Srikar Bharat: ಕೊನೇಯ ಬಾಲ್ನಲ್ಲಿ ಸಿಕ್ಸ್: ನಿನ್ನೆಯ ಒಂದೇ ಪಂದ್ಯದಲ್ಲಿ ಶ್ರೀಕರ್ ಭರತ್ಗೆ ಸಿಕ್ಕ ಹಣವೆಷ್ಟು ಗೊತ್ತಾ?
Srikar Bharat Six: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿ ಆರ್ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟ ಶ್ರೀಕರ್ ಭರತ್ ಅವರಿಗೆ ಒಂದೇ ಪಂದ್ಯದಲ್ಲಿ ಪ್ರಶಸ್ತಿಗಳ ಮಳೆಯೇ ಸುರಿದಿದೆ. ಐಪಿಎಲ್ನ ಈ ಪಂದ್ಯದಲ್ಲಿ ಲಕ್ಷ ಲಕ್ಷ ಹಣವನ್ನು ಬಾಜಿಕೊಂಡಿದ್ದಾರೆ.
ಶ್ರೀಕರ್ ಭರತ್ (Srikar Bharat), ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೆ ಸಿಕ್ಕ ಮತ್ತೊಬ್ಬ ಆಪದ್ಬಾಂಧವ ಎಂದರೆ ತಪ್ಪಾಗಲಾರದು. ಶುಕ್ರವಾರ ಐಪಿಎಲ್ 2021 ರಲ್ಲಿ (IPL 2021) ನಡೆದ ಲೀಗ್ ಹಂತದ ಕೊನೇಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ (RCB vs DC) ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಭರತ್ (KS Bharat) ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. 52 ಎಸೆತಗಳನ್ನು ಎದುರಿಸಿದ ಇವರು 3 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 78 ರನ್ ಚಚ್ಚಿದರು. ಅದರಲ್ಲೂ ಕೊನೇಯ ಎಸೆತದಲ್ಲಿ ಚೆಂಡನ್ನು ಸಿಕ್ಸ್ಗೆ ಅಟ್ಟಿ ರೋಚಕ ಗೆಲುವು ತಂದಿಟ್ಟರು. ಭರತ್ ಆಟವನ್ನು ಕೊಂಡಾಡುತ್ತಿರುವ ಅಭಿಮಾನಿಗಳು ಐಪಿಎಲ್ 2021 ರಲ್ಲಿ ಇದು ಆರ್ಸಿಬಿ ತಂಡದ ಅತ್ಯುತ್ತಮ ಆಟ ಎಂದು ಬಣ್ಣಿಸುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ ಭರತ್ ಅವರನ್ನು ಹಾಡಿ ಹೊಗಳಿದ್ದು, ಊಹಿಸಲಾಗದ ರೀತಿಯಲ್ಲಿ ಗೆಲುವು ತಂದುಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಐಪಿಎಲ್ ಅದೆಷ್ಟೊ ಯುವ ಕ್ರಿಕೆಟಿಗರ ಕನಸಿನ ಟೂರ್ನಿ. ಇಲ್ಲಿ ಕತ್ತಲು ಕಳೆದು ಬೆಳಕು ಹರಿಯುವಷ್ಟರಲ್ಲಿ ಸ್ಟಾರ್ ಆಗಿ ಬಿಡುತ್ತಾರೆ. ಐಪಿಎಲ್ನಲ್ಲಿ ನೀಡಿದ ಪ್ರದರ್ಶನದಿಂದಲೇ ಅದೆಷ್ಟೊ ಆಟಗಾರರು ರಾಷ್ಟ್ರೀಯ ತಂಡದ ಕದ ತಟ್ಟಿದ್ದಾರೆ. ಸದ್ಯ ಶ್ರೀಕರ್ ಭರತ್ ಕೂಡ ಇದೇ ಹಾದಿಯಲ್ಲಿದ್ದಾರೆ. ಒಂದೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಒಂದೇ ದಿನದಲ್ಲಿ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ನಿನ್ನೆಯ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಭರತ್ ಲಕ್ಷ ಲಕ್ಷ ಹಣವನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
ಹೌದು, ಭರತ್ ಅವರಿಗೆ ಒಂದೇ ಪಂದ್ಯದಲ್ಲಿ ಪ್ರಶಸ್ತಿಗಳ ಮಳೆಯೇ ಸುರಿದಿದೆ. ಡ್ರೀಮ್ 11 ಗೇಮ್ ಚೇಂಜರ್ ಆಫ್ ದಿ ಮ್ಯಾಚ್ಗೆ ಒಂದು ಲಕ್ಷ, ಅನ್ಅಕಾಡೆಮಿ ಕ್ರ್ಯಾಕಿಂಗ್ ಸಿಕ್ಸ್ಗೆ 1 ಲಕ್ಷ, ಮೋಸ್ಟ್ ವ್ಯಾಲಿವೆಬಲ್ ಅಸೆಟ್ ಆಫ್ ದಿ ಮ್ಯಾಚ್ಗೆ ಒಂದು ಲಕ್ಷ ಸೇರಿದಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡು ಭರ್ಜರಿ ಮೊತ್ತ ತಮ್ಮದಾಗಿಸಿದ್ದಾರೆ. ಆರ್ಸಿಬಿ ಫ್ರಾಂಚೈಸಿ ಇವರನ್ನು ಹರಾಜಿನಲ್ಲಿ 20 ಲಕ್ಷಕ್ಕೆ ಖರೀದಿ ಮಾಡಿತ್ತು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಕೆಎಲ್ ಭರತ್, “ಪಂದ್ಯ ಸಿಕ್ಸರ್ ಮೂಲಕ ಫಿನಿಶ್ ಮಾಡಿದ್ದು ಅದ್ಭುತ ಅನುಭವವಾಗುತ್ತಿದೆ. ಮ್ಯಾಕ್ಸ್ವೆಲ್ ನಾನು ಪಂದ್ಯವನ್ನು ಕೊನೇಯ ವರೆಗೂ ಆಡಬೇಕು ಎಂದು ಮಾತನಾಡಿಕೊಂಡೆವು. ನಾನು ಯಾವುದೇ ಸಂದರ್ಭದಲ್ಲಿ ಕುಗ್ಗಲಿಲ್ಲ. ಉತ್ತಮ ಹೊಡೆತವನ್ನು ಹೊಡೆಯಲು ಉತ್ತಮ ಬಾಲ್ಗಾಗಿ ಕಾಯುತ್ತಿದ್ದೆಯಷ್ಟೆ. ನಾನು ಸ್ಪಿನ್ಗೆ ಬ್ಯಾಟಿಂಗ್ ಮಾಡಲು ಸಾಕಷ್ಟು ಶ್ರಮವಹಿಸುತ್ತಿದ್ದೆ” ಎಂದು ಹೇಳಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಒಟ್ಟು ಏಳು ಪಂದ್ಯಗಳನ್ನು ಆಡಿದ್ದು 182 ರನ್ ಗಳಿಸಿದ್ದಾರೆ. 1 ಅರ್ಧಶತಕ, 10 ಬೌಂಡರಿ, 8 ಸಿಕ್ಸರ್ ಸಿಡಿಸಿದ್ದಾರೆ.
ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ ನಾಲ್ಕನೇ ಸ್ಥಾನದಲ್ಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಕೊಹ್ಲಿ ಪಡೆ ಅಕ್ಟೋಬರ್ 11 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಾಟ ನಡೆಸಲಿದೆ. ಇಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬಿದ್ದರೆ, ಗೆದ್ದ ತಂಡ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡದೊಂದಿಗೆ ಫೈನಲ್ಗೇರಲು ಕಾದಾಡಲಿದೆ.
KS Bharat: ಕೆಎಸ್ ಭರತ್ ಸಿಕ್ಸ್ ಸಿಡಿಸಿದ ಕೂಡಲೇ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ
Virat Kohli: ರೋಚಕ ಗೆಲುವಿನ ಖುಷಿಯಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಆಡಿದ ಮಾತು ಕೇಳಿ
(Srikar Bharat earns More than 3 lakhs on Virat Kohli Team RCB vs DC IPL 2021 Match)