Rohit Sharma Six Video: ಹಿಟ್​ಮ್ಯಾನ್ ರೋಹಿತ್ ಶರ್ಮಾ ಸಿಡಿಸಿದ ಸಿಕ್ಸ್​ ಕಂಡು ಪೊಲಾರ್ಡ್ ಮಾಡಿದ್ದೇನು ನೋಡಿ

| Updated By: Vinay Bhat

Updated on: Feb 07, 2022 | 9:39 AM

Kieron Pollard Viral: ರೋಹಿತ್ ಶರ್ಮಾ ಬ್ಯಾಟ್​ನಿಂದ ಸಿಡಿದ ಬೌಂಡರಿ-ಸಿಕ್ಸರ್​ನಿಂದಲೇ 46 ರನ್​ಗಳು ಬಂದವು. ಅದರಲ್ಲೂ ಇವರು ಲೀಲಾಜಾಲವಾಗಿ ಸಿಡಿಸಿದ ಒಂದು ಸಿಕ್ಸ್ ಅಮೋಘವಾಗಿತ್ತು. ಇದನ್ನು ಕಂಡು ವೆಸ್ಟ್ ಇಂಡೀಸ್ ನಾಯಕ ಕೀರೊನ್ ಪೊಲಾರ್ಡ್ ಕೂಡ ಒಂದು ಕ್ಷಣ ದಂಗಾಗಿ ಹೋದರು.

Rohit Sharma Six Video: ಹಿಟ್​ಮ್ಯಾನ್ ರೋಹಿತ್ ಶರ್ಮಾ ಸಿಡಿಸಿದ ಸಿಕ್ಸ್​ ಕಂಡು ಪೊಲಾರ್ಡ್ ಮಾಡಿದ್ದೇನು ನೋಡಿ
Rohit Sharma and Kieron Pollard
Follow us on

ಪರಿಪೂರ್ಣ ನಾಯಕನಾಗಿ ತಂಡವನ್ನು ಮುನ್ನಡೆಸಿದ ಮೊದಲ ಪಂದ್ಯದಲ್ಲೇ ರೋಹಿತ್ ಶರ್ಮಾ (Rohit Sharma) ಅವರಿಗೆ ಅಭೂತಪೂರ್ವ ಗೆಲುವು ದಕ್ಕಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ (Team india) ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಬೌಲಿಂಗ್​ನಲ್ಲಿ ಯುಜ್ವೇಂದ್ರ ಚಹಲ್ ಮತ್ತು ವಾಷಿಂಗ್ಟನ್ ಸುಂದರ್ ಮಿಂಚಿದರೆ, ಬ್ಯಾಟಿಂಗ್​ನಲ್ಲಿ ಹಿಟ್​ಮ್ಯಾನ್ ರೋಹಿತ್ ಶರ್ಮಾ ಅಬ್ಬರಿಸಿದರು. ಕೇವಲ 51 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ 60 ರನ್ ಚಚ್ಚಿದರು. ಈ ಮೂಲಕ ಮೊದಲ ವಿಕೆಟ್​ಗೆ ಇಶಾನ್ ಕಿಶನ್ ಜೊತೆಗೂಡಿ 84 ರನ್​ಗಳ ಕಾಣಿಕೆ ನೀಡಿದರು. ರೋಹಿತ್ ಬ್ಯಾಟ್​ನಿಂದ ಸಿಡಿದ ಬೌಂಡರಿ-ಸಿಕ್ಸರ್​ನಿಂದಲೇ 46 ರನ್​ಗಳು ಬಂದವು. ಅದರಲ್ಲೂ ಇವರು ಲೀಲಾಜಾಲವಾಗಿ ಸಿಡಿಸಿದ ಒಂದು ಸಿಕ್ಸ್ ಅಮೋಘವಾಗಿತ್ತು. ಇದನ್ನು ಕಂಡು ವೆಸ್ಟ್ ಇಂಡೀಸ್ ನಾಯಕ ಕೀರೊನ್ ಪೊಲಾರ್ಡ್ (Kieron Pollard) ಕೂಡ ಒಂದು ಕ್ಷಣ ದಂಗಾಗಿ ಹೋದರು.

ಹೌದು, ವೆಸ್ಟ್ ಇಂಡೀಸ್ ನೀಡಿದ್ದ 177 ರನ್​ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿಲು ಭಾರತ ಪರ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು. ರೋಹಿತ್ ತಮ್ಮ ಸ್ಫೋಟಕ ಆಟಕ್ಕೆ ಮುಂದಾದರೆ ಕಿಶನ್ ಇವರಿಗೆ ಉತ್ತಮ ಸಾಥ್ ನೀಡುತ್ತಿದ್ದರು. ಅದು 10ನೇ ಓವರ್​ನ ಅಲ್ಜರಿ ಜೋಸೆಫ್ ಅವರ ಬೌಲಿಂಗ್. ಈ ಓವರ್​ನಲ್ಲಿ ರೋಹಿತ್ ಅವರು ತಮ್ಮ ಟ್ರೆಡ್ ಮಾರ್ಕ್ ಪುಲ್ ಶಾಟ್ ಮೂಲಕ ಫೈನ್ ಲೆಗ್​ನಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಸಿದರು. ಹಿಟ್​ಮ್ಯಾನ್ ಅವರ ಈ ಶಾಟ್ ಕಂಡು ಅಭಿಮಾನಿಗಳು ಮಾತ್ರವಲ್ಲದೆ, ವೆಸ್ಟ್ ಇಂಡೀಸ್ ತಂಡದ ನಾಯಕ ಕೀರೊನ್ ಪೊಲಾರ್ಡ್ ಒಂದು ಕ್ಷಣ ಮೂಕವಿಸ್ಮಿತರಾದರು. ಪೊಲಾರ್ಡ್​ ಅವರ ಎಕ್ಸ್​ಪ್ರೆಷನ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

 

ರೋಹಿತ್​ರಿಂದ ಸಚಿನ್ ದಾಖಲೆ ಉಡೀಸ್:

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಸಚಿನ್ ತೆಂಡೂಲ್ಕರ್ ದಾಖಲೆಯೊಂದನ್ನು ಮುರಿದರು. ವೆಸ್ಟ್ ಇಂಡೀಸ್ ವಿರುದ್ದ 34 ಪಂದ್ಯಗಳಲ್ಲಿ ರೋಹಿತ್ 1583 ರನ್ ಬಾರಿಸುವ ಮೂಲಕ ಸಚಿನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. 39 ಪಂದ್ಯಗಳಲ್ಲಿ ಸಚಿನ್ 1573 ರನ್ ಬಾರಿಸಿದ್ದರು. ಸದ್ಯ ವಿರಾಟ್ ಕೊಹ್ಲಿ 40 ಪಂದ್ಯಗಳಲ್ಲಿ 2243 ರನ್ ಬಾರಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜೊತೆಗೆ 1000 ಏಕದಿನ ಪಂದ್ಯವನ್ನು ಗೆಲ್ಲಿಸಿದ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್​ ಶರ್ಮಾ ಪಾತ್ರರಾಗಿದ್ದಾರೆ.

ಇತಿಹಾಸ ಬರೆದ ವಿರಾಟ್‌ ಕೊಹ್ಲಿ:

ವಿರಾಟ್ ಕೊಹ್ಲಿ 4 ಎಸೆತಗಳಲ್ಲಿ ಕೇವಲ 8 ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದರೂ ನೂತನ ಸಾಧನೆ ಮಾಡಿದ್ದಾರೆ. ತಾಯ್ನಾಡಿನಲ್ಲಿ ಟೀಮ್ ಇಂಡಿಯಾ ಪರ ಅತಿ ವೇಗವಾಗಿ 5000 ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ಸಂಪಾದಿಸಿದ್ದಾರೆ. ಏಕದಿನ ಕ್ರಿಕೆಟ್‌ ವೃತ್ತಿಬದುಕಿನಲ್ಲಿ ಈವರೆಗೆ 249 ಒಡಿಐ ಇನಿಂಗ್ಸ್‌ಗಳನ್ನು ಆಡಿರುವ ಕೊಹ್ಲಿ, ತವರು ನೆಲದಲ್ಲಿ 5000 ರನ್‌ಗಳನ್ನು ಗಳಿಸುವ ಸಲುವಾಗಿ 96 ಇನಿಂಗ್ಸ್‌ಗಳನ್ನು ಆಡಿದ್ದಾರೆ. ಸಚಿನ್‌ ತೆಂಡೂಲ್ಕರ್‌ ಈ ಸಾಧನೆ ಸಲುವಾಗಿ 121 ಇನಿಂಗ್ಸ್‌ಗಳನ್ನು ಆಡಿದ್ದರು.

Rohit Sharma: ಪಂದ್ಯ ಮುಗಿದ ಬಳಿಕ ಮಹತ್ವದ ಮಾಹಿತಿ ಹಂಚಿಕೊಂಡ ನಾಯಕ ರೋಹಿತ್ ಶರ್ಮಾ

India vs West Indies: 1000ನೇ ಏಕದಿನ ಪಂದ್ಯದಲ್ಲಿ ಗೆದ್ದು ದಾಖಲೆ ಬರೆದ ಭಾರತ: ರೋಹಿತ್ ಪಡೆ ಭರ್ಜರಿ ಶುಭಾರಂಭ