AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಅಫ್ಘಾನ್ ವಿರುದ್ಧದ ಜಯದ ಬಳಿಕ ವಿರಾಟ್ ಕೊಹ್ಲಿಯಿಂದ ಮಹತ್ವದ ಹೇಳಿಕೆ: ಏನಂದ್ರು ಗೊತ್ತೇ?

Virat Kohli Talking About Ravichandran Ashwin: ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪಂದ್ಯದ ಗೇಮ್ ಪ್ಲಾನ್ ಬಗ್ಗೆ ಹಾಗೂ ರವಿಚಂದ್ರನ್ ಅಶ್ವಿನ್ ಬಗ್ಗೆ ಮಾತನಾಡಿದ್ದು, ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ.

Virat Kohli: ಅಫ್ಘಾನ್ ವಿರುದ್ಧದ ಜಯದ ಬಳಿಕ ವಿರಾಟ್ ಕೊಹ್ಲಿಯಿಂದ ಮಹತ್ವದ ಹೇಳಿಕೆ: ಏನಂದ್ರು ಗೊತ್ತೇ?
R Ashwin and Virat Kohli
TV9 Web
| Updated By: Vinay Bhat|

Updated on: Nov 04, 2021 | 8:41 AM

Share

ಐಸಿಸಿ ಟಿ20 ವಿಶ್ವಕಪ್​ನಲ್ಲಿ (ICC T20 World Cup) ಭಾರತ ತಂಡ ಕೊನೆಗೂ ತನ್ನ ಚೊಚ್ಚಲ ಗೆಲುವನ್ನು ಕಂಡಿದೆ. ಪಾಕಿಸ್ತಾನ (Pakistan) ಹಾಗೂ ನ್ಯೂಜಿಲೆಂಡ್ (New Zealand) ವಿರುದ್ಧ ಹೀನಾಯವಾಗಿ ಸೋತಿದ್ದ ಟೀಮ್ ಇಂಡಿಯಾ ಅಫ್ಘಾನಿಸ್ತಾನ (India vs Afghanistan) ವಿರುದ್ಧ ದಾಖಲೆಯ ಮೊತ್ತ ಕಲೆಹಾಕಿ ಭರ್ಜರಿ ಜಯ ಕಂಡಿತು. ಈ ಮೂಲಕ ತನ್ನ ಸೆಮಿ ಫೈನಲ್ ಆಸೆಯನ್ನೂ ಜೀವಂತವಾಗಿರಿಸಿದೆ. ಆರನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಭಾರತದ ಮೊತ್ತ 200ರ ಗಡಿ ದಾಟಿತು. ಈ ಬಾರಿ ಯಾವ ತಂಡವೂ ಈ ಸಾಧನೆ ಮಾಡಲಿಲ್ಲ. ರೋಹಿತ್ ಶರ್ಮಾ ಹಾಗೂ ಕೆ. ಎಲ್ ರಾಹುಲ್ (Rohit Sharma and KL Rahul) ದಾಖಲೆಯ ಜೊತೆಯಾಟ ಆಡಿದರೆ, ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ರಿಷಭ್ ಪಂತ್ (Risbah Pant) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಭಾರತೀಯ ಬೌಲರ್​ಗಳು ಕೂಡ ಅಮೋಘ ಪ್ರದರ್ಶನ ನೀಡಿದರು. ಅದರಲ್ಲೂ 4 ವರ್ಷಗಳ ಬಳಿಕ ಕಮ್​ಬ್ಯಾಕ್ ಮಾಡಿದ ಆರ್. ಅಶ್ವಿನ್ (Ravichandran Ashwin) ಬಗ್ಗೆ ಪಂದ್ಯ ಮುಗಿದ ಬಳಿಕ ನಾಯಕ ವಿರಾಟ್ ಕೊಹ್ಲಿ (Virat Kohli) ಮಹತ್ವದ ಮಾತುಗಳನ್ನು ಆಡಿದ್ದಾರೆ.

ಮೊದಲಿಗೆ ಗೆಲುವಿನ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ‘ಈ ವಿಕೆಟ್ ತುಂಬಾನೆ ಚೆನ್ನಾಗಿತ್ತು. ನಾವು ಹಿಂದಿನ ಪಂದ್ಯದ ನೈಜ್ಯತೆ ಬಗ್ಗೆ ಮಾತುಕತೆ ನಡೆಸಿದ್ದೆವು. ಮೊದಲ ಎರಡು ಓವರ್​ಗಳಲ್ಲಿ ಸುಲಭವಾಗಿ ಬ್ಯಾಟಿಂಗ್ ನಡೆಸಿದರೆ, ಅದು ಎದುರಾಳಿಗೆ ಎಚ್ಚರಿಕೆಯ ಸಂದೇಶವಾಗಿರುತ್ತದೆ. ನಾವು ಆರೀತಿ ಮಾಡಿದರೆ ಯಾವ ರೀತಿ ಆಡಬೇಕೆಂಬ ಅಂದಾಜು ಸಿಗುತ್ತದೆ. ಕೆಲವು ಬಾರಿ ಅದು ಸಾಧ್ಯವಾಗದೆ ಇರುತ್ತದೆ ಮತ್ತು ಒತ್ತಡಕ್ಕೆ ಸಿಲುಕಿಕೊಳ್ಳುತ್ತೇವೆ. ಬ್ಯಾಟಿಂಗ್, ಬೌಲಿಂಗ್ ಮತ್ತು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಟಿ20 ಕ್ರಿಕೆಟ್ ತುಂಬ ಸಹಜವಾದ ಆಟ’ ಎಂದು ಹೇಳಿದ್ದಾರೆ.

‘ಕೆಲವೊಂದು ನಿರ್ಧಾರವನ್ನು ನಾವು ಪಂದ್ಯ ಆರಂಭವಾದ ಬಳಿಕ ತೆಗೆದುಕೊಳ್ಳುತ್ತೇವೆ. ಅದರಲ್ಲೂ ಆರಂಭಿಕ ಬ್ಯಾಟರ್​ಗಳು ಅದ್ಭುತ ಪ್ರದರ್ಶನ ತೋರಿದಾಗ ಅಂತಿಮ ಹಂತದಲ್ಲಿ ಪವರ್ ಹಿಟ್ಟರ್​ಗಳು ತಯಾರಾಗಿರುತ್ತಾರೆ. ಈ ಪಂದ್ಯದಲ್ಲಿ ಕೂಡ ಆಗಿದ್ದು ಅದೆ. ನಾವು ಯಾವಾಗಲು ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗುವುದಿಲ್ಲ. ಪರಿಸ್ಥಿತಿ ಅರಿತ ಬಳಿಕ ಮುನ್ನುಗ್ಗಲು ಪ್ರಾರಂಭಿಸುತ್ತೇವೆ. ಇದು ನಮ್ಮ ಪ್ಲಾನ್ ಆಗಿತ್ತು. ಎದುರಾಳಿ ತಂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದೆ ಎಂದಾಗ ನಾವು ಅವರಿಗೆ ಪ್ರೆಶರ್ ಕೊಡಲೇಬೇಕು.’

‘ನಿಜ ಹೇಳಬೇಕೆಂದರೆ ನೆಟ್​ರನ್​ರೇಟ್ ಪ್ರಮುಖ ಪಾತ್ರವಹಿಸುತ್ತದೆ. ನಾವು ಪಾಸಿಟಿವ್ ಆಗಿಯೇ ಇದ್ದೇವೆ, ಈ ಬಗ್ಗೆ ಯೋಚನೆ ಕಳೆದುಕೊಂಡಿಲ್ಲ. ರವಿಚಂದ್ರನ್ ಅಶ್ವಿನ್ ನಮ್ಮ ಬಹುದೊಡ್ಡ ಪಾಸಿಟಿವ್ ಆಗಿದ್ದಾರೆ. ನಾವು ಐಪಿಎಲ್​ನಲ್ಲಿ ಅಶ್ವಿನ್ ಅವರ ಅತ್ಯುತ್ತಮ ಬೌಲಿಂಗ್ ನೋಡಿದ್ದೇವೆ. ಅವರಿಂದಾಗಿ ಮಧ್ಯಮ ಓವರ್​ನಲ್ಲಿ ನಮಗೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಕಾರಣವಾಯಿತು’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇನ್ನು ಅಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಮಾತನಾಡಿ, ‘ನಾವು ಯಾವಾಗಲು ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತೇವೆ. ಈ ಬಾರಿ ಡ್ಯೂ ಇದ್ದ ಕಾರಣ ಚೇಸ್ ಮಾಡುವ ಆಯ್ಕೆ ಮಾಡಿಕೊಂಡೆವು. ಆದರೆ, ನಾವು ಗ್ರಹಿಸಿದಷ್ಟು ಡ್ಯೂ ಇರಲಿಲ್ಲ. ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ನಾವು ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡೆವು. ನಾವು ಕೊನೆಯ ಪಂದ್ಯವನ್ನು ಗೆಲ್ಲುವ ಭರವಸೆ ಇದೆ’ ಎಂದು ಹೇಳಿದರು.

India vs Afghanistan: ದೀಪಾವಳಿಗೆ ಕೊಹ್ಲಿ ಪಡೆಯಿಂದ ಗೆಲುವಿನ ಉಡುಗೊರೆ: ಸೆಮೀಸ್​ಗೇರಲು ಭಾರತ ಇನ್ನೇನು ಮಾಡಬೇಕು?

(Ravichandran Ashwin is the biggest positive Virat Kohli said after the India vs Afghanistan Match)

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್