IND vs SL: ಸೋಲಿನ ಸುಳಿಯಲ್ಲಿರುವ ಲಂಕಾಗೆ ಆಘಾತ; ತಂಡದ ಮತ್ತಿಬ್ಬರು ಆಟಗಾರರು ಸರಣಿಯಿಂದ ಔಟ್!

IND vs SL: ಆಸ್ಟ್ರೇಲಿಯ ಪ್ರವಾಸದಲ್ಲಿ ಐದು ಟಿ20 ಪಂದ್ಯಗಳನ್ನು ಆಡಿದ ತಕ್ಷಣವೇ ಭಾರತ ತಲುಪಿದ ಶ್ರೀಲಂಕಾ ತಂಡ, ಈ ಅವಧಿಯಲ್ಲಿ ಫಿಟ್ನೆಸ್ ಸಮಸ್ಯೆಯಿಂದಾಗಿ ತನ್ನ ಮೂವರು ಆಟಗಾರರನ್ನು ಕಳೆದುಕೊಂಡಿದೆ.

IND vs SL: ಸೋಲಿನ ಸುಳಿಯಲ್ಲಿರುವ ಲಂಕಾಗೆ ಆಘಾತ; ತಂಡದ ಮತ್ತಿಬ್ಬರು ಆಟಗಾರರು ಸರಣಿಯಿಂದ ಔಟ್!
ಲಂಕಾ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Feb 25, 2022 | 7:20 PM

ಭಾರತದ ವಿರುದ್ಧದ T20 ಸರಣಿಯ ಆರಂಭವು ಶ್ರೀಲಂಕಾಕ್ಕೆ (India vs Sri Lanka T20I Series) ಉತ್ತಮವಾಗಿಲ್ಲ. ಫೆಬ್ರವರಿ 24 ರಂದು ಗುರುವಾರ ಲಕ್ನೋದಲ್ಲಿ ನಡೆದ ಮೊದಲ ಪಂದ್ಯದಲ್ಲಿ ತಂಡವು 62 ರನ್‌ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು. ತಂಡದ ಸೋಲಿಗೆ ಪ್ರಮುಖ ಕಾರಣ ಭಾರತದ ಅನುಭವ ಮತ್ತು ಶ್ರೀಲಂಕಾದ ಅನನುಭವ. ಜೊತೆಗೆ ಶ್ರೀಲಂಕಾ ತಂಡದಲ್ಲಿನ ಫಿಟ್‌ನೆಸ್ ಸಮಸ್ಯೆಯೂ ಒಂದು ಕಾರಣವಾಗಿದ್ದು, ಪ್ರವಾಸಿ ತಂಡಕ್ಕೆ ಮತ್ತಷ್ಟು ಆತಂಕ ಹೆಚ್ಚಿದೆ. ಏಕೆಂದರೆ ಲಂಕಾ ತಂಡದ ಇಬ್ಬರು ಪ್ರಮುಖ ಆಟಗಾರರು ಸರಣಿಯಿಂದ ಔಟಾಗಿದ್ದಾರೆ. ಶ್ರೀಲಂಕಾ ತಂಡದ ಯುವ ಆಫ್ ಸ್ಪಿನ್ನರ್ ಮಹಿಷ್ ತೀಕ್ಷಣ (Mahish Theekshana) ಮತ್ತು ಅನುಭವಿ ಆರಂಭಿಕ ಆಟಗಾರ ಕುಸಾಲ್ ಮೆಂಡಿಸ್ (Kusal Mendis) ಮಂಡಿರಜ್ಜು ಸಮಸ್ಯೆಯಿಂದಾಗಿ ಟಿ20 ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಆಸ್ಟ್ರೇಲಿಯ ಪ್ರವಾಸದಲ್ಲಿ ಐದು ಟಿ20 ಪಂದ್ಯಗಳನ್ನು ಆಡಿದ ತಕ್ಷಣವೇ ಭಾರತ ತಲುಪಿದ ಶ್ರೀಲಂಕಾ ತಂಡ, ಈ ಅವಧಿಯಲ್ಲಿ ಫಿಟ್ನೆಸ್ ಸಮಸ್ಯೆಯಿಂದಾಗಿ ತನ್ನ ಮೂವರು ಆಟಗಾರರನ್ನು ಕಳೆದುಕೊಂಡಿದೆ. ತಂಡದ ಲೆಗ್-ಸ್ಪಿನ್-ಆಲ್-ರೌಂಡರ್ ವನಿಂದು ಹಸರಂಗ ಅವರು ಆಸ್ಟ್ರೇಲಿಯಾದಲ್ಲಿಯೇ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದರು. ಜೊತೆಗೆ ಕೊನೆಯ ಟಿ 20 ಸಮಯದಲ್ಲಿ ಟೀಕ್ಷಣ ಮತ್ತು ಮೆಂಡಿಸ್ ಗಾಯಗೊಂಡಿದ್ದರು. ಈ ಇಬ್ಬರೂ ಆಟಗಾರರು ಭಾರತ ವಿರುದ್ಧದ ಮೊದಲ ಟಿ20ಯಲ್ಲೂ ಆಡಲು ಸಾಧ್ಯವಾಗದೆ ಸರಣಿಯಿಂದ ಹೊರಬಿದ್ದಿದ್ದರು.

ಶ್ರೀಲಂಕಾ ಕ್ರಿಕೆಟ್ ತನ್ನ ಎರಡೂ ಆಟಗಾರರ ಗಾಯದ ಬಗ್ಗೆ ಮತ್ತು ಫೆಬ್ರವರಿ 25 ಶುಕ್ರವಾರದಂದು ಅವರನ್ನು ಸರಣಿಯಿಂದ ಹೊರಗಿಡುವ ಬಗ್ಗೆ ತಿಳಿಸಿದೆ. ಭಾರತ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಪ್ರಕಟಿಸುವುದರೊಂದಿಗೆ, ಟೀಕ್ಷಣ ಮತ್ತು ವನಿಂದು ಹಸರಂಗ ಈಗ ನೇರವಾಗಿ ದೇಶಕ್ಕೆ ಮರಳಲಿದ್ದಾರೆ ಎಂದು ಮಂಡಳಿ ತಿಳಿಸಿದೆ. ಶ್ರೀಲಂಕಾ ತಂಡದಲ್ಲಿ, ತೀಕ್ಷಣ ಮತ್ತು ಮೆಂಡಿಸ್ ಬದಲಿಗೆ ಟೆಸ್ಟ್ ತಂಡದ ಉಪನಾಯಕ ಧನಂಜಯ ಡಿ ಸಿಲ್ವಾ ಮತ್ತು ನಿರೋಶನ್ ಡಿಕ್ವೆಲ್ಲಾ ಅವರನ್ನು T20I ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಟೆಸ್ಟ್ ತಂಡದಲ್ಲಿ ಮೆಂಡಿಸ್​ಗೆ ಸ್ಥಾನ

ಆದಾಗ್ಯೂ, ಮೆಂಡಿಸ್ ಗಾಯದ ಹೊರತಾಗಿಯೂ, ಶ್ರೀಲಂಕಾ ತಂಡವು ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾದ 18 ಸದಸ್ಯರ ತಂಡದಲ್ಲಿ ಅವರನ್ನು ಹೆಸರಿಸಿದೆ. ಮಾರ್ಚ್ 4 ರಿಂದ ಮೊಹಾಲಿಯಲ್ಲಿ ಮೊದಲ ಟೆಸ್ಟ್ ಪ್ರಾರಂಭವಾಗುವ ವೇಳೆಗೆ ಎಡಗೈ ಬ್ಯಾಟ್ಸ್‌ಮನ್ ಫಿಟ್ ಆಗಬೇಕು ಎಂದು ಮಂಡಳಿಯು ನಿರೀಕ್ಷಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಗಾಯದ ನಡುವೆಯೂ ಮೆಂಡಿಸ್ 68 ರನ್ ಗಳಿಸಿ ಅಜೇಯರಾಗಿ ತಂಡಕ್ಕೆ ಸರಣಿಯಲ್ಲಿ ಜಯ ತಂದುಕೊಟ್ಟರು.

ಇದನ್ನೂ ಓದಿ:IPL 2022: ಚೆನ್ನೈ- ಮುಂಬೈ ಬೇರೆ ಬೇರೆ! ಗುಂಪುಗಳ ವಿಂಗಡಣೆಯಲ್ಲಿ ಬಿಸಿಸಿಐ ಮಾಸ್ಟರ್ ಪ್ಲಾನ್