ವಿಶ್ವದ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಾದ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹಳ್ಳಿಯೊಂದರಲ್ಲಿ ಕ್ರಿಕೆಟ್ ಮ್ಯಾಚ್ ಆಡುತ್ತಿರುವುದು ಕಾಣಬಹುದು. ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ ಈ ಮಕ್ಕಳ ಕ್ರಿಕೆಟ್ ಆಟದಲ್ಲಿ ನಾಯಿಯೊಂದು ವಿಕೆಟ್ ಕೀಪರ್ ಪಾತ್ರವನ್ನು ನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೆ ಫೀಲ್ಡಿಂಗ್ ಕೂಡ ಮಾಡುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಸಚಿನ್, ‘ಇದು ಸ್ನೇಹಿತರೊಬ್ಬರು ಕಳುಹಿಸಿದ ವಿಡಿಯೋ. ಚೆಂಡನ್ನು ಹಿಡಿಯುವ ಕೌಶಲ್ಯವನ್ನು ಈ ವಿಡಿಯೋ ನೋಡಿಯೇ ಹೇಳಬೇಕು. ನಾವು ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪರ್‌ಗಳು, ಫೀಲ್ಡರ್‌ಗಳು ಮತ್ತು ಆಲ್‌ರೌಂಡರ್‌ಗಳನ್ನು ನೋಡಿದ್ದೇವೆ. ಆದರೆ ನೀವು ಇದಕ್ಕೆ ಏನು ಹೆಸರಿಡುತ್ತೀರಿ?’ ಎಂದು ಅಭಿಮಾನಿಗಳನ್ನು ಕೇಳಿದ್ದಾರೆ.
ಮಕ್ಕಳ ಕ್ರಿಕೆಟ್ ಆಟದಲ್ಲಿ ನಾಯಿ ಕೂಡ ಸೇರಿಕೊಂಡಿದ್ದು, ಬೌಲಿಂಗ್ ಮಾಡುವಾಗ ನಾಯಿ ವಿಕೆಟ್ ಕೀಪಿಂಗ್ ಮಾಡುತ್ತೆ. ಅಷ್ಟೇ ಅಲ್ಲದೆ ಬ್ಯಾಟರ್ ಚೆಂಡನ್ನು ಬಾರಿಸಿದಾಗ ಫೀಲ್ಡಿಂಗ್ಗಾಗಿ ಓಡುತ್ತದೆ. ಈ ವಿಡಿಯೋಗೆ ಇದುವರೆಗೆ 19 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದ್ದು, 2500ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.
Received this from a friend and I must say, those are some ‘sharp’ ball catching skills ?
We’ve seen wicket-keepers, fielders and all-rounders in cricket, but what would you name this? ? pic.twitter.com/tKyFvmCn4v
— Sachin Tendulkar (@sachin_rt) November 22, 2021
ಇದಕ್ಕೂ ಮುನ್ನ ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಸಚಿನ್ ತೆಂಡೂಲ್ಕರ್ ಹಂಚಿಕೊಂಡಿರುವ ವಿಡಿಯೋ ಕೂಡ ಅದೇ ಸಾಲಿಗೆ ಸೇರಿದೆ. ಅದರಲ್ಲೂ ಶ್ವಾನ ಪ್ರೇಮಿಯಾಗಿರುವ ಸಚಿನ್ ಅವರಿಗೆ ಈ ವಿಡಿಯೋ ತುಂಬಾ ಖುಷಿ ನೀಡಿದ್ದು, ಹೀಗಾಗಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ನಾಯಿಯ ಫೀಲ್ಡಿಂಗ್ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: IPL 2022: 20 ಕೋಟಿ ಪಕ್ಕಾ…ಐಪಿಎಲ್ ದುಬಾರಿ ಆಟಗಾರ ಯಾರೆಂದು ತಿಳಿಸಿದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Rohit Sharma: ಶಾಹಿದ್ ಅಫ್ರಿದಿ ವಿಶ್ವ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Martin Guptill: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್
(Sachin Tendulkar shares old video of dog playing cricket with children)