TNPL 2023: ಚಾಂಪಿಯನ್ಸ್ ತಂಡಕ್ಕೆ ಸಿಕ್ಕ ಪ್ರಶಸ್ತಿ ಮೊತ್ತ ಎಷ್ಟು ಗೊತ್ತಾ?

TNPL 2023: ಫೈನಲ್ ಪಂದ್ಯದಲ್ಲಿ 104 ರನ್​ಗಳ ಅಮೋಘ ಗೆಲುವು ಸಾಧಿಸಿರುವ ಲೈಕಾ ಕೋವೈ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

TNPL 2023: ಚಾಂಪಿಯನ್ಸ್ ತಂಡಕ್ಕೆ ಸಿಕ್ಕ ಪ್ರಶಸ್ತಿ ಮೊತ್ತ ಎಷ್ಟು ಗೊತ್ತಾ?
TNPL 2023
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 13, 2023 | 3:43 PM

TNPL 2023: ತಮಿಳುನಾಡು ಪ್ರೀಮಿಯರ್ ಲೀಗ್ 2023 ರ ಸೀಸನ್​ಗೆ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ಲೈಕಾ ಕೋವೈ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟಕ್ಕೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲೈಕಾ ಕೋವೈ ಕಿಂಗ್ಸ್ ತಂಡವು 5 ವಿಕೆಟ್ ನಷ್ಟಕ್ಕೆ 205 ರನ್​ ಪೇರಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ನೆಲ್ಲೈ ರಾಯಲ್ ಕಿಂಗ್ಸ್ ತಂಡವು 15 ಓವರ್​ಗಳಲ್ಲಿ 101 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 104 ರನ್​ಗಳ ಅಮೋಘ ಗೆಲುವು ಸಾಧಿಸಿದ ಲೈಕಾ ಕೋವೈ ಕಿಂಗ್ಸ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ಈ ಟೂರ್ನಿಯ ಸಂಪೂರ್ಣ ಬಹುಮಾನ ಮೊತ್ತ ಈ ಕೆಳಗಿನಂತಿದೆ:

  • # ಚಾಂಪಿಯನ್ಸ್: ಲೈಕಾ ಕೋವೈ ಕಿಂಗ್ಸ್ – 50 ಲಕ್ಷ ರೂ.
  • # ರನ್ನರ್ ಅಪ್: ನೆಲ್ಲೈ ರಾಯಲ್ ಕಿಂಗ್ಸ್ – 30 ಲಕ್ಷ ರೂ.
  • # ಪ್ಲೇಯರ್ ಆಫ್ ದಿ ಮ್ಯಾಚ್ (ಫೈನಲ್): ಜಾತವೇಧ್ ಸುಬ್ರಹ್ಮಣ್ಯನ್ (LKK) – ರೂ 10,000
  • # ಸಿಕ್ಸರ್ ಕಿಂಗ್ (ಫೈನಲ್): ಸುರೇಶ್ ಕುಮಾರ್ (LKK) – ರೂ 50,000
  • # ಗರಿಷ್ಠ ಬೌಂಡರಿಗಳು (ಫೈನಲ್): ಅತೀಕ್ ಉರ್ ರಹಮಾನ್ (NRK) – ರೂ 10,000
  • # ಸ್ಟೈಲಿಶ್ ಪ್ಲೇಯರ್ (ಫೈನಲ್): ಅತೀಕ್ ಉರ್ ರೆಹಮಾನ್ (NRK) – ರೂ 50,000
  • # ಪವರ್ ಪ್ಲೇಯರ್ (ಫೈನಲ್): ಜಾತವೇಧ್ ಸುಬ್ರಹ್ಮಣ್ಯನ್ (LKK) – ರೂ 10,000
  • # ಕ್ಯಾಚ್ ಆಫ್ ದಿ ಮ್ಯಾಚ್ (ಫೈನಲ್): ಆರ್ ದಿವಾಕರ್ (LKK) – ರೂ 10,000
  • # ಫೆಂಟಾಸ್ಟಿಕ್ 50 (ಫೈನಲ್): ಜೆ ಸುರೇಶ್ ಕುಮಾರ್ (LKK) – ರೂ 10,000
  • # ಅತ್ಯಂತ ಮೌಲ್ಯಯುತ ಆಟಗಾರ: ಜಿ ಅಜಿತೇಶ್ (NRK) – ರೂ 1 ಲಕ್ಷ
  • # ಅತಿ ಹೆಚ್ಚು ರನ್‌ಗಳು (ಆರೆಂಜ್ ಕ್ಯಾಪ್): ಜಿ ಅಜಿತೇಶ್ (NRK) – 10 ಇನ್ನಿಂಗ್ಸ್‌ಗಳಲ್ಲಿ 385 ರನ್‌ಗಳು
  • # ಅತಿ ಹೆಚ್ಚು ವಿಕೆಟ್ (ಪರ್ಪಲ್ ಕ್ಯಾಪ್): ಶಾರುಖ್ ಖಾನ್ (LKK) – 9 ಇನ್ನಿಂಗ್ಸ್‌ಗಳಲ್ಲಿ 17 ವಿಕೆಟ್
  • # ಕ್ಯಾಚ್ ಆಫ್ ದಿ ಟೂರ್ನಮೆಂಟ್: ಮುರುಗನ್ ಅಶ್ವಿನ್ (SMP) – 50,000 ರೂ.

ಲೈಕಾ ಕೋವೈ ಕಿಂಗ್ಸ್ ಪ್ಲೇಯಿಂಗ್ 11: ಎಸ್ ಸುಜಯ್ , ಜೆ ಸುರೇಶ್ ಕುಮಾರ್ (ವಿಕೆಟ್ ಕೀಪರ್) , ಬಿ ಸಚಿನ್ , ಯು ಮುಕಿಲೇಶ್ , ಶಾರುಖ್ ಖಾನ್ (ನಾಯಕ) , ರಾಮ್ ಅರವಿಂದ್ , ಅತೀಕ್ ಉರ್ ರೆಹಮಾನ್ , ಎಂ ಮೊಹಮ್ಮದ್ , ಮಣಿಮಾರನ್ ಸಿದ್ಧಾರ್ಥ್ , ಜಾತವೇಧ್ ಸುಬ್ರಮಣ್ಯನ್ , ವಲ್ಲಿಯಪ್ಪನ್ ಯುಧೀಶ್ವರನ್.

ಇದನ್ನೂ ಓದಿ: Team India: ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಟಾಪ್-5 ಬೌಲರ್​ಗಳ ಪಟ್ಟಿ ಇಲ್ಲಿದೆ

ನೆಲ್ಲೈ ರಾಯಲ್ ಕಿಂಗ್ಸ್​ ಪ್ಲೇಯಿಂಗ್ 11: ಅರುಣ್ ಕಾರ್ತಿಕ್ (ನಾಯಕ) , ಅಜಿತೇಶ್ ಗುರುಸ್ವಾಮಿ , ನಿಧಿಶ್ ರಾಜಗೋಪಾಲ್ , ರಿತಿಕ್ ಈಶ್ವರನ್ (ವಿಕೆಟ್ ಕೀಪರ್) , ಲಕ್ಷ್ಮೇಶ ಸೂರ್ಯಪ್ರಕಾಶ್ , ಸೋನು ಯಾದವ್ , ಎನ್​ಎಸ್ ಹರೀಶ್ , ಎಂ ಪೊಯಿಮುಝಿ, ಮೋಹನ್ ಪ್ರಸಾದ್ , ಸಂದೀಪ್ ವಾರಿಯರ್ , ಲಕ್ಷಯ್ ಜೈನ್.

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್