Ross Taylor: ವಿದಾಯದ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಾಸ್ ಟೇಲರ್​ಗೆ ಬಾಂಗ್ಲಾದೇಶ ಆಟಗಾರರು ಮಾಡಿದ್ದೇನು ನೋಡಿ

New Zealand vs Bangladesh: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಬೊಂಬಾಟ್ ಆಟ ಪ್ರದರ್ಶಿಸಿತು. ವಿಲ್ ಯಂಗ್ ಹಾಗೂ ಕಾನ್ವೇ ಔಟಾದ ಬಳಿಕ ರಾಸ್ ಟೇಲರ್ ಕ್ರೀಸ್​ಗೆ ಬರುತ್ತಿದ್ದರು. ಇದು ಅವರ ಕೊನೇ ಟೆಸ್ಟ್.

Ross Taylor: ವಿದಾಯದ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಾಸ್ ಟೇಲರ್​ಗೆ ಬಾಂಗ್ಲಾದೇಶ ಆಟಗಾರರು ಮಾಡಿದ್ದೇನು ನೋಡಿ
Ross Taylor NZ vs BAN 2nd Test
Follow us
TV9 Web
| Updated By: Vinay Bhat

Updated on: Jan 10, 2022 | 12:55 PM

ಕ್ರಿಸ್ಟ್​ಚರ್ಚ್​ನ ಹ್ಯಾಗ್ಲೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand vs Bangladesh) ತಂಡ ಬೊಂಬಾಟ್ ಪ್ರದರ್ಶನ ತೋರಿದೆ. ಮೊದಲ ಟೆಸ್ಟ್​ನಲ್ಲಿ ಅನುಭವಿಸಿದ ಸೋಲಿಗೆ ಸರಿಯಾಗಿ ತಿರುಗೇಟು ನೀಡುತ್ತಿದೆ. ನಾಯಕ ಟಾಮ್ ಲಾಥಮ್ (Tom Latham) ಅವರ ಅಮೋಘ ದ್ವಿಶತಕ ಮತ್ತು ಡೆವೋನ್ ಕಾನ್ವೇ (Devon Conway) ಅವರ ಶತಕದ ನೆರವಿನಿಂದ ಕಿವೀಸ್ ಮೊದಲ ಇನ್ನಿಂಗ್ಸ್​ನಲ್ಲಿ 521 ರನ್​ಗೆ ಡಿಕ್ಲೇರ್ ಘೋಷಿಸಿತು. ಇತ್ತ ಬಾಂಗ್ಲಾ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 126 ರನ್​ಗೆ ಆಲೌಟ್ ಆಯಿತು. ಇನ್ನು ನ್ಯೂಜಿಲೆಂಡ್ ಹಿರಿಯ ಬ್ಯಾಟರ್ ರಾಸ್ ಟೇಲರ್​ಗೆ (Ross Taylor) ಇದು ತಮ್ಮ ವೃತ್ತಿ ಜೀವನದ ಕೊನೇಯ ಟೆಸ್ಟ್ ಪಂದ್ಯ. ಅವರು ಬ್ಯಾಟಿಂಗ್​ಗೆಂದು ಮೈದಾನಕ್ಕೆ ಆಗಮಿಸಿದಾಗ ಬಾಂಗ್ಲಾ ಆಟಗಾರರು ಏನು ಮಾಡಿದರು ಎಂಬುದನ್ನು ನೋಡಿ.

ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಬೊಂಬಾಟ್ ಆಟ ಪ್ರದರ್ಶಿಸಿತು. ವಿಲ್ ಯಂಗ್ ಹಾಗೂ ಡೆವೋನ್ ಕಾನ್ವೇ ನಿರ್ಗಮನದ ಬಳಿಕ ರಾಸ್ ಟೇಲರ್ ಕ್ರೀಸ್​ಗೆ ಬರುತ್ತಿದ್ದರು. ಇದು ಅವರ ಕೊನೇ ಟೆಸ್ಟ್. ಹೀಗಾಗಿ ಬಾಂಗ್ಲಾದೇಶ ಆಟಗಾರರು ಅವರ ಕೊನೇ ಟೆಸ್ಟ್ ಅನ್ನು ಸ್ಮರಣೀಯವಾಗಿಸಲು ವಿಶೇಷ ಗೌರವವನ್ನು ಸಲ್ಲಿಸಿದರು. ಟೇಲರ್ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಬಾಂಗ್ಲಾದೇಶ ತಂಡದ ಎಲ್ಲ ಆಟಗಾರರು ಸಾಲಾಗಿ ನಿಂತು ಕೈ ಚಪ್ಪಾಳೆ ತಟ್ಟಿ ಗೌರವದಿಂದ ಸ್ವಾಗತಿಸಿದರು. ಟೇಲರ್ ತಮ್ಮ ಕೊನೇ ಟೆಸ್ಟ್​ನಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. 39 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ 28 ರನ್​ಗೆ ನಿರ್ಗಮಿಸಿದರು. ಇವರು ಔಟ್ ಆದಾಗ ಕೂಡ ಬಾಂಗ್ಲಾ ಆಟಗಾರರು ಸಂಭ್ರಮಿಸಲಿಲ್ಲ.

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಟಾಮ್ ಲಾಥಮ್ ಅವರು ದ್ವಿಶತಕದೊಂದಿಗೆ ಅಬ್ಬರಿಸಿದರು. ಟೆಸ್ಟ್ ಪಂದ್ಯಗಳಲ್ಲಿ ಇದು ಅವರ ಎರಡನೇ ದ್ವಿಶತಕ. 373 ಎಸೆತಗಳನ್ನು ಎದುರಿಸಿದ ಲಾಥಮ್ 34 ಬೌಂಡರಿ, 2 ಸಿಕ್ಸರ್ ನೆರವಿನಿಂದ 252 ರನ್ ಗಳಿಸಿದರು. ಲಾಥಮ್ ಜೊತೆಗೆ ಕಾನ್ವೇ ಕೂಡಾ ಶತಕ ಬಾರಿಸಿದ್ದರಿಂದ ನ್ಯೂಜಿಲೆಂಡ್ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಯಿತು. ಕಾನ್ವೇ 166 ಎಸೆತಗಳಲ್ಲಿ 1096 ರನ್ ಬಾರಿಸಿದರೆ, ಟಾಮ್ ಬ್ಲಂಡೆಲ್ 60 ಎಸೆತಗಳಲ್ಲಿ ಅಜೇಯ 57 ರನ್ ಚಚ್ಚಿದರು. ಪರಿಣಾಮ ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 521-6ಕ್ಕೆ ಡಿಕ್ಲೇರ್ ಮಾಡಿಕೊಂಡಿತು.

ಇತ್ತ ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್​ನಲ್ಲಿ ಟ್ರೆಂಟ್ ಬೌಲ್ಟ್ (5 ವಿಕೆಟ್) ಹಾಗೂ ಟಿಮ್ ಸೌಥೀ (3 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿತು. ತಂಡದ ಪ-ರ ಯಾಸಿರ್ ಅಲಿ 55 ಮತ್ತು ನುರುಲ್ ಹಸನ್ 41 ರನ್ ಗಳಿಸಿದ್ದು ಬಿಟ್ಟರೆ ಉಳಿದವರ ಸ್ಕೋರ್ ಎರಡಂಕಿ ದಾಟಲಿಲ್ಲ. ಬಾಂಗ್ಲಾ 126 ರನ್​ಗೆ ಆಲೌಟ್ ಆಯಿತು.

ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಬಾಂಗ್ಲಾದೇಶ ಮೊದಲ ಪಂದ್ಯವನ್ನು 8 ವಿಕೆಟ್​ಗಳಿಂದ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಇದರೊಂದಿಗೆ 2017ರ ಮಾರ್ಚ್‌ ಬಳಿಕ ನ್ಯೂಜಿಲೆಂಡ್‌ ನೆಲದಲ್ಲಿ ಕಿವೀಸ್‌ ವಿರುದ್ಧ ಟೆಸ್ಟ್‌ ಪಂದ್ಯ ಗೆದ್ದ ಮೊದಲ ತಂಡ ಎಂಬ ಕೀರ್ತಿಗೆ ಬಾಂಗ್ಲಾದೇಶ ಪಾತ್ರವಾಯಿತು. ಅಷ್ಟೇ ಅಲ್ಲದೆ ಕಿವೀಸ್‌ ವಿರುದ್ಧ ಬಾಂಗ್ಲಾದೇಶ ತಂಡಕ್ಕೆ ಮೊದಲ ಟೆಸ್ಟ್‌ ಗೆಲುವು ಕೂಡ ಇದಾಯಿತು. ಹೀಗಾಗಿ ಸದ್ಯ ಸಾಗುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಕಣ್ಣಿದೆ.

Novak Djokovic: ಕೋರ್ಟ್​ ಕೇಸ್​ನಲ್ಲಿ ಜೊಕೊವಿಕ್​ಗೆ ಗೆಲುವು: ಕ್ವಾರಂಟೈನ್​ನಿಂದ ಬಿಡುಗಡೆ ಮಾಡುವಂತೆ ಆದೇಶ

India Playing XI: ಕ್ಲೈಮ್ಯಾಕ್ಸ್ ಕದನಕ್ಕೆ ಎರಡು ಪ್ರಮುಖ ಬದಲಾವಣೆ: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ