MI vs RR Highlights IPL 2023: ಜೈಸ್ವಾಲ್ ಶತಕ ವ್ಯರ್ಥ; 1000ನೇ ಪಂದ್ಯ ಗೆದ್ದು ಬೀಗಿದ ಮುಂಬೈ

|

Updated on:Apr 30, 2023 | 11:58 PM

Mumbai Indians vs Rajasthan Royals IPL 2023 Highlights in Kannada: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 1000 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ದ ರೋಚಕ ಜಯ ಸಾಧಿಸಿದೆ.

MI vs RR Highlights IPL 2023: ಜೈಸ್ವಾಲ್ ಶತಕ ವ್ಯರ್ಥ; 1000ನೇ ಪಂದ್ಯ ಗೆದ್ದು ಬೀಗಿದ ಮುಂಬೈ
ಮುಂಬೈ- ರಾಜಸ್ಥಾನ್ ಮುಖಾಮುಖಿ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 1000 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ದ ರೋಚಕ ಜಯ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತಂಡ ಆರಂಭಿಕ ಆಟಗಾರ್ತಿ ಯಶಸ್ವಿ ಜೈಸ್ವಾಲ್ ಅವರ ಚೊಚ್ಚಲ ಶತಕದ ನೆರವಿನಿಂದ 20 ಓವರ್‌ಗಳ ನಂತರ 7 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕ ಹಾಗೂ ಟಿಮ್ ಡೇವಿಡ್ ಅವರ ಸ್ಫೋಟಕ ಬ್ಯಾಟಿಂಗ್​​ನಿಂದಾಗಿ ಇನ್ನು 3 ಎಸೆತಗಳು ಬಾಕಿ ಇರುವಂತೆಯೇ ಗೆದ್ದುಬೀಗಿತು.

LIVE NEWS & UPDATES

The liveblog has ended.
  • 30 Apr 2023 11:57 PM (IST)

    ಪಂದ್ಯ ಗೆಲ್ಲಿಸಿದ ಟಿಮ್ ಡೇವಿಡ್

    ರೋಹಿತ್ ಶರ್ಮಾ ಹುಟ್ಟುಹಬ್ಬ ಹಾಗೂ ಐಪಿಎಲ್​ನ ಸಾವಿರನೇ ಪಂದ್ಯ ರೋಚಕ ರೀತಿಯಲ್ಲಿ ಮುಕ್ತಾಯಗೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 5 ವಿಕೆಟ್​ಗಳಿಂದ ಸೋಲಿಸಿದೆ.

  • 30 Apr 2023 11:54 PM (IST)

    6 ಎಸೆತಗಳಲ್ಲಿ 17 ರನ್‌ ಬೇಕು

    ಮುಂಬೈ ಇಂಡಿಯನ್ಸ್ ಪರ ಡೇವಿಡ್ 27 ರನ್ ಹಾಗೂ ತಿಲಕ್ ವರ್ಮಾ 29 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 6 ಎಸೆತಗಳಲ್ಲಿ 17 ರನ್‌ಗಳ ಅಗತ್ಯವಿದೆ. 19 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 196/4

  • 30 Apr 2023 11:46 PM (IST)

    12 ಎಸೆತಗಳಲ್ಲಿ 32 ರನ್‌ಗಳ ಅಗತ್ಯ

    18ನೇ ಓವರ್‌ನಲ್ಲಿ 2 ಬೌಂಡರಿ ಬಂದವು. ಮುಂಬೈ ಇಂಡಿಯನ್ಸ್ ಪರ ಡೇವಿಡ್ 15 ರನ್ ಹಾಗೂ ತಿಲಕ್ ವರ್ಮಾ 27 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 12 ಎಸೆತಗಳಲ್ಲಿ 32 ರನ್‌ಗಳ ಅಗತ್ಯವಿದೆ. 18 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 181/4

  • 30 Apr 2023 11:37 PM (IST)

    ಡೇವಿಡ್ ಸಿಕ್ಸರ್

    17ನೇ ಓವರ್‌ನಲ್ಲಿ ಡೇವಿಡ್ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಮುಂಬೈ ಇಂಡಿಯನ್ಸ್ ಪರ ಡೇವಿಡ್ 11 ರನ್ ಹಾಗೂ ತಿಲಕ್ ವರ್ಮಾ 20 ರನ್ ಗಳಿಸಿ ಆಡುತ್ತಿದ್ದಾರೆ.17 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 170/4. ಗೆಲುವಿಗೆ 18 ಎಸೆತಗಳಲ್ಲಿ 43 ರನ್‌ಗಳ ಅಗತ್ಯವಿದೆ.

  • 30 Apr 2023 11:29 PM (IST)

    ಸೂರ್ಯ ಔಟ್

    ಬೌಲ್ಟ್ ಓವರ್‌ನಲ್ಲಿ ಸೂರ್ಯಕುಮಾರ್ 55 ರನ್ ಗಳಿಸಿ ಔಟಾದರು. ಸಂದೀಪ್ ಶರ್ಮಾ ಅದ್ಭುತ ಕ್ಯಾಚ್ ಹಿಡಿದು ರಾಜಸ್ಥಾನಕ್ಕೆ ಯಶಸ್ಸು ತಂದುಕೊಟ್ಟರು. ಸೂರ್ಯಕುಮಾರ್ 8 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು.

  • 30 Apr 2023 11:24 PM (IST)

    ಸೂರ್ಯ ಅರ್ಧಶತಕ

    ಸೂರ್ಯಕುಮಾರ್ 18ನೇ ಐಪಿಎಲ್ ಅರ್ಧಶತಕ ಬಾರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 55 ರನ್ ಮತ್ತು ತಿಲಕ್ ವರ್ಮಾ 13 ರನ್ ಗಳಿಸಿ ಆಡುತ್ತಿದ್ದಾರೆ. 15 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 150/3

  • 30 Apr 2023 11:14 PM (IST)

    ತಿಲಕ್ ಸಿಕ್ಸರ್

    14ನೇ ಓವರ್‌ನಲ್ಲಿ ತಿಲಕ್ ವರ್ಮಾ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. 14 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 141/3

  • 30 Apr 2023 11:11 PM (IST)

    ಸೂರ್ಯ ಸ್ಫೋಟ

    13ನೇ ಓವರ್‌ನಲ್ಲಿ ಸೂರ್ಯಕುಮಾರ್ 3 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 20 ರನ್‌ಗಳು ಕಂಡುಬಂದವು.

  • 30 Apr 2023 11:02 PM (IST)

    ಚಹಲ್ ಉತ್ತಮ ಓವರ್

    ಚಹಲ್ ಎಸೆದ 12ನೇ ಓವರ್‌ನಲ್ಲಿ ಕೇವಲ 3 ರನ್ ಮಾತ್ರ ಬಂತು. ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 24 ರನ್ ಹಾಗೂ ತಿಲಕ್ ವರ್ಮಾ 1 ರನ್ ಗಳಿಸಿ ಆಡುತ್ತಿದ್ದಾರೆ. 12 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 104/3

  • 30 Apr 2023 10:54 PM (IST)

    ಗ್ರೀನ್ ಔಟ್

    ಅಶ್ವಿನ್ ಅವರ ಓವರ್‌ನಲ್ಲಿ ಕ್ಯಾಮರೂನ್ ಗ್ರೀನ್ 44 ರನ್ ಗಳಿಸಿ ಔಟಾದರು. ಅವರು 4 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. 11 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 101/2

  • 30 Apr 2023 10:46 PM (IST)

    ಸೂರ್ಯ 3 ಬೌಂಡರಿ

    ಹೋಲ್ಡರ್ ಬೌಲ್ ಮಾಡಿದ 10ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ 3 ಬೌಂಡರಿಗಳನ್ನು ಬಾರಿಸಿದರು. 10 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 98/2

  • 30 Apr 2023 10:46 PM (IST)

    ಸೂರ್ಯ ಸಿಕ್ಸರ್

    ಸೂರ್ಯಕುಮಾರ್ ಯಾದವ್ ತಮ್ಮ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 7 ರನ್ ಹಾಗೂ ಕ್ಯಾಮರೂನ್ ಗ್ರೀನ್ 42 ರನ್ ಗಳಿಸಿ ಆಡುತ್ತಿದ್ದಾರೆ. 9 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 84/2.

  • 30 Apr 2023 10:38 PM (IST)

    ಇಶಾನ್ ಕಿಶನ್ ಔಟ್

    ಅಶ್ವಿನ್ ಎಸೆತದಲ್ಲಿ ಇಶಾನ್ ಕಿಶನ್ 28 ರನ್ ಗಳಿಸಿ ಕ್ಯಾಚಿತ್ತು ಔಟಾದರು. ಇದೀಗ ಬ್ಯಾಟಿಂಗ್​​ಗೆ ಸೂರ್ಯಕುಮಾರ್ ಯಾದವ್ ಬಂದಿದ್ದಾರೆ.

  • 30 Apr 2023 10:34 PM (IST)

    7 ಓವರ್‌ ಮುಕ್ತಾಯ

    ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ 23 ರನ್ ಹಾಗೂ ಕ್ಯಾಮರೂನ್ ಗ್ರೀನ್ 32 ರನ್ ಗಳಿಸಿ ಆಡುತ್ತಿದ್ದಾರೆ. 7 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 62/1

  • 30 Apr 2023 10:34 PM (IST)

    6 ಓವರ್​ಗೆ – 58/1

    ಸಂದೀಪ್ ಶರ್ಮಾ ಬೌಲ್ ಮಾಡಿದ 6ನೇ ಓವರ್‌ನಲ್ಲಿ 2 ಬೌಂಡರಿ ಬಂದವು. ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ 21 ರನ್ ಹಾಗೂ ಕ್ಯಾಮರೂನ್ ಗ್ರೀನ್ 30 ರನ್ ಗಳಿಸಿ ಆಡುತ್ತಿದ್ದಾರೆ. 6 ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್ ಸ್ಕೋರ್ – 58/1

  • 30 Apr 2023 10:33 PM (IST)

    ಮುಂಬೈನ 50 ರನ್‌ ಪೂರ್ಣ

    ಮುಂಬೈ ಇಂಡಿಯನ್ಸ್ 50 ರನ್ ಪೂರೈಸಿದೆ. ಆರನೇ ಓವರ್​ನ ಮೊದಲ ಎಸೆತದಲ್ಲಿ ಇಶಾನ್ ಕಿಶನ್ ಬೌಂಡರಿ ಬಾರಿಸುವ ಮೂಲಕ ತಂಡದ ಅರ್ಧಶತಕ ಪೂರೈಸಿದರು.

  • 30 Apr 2023 10:15 PM (IST)

    ಅಶ್ವಿನ್​ಗೆ ಸಿಕ್ಸ್

    5ನೇ ಓವರ್​​ ಬೌಲ್ ಮಾಡಿದ ಅಶ್ವಿನ್ ಮೊದಲ ಎಸೆತಗಳಲ್ಲಿ ಯಾವುದೇ ಬಿಗ್ ಶಾಟ್ ಹೊಡೆಯಲು ಅವಕಾಶ ನೀಡಲಿಲ್ಲ. ಆದರೆ ಕೊನೆಯ ಎಸೆತದಲ್ಲಿ ಗ್ರೀನ್ ಸಿಕ್ಸರ್ ಹೊಡೆದರು.

  • 30 Apr 2023 10:05 PM (IST)

    ಗ್ರೀನ್ ಹ್ಯಾಟ್ರಿಕ್ ಬೌಂಡರಿ

    ರೋಹಿತ್ ವಿಕೆಟ್ ಬಳಿಕ ಬಂದ ಗ್ರೀನ್ ಬೋಲ್ಟ್ ಎಸೆದ 3ನೇ ಓವರ್​​ನಲ್ಲಿ ಹ್ಯಾಟ್ರಿಕ್ ಬೌಂಡರಿ ಹೊಡೆದರು.

  • 30 Apr 2023 10:01 PM (IST)

    ರೋಹಿತ್ ಔಟ್

    ಸಂದೀಪ್ ಬೌಲ್ ಮಾಡಿದ 2ನೇ ಓವರ್​​ನಲ್ಲಿ ಬೌಂಡರಿ ಬರಲಿಲ್ಲ. ಇದರೊಂದಿಗೆ ಅಂತಿಮ ಎಸೆತದಲ್ಲಿ ರೋಹಿತ್ ಕೂಡ ಕೇವಲ 3 ರನ್​​ಗಳಿಗೆ ವಿಕೆಟ್ ಒಪ್ಪಿಸಿದರು.

  • 30 Apr 2023 09:55 PM (IST)

    ಮುಂಬೈ ಇನ್ನಿಂಗ್ಸ್ ಆರಂಭ

    ಮುಂಬೈ ಇನ್ನಿಂಗ್ಸ್ ಆರಂಭವಾಗಿದ್ದು, ಮೊದಲ ಓವರ್​​ನಲ್ಲೇ ಕಿಶನ್ 2 ಬೌಂಡರಿ ಹೊಡೆದರು. ಮುಂಬೈ 12/0

  • 30 Apr 2023 09:34 PM (IST)

    213 ರನ್ ಟಾರ್ಗೆಟ್

    20ನೇ ಓವರ್​​ನಲ್ಲೂ ಅಬ್ಬರಿಸಿದ ಜೈಸ್ವಾಲ್ 2 ಮತ್ತು 3ನೇ ಎಸೆತವನ್ನು ಬೌಂಡರಿಗಟ್ಟಿ 4ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. 5ನೇ ಎಸೆತದಲ್ಲಿ ಅಶ್ವಿನ್ ಬೌಂಡರಿ ಬಾರಿಸುವುದರೊಂದಿಗೆ ಮುಂಬೈಗೆ 213 ರನ್​ಗಳ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

  • 30 Apr 2023 09:23 PM (IST)

    ಜೈಸ್ವಾಲ್ ಸಿಡಿಲಬ್ಬರ

    ಆರ್ಚರ್ ಬೌಲ್ ಮಾಡಿದ 19ನೇ ಓವರ್​​ನ 4 ಮತ್ತು 5ನೇ ಎಸೆತವನ್ನು ಜೈಸ್ವಾಲ್ ಸಿಕ್ಸರ್​ಗಟ್ಟಿದರು.

  • 30 Apr 2023 09:19 PM (IST)

    ಚೊಚ್ಚಲ ಐಪಿಎಲ್ ಶತಕ ಸಿಡಿಸಿದ ಜೈಸ್ವಾಲ್

    18ನೇ ಓವರ್​​ನ ಕೊನೆಯ 3 ಎಸೆತಗಳಲ್ಲಿ ಬೌಂಡರಿ ಬಾರಿಸಿದ ಜೈಸ್ವಾಲ್ ತಮ್ಮ ಐಪಿಎಲ್ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.

  • 30 Apr 2023 09:15 PM (IST)

    ಜುರೆಲ್ ಔಟ್

    ಮೆರಿಡಿತ್ ಬೌಲ್ ಮಾಡಿದ 18ನೇ ಓವರ್​​ನ ಮೊದಲ ಎಸೆತದಲ್ಲೇ ಜುರೆಲ್ ಡೀಪ್ ಮಿಡ್ ವಿಕೆಟ್​​ನಲ್ಲಿ ಕ್ಯಾಚಿತ್ತು ಔಟಾದರು.

  • 30 Apr 2023 09:13 PM (IST)

    ಶತಕದಂಚಿನಲ್ಲಿ ಯಶಸ್ವಿ

    17ನೇ ಓವರ್​ನ ಕೊನೆಯ ಎಸೆತವನ್ನು ಸಿಕ್ಸರ್​ಗಟಿದ ಯಶಸ್ವಿ 90ರ ಗಡಿ ದಾಟಿದ್ದಾರೆ.

  • 30 Apr 2023 09:11 PM (IST)

    ಹೆಟ್ಮಾಯಿರ್ ಔಟ್

    17ನೇ ಓವರ್​​ನ 2ನೇ ಎಸೆತವನ್ನು ಸಿಕ್ಸರ್​​ಗಟ್ಟಲು ಯತ್ನಿಸಿದ ಹೆಟ್ಮಾಯಿರ್ ಡೀಪ್ ಮಿಡ್ ವಿಕೆಟ್​ನಲ್ಲಿ ಸೂರ್ಯನಿಗೆ ಕ್ಯಾಚಿತ್ತು ಔಟಾದರು.

  • 30 Apr 2023 09:10 PM (IST)

    ರಾಜಸ್ಥಾನ್ 150 ರನ್ ಪೂರ್ಣ

    16ನೇ ಓವರ್​​ನ ಕೊನೆಯ ಎಸೆತವನ್ನು ಲಾಂಗ್​​ ಆನ್​​ನಲ್ಲಿ ಸಿಕ್ಸರ್​ಗಟ್ಟಿದ ಜೈಸ್ವಾಲ್ ರಾಜಸ್ಥಾನ್ ಮೊತ್ತವನ್ನ 150ರ ಗಡಿ ದಾಟಿಸಿದರು.

  • 30 Apr 2023 09:03 PM (IST)

    ಹೋಲ್ಡರ್ ಔಟ್

    ಜೋಫ್ರಾ ಆರ್ಚರ್ ಅವರ ಓವರ್‌ನಲ್ಲಿ ಹೋಲ್ಡರ್ 11 ರನ್ ಗಳಿಸಿ ಔಟಾದರು. ರಾಜಸ್ಥಾನದ ನಾಲ್ಕನೇ ವಿಕೆಟ್‌ ಪತನಗೊಂಡಿದೆ. ರಾಜಸ್ಥಾನ್ ರಾಯಲ್ಸ್ ಸ್ಕೋರ್ 14.1 ಓವರ್‌ಗಳಲ್ಲಿ – 143/4

  • 30 Apr 2023 08:52 PM (IST)

    ಹೊಲ್ಡರ್ ಸಿಕ್ಸ್

    13ನೇ ಓವರ್​​ನ 3ನೇ ಎಸೆತವನ್ನು ಹೊಲ್ಡರ್ ಡೀಪ್ ಸ್ಕ್ವೇರ್​​ ಲೆಗ್​​ನಲ್ಲಿ ಸಿಕ್ಸರ್​ಗಟ್ಟಿದರು. ಕೊನೆಯ ಎಸೆತದಲ್ಲಿ ಜೈಸ್ವಾಲ್ ಬೌಂಡರಿ ಕೂಡ ಹೊಡೆದರು.

  • 30 Apr 2023 08:47 PM (IST)

    ಚಾವ್ಲಾಗೆ ಸಿಕ್ಸರ್

    12ನೇ ಓವರ್ ಬೌಲ್ ಮಾಡಿದ ಚಾವ್ಲಾ 13 ರನ್ ಬಿಟ್ಟುಕೊಟ್ಟರು. ಈ ಓವರ್​​ನಲ್ಲಿ ಜೈಸ್ವಾಲ್ 1 ಸಿಕ್ಸರ್ ಹಾಗೂ 1 ಬೌಂಡರಿ ಹೊಡೆದರು.

  • 30 Apr 2023 08:45 PM (IST)

    ಜೈಸ್ವಾಲ್ ಅಬ್ಬರ

    12ನೇ ಓವರ್​​ನ 3 ಮತ್ತು 4ನೇ ಎಸೆತವನ್ನು ಜೈಸ್ವಾಲ್ ಬೌಂಡರಿಗಟ್ಟಿದರು. ಮೊದಲ ಬೌಂಡರಿ ಥರ್ಡ್​ಮ್ಯಾನ್​​ನಲ್ಲಿ ಬಂದರೆ, 2ನೇ ಬೌಂಡರಿ ಶಾರ್ಟ್​ ಫೈನ್​​ ಲೆಗ್​​ನಲ್ಲಿ ಬಂತು.

  • 30 Apr 2023 08:44 PM (IST)

    ದೇವದತ್ ಪಡಿಕ್ಕಲ್ ಔಟ್

    11ನೇ ಓವರ್‌ನ ಐದನೇ ಎಸೆತದಲ್ಲಿ ಪಿಯೂಷ್ ಚಾವ್ಲಾ ದೇವದತ್ ಪಡಿಕ್ಕಲ್​ರನ್ನು ಕ್ಲೀನ್ ಬೌಲ್ಡ್ ಮಾಡಿದರು.

    ದೇವದತ್ ಪಡಿಕ್ಕಲ್ – 2 ರನ್, 4 ಎಸೆತಗಳು

  • 30 Apr 2023 08:32 PM (IST)

    ಸಂಜು ಔಟ್, 10 ಓವರ್ ಅಂತ್ಯ

    10ನೇ ಓವರ್​​ನ 5ನೇ ಎಸೆತವನ್ನು ಬಿಗ್ ಶಾಟ್ ಆಡಲು ಯತ್ನಿಸಿದ ಸಂಜು ಡೀಪ್ ಮಿಡ್ ವಿಕೆಟ್​​ನಲ್ಲಿ ಕ್ಯಾಚಿತ್ತು ಔಟಾದರು. 10 ಓವರ್ ಅಂತ್ಯಕ್ಕೆ ರಾಜಸ್ಥಾನ್ 97/2

  • 30 Apr 2023 08:31 PM (IST)

    ಸಂಜು ಬೌಂಡರಿ

    9ನೇ ಓವರ್​​ನ 5ನೇ ಎಸೆತವನ್ನು ಸಂಜು ಫೈನ್ ಲೆಗ್​​ ಮೇಲೆ ಬೌಂಡರಿಗಟ್ಟಿದರು.

  • 30 Apr 2023 08:18 PM (IST)

    ಬಟ್ಲರ್ ಔಟ್

    8ನೇ ಓವರ್​​ನ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಲು ಯತ್ನಿಸಿದ ಬಟ್ಲರ್ ಕ್ಯಾಚಿತ್ತು ನಿರ್ಗಮಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿದ್ದವು.

  • 30 Apr 2023 08:09 PM (IST)

    ಪವರ್ ಪ್ಲೇ ಅಂತ್ಯ

    6ನೇ ಓವರ್​​ನ ಕೊನೆಯ ಎಸೆತದಲ್ಲಿ ಜೈಸ್ವಾಲ್ ಭರ್ಜರಿ ಸಿಕ್ಸರ್ ಹೊಡೆದರು.

  • 30 Apr 2023 08:08 PM (IST)

    ಅರ್ಧಶತಕ ಪೂರ್ಣ

    ಮೆರಿಡಿತ್ ಓವರ್​​ನಲ್ಲಿ ಬೌಂಡರಿ ಬಾರಿಸಿದ ಜೈಸ್ವಾಲ್ ರಾಜಸ್ಥಾನ್ ಮೊತ್ತವನ್ನು 50ರ ಗಡಿ ದಾಟಿಸಿದರು. ಈ 5ನೇ ಓವರ್​​ನಲ್ಲಿ ಒಟ್ಟು 3 ಬೌಂಡರಿ ಬಂದವು.

  • 30 Apr 2023 08:07 PM (IST)

    4ನೇ ಓವರ್​ನಲ್ಲಿ 16 ರನ್

    ಜೋಫ್ರಾ ಆರ್ಚರ್ ಅವರ 4ನೇ ಓವರ್‌ನಲ್ಲಿ 2 ಬೌಂಡರಿ ಸೇರಿದಂತೆ ಒಟ್ಟು 16 ರನ್ ಬಂದವು. ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ 10 ರನ್ ಹಾಗೂ ಯಶಸ್ವಿ ಜೈಸ್ವಾಲ್ 19 ರನ್ ಗಳಿಸಿ ಆಡುತ್ತಿದ್ದಾರೆ.

  • 30 Apr 2023 08:03 PM (IST)

    ಜೈಸ್ವಾಲ್ ಬೌಂಡರಿ

    ಗ್ರೀನ್‌ ಬೌಲ್ ಮಾಡಿದ 3ನೇ ಓವರ್‌ನ ಅಂತಿಮ ಎಸೆತದಲ್ಲಿ ಬೌಂಡರಿ ಬಂತು. ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ 1 ರನ್ ಹಾಗೂ ಯಶ್ವಿ ಜೈಸ್ವಾಲ್ 18 ರನ್ ಗಳಿಸಿ ಆಡುತ್ತಿದ್ದಾರೆ. 3 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 26/0

  • 30 Apr 2023 07:54 PM (IST)

    ಜೈಸ್ವಾಲ್ ಸಿಕ್ಸರ್

    ಜೋಫ್ರಾ ಆರ್ಚರ್ ಅವರ ಓವರ್‌ನಲ್ಲಿ 11 ರನ್ ಬಂತು. ಈ ಓವರ್​​ನ 2ನೇ ಎಸೆತದಲ್ಲಿ ಜೈಸ್ವಾಲ್ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಬಾಲ್ ನೋ ಬಾಲ್ ಕೂಡ ಆಗಿತ್ತು. ಆದರೆ ಫ್ರೀ ಹಿಟ್​​ನಲ್ಲಿ ಯಾವುದೇ ಬಿಗ್ ಶಾಟ್ ಬರಲಿಲ್ಲ. 2 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ – 19/0

  • 30 Apr 2023 07:38 PM (IST)

    1000ನೇ ಪಂದ್ಯ ಆರಂಭ

    ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ನಡುವಿನ ಈ ಪಂದ್ಯ ಐಪಿಎಲ್‌ನ 1000 ನೇ ಪಂದ್ಯವಾಗಿದೆ. ರಾಜಸ್ಥಾನ್ ಪರ ಜೈಸ್ವಾಲ್ ಹಾಗೂ ಬಟ್ಲರ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಓವರ್​​ನಲ್ಲಿ ಜೈಸ್ವಾಲ್ ಭರ್ಜರಿ ಸಿಕ್ಸರ್ ಬಾರಿಸಿದರು.

  • 30 Apr 2023 07:37 PM (IST)

    1000ನೇ ಪಂದ್ಯದ ಸಂಭ್ರಮ

    ಐಪಿಎಲ್‌ನ 1000ನೇ ಪಂದ್ಯಕ್ಕೂ ಮುನ್ನ ಬಿಸಿಸಿಐ ಸಚಿನ್ ತೆಂಡೂಲ್ಕರ್ ಮತ್ತು ರಾಜಸ್ಥಾನ್ ರಾಯಲ್ಸ್‌ನ ಕುಮಾರ ಸಂಗಕ್ಕರ್ ಅವರನ್ನು ಗೌರವಿಸಿತು. ಇದಾದ ಬಳಿಕ ಮೈದಾನದಲ್ಲಿ ಪಟಾಕಿ ಸಿಡಿಸಿ, ವರ್ಣರಂಜಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

  • 30 Apr 2023 07:26 PM (IST)

    ಮುಂಬೈ ಇಂಡಿಯನ್ಸ್

    ಕ್ಯಾಮೆರಾನ್ ಗ್ರೀನ್, ಇಶಾನ್ ಕಿಶನ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಕುಮಾರ್ ಕಾರ್ತಿಕೇಯ, ರಿಲೆ ಮೆರೆಡಿತ್, ಅರ್ಷದ್ ಖಾನ್, ಟಿಮ್ ಡೇವಿಡ್, ತಿಲಕ್ ವರ್ಮಾ

  • 30 Apr 2023 07:25 PM (IST)

    ರಾಜಸ್ಥಾನ್ ರಾಯಲ್ಸ್

    ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ದೇವದತ್ ಪಡಿಕಲ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್

  • 30 Apr 2023 07:24 PM (IST)

    ಕೊನೆಯ ಎಸೆತದಲ್ಲಿ ಗೆದ್ದ ಪಂಜಾಬ್

    20ನೇ ಓವರ್​​ನಲ್ಲಿ ಯಾವುದೇ ಬೌಂಡರಿ ಬರದಿದ್ದರು. ಕೇವಲ ಡಬಲ್ಸ್ ಹಾಗೂ ತ್ರಿಬಲ್ಸ್​​ನಿಂದಲೇ ಪಂಜಾಬ್ ತಂಡ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿದೆ. ಪಂಜಾಬ್ ಗೆಲುವಿನಲ್ಲಿ ರಜಾ ಹೀರೋ ಎನಿಸಿಕೊಂಡರು.

  • 30 Apr 2023 07:16 PM (IST)

    6 ಎಸೆತದಲ್ಲಿ 9 ರನ್ ಬೇಕು

    ದೇಶಪಾಂಡೆ ಬೌಲ್ ಮಾಡಿದ 19ನೇ ಓವರ್​​ನಲ್ಲಿ 2 ಬೌಂಡರಿ ಯೊಂದಿಗೆ 13 ರನ್ ಬಂದವು. ಅಲ್ಲದೆ ಈ ಓವರ್​​ನಲ್ಲಿ ಜಿತೇಶ್ ಕೂಡ ಸಿಕ್ಸರ್ ಬಾರಿಸುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು.

  • 30 Apr 2023 07:05 PM (IST)

    ಟಾಸ್ ಗೆದ್ದ ರಾಜಸ್ಥಾನ್

    ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • Published On - Apr 30,2023 7:02 PM

    Follow us