BCCI: ರಣಜಿ ಟ್ರೋಫಿ ಯಶಸ್ಸು; ಉಳಿದ ದೇಶೀ ಪಂದ್ಯಾವಳಿಗಳ ಆಯೋಜನೆಗೆ ಮುಂದಾದ ಬಿಸಿಸಿಐ
BCCI: ಜನವರಿಯಲ್ಲಿ, ಮಂಡಳಿಯು ರಣಜಿ ಟ್ರೋಫಿಯೊಂದಿಗೆ ಈ ಎರಡೂ ಪಂದ್ಯಾವಳಿಗಳ ಆಯೋಜನೆಯನ್ನು ಮುಂದೂಡಿತ್ತು. ಇದರ ನಂತರ ಬಿಸಿಸಿಐ ಮೊದಲು ರಣಜಿ ಟ್ರೋಫಿಯನ್ನು ಪ್ರಾರಂಭಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿತು.
ಭಾರತದಲ್ಲಿ ಕೊರೊನಾ ವೈರಸ್ (corona virus) ಸೋಂಕಿನ ಪರಿಸ್ಥಿತಿಯಲ್ಲಿ ತ್ವರಿತ ಸುಧಾರಣೆಯಿಂದ ಉತ್ಸುಕರಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದೀಗ ಮತ್ತೆ ದೇಶೀಯ ಕ್ರಿಕೆಟ್ ಋತುವನ್ನು ಮರಳಿ ಟ್ರ್ಯಾಕ್ಗೆ ತರುವಲ್ಲಿ ತೊಡಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ದೇಶಕ್ಕೆ ಮರಳಿದೆ, ರಣಜಿ ಟ್ರೋಫಿ ಸೀಸನ್ ಕೂಡ ಪ್ರಾರಂಭವಾಗಿದೆ ಮತ್ತು ಐಪಿಎಲ್ 2022 ರ ಸೀಸನ್ ಕೂಡ ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ಮಂಡಳಿಯು ಈಗ ಇದರ ಯಶಸ್ಸಿನ ಆಧಾರದ ಮೇಲೆ ಸಿಕೆ ನಾಯುಡು ಟ್ರೋಫಿ ಮತ್ತು ಸೀನಿಯರ್ ಮಹಿಳಾ ಟಿ20 ಚಾಂಪಿಯನ್‌ಶಿಪ್ ಅನ್ನು ಆಯೋಜಿಸಲು ಸಿದ್ಧತೆ ನಡೆಸಿದೆ. ಈ ಎರಡೂ ಪಂದ್ಯಾವಳಿಗಳು ಜನವರಿಯಲ್ಲಿಯೇ ರಣಜಿ ಟ್ರೋಫಿಯೊಂದಿಗೆ ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾದ ಮೂರನೇ ಅಲೆಯಿಂದಾಗಿ ಅವುಗಳನ್ನು ಮುಂದೂಡಲಾಯಿತು.
ಕ್ರಿಕೆಟ್ ಸುದ್ದಿ ವೆಬ್‌ಸೈಟ್ ಕ್ರಿಕ್‌ಬಜ್ ವರದಿಯ ಪ್ರಕಾರ, ಬಿಸಿಸಿಐ ಈ ಎರಡೂ ಪಂದ್ಯಾವಳಿಗಳನ್ನು ಮಾರ್ಚ್ ಮತ್ತು ಮೇ ನಡುವೆ ಆಯೋಜಿಸಲಿದೆ. ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ಎಲ್ಲಾ ರಾಜ್ಯ ಮತ್ತು ಇತರ ಕ್ರಿಕೆಟ್ ಸಂಸ್ಥೆಗಳಿಗೆ ಪತ್ರ ಬರೆದು ಮಂಡಳಿಯ ಯೋಜನೆ ಬಗ್ಗೆ ತಿಳಿಸಿದ್ದಾರೆ. 2021-22 ರ ರಣಜಿ ಟ್ರೋಫಿಯ ಮೊದಲ ಸುತ್ತು ಮುಗಿದಿದೆ ಮತ್ತು ಸೀನಿಯರ್ ಮಹಿಳಾ T20 ಚಾಂಪಿಯನ್‌ಶಿಪ್ ಮತ್ತು CK ನಾಯುಡು ಟ್ರೋಫಿ 2021-22 ಮಾರ್ಚ್‌ನಿಂದ ಮೇ 2022 ರವರೆಗೆ ನಡೆಯಲಿದೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗಿದೆ ಎಂದು ಶಾ ಬರೆದಿದ್ದಾರೆ.
ಬಹಳ ದಿನಗಳಿಂದ ಬೇಡಿಕೆ ಇತ್ತು
ಜನವರಿಯಲ್ಲಿ, ಮಂಡಳಿಯು ರಣಜಿ ಟ್ರೋಫಿಯೊಂದಿಗೆ ಈ ಎರಡೂ ಪಂದ್ಯಾವಳಿಗಳ ಆಯೋಜನೆಯನ್ನು ಮುಂದೂಡಿತ್ತು. ಇದರ ನಂತರ ಬಿಸಿಸಿಐ ಮೊದಲು ರಣಜಿ ಟ್ರೋಫಿಯನ್ನು ಪ್ರಾರಂಭಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿತು. ಪಂದ್ಯಾವಳಿಯು ಫೆಬ್ರವರಿ 17 ರಿಂದ ಪ್ರಾರಂಭವಾಯಿತು. ಈಗ ಅದರ ಎರಡನೇ ಸುತ್ತಿನ ಪಂದ್ಯಗಳನ್ನು ಆಡಲಾಗುತ್ತಿದೆ. ಆದರೆ, ರಣಜಿ ಟ್ರೋಫಿ ಜತೆಗೆ ಮಹಿಳಾ ಟಿ20 ಚಾಂಪಿಯನ್ ಷಿಪ್ ಆದಷ್ಟು ಬೇಗ ಆರಂಭಿಸಬೇಕೆಂಬ ಬೇಡಿಕೆ ಬಂದಿದ್ದು, ಇದೀಗ ಮಂಡಳಿ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ.
ಕೂಚ್ ಬೆಹಾರ್ ಟ್ರೋಫಿ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ
ಸದ್ಯ ಈ ಎರಡೂ ಟೂರ್ನಿಗಳು ಯಾವಾಗ ಆರಂಭವಾಗಲಿವೆ ಎಂಬುದು ಸ್ಪಷ್ಟವಾಗಿಲ್ಲ. ಬಿಸಿಸಿಐ ಶೀಘ್ರದಲ್ಲೇ ಪಂದ್ಯಾವಳಿಯ ಬಯೋ ಸೆಕ್ಯುರಿಟಿ ಬಬಲ್‌ಗೆ ಸಂಬಂಧಿಸಿದ ಪ್ರೋಟೋಕಾಲ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಿದೆ ಎಂದು ಶಾ ರಾಜ್ಯ ಸಂಘಗಳಿಗೆ ತಿಳಿಸಿದ್ದಾರೆ. ಆದರೆ, ಈ ಎರಡು ಟೂರ್ನಿಗಳನ್ನು ಹೊರತುಪಡಿಸಿ, 19 ವರ್ಷದೊಳಗಿನವರ ಟೂರ್ನಿ ಕೂಚ್ ಬೆಹರ್ ಟ್ರೋಫಿ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಜೂನಿಯರ್ ಮಟ್ಟದ ಪಂದ್ಯಾವಳಿಯನ್ನು ಜನವರಿ ಮಧ್ಯದಲ್ಲಿ ನಿಲ್ಲಿಸಬೇಕಾಯಿತು. ಆ ಸಮಯದಲ್ಲಿ ಅದರ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುತ್ತಿದ್ದವು.
ಇದನ್ನೂ ಓದಿ:IND vs SL: ಸೋಲಿನ ಸುಳಿಯಲ್ಲಿರುವ ಲಂಕಾಗೆ ಆಘಾತ; ತಂಡದ ಮತ್ತಿಬ್ಬರು ಆಟಗಾರರು ಸರಣಿಯಿಂದ ಔಟ್!