Rohit Sharma: ವೈಟ್​ವಾಷ್ ಬಳಿಕ ನಾಯಕ ರೋಹಿತ್ ಶರ್ಮಾ ಆಡಿದ ಒಂದೊಂದು ಮಾತು ನೀವೇ ಕೇಳಿ

| Updated By: Vinay Bhat

Updated on: Nov 22, 2021 | 8:45 AM

India vs New Zealand T20I: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 73 ರನ್​ಗಳ ಭರ್ಜರಿ ಜಯ ಸಾಧಿಸಿ ಭಾರತ 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Rohit Sharma: ವೈಟ್​ವಾಷ್ ಬಳಿಕ ನಾಯಕ ರೋಹಿತ್ ಶರ್ಮಾ ಆಡಿದ ಒಂದೊಂದು ಮಾತು ನೀವೇ ಕೇಳಿ
Rohit Sharma India vs New Zealand
Follow us on

ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ (T20 World Cup) ವೈಫಲ್ಯದಿಂದ ಹೊರಬಂದು ಭರ್ಜರಿ ಪ್ರದರ್ಶನ ತೋರಿರುವ ಭಾರತ ಕ್ರಿಕೆಟ್ ತಂಡ ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ (India vs New Zealand) ಟಿ20 ಕ್ರಿಕೆಟ್‌ ಸರಣಿಯನ್ನು 3-0 ಅಂತರದಲ್ಲಿ ವೈಟ್​​ವಾಷ್‌ ಸಾಧನೆ ಮಾಡಿದೆ. ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸರಣಿಯ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ (3rd T20I) ನ್ಯೂಜಿಲೆಂಡ್ ತಂಡವನ್ನು 73 ರನ್‌ಗಳಿಂದ ಮಣಿಸಿದೆ. ರೋಹಿತ್ ಪಡೆಯನ್ನು ಬ್ಯಾಟಿಂಗ್​ನಲ್ಲಿ ಕಟ್ಟಿಹಾಕಲು ಮತ್ತೊಮ್ಮೆ ನ್ಯೂಜಿಲೆಂಡ್ ವಿಫಲವಾದರೆ, ಭಾರತದ ಬೌಲಿಂಗ್ ಅನ್ನು ಎದುರಿಸಲೂ ಸಾಧ್ಯವಾಗಲಿಲ್ಲ. ಈ ಮೂಲಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಸರಣಿಗಳಲ್ಲಿ ಅತಿಹೆಚ್ಚು ಕ್ಲೀನ್‌ಸ್ವೀಪ್ ಸಾಧಿಸಿದ ತಂಡಗಳ ಪೈಕಿ ಭಾರತ ಜಂಟಿ ಅಗ್ರಸ್ಥಾನಕ್ಕೇರಿತು. ಇದೇ ಮೊದಲ ಬಾರಿಗೆ ಭಾರತ ಟಿ20 ತಂಡದ ಪರಿಪೂರ್ಣ ನಾಯಕನಾದ ಬಳಿಕ ಆಡಿದ ಮೊದಲ ಸರಣಿಯಲ್ಲೇ ಕ್ಲೀನ್ ಸ್ವೀಪ್ ಮಾಡಿದ ರೋಹಿತ್ ಶರ್ಮಾ (Rohit Sharma) ಒಂದಿಷ್ಟು ವಿಚಾರವನ್ನು ಹಂಚಿಕೊಂಡಿದ್ದಾರೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ರೋಹಿತ್, “ಈ ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಳ್ಳುವುದು ನಮಗೆ ಮುಖ್ಯವಾಗಿತ್ತು. ಅದೇ ಆಲೋಚನೆಯೊಂದಿಗೆ ನಾನು ಕಣಕ್ಕಿಳಿದೆ. ಒಂದು ಸಲ ಪಿಚ್ ಬಗ್ಗೆ ನೀವು ಪರಿಶೀಲನೆ ನಡೆಸಿದಾಗ ಇದು ಹೇಗೆ ವರ್ತಿಸುತ್ತದೆ, ಇಲ್ಲಿ ಯಾವರೀತಿ ಆಡಬೇಕು ಎಂಬ ಅಂದಾಜು ಸಿಗುತ್ತದೆ. ಚೆಂಡು ಚೆನ್ನಾಗಿ ಬ್ಯಾಟ್​ಗೆ ಬರುತ್ತಿತ್ತು. ನಮ್ಮ ಬ್ಯಾಟಿಂಗ್ ಗುಂಪಿನಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಕೆಲ ಪ್ಲಾನ್ ಮಾಡಿದ್ದೆವು. ಆದರೆ, ಅದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿಲ್ಲ” ಎಂದು ಹೇಳಿದ್ದಾರೆ.

“ಮಧ್ಯಮ ಕ್ರಮಾಂಕ ಸುಧಾರಿಸಿದೆ. ಕೆಎಲ್ ರಾಹುಲ್​ಗೆ ವಿಶ್ರಾಂತಿ ನೀಡಿದೆವು, ಆದರೆ, ಅವರ ಫಾರ್ಮ್​ ಅದ್ಭುತವಾಗಿದೆ. ಈ ಸರಣಿಯಲ್ಲಿ ನಮ್ಮ ಸ್ಪಿನ್ನರ್​ಗಳ ಕೊಡುಗೆ ಅಪಾರ. ಆರ್. ಅಶ್ವಿನ್, ಅಕ್ಷರ್ ಒಂದು ಕಡೆಯಾದರೆ ಮೂರನೇ ಟಿ20 ಯಲ್ಲಿ ಆಡಿದ ಯುಜ್ವೇಂದ್ರ ಚಹಾಲ್ ಕೂಡ ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ. ವೆಂಕಟೇಶ್ ಅಯ್ಯರ್ ಕೂಡ ಬೌಲಿಂಗ್ ಮಾಡುವುದನ್ನು ನೋಡಲು ಖುಷಿಯಾಗುತ್ತದೆ. ಮುಂದೆ ಸಾಗುವುದು ಮುಖ್ಯ, ನಾನು ಕೂಡ ಅದಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತೇನೆ.”

“ನಮ್ಮ ತಂಡದಲ್ಲಿರುವ ಆಟಗಾರರು ನಂಬರ್ 8, 9 ವರೆಗೆ ಬ್ಯಾಟ್ ಮಾಡಬಲ್ಲರು. ಹರ್ಷಲ್ ಪಟೇಲ್ ಹರಿಯಾಣ ಪರ ಆಡುತ್ತಿರುವಾಗ ಅವರು ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರು. ದೀಪಕ್ ಚಹಾರ್ ಬ್ಯಾಟಿಂಗ್ ವೈಭವವನ್ನು ಕಳೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕಂಡಿದ್ದೇವೆ. ಚಹಾಲ್ ಕೂಡ ಬ್ಯಾಟಿಂಗ್ ಕಡೆ ಗಮನ ಹರಿಸುತ್ತಿದ್ದಾರೆ” ಎಂಬುದು ರೋಹಿತ್ ಮಾತು.

ಇನ್ನು ತಮ್ಮ ಪುಲ್ ಶಾಟ್ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, “ಪುಲ್ ಶಾಟ್ ನನ್ನಿಂದ ಸ್ವಾಭಾವಿಕವಾಗಿ ಬರುತ್ತದೆ. ನಾನು ಅನೇಕ ಹೊಡೆತಗಳನ್ನು ಸಾಕಷ್ಟು ಬಾರಿ ಅಭ್ಯಾಸ ಮಾಡುತ್ತೇನೆ. ಕೆಲವು ಬಾರಿ ಪುಲ್ ಶಾಟ್ ಸುಲಭವಾಗಿ ಬರುತ್ತದೆ, ಕನೆಕ್ಟ್ ಆಗುತ್ತದೆ. ಅಂತೆಯೆ ಅದೆ ಪುಲ್ ಶಾಟ್ ಹೊಡೆದು ನಾನು ಔಟ್ ಆದ ಉದಾಹರಣೆ ಕೂಡ ಇದೆ” ಎಂದು ಹೇಳಿದ್ದಾರೆ.

India vs New Zealand: ಕಿವೀಸ್ ಕಿವಿ ಹಿಂಡಿದ ರೋಹಿತ್ ಪಡೆ: ಭಾರತೀಯರ ಮಾರಕ ದಾಳಿಗೆ ದಂಗಾದ ನ್ಯೂಜಿಲೆಂಡ್

(Rohit Sharma talking at the post-match presentation ceremony afetr india vs new zealand 3rd t20i)