ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ನಡುವೆ ಐಪಿಎಲ್ 2021ರ (IPL 2021) ಅಂತಿಮ ಲೀಗ್ ಪಂದ್ಯ ನಡೆಯಿತು. ವಿರಾಟ್ (Virat Kohli) ಪಡೆಯ ಗೆಲುವಿಗೆ ಕೊನೇ ಎಸೆತದಲ್ಲಿ 5 ರನ್ ಬೇಕಾಗಿದ್ದಾಗ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಶ್ರೀಕರ್ ಭರತ್ (Srikar Bharat) ಲಾಂಗ್ ಆನ್‌ನತ್ತ ಸಿಡಿಸಿದ ಭರ್ಜರಿ ಸಿಕ್ಸರ್ ನೆರವಿನಿಂದ ಟೇಬಲ್ ಟಾಪರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ ಐಪಿಎಲ್-14ರ ಪ್ಲೇಆಫ್ ಕಾದಾಟಕ್ಕೆ ಆತ್ಮವಿಶ್ವಾಸದೊಂದಿಗೆ ಸಜ್ಜಾಗಿದೆ. ಈ ಪಂದ್ಯದ ಪ್ರಮುಖ ಹೈಲೇಟ್ ಭರತ್ ಅವರ ಭರ್ಜರಿ ಆಟ. ಆದರೆ, ಆರ್‌ಸಿಬಿ (RCB Record) ತಂಡ ಐಪಿಎಲ್ ಇತಿಹಾಸದಲ್ಲಿ ಈ ಪಂದ್ಯದ ಮೂಲಕ ವಿಶೇಷ ಸಾಧನೆ ಮಾಡಿತು. ಅನೇಕರಿಗೆ ಈ ವಿಚಾರ ತಿಳಿದೇಯಿಲ್ಲ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ತಲುಪಿತು. ರೋಚಕ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸುವ ಮೂಲಕ ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ 100ನೇ ಗೆಲುವು ದಾಖಲಿಸಿದ ವಿಶೇಷ ಸಾಧನೆ ಮಾಡಿತು. ಅಲ್ಲದೆ ಐಪಿಎಲ್ನಲ್ಲಿ ಈ ಸಾಧನೆ ಮಾಡಿದ 4ನೇ ಫ್ರಾಂಚೈಸಿ ಎಂಬ ಹಿರಿಮೆಗೆ ಪಾತ್ರವಾಗಿದೆ.
A century of wins in the #IPL and to bring it up with a last ball 6️⃣ was just perfect. 💯
Drop a ❤️ for this team, 12th Man Army! #PlayBold #WeAreChallengers #ನಮ್ಮRCB #IPL2021 #RCBvDC pic.twitter.com/d4V0C2Az6a
— Royal Challengers Bangalore (@RCBTweets) October 8, 2021
ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಒಟ್ಟು 209 ಐಪಿಎಲ್ ಪಂದ್ಯಗಳಲ್ಲಿ 99 ರಲ್ಲಿ ಜಯ ಸಾಧಿಸಿತ್ತು. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 216 ಪಂದ್ಯಗಳಿಂದ ಒಟ್ಟು 126 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಎಂಎಸ್ ಧೋನಿ ನೇತೃತ್ವದ ಸೂಪರ್ ಕಿಂಗ್ಸ್ 192 ಪಂದ್ಯಗಳಲ್ಲಿ 115 ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿದೆ. ಕೊಲ್ಕತ್ತಾ 205 ಪಂದ್ಯಗಳಲ್ಲಿ 105 ಪಂದ್ಯಗಳನ್ನು ಗೆದ್ದಿದೆ.
ಚೊಚ್ಚಲ ಐಪಿಎಲ್ ಕಿರೀಟ ಎದುರು ನೋಡುತ್ತಿರುವ ಆರ್‌ಸಿಬಿ ತಂಡವೀಗ ಅಕ್ಟೋಬರ್ 11, ಸೋಮವಾರ ನಡೆಯಲಿರುವ ಎಲಿಮಿನೇಟರ್ ಹಣಾಹಣಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ. ಈ ಹಿಂದೆ 2009, 2011 ಹಾಗೂ 2016ರಲ್ಲಿ ಮೂರು ಬಾರಿ ರನ್ನರ್-ಅಪ್ ಪ್ರಶಸ್ತಿ ಗೆದ್ದಿರುವುದು ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಯ ಶ್ರೇಷ್ಠ ಸಾಧನೆಯಾಗಿದೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು. ತಂಡದ ಪರ ಪೃಥ್ವಿ ಶಾ 48 ಮತ್ತು ಶಿಖರ್ ಧವನ್ 43 ರನ್ ಬಾರಿಸಿದರು. ಟಾರ್ಗೆಟ್ ಬೆನ್ನಟ್ಟಿದ ಆರ್‌ಸಿಬಿ ಕೊನೆಯ ಎಸೆತದಲ್ಲಿ ಗೆಲುವಿನ ದಡ ಮುಟ್ಟಿತು. ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ ಪಂದ್ಯದ ಹೀರೋ ಎನಿಸಿದರು. ಗ್ಲೆನ್ ಮ್ಯಾಕ್ಸ್ವೆಲ್ ತಮ್ಮ ಸ್ಥಿರ ಪ್ರದರ್ಶನವನ್ನು ಇಂದೂ ಮುಂದುವರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಭರತ್ 52 ಬಾಲ್ನಲ್ಲಿ ಅಜೇಯ 78 ರನ್ ಭಾರಿಸಿದರೆ, ಮ್ಯಾಕ್ಸ್ವೆಲ್ 33 ಬಾಲ್ನಲ್ಲಿ ಅಜೇಯ 51 ರನ್ ಗಳಿಸಿದರು. ಇಬ್ಬರೂ ನಾಲ್ಕನೇ ವಿಕೆಟ್ಗೆ 10.3 ಓವರ್ನಲ್ಲಿ 111 ರನ್ಗಳ ಮುರಿಯದ ಜೊತೆಯಾಟ ಆಡಿ ಆರ್ಸಿಬಿಗೆ ರೋಚಕ ಗೆಲುವಿನ ಸಂತಸ ನೀಡಿದರು.
KS Bharat: ಕೆಎಸ್ ಭರತ್ ಸಿಕ್ಸ್ ಸಿಡಿಸಿದ ಕೂಡಲೇ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ
(Royal Challengers Bangalore RCB achieve their 100th win in the Indian Premier League After RCB vs DC IPL 2021 Match)