ಭಾರತ ಕ್ರಿಕೆಟ್ ತಂಡದ ಹಾಗೂ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ (Rohit Sharma) ಭಾನುವಾರ 36ನೇ ವಸಂತಕ್ಕೆ ಕಾಲಿಟ್ಟರು. ವಿಶೇಷ ಎಂದರೆ ಇವರ ಹುಟ್ಟುಹಬ್ಬದ ದಿನವೇ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (MI vs RR) ಪಂದ್ಯ ಏರ್ಪಡಿಸಲಾಗಿತ್ತು. ಇದರಲ್ಲಿ ಹಿಟ್ಮ್ಯಾನ್ ಪಡೆ 6 ವಿಕೆಟ್ಗಳ ರೋಚಕ ಜಯ ಕೂಡ ಸಾಧಿಸಿತು. ಕೊನೆಯ 6 ಎಸೆತಗಳಲ್ಲಿ ಮುಂಬೈ ಗೆಲುವಿಗೆ 17 ರನ್ ಬೇಕಾಗಿದ್ದಾಗ ಟಿಮ್ ಡೇವಿಡ್ (Tim David) ಮೊದಲ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಆದರೆ, ಜನ್ಮದಿನ ಆಡಿದ ಪಂದ್ಯದಲ್ಲಿ ರೋಹಿತ್ ಕ್ಲಿಕ್ ಆಗಲಿಲ್ಲ. ಅಂಪೈರ್ ಮಾಡಿದ ಎಡವಟ್ಟಿನಿಂದ ಬೇಗನೆ ಪೆವಿಲಿಯನ್ ಸೇರಬೇಕಾಯಿತು.
ರಾಜಸ್ಥಾನ್ ನೀಡಿದ್ದ 213 ರನ್ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ಮುಂಬೈ ಪರ ರೋಹಿತ್ ಶರ್ಮಾ (3 ರನ್) ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಎರಡನೇ ಓವರ್ನ ಸಂದೀಪ್ ಶರ್ಮಾ ಬೌಲಿಂಗ್ನ ಕೊನೆಯ ಎಸೆತದಲ್ಲಿ ಔಟಾದರು. ಈ ಎಸೆತದಲ್ಲಿ ದೊಡ್ಡ ಎಸೆತ ಹೊಡೆಯಲು ರೋಹಿತ್ ಕ್ರೀಸ್ ಬಿಟ್ಟುನಿಂತರು. ಆದರೆ, ಚೆಂಡು ಬ್ಯಾಟ್ಗೆ ತಾಗದೆ ಸಾಗಿತು. ಅತ್ತ ಬೇಲ್ಸ್ ನೆಲಕ್ಕೆ ಬಿತ್ತು. ಬೇಲ್ಸ್ ಕೆಳಗಿ ಬಿದ್ದಿರುವುದನ್ನು ಗಮನಿಸಿ ಅಂಪೈರ್ ಔಟ್ ಎಂದು ತೀರ್ಪು ಪ್ರಕಟಿಸಿದರು. ಆದರೆ, ಸೂಕ್ಷ್ಮವಾಗಿ ಗಮನಿಸಿದಾಗ ಇದು ಔಟ್ ಆಗಿರಲಿಲ್ಲ.
IPL 2023: ಔಟಾ ಅಥವಾ ನಾಟೌಟಾ? ಹೊಸ ಚರ್ಚೆಗೆ ಕಾರಣವಾದ ಕ್ಯಾಚ್
ಹೌದು, ಅಂಪರ್ ಔಟೆಂದು ಕೊಟ್ಟ ಬಳಿಕ ರೋಹಿತ್ ಶರ್ಮಾ ಪೆವಿಲಿಯನ್ಗೆ ತೆರಳಿದರು. ಆದರೆ, ಇದು ಔಟ್ ಆಗಿರಲಿಲ್ಲ. ರೋಹಿತ್ ಔಟಾದ ವಿಡಿಯೋವನ್ನು ಸ್ಲೋ ಮೋಷನ್ನಲ್ಲಿ ನೋಡಿದಾಗ ಚೆಂಡು ವಿಕೆಟ್ ಹತ್ತಿರದಿಂದ ಸಾಗಿತ್ತೆ ಹೊರತು ವಿಕೆಟ್ಗೆ ಬಡಿದಿರಲಿಲ್ಲ. ಬದಲಾಗಿ ವಿಕೆಟ್ಗೆ ಆರ್ಆರ್ ತಂಡದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಗ್ಲೌಸ್ ತಾಗಿತ್ತು. ಹೀಗಾಗಿ ಬೇಲ್ಸ್ ಕೆಳಕ್ಕೆ ಬಿದ್ದಿದೆ. ಚೆಂಡು ತಾಗಿ ಬೇಲ್ಸ್ ಬಿದ್ದಿದೆ ಎಂದು ಅಂದುಕೊಂಡು ಅಂಪೈರ್ ಔಟೆಂದು ತೀರ್ಪು ನೀಡಿದ್ದಾರೆ. ಈ ಮೂಲಕ ಅಂಪೈರ್ ಮಾಡಿದ ಎಡವಟ್ಟಿನಿಂದ ಹಿಟ್ಮ್ಯಾನ್ ಬೇಗನೆ ನಿರ್ಗಮಿಸಿಬೇಕಾಯಿತು.
ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ರೋಹಿತ್ ಶರ್ಮಾ ಅಭಿಮಾನಿಗಳು ಸ್ಲೋ ಮೋಷನ್ ವಿಡಿಯೋ ಹಂಚಿಕೊಂಡರು ಅಂಪೈರ್ ವಿರುದ್ಧ ಸಿಡಿದೆದ್ದಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ.
Unfair ?#RohitSharma? #MumbaiIndians #umpire #HBDRohitSharma #MIvsRR #RohitSharma #BCCI pic.twitter.com/SbXDtY9egt
— Bhargav Jupalli (@bhargav_jupalli) April 30, 2023
Rohit Sharma is Clearly Not Out pic.twitter.com/VJ6RU2Klwb
— Tanay Vasu (@tanayvasu) April 30, 2023
ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ ಏಕಾಂಗಿಯಾಗಿ ರನ್ ಕಲೆಹಾಕಿದ್ದು ಬಿಟ್ಟರೆ ನಂತರ ಆಡಿದ ಯಾವ ಬ್ಯಾಟರ್ನ ಸ್ಕೋರ್ 20ರ ಗಡಿ ದಾಟಲಿಲ್ಲ. ಜೈಸ್ವಾಲ್ ಕೇವಲ 62 ಎಸೆತಗಳಲ್ಲಿ 16 ಫೋರ್ ಹಾಗೂ 8 ಸಿಕ್ಸರ್ ಬಾರಿಸಿ 124 ರನ್ ಚಚ್ಚಿದರು. ಆರ್ಆರ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 212 ರನ್ ಬಾರಿಸಿತು. ಕಠಿಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಕ್ಯಾಮ್ರೋನ್ ಗ್ರೀನ್ (44) ಹಾಗೂ ಸೂರ್ಯಕುಮಾರ್ ಯಾದವ್ (55) ಅಬ್ಬರಿಸಿ ಒಂದು ಹಂತಕ್ಕೆ ಪಂದ್ಯವನ್ನು ತಂದಿಟ್ಟರು. ಕೊನೆಯ ಹಂತದಲ್ಲಿ ತಿಲಕ್ ವರ್ಮಾ (ಅಜೇಯ 29) ಮತ್ತು ಟಿಮ್ ಡೇವಿಡ್ (ಅಜೇಯ 45) ಸ್ಫೋಟಕ ಬ್ಯಾಟಿಂಗ್ ನಡೆಸಿ 19.3 ಓವರ್ನಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Mon, 1 May 23