Rahul Dravid: ರಾಹುಲ್ ದ್ರಾವಿಡ್ ಭಾರತದ ಕೋಚ್ ಆದ ಬಗ್ಗೆ ರೋಹಿತ್ ಶರ್ಮಾರಿಂದ ಅಚ್ಚರಿಯ ಹೇಳಿಕೆ

Rohit Sharma: ಅಫ್ಘಾನಿಸ್ತಾನ ವಿರುದ್ಧ ಭಾರತ ಜಯ ಸಾಧಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ರೋಹಿತ್ ಶರ್ಮಾ ಅವರಿಗೆ ಪತ್ರಕರ್ತರು 'ರಾಹುಲ್ ದ್ರಾವಿಡ್ ಭಾರತದ ಕೋಚ್ ಆದ ಬಗ್ಗೆ ನಿಮ್ಮ ಅಭಿಪ್ರಾಯ?' ಎಂದು ಕೇಳಿದ್ದಾರೆ. ಇದಕ್ಕೆ ಹಿಟ್​ಮ್ಯಾನ್ ಕೊಟ್ಟ ಏನೆಂದು ನೀವೆ ನೋಡಿ.

Rahul Dravid: ರಾಹುಲ್ ದ್ರಾವಿಡ್ ಭಾರತದ ಕೋಚ್ ಆದ ಬಗ್ಗೆ ರೋಹಿತ್ ಶರ್ಮಾರಿಂದ ಅಚ್ಚರಿಯ ಹೇಳಿಕೆ
Rahul Dravid and Rohit Sharma
Follow us
TV9 Web
| Updated By: Vinay Bhat

Updated on: Nov 04, 2021 | 12:34 PM

ಭಾರತ ಕ್ರಿಕೆಟ್ ತಂಡದ ಮುಂದಿನ ಮುಖ್ಯ ಕೋಚ್ (Indian Cricket Team Head Coach) ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ದಕ್ಕಿದೆ. ಬುಧವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಬ್ಯಾಟಿಂಗ್‌ ದಂತಕತೆ ರಾಹುಲ್‌ ದ್ರಾವಿಡ್‌ (Rahul dravid) ಭಾರತ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಿದೆ. ಟಿ20 ವಿಶ್ವಕಪ್‌ (T20 World Cup) ಮುಗಿದ ಅನಂತರ ಅವರ ಕಾರ್ಯಾವಧಿ ಆರಂಭವಾಗಲಿದೆ. 2023ರಲ್ಲಿ ಭಾರತದಲ್ಲೇ ನಡೆಯುವ ಏಕದಿನ ವಿಶ್ವಕಪ್‌ ತನಕ ಅವರು ಈ ಹುದ್ದೆಯಲ್ಲಿರಲಿದ್ದಾರೆ. ಬಿಸಿಸಿಐ ಭಾರತ ತಂಡದ ಮುಂದಿನ ಕೋಚ್ ಅನ್ನು ಪ್ರಕಟಿಸುವಾಗ ಅತ್ತ ಟೀಮ್ ಇಂಡಿಯಾ (Team india) ಟಿ20 ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ (India vs Afghanistan) ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡುತ್ತಿತ್ತು. ಪಂದ್ಯ ಮುಗಿದ ಬಳಿಕ ಈ ಬಗ್ಗೆ ರೋಹಿತ್ ಶರ್ಮಾ (Rohit Sharma) ಬಳಿ ಕೇಳಿದಾಗ ನನಗೆ ಈ ಕುರಿತು ಗೊತ್ತೇ ಇಲ್ಲ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ಭಾರತ 66 ರನ್​ಗಳ ಭರ್ಜರಿ ಜಯ ಸಾಧಿಸಿತು. ಬ್ಯಾಟಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಪತ್ರಕರ್ತರು, ರಾಹುಲ್ ದ್ರಾವಿಡ್ ಭಾರತದ ಕೋಚ್ ಆದ ಬಗ್ಗೆ ನಿಮ್ಮ ಅಭಿಪ್ರಾಯ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರೋಹಿತ್, ‘ಹೋ, ಇದು ಅಧಿಕೃತವೇ?, ನಾವು ಪಂದ್ಯವನ್ನು ಆಡುತ್ತಿದ್ದೆವು, ದ್ರಾವಿಡ್ ಕೋಚ್ ಆದ ಬಗ್ಗೆ ನನಗೆಎ ಯಾವುದೇ ಮಾಹಿತಿ ತಿಳಿದಿಲ್ಲ’ ಎಂದು ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಅವರು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದು ನಮಗೆ ಸಂತೋಷದ ವಿಚಾರ. ದ್ರಾವಿಡ್ ಭಾರತೀಯ ಕ್ರಿಕೆಟ್ ನ ಧೀಮಂತ ಕ್ರಿಕೆಟಿಗ. ಅವರ ಜೊತೆ ಕೆಲಸ ಮಾಡುವದೇ ಖುಷಿ. ಭಾರತೀಯ ಕ್ರಿಕೆಟ್​ಗೆ ಮತ್ತೊಂದು ರೂಪದಲ್ಲಿ ಕಮ್ ಬ್ಯಾಕ್ ಮಾಡುತ್ತಿರುವುದಕ್ಕೆ ಅವರಿಗೆ ಸ್ವಾಗತ. ಅವರಿಗೆ ಅಭಿನಂದನೆಗಳು’ ಎಂದು ರೋಹಿತ್ ಖುಷಿ ಹಂಚಿಕೊಂಡರು.

ಸದ್ಯ ಸಾಗುತ್ತಿರುವ ಟಿ20 ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಿ ಕರ್ತವ್ಯ ಶುರು ಮಾಡಲಿದ್ದಾರೆ. ಸುಲಕ್ಷಣಾ ನಾಯಕ್ ಮತ್ತು ಆರ್ ಪಿ ಸಿಂಗ್ ಅವರಿರುವ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ಬುಧವಾರ ರಾಹುಲ್ ದ್ರಾವಿಡ್ ಅವರನ್ನ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲು ಒಮ್ಮತದ ನಿರ್ಧಾರ ಕೈಗೊಂಡಿತು.

ಟಿ20 ವಿಶ್ವಕಪ್ ಬಳಿಕ ರವಿಶಾಸ್ತ್ರಿ ಅವರ ಕೋಚಿಂಗ್ ಗುತ್ತಿಗೆ ಅವಧಿ ಅಂತ್ಯವಾಗಲಿದೆ. ಅದಾದ ಬಳಿಕ ಅವರು ಕೋಚ್ ಆಗಿ ಮುಂದುವರಿಯು ಇಚ್ಛ ತೋರಿಲ್ಲ. ಅವರ ಸ್ಥಾನ ತುಂಬಲು ಬಿಸಿಸಿಐ ಅಕ್ಟೋಬರ್ 26ರಂದು ಅರ್ಜಿಗಳನ್ನ ಆಹ್ವಾನಿಸಿತ್ತು. ‘ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗುವದು ಹೆಮ್ಮೆಯ ವಿಷಯ. ಈ ಜವಾಬ್ದಾರಿ ಹೊರಲು ತುದಿಗಾಲಲ್ಲಿ ನಿಂತಿದ್ದೇನೆ. ಶಾಸ್ತ್ರಿ ಅವರ ಕೈಕೆಳಗೆ ಭಾರತ ತಂಡ ಬಹಳ ಚೆನ್ನಾಗಿ ಆಡಿದೆ. ಇದೇ ಸಾಧನೆಯನ್ನ ಮುಂದುವರಿಸುವ ವಿಶ್ವಾಸದಲ್ಲಿ ನಾನಿದ್ದೇನೆ’ ಎಂದು ದ್ರಾವಿಡ್ ಹೇಳಿದ್ದಾರೆ.

Matt Cross: ಇಡೀ ಭಾರತ ದೇಶದ ಬೆಂಬಲ ನಮಗಿದೆ: ನ್ಯೂಜಿಲೆಂಡ್ ಸೋಲಿಸಲು ಸ್ಕಾಟ್ಲೆಂಡ್ ಕೀಪರ್ ಮಾಡಿದ ರಣತಂತ್ರ ನೋಡಿ

Ravindra Jadeja: ವಿವಾದಕ್ಕೆ ಕಾರಣವಾದ ಅಂಪೈರ್ ತೀರ್ಪು: ನೀವೇ ಹೇಳಿ ಜಡೇಜಾ ಹಿಡಿದ ಕ್ಯಾಚ್ ಔಟ್ ಅಥವಾ ನಾಟೌಟ್?

(Rohit Sharma talked about the Rahul Dravid appointment as the Indian cricket team head coach)

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ