AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ನನಗೆ ಸಿಂಗಲ್ ಬೇಡ ನೀನೇ ಮುಗಿಸಿಬಿಡು! ಅಂತಿಮ ಓವರ್​ನಲ್ಲಿ ಭರತ್​ಗೆ ಮ್ಯಾಕ್ಸ್​ವೆಲ್ ಹೇಳಿದ್ದೇನು?

IPL 2021: ಕೊನೆಯ ಮೂರು ಎಸೆತಗಳಲ್ಲಿ, ನಾನು ಒಂದು ರನ್ ತೆಗೆದುಕೊಳ್ಳಬೇಕೇ ಎಂದು ಕೇಳಿದೆ. ಅದಕ್ಕೆ ಮ್ಯಾಕ್ಸ್‌ವೆಲ್, ಬಿಗ್ ಶಾಟ್ ಆಡುವ ಮೂಲಕ ನೀವು ತಂಡಕ್ಕೆ ಗೆಲ್ಲವು ತಂದುಕೊಡಬಹುದು ಎಂದು ಹೇಳಿದರು.

IPL 2021: ನನಗೆ ಸಿಂಗಲ್ ಬೇಡ ನೀನೇ ಮುಗಿಸಿಬಿಡು! ಅಂತಿಮ ಓವರ್​ನಲ್ಲಿ ಭರತ್​ಗೆ ಮ್ಯಾಕ್ಸ್​ವೆಲ್ ಹೇಳಿದ್ದೇನು?
ಕೆಎಸ್ ಭರತ್, ಮ್ಯಾಕ್ಸ್​ವೆಲ್
TV9 Web
| Edited By: |

Updated on: Oct 09, 2021 | 3:41 PM

Share

ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಶುಕ್ರವಾರದ ಕೊನೆಯ ಲೀಗ್ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿತು. ತಂಡದ ಹೊಸ ಸ್ಟಾರ್ ಆಟಗಾರ ಕೆಎಸ್ ಭರತ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ತಂಡದ ಗೆಲುವನ್ನು ನೀಡಿದರು. ಗೆಲುವಿನ ನಂತರ, ಗ್ಲೆನ್ ಮ್ಯಾಕ್ಸ್​ವೆಲ್ ಕೊನೆಯ ಓವರ್​ನಲ್ಲಿ ಸಿಂಗಲ್ ತೆಗೆದುಕೊಳ್ಳಲು ನಿರಾಕರಿಸಿದರು ಎಂಬುದು ಈಗ ಹೊರಬಿದ್ದಿದೆ.

ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭರತ್, ದೆಹಲಿ ವಿರುದ್ಧ 52 ಎಸೆತಗಳಲ್ಲಿ ಅಜೇಯ 78 ರನ್ ಗಳಿಸಿದರು. ಆರ್‌ಸಿಬಿಗೆ ಗೆಲ್ಲಲು ಕೊನೆಯ ಎಸೆತದಲ್ಲಿ ಐದು ರನ್ ಬೇಕಿತ್ತು. ಆದಾಗ್ಯೂ, ಬ್ಯಾಟಿಂಗ್​ನಲ್ಲಿ ಮ್ಯಾಕ್ಸ್‌ವೆಲ್ ಬದಲಿಗೆ ಕೆಎಸ್ ಭರತ್ ಇದ್ದರು. ಇಂತಹ ಪರಿಸ್ಥಿತಿಯಲ್ಲಿ, ಅಭಿಮಾನಿಗಳು ಸಿಕ್ಸರ್‌ ಬಗ್ಗೆ ಸ್ವಲ್ಪ ಭರವಸೆ ಹೊಂದಿದ್ದರು. ಆದಾಗ್ಯೂ, ಅವೇಶ್ ಖಾನ್ ಕೊನೆಯ ಎಸೆತದಲ್ಲಿ, ಭರತ್ ಸಿಕ್ಸರ್ ಬಾರಿಸುವ ಮೂಲಕ, ತಂಡಕ್ಕೆ ಗೆಲುವು ತಂದುಕೊಟ್ಟರು.

ಭರತ್ ಮೇಲೆ ವಿಶ್ವಾಸವಿಟ್ಟ ಮ್ಯಾಕ್ಸ್​ವೆಲ್ ಕೊನೆಯ ಓವರ್‌ಗೆ ಮೊದಲು ನಿಮ್ಮಬ್ಬರ ನಡುವೆ ಏನು ಸಂಭಾಷಣೆ ನಡೆದಿತ್ತು ಎಂದು ಭರತ್ ಅವರನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಭರತ್, ಮ್ಯಾಕ್ಸ್‌ವೆಲ್ ತನ್ನ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸಿದರೆಂದು ಹೇಳಿದರು. ಮುಂಬೈ ಇಂಡಿಯನ್ಸ್ ವಿರುದ್ಧ 32 ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧ 44 ರ ಉಪಯುಕ್ತ ಇನ್ನಿಂಗ್ಸ್ ಆಡಿದ ಭರತ್ ಪಂದ್ಯದ ನಂತರ, ಕೊನೆಯ ಓವರ್​ನಲ್ಲಿ ಮ್ಯಾಕ್ಸಿ ಮತ್ತು ನಾನು ಎಲ್ಲಿ ಶಾಟ್ ಆಡಬಹುದು ಎಂದು ಮಾತನಾಡಿದೆವು. ಚೆಂಡನ್ನು ನೋಡಿ ಶಾಟ್ ಹೊಡೆಯಿರಿ ಎಂದು ಹೇಳಿದರು. ಕೊನೆಯ ಮೂರು ಎಸೆತಗಳಲ್ಲಿ, ನಾನು ಒಂದು ರನ್ ತೆಗೆದುಕೊಳ್ಳಬೇಕೇ ಎಂದು ಕೇಳಿದೆ. ಅದಕ್ಕೆ ಮ್ಯಾಕ್ಸ್‌ವೆಲ್, ಬಿಗ್ ಶಾಟ್ ಆಡುವ ಮೂಲಕ ನೀವು ತಂಡಕ್ಕೆ ಗೆಲ್ಲವು ತಂದುಕೊಡಬಹುದು ಎಂದು ಹೇಳಿದರು. ಇದು ನನಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಿತು ಎಂದಿದ್ದಾರೆ.

ಕೊನೆಯ ಓವರ್‌ನಲ್ಲಿ ಭರತ್ ಜವಾಬ್ದಾರಿಯನ್ನು ತೆಗೆದುಕೊಂಡರು ಕೊನೆಯ ಓವರ್‌ಗೂ ಮುಂಚೆ ಹೆಚ್ಚು ಯೋಚಿಸುವುದಿಲ್ಲ ಎಂದಿರುವ ಭರತ್. ನಾನು ಅನೇಕ ವಿಷಯಗಳ ಮೇಲೆ ಕೇಂದ್ರೀಕರಿಸುವ ಬದಲು ಒಂದು ಸಮಯದಲ್ಲಿ ಒಂದು ಚೆಂಡಿನ ಮೇಲೆ ಕೇಂದ್ರೀಕರಿಸುತ್ತಿದ್ದೆ. ನಾನು ವಿಷಯಗಳನ್ನು ಸರಳವಾಗಿ ಇರಿಸಿದ್ದೇನೆ. ನಾವು ತಂಡವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ ಮತ್ತು ಗೆಲುವನ್ನು ದಾಖಲಿಸಿದ್ದೇವೆ ಎಂದಿದ್ದಾರೆ. ನಾವು ಯಾವುದೇ ಕ್ರಮದಲ್ಲಿ ಆಡಲು ಸಿದ್ಧರಿದ್ದೇವೆ. ಈ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಪ್ರತಿಯೊಬ್ಬರೂ ತಮ್ಮ ಸವಾಲಿಗೆ ಸಿದ್ಧರಾಗಿದ್ದಾರೆ. ನಿಮಗೆ ಅವಕಾಶ ನೀಡಿದಾಗ ಯಾವುದೇ ಸಂವಹನ ಅಂತರವಿದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:Glenn Maxwell: ಕೊಹ್ಲಿ, ಎಬಿಡಿಗಿಲ್ಲ ಸ್ಥಾನ: ಟಾಪ್ 5 ಟಿ20 ಪ್ಲೇಯರ್ಸ್​ನ ಹೆಸರಿಸಿದ ಮ್ಯಾಕ್ಸ್​ವೆಲ್

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ