Cricket World Cup 2023 Schedule: ಏಕದಿನ ವಿಶ್ವಕಪ್ ಹೊಸ ವೇಳಾಪಟ್ಟಿ ಪ್ರಕಟ

| Updated By: ಝಾಹಿರ್ ಯೂಸುಫ್

Updated on: Aug 16, 2023 | 9:21 PM

Schedule for Cricket World Cup 2023: ಮೂರು ನಾಕೌಟ್​ ಪಂದ್ಯಗಳು ಡೇ-ನೈಟ್​ನಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಯಿಂದ ಶುರುವಾಗಲಿದೆ ಎಂದು ಐಸಿಸಿ ತಿಳಿಸಿದೆ.

Cricket World Cup 2023 Schedule: ಏಕದಿನ ವಿಶ್ವಕಪ್ ಹೊಸ ವೇಳಾಪಟ್ಟಿ ಪ್ರಕಟ
ODI World Cup 2023
Follow us on

Cricket World Cup 2023 Schedule: ಭಾರತದಲ್ಲಿ ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗಾಗಿ ನವೀಕರಿಸಿದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಅರ್ಹತಾ ಸುತ್ತಿನಿಂದ ಶ್ರೀಲಂಕಾ ಮತ್ತು ನೆದರ್​ಲ್ಯಾಂಡ್ಸ್ ತಂಡಗಳು ವಿಶ್ವಕಪ್​ಗೆ ಅರ್ಹತೆ ಪಡೆದ ಹಿನ್ನಲೆಯಲ್ಲಿ ವೇಳಾಪಟ್ಟಿಯನ್ನು ನವೀಕರಿಸಲಾಗಿದೆ. ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ವೇಳಾಪಟ್ಟಿಯಲ್ಲಿ ಕ್ವಾಲಿಫೈಯರ್-1 ಹಾಗೂ ಕ್ವಾಲಿಫೈಯರ್-2 ಎಂದು ನಮೂದಿಸಲಾಗಿತ್ತು.

ಇದೀಗ ಕ್ವಾಲಿಫೈಯರ್ 1 ತಂಡವಾಗಿ ಶ್ರೀಲಂಕಾ ಕಾಣಿಸಿಕೊಂಡಿದ್ದು, ಕ್ವಾಲಿಫೈಯರ್-2 ಸ್ಥಾನದಲ್ಲಿ ನೆದರ್​ಲ್ಯಾಂಡ್ಸ್​ ಕಣಕ್ಕಿಳಿಯಲಿದೆ. ಅದರಂತೆ ಟೀಮ್ ಇಂಡಿಯಾ ನವೆಂಬರ್ 2 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.

ಹಾಗೆಯೇ ನವೆಂಬರ್ 12 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್​ಲ್ಯಾಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಈ ಎರಡು ತಂಡಗಳ ಸೇರ್ಪಡೆಯ ಹೊರತಾಗಿ ಇನ್ನುಳಿದಂತೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಅಕ್ಟೋಬರ್​​ನಲ್ಲಿ ಕ್ರಿಕೆಟ್ ಕದನ ಶುರು:

ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದ್ದು, ಅಹಮದಾಬಾದ್​ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡವು ನ್ಯೂಝಿಲೆಂಡ್ ಅನ್ನು ಎದುರಿಸಲಿದೆ. ಇನ್ನು ಟೀಮ್ ಇಂಡಿಯಾದ ವಿಶ್ವಕಪ್ ಅಭಿಯಾನ ಅಕ್ಟೋಬರ್ 8 ರಿಂದ ಆರಂಭವಾಗಲಿದ್ದು, ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ತನ್ನ ಮೊದಲ​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ.

ಬದಲಾದ ವೇಳಾಪಟ್ಟಿ ವಿವರಗಳು:

ಇನ್ನು ಮೊದಲ ಸೆಮಿಫೈನಲ್ ಪಂದ್ಯವು ನವೆಂಬರ್ 15 ಬುಧವಾರ ಮುಂಬೈನಲ್ಲಿ ನಡೆದರೆ, ಎರಡನೇ ಸೆಮಿಫೈನಲ್ ಮರುದಿನ (ನವೆಂಬರ್ 16) ಕೋಲ್ಕತ್ತಾದಲ್ಲಿ ನಡೆಯಲಿದೆ. ಈ ಎರಡೂ ಸೆಮಿಫೈನಲ್‌ಗಳಿಗೂ ಮೀಸಲು ದಿನವನ್ನು ಸಹ ಘೋಷಿಸಲಾಗಿದೆ. ಅಂದರೆ ಮಳೆಯ ಕಾರಣ ಅಥವಾ ಇನ್ನಿತರ ಕಾರಣಗಳಿಂದ ಪಂದ್ಯ ನಡೆಯದಿದ್ದರೆ ಮರುದಿನ ಆಯೋಜಿಸಲಾಗುತ್ತದೆ.

ಹಾಗೆಯೇ ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ನಡೆಯಲಿದೆ. ಇನ್ನು ಫೈನಲ್ ಪಂದ್ಯಕ್ಕೂ ಮೀಸಲು ದಿನ ಇರಿಸಲಾಗಿದ್ದು, ನವೆಂಬರ್ 19 ರಂದು ಪಂದ್ಯಕ್ಕೆ ಯಾವುದಾದರು ರೀತಿಯಲ್ಲಿ ಅಡಚಣೆ ಉಂಟಾದರೆ ನವೆಂಬರ್ 20 ಪಂದ್ಯವನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ನಲ್ಲಿನ ಟೀಮ್ ಇಂಡಿಯಾದ 9 ಎದುರಾಳಿಗಳು ಇವರೇ..!

ಅಂದಹಾಗೆ ಈ ಮೂರು ನಾಕೌಟ್​ ಪಂದ್ಯಗಳು ಡೇ-ನೈಟ್​ನಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಯಿಂದ ಶುರುವಾಗಲಿದೆ ಎಂದು ಐಸಿಸಿ ತಿಳಿಸಿದೆ.

 

 

Published On - 5:46 pm, Thu, 13 July 23