AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ross Taylor Retires: ನ್ಯೂಜಿಲೆಂಡ್-ನೆದರ್​​ಲೆಂಡ್ಸ್ ಪಂದ್ಯಕ್ಕೂ ಮುನ್ನ ಮೈದಾನದಲ್ಲಿ ಕಣ್ಣೀರಿಟ್ಟ ರಾಸ್ ಟೇಲರ್: ಯಾಕೆ?

NZ vs NED, 3rd ODI: ನೆದರ್​​ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಗೆ ಗೌರವ ಸೂಚಿಸುವ ವೇಳೆ ನ್ಯೂಜಿಲೆಂಡ್ ತಂಡದ ದಿಗ್ಗಜ ಬ್ಯಾಟರ್ ರಾಸ್ ಟೇಲರ್ ಮೈದಾನದಲ್ಲೇ ಕಣ್ಣೀರಿಟ್ಟ ಘಟನೆ ನಡೆಯಿತು.

Ross Taylor Retires: ನ್ಯೂಜಿಲೆಂಡ್-ನೆದರ್​​ಲೆಂಡ್ಸ್ ಪಂದ್ಯಕ್ಕೂ ಮುನ್ನ ಮೈದಾನದಲ್ಲಿ ಕಣ್ಣೀರಿಟ್ಟ ರಾಸ್ ಟೇಲರ್: ಯಾಕೆ?
Ross Taylor NZ vs NED
TV9 Web
| Updated By: Vinay Bhat|

Updated on: Apr 04, 2022 | 11:49 AM

Share

ಹ್ಯಾಮಿಲ್ಟನ್​ನ ಸೀಡನ್ ಪಾರ್ಕ್​ನಲ್ಲಿ ನ್ಯೂಜಿಲೆಂಡ್ ತಂಡ ಪ್ರವಾಸಿ ನೆದರ್​ಲೆಂಡ್ಸ್​ (New Zealand vs Netherlands) ವಿರುದ್ಧ ಅಂತಿಮ ಮೂರನೇ ಏಕದಿನ ಪಂದ್ಯವನ್ನು ಆಡುತ್ತಿದೆ. ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡ ಕಿವೀಸ್ ಪಡೆ ಸರಣಿ ವಶಪಡಿಸಿಕೊಂಡಿದೆ. ಇದೀಗ ನಡೆಯುತ್ತಿರುವ ತೃತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟಾಮ್ ಲಾಥಮ್ (Tom Latham) ಪಡೆ ಬ್ಯಾಟಿಂಗ್ ನಡೆಸಿ 50 ಓವರ್​ಗಳಲ್ಲಿ 333 ರನ್ ಚಚ್ಚಿದೆ. ನ್ಯೂಜಿಲೆಂಡ್ ತಂಡದ ದಿಗ್ಗಜ ಬ್ಯಾಟರ್ ರಾಸ್ ಟೇಲರ್ (Ross Tayler) ಅವರಿಗೆ ಇದು ವಿದಾಯದ ಅಂತರರಾಷ್ಟ್ರೀಯ ಪಂದ್ಯ. ತನ್ನ ಕೊನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ಟೇಲರ್ ಭಾವುಕರಾದರು. ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡದ ಆಟಗಾರರು ರಾಷ್ಟ್ರಗೀತೆಗೆ ಗೌರವ ಸೂಚಿಸುವ ಸಲುವಾಗಿ ಮೈದಾನಕ್ಕೆ ಆಗಮಿಸುವುದು ವಾಡಿಕೆ. ಅದರಂತೆ ನ್ಯೂಜಿಲೆಂಡ್ ದೇಶದ ರಾಷ್ಟ್ರಗೀತೆ ಆಗುತ್ತಿರುವ ವೇಳೆ ಟೇಲರ್ ದುಃಖ ತಾಳಲಾರದೆ ಕಣ್ಣೀರಿಟ್ಟರು. ಮೈದಾನದಲ್ಲಿ ಇವರ ಜೊತೆ ಇಬ್ಬರು ಮಕ್ಕಳು ಮತ್ತು ಮಡದಿ ಕೂಡ ಇದ್ದರು.

ಟೇಲರ್ 450ನೇ ಪಂದ್ಯ:

2006ರ ಮಾರ್ಚ್​ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ರಾಸ್ ಟೇಲರ್ ಇದುವರೆಗೆ ಏಕದಿನ, ಟಿ20 ಮತ್ತು ಟೆಸ್ಟ್ ಸೇರಿ ಬರೋಬ್ಬರಿ 450 ಪಂದ್ಯಗಳನ್ನು ಆಡಿದ್ದಾರೆ. ಕಿವೀಸ್ ಪಡೆಯ ಆಧಾರಸ್ವಂಭವಾಗಿದ್ದ ಇವರು ಅದೆಷ್ಟೊ ಬಾರಿ ಏಕಾಂಗಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಟೇಲರ್ 112 ಟೆಸ್ಟ್ ಪಂದ್ಯಗಳಲ್ಲಿ ಮೂರು ದ್ವಿತಶಕ, 19 ಶತಕ ಮತ್ತು 35 ಅರ್ಧಶತಕದೊಂದಿಗೆ 7684 ರನ್ ಸಿಡಿಸಿದ್ದಾರೆ. ಇವರ ಗರಿಷ್ಠ ಸ್ಕೋರ್ 290 ಆಗಿದೆ. 236 ಏಕದಿನ ಪಂದ್ಯಗಳಲ್ಲಿ 21 ಶತಕ ಮತ್ತು 51 ಅರ್ಧಶತಕದೊಂದಿಗೆ 8602 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 181 ಆಗಿದೆ. ಇನ್ನು 102 ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ 1909 ರನ್ ಕಲೆಹಾಕಿದ್ದು 7 ಅರ್ಧಶತಕ ಬಾರಿಸಿದ್ದಾರೆ.

ನ್ಯೂಜಿಲೆಂಡ್ 333 ರನ್:

ಸದ್ಯ ಸಾಗುತ್ತಿರುವ ನೆದರ್​ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 50 ಓವರ್​ಗೆ 8 ವಿಕೆಟ್ ನಷ್ಟಕ್ಕೆ 333 ರನ್ ಬಾರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ 12 ರನ್​ಗೆ ಹೆನ್ರಿ ನಿಕೋಲ್ಸ್ (2) ವಿಕೆಟ್ ಕಳೆದುಕೊಂಡಿತಾದರೂ ನಂತರ ಭರ್ಜರಿ ಕಮ್​ಬ್ಯಾಕ್ ಮಾಡಿತು. ಎರಡನೇ ವಿಕೆಟ್​ಗೆ ಮಾರ್ಟಿಮನ್ ಗಪ್ಟಿಲ್ ಹಾಗೂ ವಿಲ್ ಯಂಗ್ ಬೊಂಬಾಟ್ ಆಟ ಪ್ರದರ್ಶಿಸಿದರು. ನೆದರ್​ಲೆಂಡ್ ಬೌಲರ್​​ಗಳ ಬೆಂಡೆತ್ತಿದ ಇವರಿಬ್ಬರು ದ್ವಿತಶಕದ ಜೊತೆಯಾಟ ಆಡಿದರು.

ಬರೋಬ್ಬರಿ 203 ರನ್​ಗಳ ಕಾಣಿಕೆ ನೀಡಿದ ಮಾರ್ಟಿನ್-ಯಂಗ್ 38 ಓವರ್ ವರೆಗೆ ಬ್ಯಾಟಿಂಗ್ ನಡೆಸಿದರು. ಇಬ್ಬರೂ ಶತಕ ಸಿಡಿಸಿ ಆರ್ಭಟಿಸಿದರು. ಗಪ್ಟಿಲ್ 123 ಎಸೆತಗಳಲ್ಲಿ 11 ಫೋರ್, 2 ಸಿಕ್ಸರ್​​ನೊಂದಿಗೆ 106 ರನ್ ಸಿಡಿಸಿದರೆ, ವಿಲ್ ಯಂಗ್ 112 ಎಸೆತಗಳಲ್ಲಿ 6 ಫೋರ್, 4 ಸಿಕ್ಸರ್​​ನೊಂದಿಗೆ 120 ರನ್ ಚಚ್ಚಿದರು. ಇವರಿಬ್ಬರ ನಿರ್ಗಮನದ ಬಳಿಕ ನ್ಯೂಜಿಲೆಂಡ್ ದಿಢೀರ್ ಕುಸಿತ ಕಂಡಿತು. ವಿದಾಯದ ಪಂದ್ಯವನ್ನಾಡಿದ ರಾಸ್ ಟೇಲರ್ 16 ಎಸೆತಗಳಲ್ಲಿ  1 ಸಿಕ್ಸರ್ ಬಾರಿಸಿ 14 ರನ್​ಗೆ ಔಟಾದರು.

ಕೊನೆಯಲ್ಲಿ ಡಗ್ ಬ್ರಾಸ್​ವೆಲ್ (22) ಹಾಗೂ ನಾಯಕ ಟಾಮ್ ಲಾಥಮ್ 23 ರನ್ ಗಳಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 50 ಓವರ್​ಗೆ 8 ವಿಕೆಟ್ ನಷ್ಟಕ್ಕೆ 333 ರನ್ ಕಲೆಹಾಕಿತು. ನೆದರ್​ಲೆಂಡ್ ಪರ ಫ್ರೆಡ್ ಕ್ಲಾಸೆನ್, ವಾನ್ ಬೀಕ್, ಕ್ಲೇಟನ್ ಹಾಗೂ ಆರ್ಯನ್ ದತ್ ತಲಾ 2 ವಿಕೆಟ್ ಪಡೆದರು.

Ravindra Jadeja: ಸೋಲಿನ ಬಳಿಕ ದುಃಖದಿಂದ ಆತ ತಂಡದಲ್ಲಿ ಇರಬೇಕಿತ್ತು ಎಂದ ಜಡೇಜಾ: ಯಾರು ಗೊತ್ತೇ?

IPL 2022: ಪಾಯಿಂಟ್ ಟೇಬಲ್​ನಲ್ಲಿ ಯಾರು ಟಾಪರ್?: ಆರೆಂಜ್-ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಯಾರಿದ್ದಾರೆ?

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್