AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravindra Jadeja: ವಿವಾದಕ್ಕೆ ಕಾರಣವಾದ ಅಂಪೈರ್ ತೀರ್ಪು: ನೀವೇ ಹೇಳಿ ಜಡೇಜಾ ಹಿಡಿದ ಕ್ಯಾಚ್ ಔಟ್ ಅಥವಾ ನಾಟೌಟ್?

Ravindra Jadeja Catch Controversy: ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಮಾನ ನೀಡಿ ಥರ್ಡ್ ಅಂಪೈರ್ ಮೊರೆ ಹೋದರು. ಮೇಲ್ನೋಟಕ್ಕೆ ರವೀಂದ್ರ ಜಡೇಜಾ ಚೆಂಡನ್ನು ಸರಿಯಾಗಿ ಹಿಡಿದಿರುವುದು ಕಂಡುಬಂದಂತಿತ್ತು. ಆದರೆ, ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಮಾನ ಪ್ರಕಟಿಸಿದರು

Ravindra Jadeja: ವಿವಾದಕ್ಕೆ ಕಾರಣವಾದ ಅಂಪೈರ್ ತೀರ್ಪು: ನೀವೇ ಹೇಳಿ ಜಡೇಜಾ ಹಿಡಿದ ಕ್ಯಾಚ್ ಔಟ್ ಅಥವಾ ನಾಟೌಟ್?
ravindra jadeja catch
TV9 Web
| Updated By: Vinay Bhat|

Updated on: Nov 04, 2021 | 11:07 AM

Share

ಅಬುಧಾಬಿಯಲ್ಲಿ ಬುಧವಾರ ನಡೆದ ಐಸಿಸಿ ಟಿ20 ವಿಶ್ವಕಪ್​ನ (T20World Cup) ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ (India vs Afghanistan) 66 ರನ್​ಗಳ ದೊಡ್ಡ ಅಂತರದ ಗೆಲುವು ಸಾಧಿಸಿತು. ಶೇಖ್‌ ಝಯೇದ್‌ ಕ್ರಿಕಟ್ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಆರಂಭಿಕರಾದ ಕೆಎಲ್‌ ರಾಹುಲ್‌ (KL Rahul) ಮತ್ತು ರೋಹಿತ್‌ ಶರ್ಮಾ (Rohit Sharma) ಅವರ ಬಿರುಸಿನ ಬ್ಯಾಟಿಂಗ್‌ ಮತ್ತು ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ (Hardik Pandya and Risshabh Pant) ಬಲದಿಂದ 20 ಓವರ್‌ಗಳಲ್ಲಿ 210 ರನ್‌ಗಳ ಶಿಖರ ನಿರ್ಮಿಸಿತು. ಇದು ಈ ಬಾರಿಯ ವಿಶ್ವಕಪ್‌ ಟೂರ್ನಿಯ ಗರಿಷ್ಠ ಸ್ಕೋರ್‌ ಆಗಿದೆ. ಟಾರ್ಗೆಟ್ ಬೆನ್ನಟ್ಟಿದ ಅಫ್ಘಾನಿಸ್ತಾನ 144/7 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಆದರೆ, ಈ ಪಂದ್ಯದಲ್ಲಿ ರವೀಂದ್ರ ಜಡೇಜಾ (Ravindra Jadeja Catch) ಹಿಡಿದ ಕ್ಯಾಚ್​ಗೆ ಥರ್ಡ್ ಅಂಪೈರ್ ಕೊಟ್ಟ (Third Umpire) ತೀರ್ಮಾನ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಹೌದು, 19ನೇ ಓವರ್​ನ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಅಫ್ಘಾನಿಸ್ತಾನ ಬ್ಯಾಟರ್ ಕರೀಮ್ ಜನತ್ ಚೆಂಡನ್ನು ಸಿಕ್ಸ್​ಗೆಂದು ಅಟ್ಟಿದರು. ಆದರೆ, ಚೆಂಡು ಅಂದುಕೊಂಡಷ್ಟು ದೂರ ಹೋಗಲಿಲ್ಲ. ಫೀಲ್ಡ್​ನಲ್ಲಿದ್ದ ರವೀಂದ್ರ ಜಡೇಜಾ ಓಡಿ ಬಂದು ಡೈವ್ ಹೊಡೆದು ಚೆಂಡನ್ನು ಹಿಡಿದರು. ಆದರೆ, ಜಡೇಜಾ ಡೈವ್ ಬಿದ್ದವೇಳೆ ಚೆಂಡು ನೆಲಕ್ಕೆ ತಾಕಿತಾ ಎಂಬ ಅನುಮಾನ ಮೂಡಿತು.

ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಮಾನ ನೀಡಿ ಥರ್ಡ್ ಅಂಪೈರ್ ಮೊರೆ ಹೋದರು. ಮೇಲ್ನೋಟಕ್ಕೆ ಜಡೇಜಾ ಚೆಂಡನ್ನು ಸರಿಯಾಗಿ ಹಿಡಿದಿರುವುದು ಕಂಡುಬಂದಂತಿತ್ತು. ಆದರೆ, ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಮಾನ ಪ್ರಕಟಿಸಿದರು. ಈ ನಿರ್ಧಾರ ಕಂಡು ಜಡೇಜಾ, ವಿರಾಟ್ ಕೊಹ್ಲಿ ಕೂಡ ಒಂದು ಕ್ಷಣ ಶಾಕ್​ಗೆ ಒಳಗಾದರು.

ಐಸಿಸಿ ಈ ವಿಡಿಯೋವನ್ನು ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಕ್ರಿಕೆಟ್ ಪರಿಣಿತರಾದ ಸ್ಯಾಮ್ ಬಿಲ್ಲಿಂಗ್ಸ್ ಅವರು ಜಡೇಜಾ ಫೀಲ್ಡಿಂಗ್ ಅನ್ನು ಕೊಂಡಾಡಿದರೆ, ಸ್ಟುವರ್ಟ್ ಬ್ರಾಡ್ ಇದು ಔಟ್ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Syed Mushtaq Ali Trophy: ಇಂದಿನಿಂದ ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕರ್ನಾಟಕಕ್ಕೆ ಮುಂಬೈ ಮೊದಲ ಎದುರಾಳಿ

Virat Kohli: ಅಫ್ಘಾನ್ ವಿರುದ್ಧದ ಜಯದ ಬಳಿಕ ವಿರಾಟ್ ಕೊಹ್ಲಿಯಿಂದ ಮಹತ್ವದ ಹೇಳಿಕೆ: ಏನಂದ್ರು ಗೊತ್ತೇ?

(Ravindra Jadeja scintillating effort video goes viral and Umpire verdict which caused controversy in IND vs AFG Match)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ