Tamil Nadu vs Karnataka: ಇಂದು ಸೈಯದ್ ಮುಷ್ತಾಕ್ ಅಲಿ ಟಿ20 ಫೈನಲ್: ಪ್ರಶಸ್ತಿಗಾಗಿ ಕರ್ನಾಟಕ-ತಮಿಳುನಾಡು ಕಾದಾಟ

Syed Mushtaq Ali Trophy 2021 Final, Tamil Nadu vs Karnataka: 2021-22ರ ಸೈಯದ್ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಕೂಟದ ಫೈನಲ್‌ನಲ್ಲಿ ಇಂದು ರ್ನಾಟಕ ಮತ್ತು ಹಾಲಿ ಚಾಂಪಿಯನ್‌ ತಮಿಳುನಾಡು ಮತ್ತು ಕರ್ನಾಟಕ ತಂಡ ಮುಖಾಮುಖಿಯಾಗುತ್ತಿವೆ.

Tamil Nadu vs Karnataka: ಇಂದು ಸೈಯದ್ ಮುಷ್ತಾಕ್ ಅಲಿ ಟಿ20 ಫೈನಲ್: ಪ್ರಶಸ್ತಿಗಾಗಿ ಕರ್ನಾಟಕ-ತಮಿಳುನಾಡು ಕಾದಾಟ
Syed Mushtaq Ali Trophy Final TN vs KAR
Follow us
TV9 Web
| Updated By: Vinay Bhat

Updated on: Nov 22, 2021 | 10:20 AM

ದಕ್ಷಿಣ ಭಾರತದ ಬದ್ಧ ಎದುರಾಳಿಗಳಾದ ಕರ್ನಾಟಕ ಮತ್ತು ಹಾಲಿ ಚಾಂಪಿಯನ್‌ ತಮಿಳುನಾಡು (Tamil Nadu vs Karnataka) ತಂಡಗಳು 2021-22ರ ಸೈಯದ್ ಮುಷ್ತಾಕ್‌ ಅಲಿ ಟ್ರೋಫಿ (Syed Mushtaq Ali Trophy Final) ಟಿ20 ಕ್ರಿಕೆಟ್‌ ಕೂಟದ ಫೈನಲ್‌ನಲ್ಲಿ ಇಂದು ಮುಖಾಮುಖಿಯಾಗುತ್ತಿವೆ. ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಬಹು ನಿರೀಕ್ಷೆಯ ಪಂದ್ಯ ನಡೆಯಲಿದೆ. 2019ರಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಕರ್ನಾಟಕ ತಂಡ (Karnataka Cricket Team) 1 ರನ್‌ನಿಂದ ತಮಿಳುನಾಡು ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು. ತಮಿಳುನಾಡು ತಂಡ (Tamil Nadu Cricket Team) ಹಾಲಿ ಚಾಂಪಿಯನ್ ಆಗಿದ್ದರೂ ಎರಡು ವರ್ಷಗಳ ಹಿಂದೆ ಅನುಭವಿಸಿದ್ದ ಸೋಲು ಇನ್ನೂ ಕಾಡುತ್ತಿದೆ. ಯಾರೇ ಗೆದ್ದರೂ 3ನೇ ಬಾರಿ ಟ್ರೋಫಿ ಜಯಿಸಿದಂತಾಗುತ್ತದೆ. ಹೀಗಾಗಿ ಉಭಯ ತಂಡಗಳ ನಡುವಣ ಕಾಳಗ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಅನುಭವಿ ಬೌಲರ್‌ಗಳ ಕೊರತೆ ಇರುವ ಕರ್ನಾಟಕ ತಂಡವು ಬ್ಯಾಟಿಂಗ್ ವಿಭಾಗದ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಆರಂಭಿಕ ಪಂದ್ಯದಿಂದಲೂ ಬ್ಯಾಟಿಂಗ್‍ನಲ್ಲಿ ಅಬ್ಬರಿಸುತ್ತಿರುವ ಬಂದಿರುವ ಕರ್ನಾಟಕದ ಬ್ಯಾಟಿಂಗ್ ದೈತ್ಯರಾದ ನಾಯಕ ಮನೀಷ್ ಪಾಂಡೆ ( 259 ರನ್, 3 ಅರ್ಧಶತಕ), ಕರುಣ್‍ನಾಯರ್ (223 ರನ್, 2 ಅರ್ಧಶತಕ) ಹಾಗೂ ಸೆಮಿಫೈನಲ್‍ನಲ್ಲಿ ವಿದರ್ಭ ವಿರುದ್ಧ ಆಕರ್ಷಕ ಅರ್ಧಶತಕ ಗಳಿಸಿದ ರೋಹನ್ ಕದಮ್ (150 ರನ್, 1 ಅರ್ಧಶತಕ) ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಅಸ್ತ್ರ. ಇವರಿಗೆ ಬೆಂಬಲ ನೀಡುವಂತೆ ಬ್ಯಾಟಿಂಗ್ ಮಾಡುವ ಜವಾಬ್ದಾರಿಯೂ ಅಭಿನವ್ ಮನೋಹರ್, ಅನಿರುದ್ಧ್ ಜೋಷಿ, ವಿಕೆಟ್ ಕೀಪರ್ ಬಿ.ಆರ್.ಶರತ್ ಮೇಲಿದೆ.

ಕರ್ನಾಟಕದ ಬೌಲಿಂಗ್‌ ಅಷ್ಟೇನೂ ಘಾತಕವಾಗಿ ಗೋಚರಿಸುತಿಲ್ಲ. ತಂಡ 170ರ ಗಡಿ ದಾಟಿದರೂ ಪಂದ್ಯವನ್ನು ಗೆಲ್ಲಲು ಹರಸಾಹಸ ಪಡುವಂತಹ ಸ್ಥಿತಿ ಎದ್ದುರಾಗುತ್ತಿದೆ. ಆದ್ದರಿಂದ ಬೌಲಿಂಗ್‌ ವಿಭಾಗದಲ್ಲಿ ಕ್ಷಿಪ್ರ ಸುಧಾರಣೆ ಅತ್ಯಗತ್ಯ. ಹಾಗೆಯೇ ಕರ್ನಾಟಕದ ಫೀಲ್ಡಿಂಗ್‌ ಕೂಡ ಕಳಪೆಯಾಗಿದೆ. ಇಲ್ಲಿಯೂ ದೊಡ್ಡ ಮಟ್ಟದ ಸುಧಾರಣೆ ಆಗಬೇಕಿದೆ.

ಇತ್ತ ಸತತ 3ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ತಮಿಳುನಾಡು ತಂಡ ಬಲಿಷ್ಠ ಆಟಗಾರರ ಬೆಂಬಲ ಹೊಂದಿದೆ. ಎನ್.ಜಗದೀಶನ್, ನಿಶಾಂತ್, ಸಾಯಿ ಸುದರ್ಶನ್ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದರೆ, ನಾಯಕ ವಿಜಯ್ ಶಂಕರ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ, ತಂಡದ ಆಲ್ರೌಂಡರ್ ಶಾರುಖ್ ಖಾನ್ ಇದುವರೆಗೆ ಸ್ಫೋಟಿಸಿಲ್ಲ. ಕೇರಳದಿಂದ ವಲಸೆ ಬಂದಿರುವ ವೇಗಿ ಸಂದೀಪ್ ವಾರಿಯರ್ ಜತೆಗೆ ಪಿ.ಸರವಣ ಕುಮಾರ್, ಸಾಯಿ ಕಿಶೋರ್, ಎಂ.ಅಶ್ವಿನ್, ಆರ್. ಸಂಜಯ್ ಯಾದವ್ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿಯೇ ಇದೆ.

ಪಂದ್ಯ ಆರಂಭ: ಮಧ್ಯಾಹ್ನ 12.00

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1.

ಮುಖಾಮುಖಿ: 10, ಕರ್ನಾಟಕ: 6, ತಮಿಳುನಾಡು: 3, ಟೈ: 1

ತಂಡಗಳು:

ಕರ್ನಾಟಕ: ಮನೀಷ್ ಪಾಂಡೆ (ನಾಯಕ), ರೋಹನ್ ಕದಂ, ಅಭಿನವ್ ಮನೋಹರ್, ಕರುಣ್ ನಾಯರ್, ಅನಿರುದ್ಧ ಜೋಶಿ, ಬಿ.ಆರ್. ಶರತ್, ಜೆ. ಸುಚಿತ್, ವಿಜಯಕುಮಾರ್ ವೈಶಾಖ, ಎಂ.ಬಿ. ದರ್ಶನ್, ಕೆ.ಸಿ. ಕಾರ್ಯಪ್ಪ, ವಿದ್ಯಾಧರ್ ಪಾಟೀಲ, ಆರ್. ಸಮರ್ಥ್, ಪ್ರವೀಣ ದುಬೆ, ಆದಿತ್ಯ ಸೋಮಣ್ಣ, ವಿ. ಕೌಶಿಕ್, ಪ್ರತೀಕ್ ಜೈನ್, ನಿಹಾಲ್ ಉಲ್ಲಾಳ, ರಿತೇಶ್ ಭಟ್ಕಳ, ಕೆ.ವಿ. ಸಿದ್ಧಾರ್ಥ್

ತಮಿಳುನಾಡು: ವಿಜಯ್ ಶಂಕರ್ (ನಾಯಕ), ಹರಿನಿಶಾಂತ್, ಎನ್. ಜಗದೀಶನ್ (ವಿಕೆಟ್‌ಕೀಪರ್), ಸಂಜಯ್ ಯಾದವ್, ಶಾರೂಖ್ ಖಾನ್, ಎಂ. ಮೊಹಮ್ಮದ್, ಮುರುಗನ್ ಅಶ್ವಿನ್, ರವಿಶ್ರೀನಿವಾಸನ್ ಸಾಯಿಕಿಶೋರ್, ಪಿ. ಸರವಣಕುಮಾರ್, ಸಂದೀಪ್ ವರಿಯರ್, ಜೆ. ಕೌಶಿಕ್, ಜಗದೀಶನ್ ಕೌಶಿಕ್, ಗಂಗಾಶ್ರೀಧರ್ ರಾಜು, ಆದಿತ್ಯ ಗಣೇಶ್, ಆರ್. ಸಿಲಂಬರಸನ್, ಆರ್. ವಿವೇಕ್, ಮಣಿಮಾರನ್ ಸಿದ್ಧಾರ್ಥ್, ತಂಗವೇಲು ನಟರಾಜನ್.

Rahul Dravid: ಕ್ಲೀನ್​ಸ್ವೀಪ್ ನಡುವೆ ಎದುರಾಳಿ ಆಟಗಾರರನ್ನು ಮರೆಯದೆ ರಾಹುಲ್ ದ್ರಾವಿಡ್: ಏನಂದ್ರು ಗೊತ್ತೇ?

Rohit Sharma: ವೈಟ್​ವಾಷ್ ಬಳಿಕ ನಾಯಕ ರೋಹಿತ್ ಶರ್ಮಾ ಆಡಿದ ಒಂದೊಂದು ಮಾತು ನೀವೇ ಕೇಳಿ

(Karnataka stand in the way of Tamil Nadu in the Syed Mushtaq Ali Trophy T20 Final)

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?