ನಿಶ್ಚಿತಾರ್ಥದ ಬಳಿಕ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ಅರ್ಜುನ್- ಸಾನಿಯಾ; ಫೋಟೋ ಹಂಚಿಕೊಂಡ ಸಚಿನ್

Sachin Tendulkar's Mother's 88th Birthday: ಸಚಿನ್ ತೆಂಡೂಲ್ಕರ್ ಅವರ ತಾಯಿ ರಜನಿ ತೆಂಡೂಲ್ಕರ್ ಅವರ 88ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಸಮಾರಂಭದಲ್ಲಿ ಅರ್ಜುನ್ ತೆಂಡೂಲ್ಕರ್ ಮತ್ತು ಅವರ ಭಾವಿ ಮಡದಿ ಸಾನಿಯಾ ಚಂದೋಕ್ ಭಾಗವಹಿಸಿದ್ದರು. ನಿಶ್ಚಿತಾರ್ಥದ ನಂತರ ಸಾನಿಯಾ ಹಾಗೂ ಅರ್ಜುನ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿರುವುದು ಇದೇ ಮೊದಲು.

ನಿಶ್ಚಿತಾರ್ಥದ ಬಳಿಕ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ಅರ್ಜುನ್- ಸಾನಿಯಾ; ಫೋಟೋ ಹಂಚಿಕೊಂಡ ಸಚಿನ್
Sachin Tendulkar Family

Updated on: Aug 29, 2025 | 9:28 PM

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ತಮ್ಮ ತಾಯಿ ರಜನಿ ತೆಂಡೂಲ್ಕರ್ ಅವರ 88 ನೇ ಹುಟ್ಟುಹಬ್ಬವನ್ನು ಆಗಸ್ಟ್ 29 ರ ಶುಕ್ರವಾರದಂದು ತಮ್ಮ ಮನೆಯಲ್ಲಿ ಸರಳವಾಗಿ ಆಚರಿಸಿದ್ದಾರೆ. ಈ ವಿಶೇಷ ದಿನದಂದು, ಅರ್ಜುನ್ ತೆಂಡೂಲ್ಕರ್ (Arjun Tendulkar) ನಿಶ್ಚಿತಾರ್ಥದ ಬಳಿಕ ಇದೇ ಮೊದಲ ಬಾರಿಗೆ ಭಾವಿ ಮಡದಿ ಸಾನಿಯಾ ಚಂದೋಕ್ (Sania Chandhok) ಅವರೊಂದಿಗೆ ಕಾಣಿಸಿಕೊಂಡಿದ್ದು, ಅಜ್ಜಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ತಾಯಿಯ ಹುಟ್ಟುಹಬ್ಬದ ಫೋಟೋಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ಸಾನಿಯಾ ಚಂದೋಕ್ ಇರುವುದನ್ನು ನಾವು ಕಾಣಬಹುದಾಗಿದೆ. ಇದೀಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಖಚಿತಪಡಿಸಿದ್ದ ಸಚಿನ್

ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಆಗಸ್ಟ್ 13 ರಂದು ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆರಂಭದಲ್ಲಿ ಈ ಬಗ್ಗೆ ಎರಡೂ ಕುಟುಂಬಗಳಿಂದ ಯಾವುದೇ ಸ್ಪಷ್ಟನೆ ಹೊರಬಂದಿರಲಿಲ್ಲ. ಆದರೆ ಆ ಬಳಿಕ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ಈ ವಿಚಾರವನ್ನು ಖಚಿತಪಡಿಸಿದ್ದರು. ಆದಾಗ್ಯೂ ಇಲ್ಲಿಯವರೆಗೆ ಉಭಯ ಕುಟುಂಬ ಸದಸ್ಯರು ಅರ್ಜುನ್-ಸಾನಿಯಾ ಅವರ ನಿಶ್ಚಿತಾರ್ಥದ ಫೋಟೋವನ್ನು ಹಂಚಿಕೊಂಡಿಲ್ಲ.

ಸಚಿನ್ ಈ ಸಮಾರಂಭವನ್ನು ಇಲ್ಲಿಯವರೆಗೆ ಖಾಸಗಿಯಾಗಿಟ್ಟಿದ್ದಾರೆ. ಆದಾಗ್ಯೂ ನಿಶ್ಚಿತಾರ್ಥದ ನಂತರ ಸಾನಿಯಾ, ಸಚಿನ್ ಕುಟುಂಬದ ಪ್ರತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಸಾರಾ ತೆಂಡೂಲ್ಕರ್ ಅವರ ಅಕಾಡೆಮಿಯ ಉದ್ಘಾಟನೆಯಲ್ಲೂ ಸಾನಿಯಾ ಕಾಣಿಸಿಕೊಂಡಿದ್ದರು. ಈಗ ಅರ್ಜುನ್ ಅವರ ಅಜ್ಜಿಯ ಹುಟ್ಟುಹಬ್ಬದಂದು ತನ್ನ ಅತ್ತೆಯ ಮನೆಗೆ ಸಾನಿಯಾ ಬಂದಿದ್ದಾರೆ.

‘ಅರ್ಜುನ್ ನಿಜವಾಗಿಯೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ?’; ಫ್ಯಾನ್ಸ್ ಪ್ರಶ್ನೆಗೆ ನೇರವಾಗಿ ಉತ್ತರಿಸಿದ ಸಚಿನ್ ತೆಂಡೂಲ್ಕರ್

ದೇಶೀಯ ಕ್ರಿಕೆಟ್​ನಲ್ಲಿ ಅರ್ಜುನ್ ಪ್ರದರ್ಶನ

ಅರ್ಜುನ್ ತೆಂಡೂಲ್ಕರ್ ಬಗ್ಗೆ ಹೇಳುವುದಾದರೆ, ಅವರು ಇನ್ನೂ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿಲ್ಲ ಆದರೆ ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ಪರ ಆಡುತ್ತಿರುವ ಅರ್ಜುನ್ ಇಲ್ಲಿಯವರೆಗೆ ಆಡಿರುವ 17 ಪ್ರಥಮ ದರ್ಜೆ ಪಂದ್ಯಗಳಲ್ಲಿ 33.51 ಸರಾಸರಿಯಲ್ಲಿ 37 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು 532 ರನ್‌ಗಳನ್ನು ಬಾರಿಸಿದ್ದಾರೆ. ಹಾಗೆಯೇ 18 ಲಿಸ್ಟ್ ಎ ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಪಡೆದಿದ್ದು, 102 ರನ್‌ಗಳನ್ನು ಕಲೆಹಾಕಿದ್ದಾರೆ. ಅರ್ಜುನ್ ಇದುವರೆಗೆ 24 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 27 ವಿಕೆಟ್‌ಗಳನ್ನು ಕಬಳಿಸಿದ್ದು, 119 ರನ್‌ಗಳನ್ನು ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ