Glenn Maxwell: ಕೊಹ್ಲಿ, ಎಬಿಡಿಗಿಲ್ಲ ಸ್ಥಾನ: ಟಾಪ್ 5 ಟಿ20 ಪ್ಲೇಯರ್ಸ್ನ ಹೆಸರಿಸಿದ ಮ್ಯಾಕ್ಸ್‌ವೆಲ್
T20 World Cup 2021: ಇಂಗ್ಲೆಂಡ್ ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸ್ಟೋಕ್ಸ್ 148 ಟಿ20 ಪಂದ್ಯಗಳಿಂದ 2865 ರನ್ ಮತ್ತು 86 ವಿಕೆಟ್ ಪಡೆದಿದ್ದಾರೆ.
ಐಸಿಸಿ ಪುರುಷರ ಟಿ20 ವಿಶ್ವಕಪ್ಗೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 17 ರಿಂದ ಶುರುವಾಗಲಿರುವ ಚುಟುಕು ಕ್ರಿಕೆಟ್ ಕದನಕ್ಕಾಗಿ ಈಗಾಗಲೇ ಎಲ್ಲಾ ತಂಡಗಳನ್ನು ಪ್ರಕಟಿಸಲಾಗಿದೆ. ಇತ್ತ ಪ್ರತಿ ತಂಡಗಳು ಬಲಿಷ್ಠ ಆಟಗಾರರ ಲೆಕ್ಕಾಚಾರದಲ್ಲಿದ್ದು, ಈ ಪಟ್ಟಿಯಲ್ಲಿ ಆರ್ಸಿಬಿ ಪರ ಆರ್ಭಟಿಸುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಇರುವುದು ವಿಶೇಷ. ಅತ್ತ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಟಿ20 ಕ್ರಿಕೆಟ್ನ ಟಾಪ್ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಮ್ಯಾಕ್ಸಿ, 5 ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಈ ಆಟಗಾರರು ಈಗಾಗಲೇ ಚುಟುಕು ಕ್ರಿಕೆಟ್ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅಲ್ಲದೆ ಈ ಬಾರಿ ಕೂಡ ಟಿ20 ವಿಶ್ವಕಪ್ನಲ್ಲಿ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಮ್ಯಾಕ್ಸ್‌ವೆಲ್ ಆಯ್ಕೆ ಮಾಡಿರುವ ಐದು ಆಟಗಾರರಲ್ಲಿ ಇಬ್ಬರು ಆಲ್ರೌಂಡರ್ಗಳು, ಒಬ್ಬ ಸ್ಪಿನ್ನರ್, ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್, ಓರ್ವ ವೇಗದ ಬೌಲರ್ ಇರುವುದು ವಿಶೇಷ.
ಅದರಂತೆ ಮ್ಯಾಕ್ಸಿಯ ಟಾಪ್ ಟಿ20 ಪ್ಲೇಯರ್ಸ್ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅಗ್ರಸ್ಥಾನ ಪಡೆದಿದ್ದಾರೆ. ರಶೀದ್ ಖಾನ್ ಇದುವರೆಗೆ 281 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 388 ವಿಕೆಟ್ ಪಡೆದಿದ್ದಾರೆ. ಇನ್ನು ಎರಡನೇ ಆಟಗಾರನಾಗಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸೆಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಟಿ20 ಯಲ್ಲಿ ರಸೆಲ್ 6405 ರನ್ ಗಳಿಸಿದ್ದಾರೆ ಮತ್ತು 340 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಅವರು ಕೂಡ ತನ್ನ ನೆಚ್ಚಿನ ಟಿ20 ಪ್ಲೇಯರ್ ಎಂದಿದ್ದಾರೆ ಮ್ಯಾಕ್ಸಿ.
ಮೂರನೇ ಆಟಗಾರನಾಗಿ ಇಂಗ್ಲೆಂಡ್ ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸ್ಟೋಕ್ಸ್ 148 ಟಿ20 ಪಂದ್ಯಗಳಿಂದ 2865 ರನ್ ಮತ್ತು 86 ವಿಕೆಟ್ ಪಡೆದಿದ್ದಾರೆ. ಇನ್ನು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಡಮ್ ಗಿಲ್‌ಕ್ರಿಸ್ಟ್ ಅವರನ್ನು ನಾಲ್ಕನೇ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ. ಐದನೇ ಆಟಗಾರನಾಗಿ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಶಾನ್ ಟೈಟ್ ಅವರನ್ನು ಆರಿಸಿದ್ದಾರೆ. ಶಾನ್ ಟೈಟ್ ಅವರ ವೇಗ ಮತ್ತು ನಿಖರವಾದ ಯಾರ್ಕರ್‌ಗಳನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಟಾಪ್ 5 ಟಿ20 ಆಟಗಾರರಲ್ಲಿ ಟೈಟ್ಗೆ ಸ್ಥಾನ ನೀಡಿರುವುದಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ.
ಇದನ್ನೂ ಓದಿ: David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್
ಇದನ್ನೂ ಓದಿ: KL Rahul: ಕೆಎಲ್ ರಾಹುಲ್ ಟೀಮ್ ಇಂಡಿಯಾಗೆ ನಾಯಕನಾಗಬಾರದು ಎಂದ ಮಾಜಿ ಕ್ರಿಕೆಟಿಗ
(Glenn Maxwell picks his top five T20 players)