NZ vs SA: ಕಿವೀಸ್ಗೆ ಬಿಗ್ ಶಾಕ್; ಆಫ್ರಿಕಾ ವಿರುದ್ಧದ ಪಂದ್ಯದಿಂದಲೂ ಹೊರಬಿದ್ದ ಕೇನ್ ವಿಲಿಯಮ್ಸನ್..!
Kane Williamson, ICC World Cup 2023: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ನ್ಯೂಜಿಲೆಂಡ್ ತಂಡ ಇಂದು ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುತ್ತಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ನಾಯಕ ಕೇನ್ ವಿಲಿಯಮ್ಸನ್ ಈ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ
2023 ರ ವಿಶ್ವಕಪ್ನಲ್ಲಿ (ICC ODI World Cup 2023) ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ನ್ಯೂಜಿಲೆಂಡ್ ತಂಡ ಇಂದು ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು (New Zealand vs South Africa) ಎದುರಿಸುತ್ತಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ನಾಯಕ ಕೇನ್ ವಿಲಿಯಮ್ಸನ್ (Kane Williamson) ಈ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ನಿರಂತರ ಗಾಯದಿಂದ ಬಳಲುತ್ತಿರುವ ವಿಲಿಯಮ್ಸನ್ ಅಲಭ್ಯತೆ ಮಾಡು ಇಲ್ಲವೇ ಮಡಿ ಪಂದ್ಯವನ್ನಾಡುತ್ತಿರುವ ನ್ಯೂಜಿಲೆಂಡ್ಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ. ವಿಲಿಯಮ್ಸನ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಿಂದ ಹೊರಗಿಡಲಾಗಿದೆ ಎಂಬ ಮಾಹಿತಿಯನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕ್ರಿಕೆಟ್ ಮಂಡಳಿ, ‘ಬುಧವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಆಡುವುದಿಲ್ಲ. ವಿಲಿಯಮ್ಸನ್ ಕಳೆದ ಎರಡು ದಿನಗಳಲ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಆದರೆ ನಾಳಿನ ಪಂದ್ಯದಲ್ಲಿ ಅವರು ಆಡಲು ಸಾಧ್ಯವಾಗುವುದಿಲ್ಲ. ಮುಂದಿನ ಪಂದ್ಯಕ್ಕೂ ಮೊದಲು ಅವರ ಚೇತರಿಕೆಯನ್ನು ಪರಿಶೀಲಿಸಲಾಗುವುದು ಎಂದಿದೆ.
Kane Williamson has been ruled out of Wednesday’s match against @ProteasMenCSA.
Williamson has batted in the nets the last two days but has been ruled out of a return to match action tomorrow.
He will be assessed again ahead of the side’s next match against @TheRealPCB. #CWC23 pic.twitter.com/c8TIJRe7cT
— BLACKCAPS (@BLACKCAPS) October 31, 2023
ಐಪಿಎಲ್ ವೇಳೆ ಇಂಜುರಿ
ಕಳೆದ ಐಪಿಎಲ್ ವೇಳೆ ಇಂಜುರಿಗೆ ಒಳಗಾಗಿದ್ದ ಕೇನ್ ವಿಲಿಯಮ್ಸನ್ ಬಹಳ ದಿನಗಳಿಂದ ತಂಡದಿಂದ ಹೊರಗುಳಿದಿದ್ದರು. ಆದರೆ ವಿಶ್ವಕಪ್ ಆರಂಭಕ್ಕೂ ಮುನ್ನ ಚೇತರಿಸಿಕೊಂಡಿದ್ದ ಕೇನ್, ಅಕ್ಟೋಬರ್ 13 ರಂದು ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 58 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಇದಾದ ಬಳಿಕ ಮತ್ತೊಮ್ಮೆ ಇಂಜುರಿಯಿಂದ ಬಳಲುತ್ತಿರುವ ವಿಲಿಯಮ್ಸನ್, ಆ ಬಳಿಕ ಮತ್ತೆ ಮೈದಾನಕ್ಕೆ ಇಳಿದಿರಲಿಲ್ಲ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಆಡಲಿದ್ದಾರೆ ಎಂದು ನಂಬಲಾಗಿತ್ತು. ಆದರೆ ಈಗ ಅದು ಆಗುವುದಿಲ್ಲ.
NZ vs SA: ಆಫ್ರಿಕಾ- ನ್ಯೂಜಿಲೆಂಡ್ ನಡುವೆ ವಿಶ್ವಕಪ್ ಕದನ; ಗೆಲ್ಲಲೇಬೇಕಾದ ಒತ್ತಡದಲ್ಲಿ ಕಿವೀಸ್..!
ಆಫ್ರಿಕಾ ವಿರುದ್ಧ ಗೆಲುವು ಅನಿವಾರ್ಯ
ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ತಂಡ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಆದರೆ, ಅ ಬಳಿಕ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತ ಸೋಲುಕಂಡಿದೆ. ಹೀಗಾಗಿ ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು, ನ್ಯೂಜಿಲೆಂಡ್ ಯಾವುದೇ ಬೆಲೆ ತೆತ್ತಾದರೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಗೆಲ್ಲಬೇಕಾಗಿದೆ. ತಂಡವು ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು 8 ಅಂಕಗಳನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಸೆಮಿಫೈನಲ್ ತಲುಪಲು ಕಿವೀಸ್ ತಂಡಕ್ಕೆ ಇಲ್ಲಿಂದ ಪ್ರತಿ ಪಂದ್ಯವನ್ನು ಗೆಲ್ಲುವುದು ಅನಿವಾರ್ಯವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:33 am, Wed, 1 November 23