾಜ್
Published On - 9:38 pm, Fri, 25 February 22