ಗೆಲ್ಲಲು 165 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 166 ರನ್ ಬಾರಿಸಿ ಅಂಕಪಟ್ಟಿಯ ಅಗ್ರಸ್ಥಾನಿ ಕ್ಯಾಪಿಟಲ್ಸ್ ಎದುರು ಭರ್ಜರಿ ಜಯ ತನ್ನದಾಗಿಸಿಕೊಂಡಿತು. ಇನಿಂಗ್ಸ್ ಆರಂಭದಲ್ಲೇ ದೇವದತ್ ಪಡಿಕ್ಕಲ್ (0) ಮತ್ತು ವಿರಾಟ್ ಕೊಹ್ಲಿ (4) ವಿಕೆಟ್ ಕಳೆದುಕೊಂಡ ಆರ್‌ಸಿಬಿಗೆ ಎಬಿ ಡಿ’ವಿಲಿಯರ್ಸ್ (26) ಆಸರೆಯಾಗುವಲ್ಲಿ ವಿಫಲರಾದರು. ಆದರೆ, 4ನೇ ವಿಕೆಟ್‌ಗೆ ಜೊತೆಯಾದ ಶ್ರೀಕರ್ ಭರತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (ಅಜೇಯ 51) ಮುರಿಯದ 111 ರನ್‌ಗಳ ಮನಮೋಹಕ ಜೊತೆಯಾಟ ಆಡಿ ತಂಡವನ್ನು ಜಯದ ದಡ ಮುಟ್ಟಿಸಿದರು.
ಈ ರೋಚಕ ಪಂದ್ಯವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವೀಕ್ಷಣೆ ಮಾಡಿದ್ದಾರೆ. ಅದುಕೂಡ ತಮ್ಮ ಕಾರಿನಲ್ಲಿ ಕುಳಿತುಕೊಂಡು ಎಂಬುದು ವಿಶೇಷ. ಹೌದು ರೋಚಕ ಪಂದ್ಯವನ್ನು ವೀಕ್ಷಿಸಿ ಮಾಜಿ ಸಿಎಂ ಬಿಎಸ್ವೈ ಎಂಜಾಯ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗುತ್ತಿದೆ.
ಚೊಚ್ಚಲ ಐಪಿಎಲ್ ಕಿರೀಟ ಎದುರು ನೋಡುತ್ತಿರುವ ಆರ್‌ಸಿಬಿ ತಂಡವೀಗ ಅಕ್ಟೋಬರ್ 11, ಸೋಮವಾರ ನಡೆಯಲಿರುವ ಎಲಿಮಿನೇಟರ್ ಹಣಾಹಣಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ. ಈ ಹಿಂದೆ 2009, 2011 ಹಾಗೂ 2016ರಲ್ಲಿ ಮೂರು ಬಾರಿ ರನ್ನರ್-ಅಪ್ ಪ್ರಶಸ್ತಿ ಗೆದ್ದಿರುವುದು ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಯ ಶ್ರೇಷ್ಠ ಸಾಧನೆಯಾಗಿದೆ.
RCB, IPL 2021: ಭರತ್ ಸಿಕ್ಸರ್ ನಡುವೆ ಮರೆಯದಿರಿ ಐಪಿಎಲ್ನಲ್ಲಿ ಆರ್‌ಸಿಬಿ ಮಾಡಿರುವ ಈ ಹೊಸ ದಾಖಲೆ
(IPL 2021 Former Karnataka CM BS Yediyurappa Watching RCB Vs DC Match Photo Goes Viral On Social Media)