ಈತ ಭಾರತದ ಅಪ್ರತಿಮ ಪ್ರತಿಭೆ! ಟಿ20 ವಿಶ್ವಕಪ್​ಗೆ ಇಂತವರೇ ಬೇಕು; ರೋಹಿತ್ ಹೀಗೆ ಹೇಳಿದ್ದು ಯಾರ ಬಗ್ಗೆ?

| Updated By: ಪೃಥ್ವಿಶಂಕರ

Updated on: Feb 23, 2022 | 8:33 PM

Rohit Sharma: ಸಂಜು ಸ್ಯಾಮ್ಸನ್ ಸಾಟಿಯಿಲ್ಲದ ಪ್ರತಿಭೆಯನ್ನು ಹೊಂದಿದ್ದಾರೆ. ಅವರ ಬ್ಯಾಟಿಂಗ್ ನೋಡಿದಾಗಲೆಲ್ಲ ನೀವು ಆನಂದಿಸುವಿರಿ. ಸಂಜು ಸ್ಯಾಮ್ಸನ್ ಅವರಲ್ಲಿ ಕೌಶಲ್ಯವಿದೆ, ಪ್ರತಿಭೆ ಅವರೊಳಗೆ ತುಂಬಿದೆ.

ಈತ ಭಾರತದ ಅಪ್ರತಿಮ ಪ್ರತಿಭೆ! ಟಿ20 ವಿಶ್ವಕಪ್​ಗೆ ಇಂತವರೇ ಬೇಕು; ರೋಹಿತ್ ಹೀಗೆ ಹೇಳಿದ್ದು ಯಾರ ಬಗ್ಗೆ?
ರೋಹಿತ್, ಸಂಜು
Follow us on

ಅದ್ಭುತ ಡ್ರೈವ್‌, ಅದ್ಭುತ ಕಟ್ ಶಾಟ್‌, ಅದ್ಭುತ ಪುಲ್ ಶಾಟ್‌. ಸಂಜು ಸ್ಯಾಮ್ಸನ್ (Sanju Samson) ಅವರ ಬತ್ತಳಿಕೆಯಲ್ಲಿ ಇಲ್ಲದ ಶಾಟ್ ಇಲ್ಲ. ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಮತ್ತು ಅವರ ಪ್ರತಿಭೆಗೆ ಎಲ್ಲರೂ ಸೆಲ್ಯೂಟ್ ಮಾಡುತ್ತಾರೆ. ಇದೇ ಕಾರಣಕ್ಕೆ ಟೀಂ ಇಂಡಿಯಾ ಅವರಿಗೆ ಹಲವು ಅವಕಾಶಗಳನ್ನು ನೀಡಿದರೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಆದರೆ, ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ (Rohit Sharma) ಸಂಜು ಸ್ಯಾಮ್ಸನ್ ಮೇಲೆ ಹೆಚ್ಚಿನ ಭರವಸೆ ಹೊಂದಿದ್ದು, ಕೇರಳದ ಈ ಬ್ಯಾಟ್ಸ್‌ಮನ್​ನನ್ನು ಆಸ್ಟ್ರೇಲಿಯಾದಲ್ಲಿ ಆಯೋಜನೆಗೊಳ್ಳಲಿರುವ ಟಿ20 ವಿಶ್ವಕಪ್‌ (T20 World Cup)ನಲ್ಲಿ ಆಡಿಸುವ ಬಯಕೆ ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ T20 ಸರಣಿಯ ಮೊದಲು (ಭಾರತ vs ಶ್ರೀಲಂಕಾ, 1 ನೇ T20I), ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಹೊಗಳಿದರು. ಜೊತೆಗೆ ಸಂಜು ಅವರನ್ನು ಅಪ್ರತಿಮ ಪ್ರತಿಭೆ ಎಂದು ಬಣ್ಣಿಸಿದ್ದಾರೆ.

ಸಂಜು ಸ್ಯಾಮ್ಸನ್ ಅವರನ್ನು ಹೊಗಳಿದ ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್ ಸಾಟಿಯಿಲ್ಲದ ಪ್ರತಿಭೆಯನ್ನು ಹೊಂದಿದ್ದಾರೆ. ಅವರ ಬ್ಯಾಟಿಂಗ್ ನೋಡಿದಾಗಲೆಲ್ಲ ನೀವು ಆನಂದಿಸುವಿರಿ. ಸಂಜು ಸ್ಯಾಮ್ಸನ್ ಅವರಲ್ಲಿ ಕೌಶಲ್ಯವಿದೆ, ಪ್ರತಿಭೆ ಅವರೊಳಗೆ ತುಂಬಿದೆ. ಭಾರತದಲ್ಲಿ ಅನೇಕ ಕ್ರಿಕೆಟಿಗರು ಪ್ರತಿಭೆಯನ್ನು ಹೊಂದಿದ್ದಾರೆ ಆದರೆ ಅವರನ್ನು ಮೈದಾನದಲ್ಲಿ ತೋರಿಸುವುದು ಅತ್ಯಂತ ಮುಖ್ಯವಾದ ವಿಷಯ ಎಂದಿದ್ದಾರೆ.

T20 ವಿಶ್ವಕಪ್‌ನಲ್ಲಿ ರೋಹಿತ್ ಸಂಜು ಆಡುತ್ತಾರಾ?

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಅವರಂತಹ ಬ್ಯಾಟ್ಸ್‌ಮನ್ ವಿಧ್ವಂಸಕರಾಗಬಹುದು ಎಂದು ರೋಹಿತ್ ಶರ್ಮಾ ಸ್ಪಷ್ಟವಾಗಿ ಹೇಳಿದ್ದಾರೆ. ಸಂಜು ಸ್ಯಾಮ್ಸನ್ ಅವರ ಬ್ಯಾಕ್‌ಫೂಟ್ ಆಟ ಅದ್ಭುತವಾಗಿದೆ. ಅವರು ಎಲ್ಲಾ ರೀತಿಯ ಹೊಡೆತಗಳನ್ನು ಹೊಂದಿದ್ದಾರೆ. ಸಂಜು ಸ್ಯಾಮ್ಸನ್ ಆಡುವ ಹೊಡೆತಗಳನ್ನು ಆಡಲು ತುಂಬಾ ಕಷ್ಟ. ಆಸ್ಟ್ರೇಲಿಯಕ್ಕೆ ಇಂತಹ ಬ್ಯಾಟ್ಸ್‌ಮನ್‌ ಅಗತ್ಯವಿದೆ. ಅವರು ತಮ್ಮ ಪ್ರತಿಭೆಯನ್ನು ಬಳಸುತ್ತಾರೆ ಎಂದು ಭಾವಿಸುತ್ತೇವೆ. ಸಂಜು ಸ್ಯಾಮ್ಸನ್ ಪಂದ್ಯಗಳನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ ಮತ್ತು ತಂಡವು ಅವರಿಂದ ಹೆಚ್ಚಿನ ಭರವಸೆ ಹೊಂದಿದೆ ಎಂದು ರೋಹಿತ್ ಶರ್ಮಾ ಹೇಳಿದರು.

ಸಂಜು ಸ್ಯಾಮ್ಸನ್ ನಿರಾಶಾದಾಯಕ ಪ್ರದರ್ಶನ

ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅವರ ಪ್ರದರ್ಶನ ನಿರಾಶಾದಾಯಕವಾಗಿದೆ. ಭಾರತದ ಪರ 10 ಟಿ20 ಪಂದ್ಯಗಳಲ್ಲಿ ಸ್ಯಾಮ್ಸನ್ ಕೇವಲ 117 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ ಕೇವಲ 11.70. ಸ್ಯಾಮ್ಸನ್‌ನ ಈ ಅಂಕಿಅಂಶಗಳು ಅವರ ಅತ್ಯಂತ ಆಕ್ರಮಣಕಾರಿ ವರ್ತನೆಯ ಕಾರಣದಿಂದಾಗಿವೆ. ಅವರು ಹಲವು ಬಾರಿ ಕೆಟ್ಟ ಹೊಡೆತಗಳನ್ನು ಆಡಿ ಔಟಾಗಿದ್ದಾರೆ. ಸಂಜು ಅವರ ಕೊನೆಯ ಟಿ20 ಸರಣಿಯೂ ಶ್ರೀಲಂಕಾ ವಿರುದ್ಧವಾಗಿತ್ತು. 3 ಪಂದ್ಯಗಳ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಕೇವಲ 34 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಸಂಜು ಸ್ಯಾಮ್ಸನ್ ಆಡುವ ಇಲೆವೆನ್​ನಲ್ಲಿ ಅವಕಾಶ ಪಡೆದರೆ ದೊಡ್ಡ ಇನಿಂಗ್ಸ್ ಆಡುವ ನಿರೀಕ್ಷೆ ಇದೆ.

ಇದನ್ನೂ ಓದಿ:Rohit Sharma: ಟೀಂ ಇಂಡಿಯಾದ ಭವಿಷ್ಯದ ನಾಯಕ ಯಾರು? ಈ ಮೂವರ ಹೆಸರು ಸೂಚಿಸಿದ ರೋಹಿತ್