RR vs RCB, IPL 2021: ಆರ್​ಆರ್​ ವಿರುದ್ದ ಮ್ಯಾಕ್ಸಿ ಅಬ್ಬರ: ಆರ್​ಸಿಬಿಗೆ ಭರ್ಜರಿ ಜಯ

| Updated By: ಝಾಹಿರ್ ಯೂಸುಫ್

Updated on: Sep 29, 2021 | 11:10 PM

Rajasthan Royals (RR) vs Royal Challengers Bangalore (RCB): ಆರ್​ಆರ್​ ಹಾಗೂ ಆರ್​ಸಿಬಿ ಇದುವರೆಗೆ 25 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಆರ್​ಸಿಬಿ 12 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹಾಗೆಯೇ 10 ಬಾರಿ ರಾಜಸ್ಥಾನ್ ಗೆಲುವು ದಾಖಲಿಸುವಲ್ಲಿ ಸಫಲವಾಗಿದೆ.

RR vs RCB, IPL 2021: ಆರ್​ಆರ್​ ವಿರುದ್ದ ಮ್ಯಾಕ್ಸಿ ಅಬ್ಬರ: ಆರ್​ಸಿಬಿಗೆ ಭರ್ಜರಿ ಜಯ
RR vs RCB

ದುಬೈ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) 43ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ಥಾನ್ ರಾಯಲ್ಸ್ (RCB vs RR) ವಿರುದ್ದ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಎವಿನ್ ಲೂಯಿಸ್ (58) ಅರ್ಧಶತಕದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 149 ರನ್​ ಪೇರಿಸಿತು. 150 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಆರ್​ಸಿಬಿ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಬಿರುಸಿನ ಅರ್ಧಶತಕದ ನೆರವನಿಂದ 17.1 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ 153 ರನ್​ ಬಾರಿಸುವ ಮೂಲಕ ಭರ್ಜರಿ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್ ವಿವರ:

RR 149/9 (20)

ಎವಿನ್ ಲೂಯಿಸ್- 58

ಹರ್ಷಲ್ ಪಟೇಲ್- 34/3

RCB 153/3 (17.1)

ಗ್ಲೆನ್ ಮ್ಯಾಕ್ಸ್​ವೆಲ್- 50

ಕೆ. ಭರತ್- 44

ಮುಸ್ತಫಿಜುರ್ ರಹಮಾನ್- 20/2

ಆರ್​ಆರ್​ ಹಾಗೂ ಆರ್​ಸಿಬಿ ಇದುವರೆಗೆ 25 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಆರ್​ಸಿಬಿ 12 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹಾಗೆಯೇ 10 ಬಾರಿ ರಾಜಸ್ಥಾನ್ ಗೆಲುವು ದಾಖಲಿಸುವಲ್ಲಿ ಸಫಲವಾಗಿದೆ. ಇನ್ನು 3 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಮೂಡಿಬಂದಿಲ್ಲ. ಹಾಗೆಯೇ ದುಬೈನಲ್ಲಿ ನಡೆದ ಕಳೆದ ಸೀಸನ್​ ಐಪಿಎಲ್​​ನಲ್ಲೂ ರಾಜಸ್ಥಾನ್ ವಿರುದ್ದ ಆರ್​ಸಿಬಿ 2 ಪಂದ್ಯಗಳನ್ನು ಗೆದ್ದುಕೊಂಡಿತ್ತು ಎಂಬುದು ವಿಶೇಷ. ಈ ಬಾರಿಯ ಮೊದಲಾರ್ಧದ ಪಂದ್ಯದಲ್ಲೂ ಆರ್​ಸಿಬಿ ಆರ್​ಆರ್​ ತಂಡವನ್ನು 10 ವಿಕೆಟ್​ಗಳಿಂದ ಸೋಲಿಸಿತ್ತು.

ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

 

 

 

 

 

 

 

LIVE NEWS & UPDATES

The liveblog has ended.
  • 29 Sep 2021 11:07 PM (IST)

    RCB ಗೆ 7 ವಿಕೆಟ್​ಗಳ ಭರ್ಜರಿ ಜಯ

  • 29 Sep 2021 11:06 PM (IST)

    30 ಎಸೆತಗಳಲ್ಲಿ ಹಾಫ್ ಸೆಂಚುರಿ ಬಾರಿಸಿದ ಮ್ಯಾಕ್ಸ್​ವೆಲ್


  • 29 Sep 2021 11:00 PM (IST)

    ಆರ್​ಸಿಬಿಗೆ 7 ವಿಕೆಟ್​ಗಳ ಭರ್ಜರಿ ಜಯ

    RR 149/9 (20)

    RCB 153/3 (17.1)

  • 29 Sep 2021 10:58 PM (IST)

    30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮ್ಯಾಕ್ಸ್​ವೆಲ್

    RR 149/9 (20)

    RCB 149/3 (17)

      

  • 29 Sep 2021 10:58 PM (IST)

    ಮ್ಯಾಕ್ಸಿ ಮ್ಯಾಜಿಕ್

    ಕ್ರಿಸ್ ಮೊರಿಸ್​ ಎಸೆತದಲ್ಲಿ ಮ್ಯಾಕ್ಸ್​ವೆಲ್ ಬ್ಯಾಟ್ ಎಡ್ಜ್​..ಮತ್ತೊಂದು ಬೌಂಡರಿ

  • 29 Sep 2021 10:57 PM (IST)

    ಮ್ಯಾಕ್ಸಿ ಬೌಂಡರಿ

    ಕ್ರಿಸ್ ಮೊರಿಸ್ ಲೆಗ್​ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಮ್ಯಾಕ್ಸ್​ವೆಲ್..ಫೋರ್

  • 29 Sep 2021 10:55 PM (IST)

    ಮ್ಯಾಕ್ಸ್​ವೆಲ್ ಮ್ಯಾಕ್ಸಿಮಮಂ

    ಕ್ರಿಸ್ ಮೊರಿಸ್​ ಎಸೆತದಲ್ಲಿ ಲಾಂಗ್​ ಆನ್​ನತ್ತ ಬಿಗ್ ಹಿಟ್​…ಗ್ಲೆನ್​ ಮ್ಯಾಕ್ಸ್​ವೆಲ್ ಬ್ಯಾಟ್​ನಿಂದ ರಾಕೆಟ್ ಸಿಕ್ಸ್​

  • 29 Sep 2021 10:54 PM (IST)

    RCB 127/3 (16)

    ಕ್ರೀಸ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್

  • 29 Sep 2021 10:53 PM (IST)

    ಭರತ್ ಔಟ್

    44 ರನ್ ಬಾರಿಸಿ ಭರತ್ ಔಟ್…ಮುಸ್ತಫಿಜುರ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಆರ್​ಸಿಬಿ ಆಟಗಾರ

  • 29 Sep 2021 10:48 PM (IST)

    27 ರನ್​ಗಳ ಅವಶ್ಯಕತೆ

    ಆರ್​ಸಿಬಿ 123/2 (15

    ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 30 ಎಸೆತಗಳಲ್ಲಿ 27 ರನ್​ಗಳ ಅವಶ್ಯಕತೆ
  • 29 Sep 2021 10:45 PM (IST)

    ಮಾಕ್ಸ್​ವೆಲ್ ಮಾರ್ಕ್​

    ಚೇತನ್ ಸಕರಿಯಾ ಎಸೆತದಲ್ಲಿ ಕವರ್ಸ್​ನತ್ತ ಭರ್ಜರಿ ಹೊಡೆತ…ಮ್ಯಾಕ್ಸ್​ವೆಲ್ ಬ್ಯಾಟ್​ನಿಂದ ಬೌಂಡರಿ

  • 29 Sep 2021 10:43 PM (IST)

    14 ಓವರ್ ಮುಕ್ತಾಯ

    RR 149/9 (20)

    RCB 115/2 (14)

      

  • 29 Sep 2021 10:42 PM (IST)

    ಭರತ್ ಬ್ಯೂಟಿ

    ರಾಹುಲ್ ತಿವಾಠಿಯಾ ಎಸೆತದಲ್ಲಿ ಭರತ್ ರಿವರ್ಸ್​ ಸ್ವೀಪ್​…ಫೋರ್

     

     

  • 29 Sep 2021 10:37 PM (IST)

    13 ಓವರ್ ಮುಕ್ತಾಯ

    RCB 106/2 (13)

      ಕ್ರೀಸ್​ನಲ್ಲಿ ಮ್ಯಾಕ್ಸ್​ವೆಲ್-ಭರತ್ ಬ್ಯಾಟಿಂಗ್

  • 29 Sep 2021 10:35 PM (IST)

    ಬಿಗ್ ಭರತ್

    ಕ್ರಿಸ್ ಮೊರಿಸ್​ ಎಸೆತದಲ್ಲಿ ಬಿಗ್ ಹಿಟ್​​​…ಚೆಂಡು ಸ್ಟೇಡಿಯಂನಲ್ಲಿ…ಬಿಗ್ ಸಿಕ್ಸ್​

  • 29 Sep 2021 10:32 PM (IST)

    RCB 95/2 (12)

    ಕ್ರೀಸ್​ನಲ್ಲಿ ಮ್ಯಾಕ್ಸ್​ವೆಲ್-ಭರತ್ ಬ್ಯಾಟಿಂಗ್

  • 29 Sep 2021 10:29 PM (IST)

    ಭರತ್ ಬೌಂಡರಿ

    ಲೊಮರರ್ ಎಸೆತದಲ್ಲಿ ಭರತ್ ಆಕರ್ಷಕ ಶಾಟ್…ಫೋರ್

  • 29 Sep 2021 10:24 PM (IST)

    10 ಓವರ್ ಮುಕ್ತಾಯ

    ಮೊದಲ ಹತ್ತು ಓವರ್​ನಲ್ಲಿ 79 ರನ್​ ಕಲೆಹಾಕಿದ ಆರ್​ಸಿಬಿ

    ಕ್ರೀಸ್​ನಲ್ಲಿ ಮ್ಯಾಕ್ಸ್​ವೆಲ್-ಭರತ್ ಬ್ಯಾಟಿಂಗ್

    RCB 79/2 (10)

      

  • 29 Sep 2021 10:17 PM (IST)

    8 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಭರತ್-ಮ್ಯಾಕ್ಸ್​ವೆಲ್ ಬ್ಯಾಟಿಂಗ್

    RCB 67/2 (8.1)

      

  • 29 Sep 2021 10:15 PM (IST)

    ವೆಲ್ಕಂ ಬೌಂಡರಿ

    ರಾಹುಲ್ ತಿವಾಠಿಯಾ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರತ್ ಆಕರ್ಷಕ ಬೌಂಡರಿ

  • 29 Sep 2021 10:13 PM (IST)

    ವಿರಾಟ್ ಕೊಹ್ಲಿ ರನೌಟ್

    ಭರತ್-ಕೊಹ್ಲಿ ನಡುವೆ ಹೊಂದಾಣಿಕೆಯ ಕೊರತೆ..ರಿಯಾನ್ ಪರಾಗ್ ಉತ್ತಮ ಫೀಲ್ಡಿಂಗ್…ನೇರವಾಗಿ ವಿಕೆಟ್​ಗೆ ಎಸೆತ…ಕೊಹ್ಲಿ (25) ರನೌಟ್

     

    RCB 59/2 (7)

      

  • 29 Sep 2021 10:05 PM (IST)

    ಪವರ್​ಪ್ಲೇ ಮುಕ್ತಾಯ: ಆರ್​ಸಿಬಿ ಉತ್ತಮ ಆರಂಭ

    RCB 54/1 (6)

      ಕ್ರೀಸ್​ನಲ್ಲಿ ಭರತ್-ಕೊಹ್ಲಿ ಬ್ಯಾಟಿಂಗ್

  • 29 Sep 2021 10:01 PM (IST)

    ಪಡಿಕ್ಕಲ್ ಕ್ಲೀನ್ ಬೌಲ್ಡ್​

    ಮುಸ್ತಫಿಜುರ್ ಎಸೆತದಲ್ಲಿ ದೇವದತ್ ಪಡಿಕ್ಕಲ್ (22) ಕ್ಲೀನ್ ಬೌಲ್ಡ್​

  • 29 Sep 2021 09:59 PM (IST)

    ಐದು ಓವರ್ ಮುಕ್ತಾಯ

    RCB 48/0 (5)

     

     ಕ್ರೀಸ್​ನಲ್ಲಿ ಕೊಹ್ಲಿ-ಪಡಿಕ್ಕಲ್ ಬ್ಯಾಟಿಂಗ್

  • 29 Sep 2021 09:58 PM (IST)

    ಡೇಂಜರಸ್ ಡಿಡಿಪಿ

    ಚೇತನ್ ಟು ಪಡಿಕ್ಕಲ್….ಶಾರ್ಟ್​ ಥರ್ಡ್​ಮ್ಯಾನ್​ನತ್ತ ಸೂಪರ್ ಶಾಟ್…ಪಡಿಕ್ಕಲ್ ಬ್ಯಾಟ್​ನಿಂದ ಮತ್ತೊಂದು ಫೋರ್

  • 29 Sep 2021 09:54 PM (IST)

    ಪರ್ಫೆಕ್ಟ್ ಪಡಿಕ್ಕಲ್

    ಮುಸ್ತಫಿಜುರ್ ಎಸೆತದಲ್ಲಿ ದೇವದತ್ ಪಡಿಕ್ಕಲ್ ಆಫ್​ ಸೈಡ್​ನತ್ತ ಸೂಪರ್ ಶಾಟ್…ಫೋರ್

     

    RCB 41/0 (4.1)

      

  • 29 Sep 2021 09:52 PM (IST)

    ಸೂಪರ್ ಶಾಟ್

    ಮುಸ್ತಫಿಜುರ್ ರಹಮಾನ್ ಎಸೆತದಲ್ಲಿ ಮಿಡ್ ಆನ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಪಡಿಕ್ಕಲ್

     

    RCB 35/0 (3.4)

     

  • 29 Sep 2021 09:45 PM (IST)

    2 ಓವರ್ ಮುಕ್ತಾಯ: ಆರ್​ಸಿಬಿ ಉತ್ತಮ ಆರಂಭ

    RCB 27/0 (2.1)

      

  • 29 Sep 2021 09:44 PM (IST)

    ಕಿಂಗ್ ಶಾಟ್

    ಕಾರ್ತಿಕ್ ಎಸೆತದಲ್ಲಿ ಕಂಟ್ರೋಲ್ ಶಾಟ್…ವಿರಾಟ್ ಕೊಹ್ಲಿ ಬ್ಯಾಟ್​ನಿಂದ ಮತ್ತೊಂದು ಬೌಂಡರಿ

  • 29 Sep 2021 09:42 PM (IST)

    ಪಡಿಕ್ಕಲ್ ಶಾಟ್

    ಕಾರ್ತಿಕ್ ತ್ಯಾಗಿ ಎಸೆತದಲ್ಲಿ ದೇವದತ್ ಪಡಿಕ್ಕಲ್ ಸೂಪರ್ ಶಾಟ್…ಫೋರ್

  • 29 Sep 2021 09:41 PM (IST)

    ಫೋರ್-ಫೋರ್-ಫೋರ್

    ಕ್ರಿಸ್​ ಮೊರಿಸ್​ ಎಸೆದ ಮೊದಲ ಓವರ್​ನಲ್ಲಿ  3 ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ

     

     

  • 29 Sep 2021 09:40 PM (IST)

    ಆರ್​ಸಿಬಿಗೆ ಟಾರ್ಗೆಟ್- 150

  • 29 Sep 2021 09:23 PM (IST)

    ಆರ್​ಸಿಬಿ ಪರ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡ ಹರ್ಷಲ್ ಪಟೇಲ್

  • 29 Sep 2021 09:20 PM (IST)

    ರಾಜಸ್ಥಾನ್ ರಾಯಲ್ಸ್​ ಇನಿಂಗ್ಸ್​ ಅಂತ್ಯ

    RR 149/9 (20)

      

  • 29 Sep 2021 09:17 PM (IST)

    ವಾಟ್ ಎ ಕ್ಯಾಚ್

    ಕ್ರಿಸ್ ಮೊರಿಸ್ ಔಟ್…ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಹೊಡೆತ…ಬೌಂಡರಿ ಲೈನ್​ನಲ್ಲಿ ದೇವದತ್ ಪಡಿಕ್ಕಲ್ ಅದ್ಭುತ ಡೈವಿಂಗ್​ ಕ್ಯಾಚ್

  • 29 Sep 2021 09:14 PM (IST)

    ಕೊನೆಯ ಓವರ್​- ಹರ್ಷಲ್ ಪಟೇಲ್

    ಮೊದಲ ಎಸೆತದಲ್ಲಿ ಯಾವುದೇ ರನ್ ಇಲ್ಲ

    2ನೇ ಎಸೆತದಲ್ಲಿ ರಿಯಾನ್ ಪರಾಗ್ ಔಟ್–ವಿರಾಟ್ ಕೊಹ್ಲಿಗೆ ನೇರವಾಗಿ ಕ್ಯಾಚ್

  • 29 Sep 2021 09:12 PM (IST)

    19ನೇ ಓವರ್ ಮುಕ್ತಾಯ

    ರಾಜಸ್ಥಾನ್ ರಾಯಲ್ಸ್- 146/6 (19)

     

  • 29 Sep 2021 09:10 PM (IST)

    ವೆಲ್ಕಂ ಬೌಂಡರಿ

    ಸಿರಾಜ್ ಎಸೆತದಲ್ಲಿ ಕ್ರಿಸ್ ಮೊರಿಸ್ ಬ್ಯೂಟಿಫುಲ್ ಬೌಂಡರಿ

     

    RR 144/6 (18.4)

      

  • 29 Sep 2021 09:05 PM (IST)

    ಲಕ್ಕಿ ಮೊರಿಸ್

    ಹರ್ಷಲ್ ಪಟೇಲ್ ಎಸೆತದಲ್ಲಿ ಬ್ಯಾಟ್ ಎಡ್ಜ್​…ಕೀಪರ್ ಭಾಗದಿಂದ ಚೆಂಡು ಬೌಂಡರಿಗೆ…ಫೋರ್

  • 29 Sep 2021 09:00 PM (IST)

    ಲಿವಿಂಗ್​ಸ್ಟೋನ್ ಔಟ್

    ಚಹಲ್ ಎಸೆತದಲ್ಲಿ ಲಿವಿಂಗ್​ಸ್ಟೋನ್ ಬಿಗ್ ಹಿಟ್…ಬೌಂಡರಿ ಲೈನ್​ನಲ್ಲಿದ್ದ ಎಬಿಡಿಗೆ ನೇರವಾಗಿ ಕ್ಯಾಚ್

     

    RR 128/6 (16.3)

      

  • 29 Sep 2021 08:57 PM (IST)

    RR 126/5 (16)

    ಕ್ರೀಸ್​ನಲ್ಲಿ ಲಿವಿಂಗ್​ಸ್ಟೋನ್-ರಿಯಾನ್ ಪರಾಗ್ ಬ್ಯಾಟಿಂಗ್

  • 29 Sep 2021 08:53 PM (IST)

    15 ಓವರ್ ಮುಕ್ತಾಯ-ಆರ್​ಸಿಬಿ ಉತ್ತಮ ಬೌಲಿಂಗ್

    ಕ್ರೀಸ್​ನಲ್ಲಿ ಲಿವಿಂಗ್​ಸ್ಟೋನ್-ರಿಯಾನ್ ಪರಾಗ್ ಬ್ಯಾಟಿಂಗ್

     

    RR 120/5 (15)

      

  • 29 Sep 2021 08:50 PM (IST)

    ಶಹಬಾಜ್ ಸ್ಪಿನ್ ಮೋಡಿ

    ಒಂದೇ ಓವರ್​ನಲ್ಲಿ ಎರಡು ವಿಕೆಟ್ ಉರುಳಿಸಿದ ಶಹಬಾಜ್ ಅಹ್ಮದ್- ಸಂಜು ಸ್ಯಾಮ್ಸನ್ ಹಾಗೂ ರಾಹುಲ್ ತಿವಾಠಿಯಾ ಔಟ್

     

    RR 117/5 (14)

      

  • 29 Sep 2021 08:47 PM (IST)

    ಸ್ಯಾಮ್ಸನ್ ಔಟ್

    ಶಹಬಾಜ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಹೊರನಡೆದ ಸಂಜು ಸ್ಯಾಮ್ಸನ್

     

    RR 113/4 (13.1)

      

  • 29 Sep 2021 08:41 PM (IST)

    RR 113/3 (13)

    ಕ್ರೀಸ್​ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್​ ಬ್ಯಾಟಿಂಗ್

  • 29 Sep 2021 08:40 PM (IST)

    ಚಹಲ್ ಮ್ಯಾಜಿಕ್

    ಚಹಲ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯುವ ಪ್ರಯತ್ನ…ಚೆಂಡು ಕೀಪರ್ ಕೈಗೆ… ಮಹಿಪಾಲ್ ಲೊಮರರ್ ಸ್ಟಂಪ್ ಔಟ್

     

     

  • 29 Sep 2021 08:36 PM (IST)

    ವಾಟ್ ಎ ಶಾಟ್

    ಜಾರ್ಜ್​ ಗಾರ್ಟನ್ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್​ನತ್ತ ಸ್ಯಾಮ್ಸನ್ ಸೂಪರ್ ಶಾಟ್…ಸಿಕ್ಸ್

     

    RR 110/2 (12.1)

      

  • 29 Sep 2021 08:31 PM (IST)

    ಐಪಿಎಲ್ ವಿಕೆಟ್ ಖಾತೆ ತೆರೆದ ಗಾರ್ಟನ್

    ಎವಿನ್ ಲೂಯಿಸ್ ಔಟ್…ಗಾರ್ಟನ್ ಎಸೆತದಲ್ಲಿ ಬಿಗ್ ಹಿಟ್​ಗೆ ಮುಂದಾದ ಎವಿನ್ ಲೂಯಿಸ್ (58)​…ಆಕಾಶದತ್ತ ಚಿಮ್ಮಿದ ಚೆಂಡು… ಕ್ಯಾಚ್ ಹಿಡಿದ ವಿಕೆಟ್ ಕೀಪರ್​

  • 29 Sep 2021 08:29 PM (IST)

    ಸ್ಯಾಮ್ಸನ್ ಸಿಕ್ಸ್​- ಆರ್​ಆರ್​-100

    ಚಹಲ್ ಎಸೆತದಲ್ಲಿ ಸ್ಯಾಮ್ಸನ್ ಬ್ಯಾಟ್​ನಿಂದ ಭರ್ಜರಿ ಸಿಕ್ಸ್​- 100 ರನ್ ಪೂರೈಸಿದ ರಾಜಸ್ಥಾನ್ ರಾಯಲ್ಸ್​

     

    RR 100/1 (11)

      

  • 29 Sep 2021 08:23 PM (IST)

    ಹತ್ತು ಓವರ್ ಮುಕ್ತಾಯ

    RR 91/1 (10)

      

    ಕ್ರೀಸ್​ನಲ್ಲಿ ಎವಿನ್ ಲೂಯಿಸ್ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್

  • 29 Sep 2021 08:21 PM (IST)

    ಅರ್ಧಶತಕ ಪೂರೈಸಿದ ಎವಿನ್ ಲೂಯಿಸ್

    ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಬೌಂಡರಿಯೊಂದಿಗೆ  31 ಅರ್ಧಶತಕ ಪೂರೈಸಿದ ಎವಿನ್ ಲೂಯಿಸ್

     

    RR 90/1 (9.3)

      

     

  • 29 Sep 2021 08:19 PM (IST)

    9 ಓವರ್ ಮುಕ್ತಾಯ

    RR 81/1 (9)

     

    ಕ್ರೀಸ್​ನಲ್ಲಿ ಎವಿನ್ ಲೂಯಿಸ್ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್

     

  • 29 Sep 2021 08:16 PM (IST)

    RR 77/1 (8.2)

    ಕ್ರೀಸ್​ನಲ್ಲಿ ಎವಿನ್ ಲೂಯಿಸ್ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್

  • 29 Sep 2021 08:15 PM (IST)

    ಔಟ್ ಔಟ್ ಔಟ್

    ಡೇನಿಯಲ್ ಕ್ರಿಶ್ಚಿಯನ್​ಗೆ ಮೊದಲ ವಿಕೆಟ್​

    ಮೊಹಮ್ಮದ್ ಸಿರಾಜ್​ಗೆ ಕ್ಯಾಚ್ ನೀಡಿ ಹೊರನಡೆದ ಯಶಸ್ವಿ ಜೈಸ್ವಾಲ್ (31)

  • 29 Sep 2021 08:14 PM (IST)

    ಯಂಗ್ ಯಶಸ್ವಿ ಅಬ್ಬರ

    ಡೇನಿಯಲ್ ಕ್ರಿಶ್ಚಿಯನ್ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಸೂಪರ್ ಶಾಟ್…ಸಿಕ್ಸ್​

  • 29 Sep 2021 08:07 PM (IST)

    ಜೈ-ಫೋರ್

    ಡೇನಿಯಲ್ ಕ್ರಿಶ್ಚಿಯನ್ ಎಸೆತದಲ್ಲಿ ಸೂಪರ್ ಸ್ಕ್ವೇರ್ ಕಟ್….ಯಶಸ್ವಿ ಜೈಸ್ವಾಲ್ ಬ್ಯಾಟ್​ನಿಂದ ಫೋರ್

  • 29 Sep 2021 08:01 PM (IST)

    ಪವರ್​ಪ್ಲೇ ಮುಕ್ತಾಯ: ರಾಯಲ್ಸ್​ ಬಿರುಸಿನ ಆರಂಭ

    6 ಓವರ್​ನಲ್ಲಿ 56 ರನ್​ ಕಲೆಹಾಕಿದ ಎವಿನ್ ಲೂಯಿಸ್ (41) ಹಾಗೂ ಯಶಸ್ವಿ ಜೈಸ್ವಾಲ್ (15)

     

    RR 56/0 (6)

     

  • 29 Sep 2021 07:57 PM (IST)

    ಐದು ಓವರ್​ನಲ್ಲಿ 50 ರನ್​ ಪೂರೈಸಿದ ರಾಜಸ್ಥಾನ್ ರಾಯಲ್ಸ್

    RR 52/0 (5)

     ಕ್ರೀಸ್​ನಲ್ಲಿ ಎವಿನ್ ಲೂಯಿಸ್ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್

  • 29 Sep 2021 07:56 PM (IST)

    ಡೇಂಜರಸ್ ಲೂಯಿಸ್

    ಹರ್ಷಲ್​ ಪಟೇಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬಾರಿಸಿದ ಎವಿನ್ ಲೂಯಿಸ್…ಸಿಕ್ಸ್

  • 29 Sep 2021 07:54 PM (IST)

    ಎವಿನ್ ಅಬ್ಬರ

    ಹರ್ಷಲ್ ಪಟೇಲ್ ಎಸೆತದಲ್ಲಿ ಸೂಪರ್ ಶಾಟ್… ಎವಿನ್ ಲೂಯಿಸ್​ ಬ್ಯಾಟ್​ನಿಂದ ಥರ್ಡ್​ ಮ್ಯಾನ್​ನತ್ತ ಬೌಂಡರಿ

  • 29 Sep 2021 07:51 PM (IST)

    ಲಾಂಗ್​-ಆನ್​-ಲಾಂಗ್​ ಸಿಕ್ಸ್​

    ಜಾರ್ಜ್​ ಗಾರ್ಟನ್​​ ಎಸೆತದಲ್ಲಿ ಬಿಗ್ ಸಿಕ್ಸ್​…ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ಎವಿನ್ ಲೂಯಿಸ್

     

    RR 39/0 (4)

      

     

  • 29 Sep 2021 07:49 PM (IST)

    ಎ-ವಿನ್​ ಶಾಟ್

    ಜಾರ್ಜ್​ ಗಾರ್ಟನ್ ಎಸೆತದಲ್ಲಿ ಭರ್ಜರಿ ಬೌಂಡರಿ…ಎವಿನ್ ಲೂಯಿಸ್​ ಬ್ಯಾಟ್​ನಿಂದ ಥರ್ಡ್​ ಮ್ಯಾನ್​ನತ್ತ ಫೋರ್

     

    RR 33/0 (3.4)

      

  • 29 Sep 2021 07:46 PM (IST)

    ಜೈ-ಸಿಕ್ಸ್​-ಜೈ

    ವಾಟ್ ಎ ಶಾಟ್​…ಜೈಸ್ವಾಲ್​

    ಜಾರ್ಜ್​ ಗಾರ್ಟನ್ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ರಾಕೆಟ್ ಶಾಟ್….ಲೆಗ್​ ಸೈಡ್​ನಲ್ಲಿ ಚೆಂಡು ಸ್ಟೇಡಿಯಂನತ್ತ…ಸಿಕ್ಸ್

  • 29 Sep 2021 07:44 PM (IST)

    ಮೂರು ಓವರ್ ಮುಕ್ತಾಯ

    RR 21/0 (3)

      

  • 29 Sep 2021 07:43 PM (IST)

    ಗ್ಯಾಪ್ ಶಾಟ್​

    ಮ್ಯಾಕ್ಸಿ ಎಸೆತದಲ್ಲಿ ಎವಿನ್ ಲೂಯಿಸ್​ ಗ್ಯಾಪ್​ ಶಾಟ್…ಆಫ್​ ಸೈಡ್​ನತ್ತ ಬೌಂಡರಿ- ಫೋರ್

  • 29 Sep 2021 07:42 PM (IST)

    ವಾವ್ಹ್​…ಜೈಸ್​-ವಾಲ್ ಶಾಟ್

    ಗ್ಲೆನ್ ಮ್ಯಾಕ್ಸ್​ವೆಲ್ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಬಿಗ್​ ಹಿಟ್​…96 ಮೀಟರ್ ಸಿಕ್ಸರ್

  • 29 Sep 2021 07:40 PM (IST)

    ಯಶಸ್ವಿ ಶಾಟ್

    ಸಿರಾಜ್ ಎಸೆತದಲ್ಲಿ ವಾಟ್​ ಎ ಶಾಟ್….ಆಫ್​ ಸೈಡ್​ನತ್ತ ಯಶಸ್ವಿ ಜೈಸ್ವಾಲ್ ಸೂಪರ್ ಶಾಟ್…ಫೋರ್

     

    RR 8/0 (2)

      

  • 29 Sep 2021 07:31 PM (IST)

    ಮೊದಲ ಓವರ್​

    ಮೊದಲ ಓವರ್​: ಜಾರ್ಜ್​ ಗಾರ್ಟನ್

    ಆರಂಭಿಕರು: ಎವಿನ್ ಲೂಯಿಸ್ ಹಾಗೂ ಯಶಸ್ವಿ ಜೈಸ್ವಾಲ್

  • 29 Sep 2021 07:16 PM (IST)

    RR ಪ್ಲೇಯಿಂಗ್ 11

  • 29 Sep 2021 07:12 PM (IST)

    ಕಣಕ್ಕಿಳಿಯುವ ಕಲಿಗಳು

     

    ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ , ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

  • 29 Sep 2021 07:09 PM (IST)

    ಟಾಸ್ ವಿಡಿಯೋ

  • 29 Sep 2021 07:08 PM (IST)

    RCB ಪ್ಲೇಯಿಂಗ್ 11

  • 29 Sep 2021 07:07 PM (IST)

    ಕೈಲ್ ಜೇಮಿಸನ್ ಬದಲಿಗೆ ಜಾರ್ಜ್​ ಗಾರ್ಟನ್ ಕಣಕ್ಕೆ

    ಆರ್​ಸಿಬಿ ತಂಡದಲ್ಲಿ 1 ಬದಲಾವಣೆ

    ಆರ್​ಸಿಬಿ ಪರ ಪದಾರ್ಪಣೆ ಮಾಡಲಿರುವ ಜಾರ್ಜ್​ ಗಾರ್ಟನ್

  • 29 Sep 2021 07:04 PM (IST)

    ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಎವಿನ್ ಲೂಯಿಸ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್

  • 29 Sep 2021 07:01 PM (IST)

    ಟಾಸ್ ಗೆದ್ದ ಆರ್​ಸಿಬಿ: ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ: ಬೌಲಿಂಗ್ ಆಯ್ಕೆ

  • 29 Sep 2021 07:00 PM (IST)

    ಆರ್​ಸಿಬಿ ಪರ ಜಾರ್ಜ್​ ಗಾರ್ಟನ್​ ಪದಾರ್ಪಣೆ

    George Garton

  • 29 Sep 2021 06:50 PM (IST)

    ಪ್ಲ್ಯಾನ್ ಎಸ್: ಕೋಚ್ ಸಂಗಾಕ್ಕರ, ಕ್ಯಾಪ್ಟನ್ ಸ್ಯಾಮ್ಸನ್

  • 29 Sep 2021 06:44 PM (IST)

    ಆರ್​ಆರ್ ವಿರುದ್ದ ಅತ್ಯುತ್ತಮ ಜೊತೆಯಾಟ

  • 29 Sep 2021 06:43 PM (IST)

    ಕ್ಯಾಪ್ಟನ್ ಕಿಂಗ್

  • 29 Sep 2021 06:43 PM (IST)

    ಐಪಿಎಲ್​ನಲ್ಲಿ 50 ವಿಕೆಟ್ ಪೂರೈಸಲು ಸಿರಾಜ್​ಗೆ 4 ವಿಕೆಟ್​ಗಳ ಅವಶ್ಯಕತೆ

  • 29 Sep 2021 06:40 PM (IST)

    ರಾಜಸ್ಥಾನ್ ರಾಯಲ್ಸ್​ ವಿರುದ್ದ ಎಬಿಡಿ ಆರ್ಭಟ

  • 29 Sep 2021 06:38 PM (IST)

    ದುಬೈ ಕ್ರಿಕೆಟ್ ಸ್ಟೇಡಿಯಂಗೆ ರಾಜಸ್ಥಾನ್ ರಾಯಲ್ಸ್ ಆಗಮನ

  • 29 Sep 2021 06:20 PM (IST)

    RR vs RCB: ಉಭಯ ತಂಡಗಳ ಮುಖಾಮುಖಿ ಅಂಕಿ ಅಂಶಗಳು

Published On - 6:15 pm, Wed, 29 September 21

Follow us on