AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಮುಂದಿನ 2 ಪಂದ್ಯಗಳನ್ನು RCB ಗೆಲ್ಲಲೇಬೇಕು, ಏಕೆಂದರೆ…

RCB: ಮೊದಲ ಕ್ವಾಲಿಫೈಯರ್ ಪಂದ್ಯ ದುಬೈನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಜಯಿಸಿ ಫೈನಲ್ ಪ್ರವೇಶಿಸಿದರೆ ಇದೇ ಮೈದಾನದಲ್ಲಿ ಮತ್ತೆ ಆಡುವ ಅವಕಾಶ ದೊರೆಯಲಿದೆ.

IPL 2021: ಮುಂದಿನ 2 ಪಂದ್ಯಗಳನ್ನು RCB ಗೆಲ್ಲಲೇಬೇಕು, ಏಕೆಂದರೆ...
RCB
TV9 Web
| Edited By: |

Updated on: Oct 05, 2021 | 6:12 PM

Share

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ (IPL 2021) ಸೀಸನ್​ನಲ್ಲೂ ಆರ್​ಸಿಬಿ (RCB) ಪ್ಲೇಆಫ್ ಪ್ರವೇಶಿಸಿದೆ. ಆದರೆ ಆರ್​ಸಿಬಿಗೆ ಇನ್ನು 2 ಪಂದ್ಯಗಳು ಬಾಕಿಯಿದೆ. ಅಕ್ಟೋಬರ್ 6 ರಂದು ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ಸನ್​​ರೈಸರ್ಸ್​ ಹೈದರಾಬಾದ್ (RCB vs SRH) ವಿರುದ್ದ ಆಡಲಿದೆ. ಹಾಗೆಯೇ ಅಕ್ಟೋಬರ್ 8 ರಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದ ಸೆಣಸಲಿದೆ. ಈ ಎರಡು ಪಂದ್ಯಗಳು ಆರ್​ಸಿಬಿ ಪಾಲಿಗೆ ಮಹತ್ವದ್ದು ಎಂಬುದು ವಿಶೇಷ. ಏಕೆಂದರೆ ಈ ಎರಡು ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದರೆ 20 ಅಂಕಗಳನ್ನು ಪಡೆಯಲಿದೆ. ಇದರಿಂದ ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಬಹುದು. ಅಂದರೆ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ಅವಕಾಶ ಆರ್​ಸಿಬಿಗೆ ದೊರೆಯಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯವಾಡುವುದರಿಂದ ಸಿಗುವ ಪ್ರಯೋಜನವೆಂದರೆ ಫೈನಲ್​ಗೇರಲು ಎರಡು ಅವಕಾಶ ದೊರೆಯುತ್ತದೆ.

ಅಂದರೆ ಮೊದಲ ಕ್ವಾಲಿಫೈಯರ್​ನಲ್ಲಿ ಗೆದ್ದರೆ ಆ ತಂಡವು ನೇರವಾಗಿ ಫೈನಲ್​ ಪ್ರವೇಶಿಸಲಿದೆ. ಒಂದು ವೇಳೆ ಸೋತರೆ 2ನೇ ಕ್ವಾಲಿಫೈಯರ್​​ನಲ್ಲಿ ಗೆದ್ದ ತಂಡದೊಡನೆ ಎಲಿಮಿನೇಟರ್ ಪಂದ್ಯವನ್ನಾಡುವ ಅವಕಾಶ ದೊರೆಯಲಿದೆ. ಇದರಿಂದ ಮೊದಲ ಕ್ವಾಲಿಫೈಯರ್​ನಲ್ಲಿ ಸೋತರೆ ಎಲಿಮಿನೇಟರ್​ ಪಂದ್ಯದ ಮೂಲಕ ಫೈನಲ್​ಗೆ ಪ್ರವೇಶಿಸುವ ಚಾನ್ಸ್ ಇರಲಿದೆ. ಆರ್​ಸಿಬಿಗೆ ಇಂತಹ ಅವಕಾಶ ದೊರೆಯಬೇಕಿದ್ದರೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆಯಲೇಬೇಕು. ಇನ್ನು ಆರ್​ಸಿಬಿಗೆ 2ನೇ ಸ್ಥಾನ ಪಡೆಯಲು ಉತ್ತಮ ಅವಕಾಶವಿದ್ದು, ಹೀಗಾಗಿ ಮುಂದಿನ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಬೇಕು. ಈ ಮೂಲಕ ಅಂಕಪಟ್ಟಿಯಲ್ಲಿರುವ ಅಗ್ರ ತಂಡದೊಂದಿಗೆ ಆರ್​ಸಿಬಿ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಬಹುದು.

ಇನ್ನು ಅಂಕಪಟ್ಟಿಯಲ್ಲಿ ಕೊಹ್ಲಿ ಪಡೆ 2ನೇ ಸ್ಥಾನ ಪಡೆಯುವುದರಿಂದ ಸಿಗುವ ಮತ್ತೊಂದು ಪ್ರಯೋಜನವೆಂದರೆ ದುಬೈ ಸ್ಟೇಡಿಯಂನಲ್ಲಿ ಆಡೋದು. ಹೌದು, ಮೊದಲ ಕ್ವಾಲಿಫೈಯರ್ ಪಂದ್ಯ ದುಬೈನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಜಯಿಸಿ ಫೈನಲ್ ಪ್ರವೇಶಿಸಿದರೆ ಇದೇ ಮೈದಾನದಲ್ಲಿ ಮತ್ತೆ ಆಡುವ ಅವಕಾಶ ದೊರೆಯಲಿದೆ. ಅಂದರೆ ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ಐಪಿಎಲ್ ಫೈನಲ್ ನಡೆಯಲಿದ್ದು, ಹೀಗಾಗಿ ದುಬೈನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡುವ ಮೂಲಕ ಸಕಲ ರೀತಿಯಲ್ಲೂ ಸಜ್ಜಾಗಬಹುದು. ಹೀಗಾಗಿ 2ನೇ ಸ್ಥಾನಕ್ಕೇರಲು ಕೊಹ್ಲಿ ಪಡೆಗೆ ಮುಂದಿನ 2 ಪಂದ್ಯಗಳು ಕೂಡ ಮಹತ್ವದ್ದಾಗಿದೆ.

ಇದನ್ನೂ ಓದಿ: David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

(RCB eye SRH scalp to remain in the fray for top two)

ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ