AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಕ್ರಿಕೆಟ್​ಗೆ ಮತ್ತೊಂದು ಆಘಾತ; ಮಂಡಳಿಯ ಸಿಇಒ ಹುದ್ದೆಗೆ ವಾಸಿಂ ಖಾನ್ ರಾಜೀನಾಮೆ!

ಪಿಸಿಬಿ ಕಷ್ಟದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು, ಆದರೆ ಈಗ ವಾಸಿಂ ಖಾನ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸುಟ್ಟ ಗಾಯದ ಮೇಲೆ ಉಪ್ಪು ಸುರಿದಂತ್ತಾಗಿದೆ.

ಪಾಕಿಸ್ತಾನದ ಕ್ರಿಕೆಟ್​ಗೆ ಮತ್ತೊಂದು ಆಘಾತ; ಮಂಡಳಿಯ ಸಿಇಒ ಹುದ್ದೆಗೆ ವಾಸಿಂ ಖಾನ್ ರಾಜೀನಾಮೆ!
ಪಾಕಿಸ್ತಾನ ಕ್ರಿಕೆಟ್​
TV9 Web
| Edited By: |

Updated on: Sep 29, 2021 | 7:03 PM

Share

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್​ಗೆ ಅದೃಷ್ಟ ಸರಿಯಾಗಿಯೇ ಕೈಕೊಡುತ್ತಿದೆ. ಮೊದಲು ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದವು. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾಸಿಂ ಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬುಧವಾರ ನಡೆಯುವ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಿಸಿಬಿ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ. ಇಂತಹ ಘಟನೆಗಳಿಂದ ಪಾಕಿಸ್ತಾನ ಕ್ರಿಕೆಟ್ ಖಂಡಿತವಾಗಿಯೂ ಅತ್ಯಂತ ಕೆಟ್ಟ ಕಾಲವನ್ನು ಎದುರಿಸುತ್ತಿದೆ.

ರದ್ದಾದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸವು ಕ್ರಿಕೆಟ್ ಪ್ರೇಮಿಗಳಿಗೆ ಆಟಗಾರರ ಮನೋಬಲವನ್ನು ಮುರಿದಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್​ನಲ್ಲಿ ಸಾಕಷ್ಟು ಹತಾಶೆ ಎದ್ದು ಕಾಣಿಸುತ್ತಿದೆ. ಪಿಸಿಬಿ ಕಷ್ಟದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು, ಆದರೆ ಈಗ ವಾಸಿಂ ಖಾನ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸುಟ್ಟ ಗಾಯದ ಮೇಲೆ ಉಪ್ಪು ಸುರಿದಂತ್ತಾಗಿದೆ.

ಆಡಳಿತ ಮಂಡಳಿಯ ಸಭೆ ನಡೆಯಲಿದೆ ಬುಧವಾರದ ಸಂಕ್ಷಿಪ್ತ ಹೇಳಿಕೆಯಲ್ಲಿ, ಪಿಸಿಬಿ ವಾಸಿಂ ಖಾನ್ ರಾಜೀನಾಮೆಯನ್ನು ದೃಢಪಡಿಸಿದರು ಮತ್ತು ಬುಧವಾರ ತಡವಾಗಿ ನಡೆಯಲಿರುವ ಆಡಳಿತ ಮಂಡಳಿಯ ಸಭೆಯ ಬಗ್ಗೆಯೂ ತಿಳಿಸಿದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಂದು ವಸಿಮ್ ಖಾನ್ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಖಚಿತಪಡಿಸಿದೆ.

ಏಷ್ಯನ್ ದೇಶಗಳಿಗೆ ಇಂಗ್ಲೆಂಡಿನ ಉದ್ದೇಶಿತ ಪ್ರವಾಸದಲ್ಲಿ ವಾಸೀಂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನಂಬಲಾಗಿದೆ. ಭದ್ರತಾ ಕಾಳಜಿಯ ಕಾರಣದಿಂದ ಅದನ್ನು ಆರಂಭಿಸುವ ಮುನ್ನ ರದ್ದುಗೊಳಿಸಿದ ಬ್ಲ್ಯಾಕ್ ಕ್ಯಾಪ್ಸ್ ಪ್ರವಾಸದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದರ ನಂತರ, ಇಂಗ್ಲೆಂಡ್ ತಂಡವು ಟಿ 20 ವಿಶ್ವಕಪ್‌ಗೂ ಮುನ್ನ ಆಟಗಾರರ ಆಯಾಸವನ್ನು ಉಲ್ಲೇಖಿಸಿ ಪ್ರವಾಸವನ್ನು ರದ್ದುಗೊಳಿಸಿತು.

2019 ರಲ್ಲಿ ಸಿಇಒ ಆದರು ವಾಸಿಂ ಖಾನ್ ಅವರನ್ನು 2019 ರಲ್ಲಿ ಮಾಜಿ ಅಧ್ಯಕ್ಷ ಎಹ್ಸಾನ್ ಮಣಿ ಸಿಇಒ ಮಾಡಿದರು. ಅವರು ಮುಂದಿನ ವರ್ಷ ಫೆಬ್ರವರಿ ತನಕ ಈ ಹುದ್ದೆಯಲ್ಲಿ ಉಳಿಯಬೇಕಿತ್ತು. ಆದರೆ ಅವರ ಒಪ್ಪಂದವನ್ನು ವಿಸ್ತರಿಸಲಾಗುವುದಿಲ್ಲ ಎಂಬುದು ಖಚಿತವಾಗಿತ್ತು. ಹೊಸ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಶೀಘ್ರದಲ್ಲಿಯೇ ತಮ್ಮ ಹೊಸ ನಿರ್ವಹಣಾ ತಂಡವನ್ನು ಘೋಷಿಸಲಿದ್ದಾರೆ. ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸದಲ್ಲಿ ಪಾಕಿಸ್ತಾನ ತಂಡವು ನಾಲ್ಕು ಟಿ20 ಪಂದ್ಯ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ ಎಂದು ಪಿಸಿಬಿ ದೃಢಪಡಿಸಿದೆ.