AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Syed Mushtaq Ali Trophy: ಇಂದಿನಿಂದ ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕರ್ನಾಟಕಕ್ಕೆ ಮುಂಬೈ ಮೊದಲ ಎದುರಾಳಿ

Karnataka vs Mumbai, Syed Mushtaq Ali Trophy: ಕರ್ನಾಟಕಕ್ಕೆ ಮನೀಶ್‌ ಪಾಂಡೆ ನಾಯಕರಾಗಿದ್ದು, ದೇವದತ್‌ ಪಡಿಕ್ಕಲ್‌ ಸೇರಿದಂತೆ ಹಲವು ತಾರಾ ಆಟಗಾರರ ಬಲವಿದೆ. ಮುಂಬೈ‌ತಂಡದಲ್ಲಿ ಅಜಿಂಕ್ಯ ರಹಾನೆನಾಯಕರಾಗಿದ್ದು ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್​ರಂತಹ ಅನುಭವಿಗಳಿದ್ದಾರೆ.

Syed Mushtaq Ali Trophy: ಇಂದಿನಿಂದ ಸೈಯದ್ ಮುಷ್ತಾಕ್ ಅಲಿ ಟೂರ್ನಿ: ಕರ್ನಾಟಕಕ್ಕೆ ಮುಂಬೈ ಮೊದಲ ಎದುರಾಳಿ
Karnataka team
TV9 Web
| Edited By: |

Updated on: Nov 04, 2021 | 10:11 AM

Share

ಅತ್ತ ಐಸಿಸಿ ಟಿ20 ವಿಶ್ವಕಪ್ (T20 World Cup) ಸಮರ ರಂಗೇರುತ್ತಿದ್ದರೆ ಭಾರತದಲ್ಲಿ ಇಂದಿನಿಂದ ದೇಶೀಯ ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ (Syed Mushtaq Ali Trophy) ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲೇ ಎಲೈಟ್‌ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ತಂಡ ಬಲಿಷ್ಠ ಮುಂಬೈ (Karnataka vs Mumbai) ತಂಡವನ್ನು ಎದುರಿಸಲಿದೆ. ಎರಡೂ ತಂಡಗಳ ಪಾಲಿಗೆ ಇದು ಬಹುಮುಖ್ಯವಾದ ಪಂದ್ಯ. ಎರಡರಲ್ಲೂ ಖ್ಯಾತ ಅಂತರರಾಷ್ಟ್ರೀಯ ತಾರೆಯರಿದ್ದಾರೆ. ಹೀಗಾಗಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಕರ್ನಾಟಕಕ್ಕೆ ಮನೀಶ್‌ ಪಾಂಡೆ ನಾಯಕರಾಗಿದ್ದು, ದೇವದತ್‌ ಪಡಿಕ್ಕಲ್‌, ಕೆ.ಗೌತಮ್‌, ಕರುಣ್‌ ನಾಯರ್‌, ಪ್ರಸಿದ್ಧ್ ಕೃಷ್ಣ ಸೇರಿದಂತೆ ಹಲವು ತಾರಾ ಆಟಗಾರರ ಬಲವಿದೆ. ಮುಂಬೈ‌ತಂಡದಲ್ಲಿ ಅಜಿಂಕ್ಯ ರಹಾನೆನಾಯಕರಾಗಿದ್ದು ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್‌, ಶಿವಂ ದುಬೆ, ಧವಳ್‌ ಕುಲಕರ್ಣಿಯಂತಹ ಅನುಭವಿಗಳಿದ್ದಾರೆ.

ಕರ್ನಾಟಕದ ಪಡಿಕ್ಕಲ್‌, ಮಾಯಾಂಕ್‌ ಇವರೆಲ್ಲ ಇನ್ನೂ ಅಂತರರಾಷ್ಟ್ರೀಯ ತಂಡದಲ್ಲಿ ಭದ್ರ ನೆಲೆ ಕಂಡುಕೊಂಡಿಲ್ಲ. ಪಡಿಕ್ಕಲ್‌ಗ‌ಂತೂ ಬಹಳ ಅವಕಾಶಗಳೇ ಸಿಕ್ಕಿಲ್ಲ. ಇತ್ತ ಅಜಿಂಕ್ಯ ರಹಾನೆಗೆ ಟಿ20 ವೇಗಕ್ಕೆ ಹೊಂದಿಕೊಳ್ಳಲು ಉತ್ತಮ ಅವಕಾಶವಾಗಿದೆ. ಪೃಥ್ವಿ ಶಾ ಆಕ್ರಮಣಕಾರಿ ಆಟಗಾರ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷೆಗೆ ತಕ್ಕ ಸಾಧನೆ ಮಾಡಿಲ್ಲ. ಇವರೆಲ್ಲರಿಗೂ ಈ ಟೂರ್ನಿ ಮುಖ್ಯವಾಗಿದೆ.

ಅಲ್ಲದೆ ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಮುನ್ನ ಆಯ್ಕೆಗಾರರ ಗಮನ ಸೆಳೆಯಲು ದೇವದತ್ ಪಡಿಕಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧಕೃಷ್ಣ, ರಹಾನೆ, ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್, ಶಿವಂ ದುಬೆಗೆ ಇದು ಉತ್ತಮ ಅವಕಾಶವಾಗಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಲಾ 6 ತಂಡಗಳನ್ನು 5 ಎಲೈಟ್‌ ಗುಂಪುಗಳಾಗಿ ವಿಂಗಡಿಸಿದ್ದು, ಪ್ಲೇಟ್‌ ಗುಂಪಿನಲ್ಲಿ 8 ತಂಡಗಳಿವೆ. 6 ನಗರಗಳಲ್ಲಿ ಲೀಗ್‌ ಹಂತದ ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ಒಟ್ಟು ಐದು ಲೀಗ್ ಪಂದ್ಯಗಳನ್ನು ಆಡಲಿದೆ. ಲಕ್ನೋ, ಗುವಾಹಟಿ, ಬರೋಡಾ, ದೆಹಲಿ, ಹರಿಯಾಣ ಮತ್ತು ವಿಜಯವಾಡದಲ್ಲಿ ನಡೆಯಲಿದ್ದು, ನಾಕೌಟ್‌ ಪಂದ್ಯಗಳು (knockouts) ನವೆಂಬರ್ 16 ರಿಂದ ದೆಹಲಿಯಲ್ಲಿ ಪ್ರಾರಂಭವಾಗಲಿದ್ದು, ಫೈನಲ್ ಕೂಡ ದೆಹಲಿಯಲ್ಲಿ ನಡೆಯಲಿದೆ. ಒಟ್ಟು ಆರು ನಗರಗಳಲ್ಲಿ ಸೈಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ ಪಂದ್ಯ ನಡೆಯಲಿವೆ.

ಇಂದಿನ ಪಂದ್ಯ: ಕರ್ನಾಟಕ-ಮುಂಬೈ

ಪಂದ್ಯಾರಂಭ: ಮ. 12.30

ಸ್ಥಳ: ಗುವಾಹಟಿ, ಅಸ್ಸಾಂ

ಗುಂಪುಗಳು:

ಎ: ಪಂಜಾಬ್, ತಮಿಳುನಾಡು, ಒಡಿಶಾ, ಮಹಾರಾಷ್ಟ್ರ, ಗೋವಾ, ಪುದುಚೇರಿ (ಸ್ಥಳ: ಲಖನೌ).

ಬಿ: ಬಂಗಾಳ, ಛತ್ತೀಸ್‌ಗಢ, ಕರ್ನಾಟಕ, ಮುಂಬೈ, ಬರೋಡ, ಸರ್ವೀಸಸ್ (ಸ್ಥಳ: ಗುವಾಹಟಿ).

ಸಿ: ಜಮ್ಮು-ಕಾಶ್ಮೀರ, ಜಾರ್ಖಂಡ್, ಹಿಮಾಚಲ ಪ್ರದೇಶ, ರಾಜಸ್ಥಾನ, ಹರಿಯಾಣ, ಆಂಧ್ರ (ಸ್ಥಳ: ಬರೋಡ).

ಡಿ: ರೈಲ್ವೇಸ್, ಅಸ್ಸಾಂ, ಗುಜರಾತ್, ಮಧ್ಯಪ್ರದೇಶ, ಕೇರಳ, ಬಿಹಾರ (ಸ್ಥಳ: ದೆಹಲಿ).

ಇ: ಉತ್ತರ ಪ್ರದೇಶ, ಹೈದರಾಬಾದ್, ಉತ್ತರಾಖಂಡ, ಸೌರಾಷ್ಟ್ರ, ದೆಹಲಿ, ಚಂಡೀಗಢ (ಸ್ಥಳ: ಹರಿಯಾಣ).

ಪ್ಲೇಟ್: ತ್ರಿಪುರ, ವಿದರ್ಭ, ನಾಗಾಲ್ಯಾಂಡ್, ಮೇಘಾಲಯ, ಮಣಿಪುರ, ಸಿಕ್ಕಿಂ, ಅರುಣಾಚಲ ಪ್ರದೇಶ, ಮಿಜೋರಾಂ (ಸ್ಥಳ: ವಿಜಯವಾಡ).

Virat Kohli: ಅಫ್ಘಾನ್ ವಿರುದ್ಧದ ಜಯದ ಬಳಿಕ ವಿರಾಟ್ ಕೊಹ್ಲಿಯಿಂದ ಮಹತ್ವದ ಹೇಳಿಕೆ: ಏನಂದ್ರು ಗೊತ್ತೇ?

India vs Afghanistan: ದೀಪಾವಳಿಗೆ ಕೊಹ್ಲಿ ಪಡೆಯಿಂದ ಗೆಲುವಿನ ಉಡುಗೊರೆ: ಸೆಮೀಸ್​ಗೇರಲು ಭಾರತ ಇನ್ನೇನು ಮಾಡಬೇಕು?

(Karnataka will square off against Mumbai in an Elite Group B clash in the Syed Mushtaq Ali Trophy)