IND vs SA: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಈ ಯುವ ಪ್ರತಿಭೆಗಳಿಗೆ ಅವಕಾಶ ಖಚಿತ! ಶಿಖರ್ ಧವನ್ ಆಯ್ಕೆ ಅನುಮಾನ?

IND vs SA: ರಿತುರಾಜ್ ಗಾಯಕ್ವಾಡ್ (Rituraj Gaikwad) ಮತ್ತು ವೆಂಕಟೇಶ್ ಅಯ್ಯರ್ (Venkatesh Iyer) ತಂಡಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

IND vs SA: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಈ ಯುವ ಪ್ರತಿಭೆಗಳಿಗೆ ಅವಕಾಶ ಖಚಿತ! ಶಿಖರ್ ಧವನ್ ಆಯ್ಕೆ ಅನುಮಾನ?
ಟೀಂ ಇಂಡಿಯಾ
Edited By:

Updated on: Dec 12, 2021 | 5:31 PM

ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಆರಂಭಿಕ ಆಟಗಾರ ಶಿಖರ್ ಧವನ್ ಅವರ ಕಳಪೆ ಲಯವು ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುಂಚಿತವಾಗಿ ಭಾರತೀಯ ಆಯ್ಕೆದಾರರಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ ಯುವ ಆಟಗಾರ ರಿತುರಾಜ್ ಗಾಯಕ್ವಾಡ್ (Rituraj Gaikwad) ಮತ್ತು ವೆಂಕಟೇಶ್ ಅಯ್ಯರ್ (Venkatesh Iyer) ತಂಡಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಜನವರಿಯಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ, ಬಿಸಿಸಿಐ ಈಗಾಗಲೇ ರೋಹಿತ್ ಶರ್ಮಾ ಅವರನ್ನು ಈ ಸ್ವರೂಪದ ನಾಯಕರನ್ನಾಗಿ ನೇಮಿಸಿದೆ ಆದರೆ ತಂಡವನ್ನು ಇನ್ನೂ ಪ್ರಕಟಿಸಲಾಗಿಲ್ಲ. 50 ಓವರ್‌ಗಳ ಸ್ಪರ್ಧೆಗಾಗಿ ಬಯೋ-ಬಬಲ್ ಮತ್ತು ಕೆಲಸದ ಹೊರೆ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆದಾರರು ಎಷ್ಟು ಆಟಗಾರರನ್ನು ತಂಡಕ್ಕೆ ಸೇರಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.

ವಿಜಯ್ ಹಜಾರೆ ಟ್ರೋಫಿಯ ಪ್ರಸಕ್ತ ಋತುವಿನಲ್ಲಿ ಗಾಯಕ್ವಾಡ್ ಮತ್ತು ಅಯ್ಯರ್ ಇದುವರೆಗೆ ಕ್ರಮವಾಗಿ ಮೂರು ಮತ್ತು ಎರಡು ಶತಕಗಳನ್ನು ಗಳಿಸಿದ್ದಾರೆ. ಈ ಅವಧಿಯಲ್ಲಿ ಅಯ್ಯರ್ ಕೆಲವು ವಿಕೆಟ್‌ಗಳನ್ನು ಪಡೆದಿದ್ದಾರೆ, ಇದು ಸದ್ಯಕ್ಕೆ ತಂಡದ ಪ್ರಮುಖ ಆಲ್‌ರೌಂಡರ್ ಆಗಿ ಅಯ್ಯರ್ ಅವರನ್ನು ಪರಿಗಣಿಸುವುದು ಸ್ಪಷ್ಟ ಎಂದು ಸಾಭೀತಾಗಿದೆ. ಕೆಎಲ್ ರಾಹುಲ್ ಮತ್ತು ರೋಹಿತ್ ಸಮ್ಮುಖದಲ್ಲಿ ಅಯ್ಯರ್ ಆರಂಭಿಕರಾಗಿ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ ಎಂದು ತಿಳಿದುಬಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಐದನೇ ಅಥವಾ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಫಿನಿಶರ್ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಅವರು ಕೇರಳದ ವಿರುದ್ಧ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 84 ಎಸೆತಗಳಲ್ಲಿ 112 ರನ್ ಗಳಿಸುವ ಮೂಲಕ ಇದೇ ರೀತಿಯ ಪಾತ್ರವನ್ನು ನಿರ್ವಹಿಸಿದರು. ನಂತರ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 49 ಎಸೆತಗಳಲ್ಲಿ 71 ರನ್ ಗಳಿಸಿದರು. ಈ ಅನುಕ್ರಮದಲ್ಲಿ ಅಯ್ಯರ್ ಭಾನುವಾರ, ಅವರು 113 ಎಸೆತಗಳಲ್ಲಿ 10 ಸಿಕ್ಸರ್‌ಗಳ ಸಹಾಯದಿಂದ 151 ರನ್ ಗಳಿಸಿದರು.

ದಕ್ಷಿಣ ಆಫ್ರಿಕಾಕ್ಕೆ ಹೋಗುವುದು ಖಚಿತ
ಬಿಸಿಸಿಐ ಮೂಲಗಳು ಪಿಟಿಐಗೆ ಈ ಬಗ್ಗೆ ತಿಳಿಸಿದ್ದು, ವೆಂಕಟೇಶ್ ಖಂಡಿತವಾಗಿಯೂ ದಕ್ಷಿಣ ಆಫ್ರಿಕಾಕ್ಕೆ ಹೋಗುವುದು ಖಚಿತವಾಗಿದೆ. ಅವರು ಪ್ರತಿ ಪಂದ್ಯದಲ್ಲೂ 9 ಅಥವಾ 10 ಓವರ್‌ಗಳನ್ನು ಬೌಲಿಂಗ್ ಮಾಡುತ್ತಿದ್ದಾರೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೂ ಸಹಾಯವಾಗಲಿದ್ದಾರೆ ಎಂದಿದ್ದಾರೆ.