ICC T20 ವಿಶ್ವಕಪ್ 2021 ರಲ್ಲಿ, ನಮೀಬಿಯಾ ತನ್ನ ಸೂಪರ್-12 ಸುತ್ತಿನ ಮೊದಲ ಪಂದ್ಯವನ್ನು ಗೆದ್ದು ಬೀಗಿದೆ. ನಮೀಬಿಯಾ 4 ವಿಕೆಟ್‌ಗಳಿಂದ ಸ್ಕಾಟ್ಲೆಂಡ್ ಅನ್ನು ಸೋಲಿಸುವ ಮೂಲಕ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿದೆ. ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು ಮತ್ತು ಅವರ ಬೌಲರ್‌ಗಳು ಸ್ಕಾಟ್ಲೆಂಡ್ ತಂಡವನ್ನು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 109 ರನ್‌ಗಳಿಗೆ ಸೀಮಿತಗೊಳಿಸಿದರು. ನಮೀಬಿಯಾ ಪರ ರೂಬೆನ್ ಟ್ರಂಪೆಲ್ಮನ್ 3 ವಿಕೆಟ್ ಪಡೆದರು. ಇದಕ್ಕುತ್ತರವಾಗಿ ನಮೀಬಿಯಾ ತಂಡವು ಉತ್ತಮ ಆರಂಭವನ್ನು ನೀಡಿತು. ಆದರೆ ಮಧ್ಯಮ ಓವರ್‌ಗಳಲ್ಲಿ ಕೆಲವು ಹಿನ್ನಡೆಗಳು ತಂಡವನ್ನು ಸಂಕಷ್ಟಕ್ಕೆ ದೂಡಿದವು. ಆದರೆ, ಜೆಜೆ ಸ್ಮಿತ್ 23 ಎಸೆತಗಳಲ್ಲಿ 32 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಸ್ಮಿತ್ 20ನೇ ಓವರ್ ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಈ ಐತಿಹಾಸಿಕ ಜಯ ಸಾಧಿಸಿದರು.
ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ ನಮೀಬಿಯಾ ತಂಡಕ್ಕೆ ಇದು ಸತತ ಮೂರನೇ ಜಯವಾಗಿದೆ. ಎರಾಸ್ಮಸ್ ತಂಡವು ಮೊದಲ ಸುತ್ತಿನಲ್ಲಿ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಎರಡನೇ ಸುತ್ತಿಗೆ ಪ್ರವೇಶಿಸಿತು ಮತ್ತು ಇಲ್ಲಿಯೂ ತನ್ನ ಮೊದಲ ಪಂದ್ಯವನ್ನು ಗೆದ್ದಿತು. ಈ ಗೆಲುವಿನೊಂದಿಗೆ ತಂಡಕ್ಕೆ 2 ಅಂಕ ಲಭಿಸಿದ್ದು, ಗ್ರೂಪ್ 2ರಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಪಾಕಿಸ್ತಾನದ ನಂತರ ಎರಡನೇ ಸ್ಥಾನ ಪಡೆದಿದೆ.ಇದೇ ವೇಳೆಗೆ ಸ್ಕಾಟ್ಲೆಂಡ್ ಸತತ ಎರಡನೇ ಸೋಲನ್ನು ಎದುರಿಸಬೇಕಾಗಿದೆ.
ನಮೀಬಿಯಾ ಐತಿಹಾಸಿಕ ಜಯ ದಾಖಲಿಸಿದೆ. 20ನೇ ಓವರ್‌ನ ಮೊದಲ ಎಸೆತದಲ್ಲಿ ಜೆಜೆ ಸ್ಮಿತ್ ಸಿಕ್ಸರ್ ಬಾರಿಸಿ ತಂಡಕ್ಕೆ 4 ವಿಕೆಟ್‌ಗಳ ಜಯ ತಂದುಕೊಟ್ಟರು. ಸ್ಮಿತ್ 32 ರನ್ ಗಳಿಸಿ ಅಜೇಯರಾಗಿ ಉಳಿದರು.
ಗೆಲುವಿಗೆ ಒಂದು ರನ್ ಅಂತರದಲ್ಲಿ ನಮೀಬಿಯಾ ಮತ್ತೊಂದು ವಿಕೆಟ್ ಕಳೆದುಕೊಂಡಿತು. 19 ನೇ ಓವರ್‌ನಲ್ಲಿ, ಸ್ಕೋರ್ 109 ಕ್ಕೆರಿದೆ. ಆದರೆ ಯಾನ್ ಫ್ರೈಲಿಂಕ್ ಫುಲ್ ಟಾಸ್ ಬಾಲ್ ಅನ್ನು ನೇರವಾಗಿ ಶಾರ್ಟ್ ಮಿಡ್‌ವಿಕೆಟ್ ಫೀಲ್ಡರ್ ಕೈಗೆ ಕ್ಯಾಚ್ ನೀಡಿದರು.
ನಮೀಬಿಯಾ ಸುಲಭ ಗೆಲುವಿಗೆ ಕೆಲವೇ ಹೆಜ್ಜೆಗಳ ಅಂತರದಲ್ಲಿದ್ದು ತಂಡ 100 ರನ್ ಪೂರೈಸಿದ್ದರೂ 5ನೇ ವಿಕೆಟ್ ಪತನವಾಗಿದೆ. ವೀಸಾ ಅವರ 18ನೇ ಓವರ್‌ನಲ್ಲಿ ಡೇವಿಡ್ ಮರಳಿದ್ದಾರೆ. ನಮೀಬಿಯಾ- 102/5
ನಮೀಬಿಯಾ ಗೆಲುವಿಗೆ ಸಮೀಪದಲ್ಲಿದ್ದು, ಬೇಗ ಪಂದ್ಯ ಮುಗಿಸಲು ಸ್ಮಿಟ್ ಹೊಡಿಬಡಿ ಆಟಕ್ಕೆ ಮುಂದಾಗಿದ್ದಾರೆ. ಇದರ ಫಲವಾಗಿ ಸ್ಮಿಟ್ ಗ್ರೇವ್ಸ್ ಬೌಲಿಂಗ್ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು.
ಸ್ಕಾಟ್ಲೆಂಡ್‌ನ ಬೌಲರ್‌ಗಳು ಕೂಡ ತಮ್ಮ ಶಕ್ತಿ ಪ್ರದರ್ಶಿಸಿ ನಮೀಬಿಯಾ ವಿಕೆಟ್‌ಗಳನ್ನು ಕಬಳಿಸುತ್ತಿದ್ದಾರೆ. 12 ಮತ್ತು 13ನೇ ಓವರ್‌ಗಳಲ್ಲಿ ತಂಡ ಸತತ ಎರಡು ವಿಕೆಟ್ ಕಳೆದುಕೊಂಡಿತು. ಮೊದಲು ನಾಯಕ ಎರಾಸ್ಮಸ್ (4) ಔಟಾದರು ಮತ್ತು ನಂತರ ಕ್ರೇಗ್ ವಿಲಿಯಮ್ಸ್ (23) ಕೂಡ ಔಟಾದರು. 13 ಓವರ್‌ಗಳು, ನಮೀಬಿಯಾ – 71/4
ನಮೀಬಿಯಾ ಎರಡನೇ ವಿಕೆಟ್ ಕಳೆದುಕೊಂಡಿತು, ಜೇನ್ ಗ್ರೀನ್ (9) ಇನ್ನಿಂಗ್ಸ್ ಅಂತ್ಯಗೊಂಡಿದೆ. ಗ್ರೀನ್ ಕ್ರಿಸ್ ಗ್ರೀವ್ಸ್ 10ನೇ ಓವರ್‌ನ ಮೊದಲ ಎಸೆತದಲ್ಲಿ ಪೆವಿಲಿಯನ್‌ಗೆ ಮರಳಿದರು.
ನಮೀಬಿಯಾ ಸುಲಭ ಗೆಲುವಿನತ್ತ ಸಾಗುತ್ತಿದೆ. ತಂಡ 9 ಓವರ್‌ಗಳಲ್ಲಿ 50 ರನ್ ಪೂರೈಸಿದ್ದು, 1 ವಿಕೆಟ್ ಮಾತ್ರ ಬಿದ್ದಿದೆ. 11 ಓವರ್‌ಗಳಲ್ಲಿ ತಂಡಕ್ಕೆ 60 ರನ್‌ಗಳ ಅಗತ್ಯವಿದೆ.
ಜೇನ್ ಗ್ರೀನ್ ಫೋರ್! ಗ್ರೀನ್ ಚೇಸ್‌ನ ಮೊದಲ ಬೌಂಡರಿ ಬಾರಿಸಿದ್ದಾರೆ. ಗ್ರೇವ್ಸ್ ಎಸೆತವನ್ನು ಫೈನ್ ಲೆಗ್ ಕಡೆಗೆ ಸ್ಕೂಪ್ ಮಾಡಿ ಬೌಂಡರಿ ಪಡೆದರು.
ಸ್ಕಾಟ್ಲೆಂಡ್ ತನ್ನ ಮೊದಲ ಯಶಸ್ಸನ್ನು ಪಡೆದುಕೊಂಡಿದೆ. ಆರನೇ ಓವರ್‌ನಲ್ಲಿ ಆರಂಭಿಕ ಮೈಕಲ್ ವ್ಯಾನ್ ಲಿಂಗೆನ್ (18) ಔಟಾದ ನಂತರ ಮರಳಿದರು. ಸಫಾಯನ್ ಷರೀಫ್ ಅವರನ್ನು ಬಲಿಪಶು ಮಾಡಿದರು.
5 ಓವರ್ ಮುಕ್ತಾಯಕ್ಕೆ ನಮೀಬಿಯಾ 26 ರನ್ ಗಳಿಸಿದೆ. ಸ್ಕಾಟ್ಲೆಂಡ್ ಟೈಟ್ ಬೌಲಿಂಗ್ ಮುಂದೆ ನಮೀಬಿಯಾ ಬ್ಯಾಟರ್ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ. 5ನೇ ಓವರ್‌ನಲ್ಲಿ ಲಿಂಗೆನ್ 2 ಬೌಂಡರಿ ಗಳಿಸಿದರು.
ನಮೀಬಿಯಾ ತನ್ನ ಇನ್ನಿಂಗ್ಸ್ ಆರಂಭಿಸಿದೆ. ತಂಡದ ಓಪನರ್ಗಳು ನಿಧಾನಗತಿಯ ಬ್ಯಾಟಿಂಗ್ ಮೊರೆ ಹೋಗಿದ್ದಾರೆ. ಮೊದಲ ಓವರ್‌ನಲ್ಲಿ 3 ರನ್‌ಗಳು ಹರಿದುಬಂದವು.
ಬಲಿಷ್ಠ ಬೌಲಿಂಗ್ನಿಂದಾಗಿ ನಮೀಬಿಯಾ ಸ್ಕಾಟ್ಲೆಂಡ್ ತಂಡವನ್ನು 20 ಓವರ್‌ಗಳಲ್ಲಿ ಕೇವಲ 109 ರನ್‌ಗಳಿಗೆ ಸೀಮಿತಗೊಳಿಸಿತು. ಸ್ಕಾಟ್ಲೆಂಡ್ ಪರ ಮೈಕಲ್ ಲೀಸ್ಕ್ 27 ಎಸೆತಗಳಲ್ಲಿ ಗರಿಷ್ಠ 44 ರನ್ ಗಳಿಸಿದರು. ಅದೇ ಸಮಯದಲ್ಲಿ, ನಮೀಬಿಯಾ ಪರ ರೂಬೆನ್ ಟ್ರಂಪೆಲ್ಮನ್ 3 ವಿಕೆಟ್ ಪಡೆದರು.
ಸ್ಕಾಟ್ಲೆಂಡ್ 100 ರನ್ ಪೂರೈಸಿದೆ, ಆದರೆ ತಂಡದ 7 ವಿಕೆಟ್‌ಗಳು ಸಹ ಬಿದ್ದವು ಮತ್ತು ಈಗ ಕೆಲವೇ ಎಸೆತಗಳು ಉಳಿದಿವೆ. 19ನೇ ಓವರ್‌ನ ಮೊದಲ ಎಸೆತದಲ್ಲಿ ಮಾರ್ಕ್ ವ್ಯಾಟ್ ಔಟಾದರು. ಅಲ್ಲಿಯವರೆಗೆ ಸ್ಕಾಟ್ಲೆಂಡ್ ಸ್ಕೋರ್ ಕೇವಲ 99 ರನ್ ಆಗಿತ್ತು.
17 ಓವರ್‌ಗಳು ಪೂರ್ಣಗೊಂಡಿವೆ, ಆದರೆ ಸ್ಕಾಟ್ಲೆಂಡ್‌ನ 100 ರನ್‌ಗಳು ಪೂರ್ಣಗೊಂಡಿಲ್ಲ. ಬದಲಿಗೆ ತಂಡ ಆರನೇ ವಿಕೆಟ್ ಕಳೆದುಕೊಂಡಿದೆ. ನೇವ್ ಮೈಕೆಲ್ ಲೀಸ್ಕ್ ತಂಡಕ್ಕೆ ಅತಿ ವೇಗದ ಮತ್ತು ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಔಟ್ ಆಗಿದ್ದಾರೆ. ಅವರು ಸ್ಮಿತ್ಗೆ ಬಲಿಯಾದರು.
42 ರನ್ಗಳಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಲಿಸ್ಕ್ 15ನೇ ಓವರ್‌ನ 5ನೇ ಎಸೆತದಲ್ಲಿ ಉತ್ತಮ ಬೌಂಡರಿ ಬಾರಿಸಿದರು. ಈ ಮೂಲಕ ತಂಡದ ಮೊತ್ತ 92ಕ್ಕೇರಿದೆ.
ಲೀಸ್ಕ್ ಅವರ ಅದ್ಭುತ ಬ್ಯಾಟಿಂಗ್ನಿಂದಾಗಿ ಸ್ಕಾಟ್ಲೆಂಡ್ ತಂಡ ತನ್ನ 15 ಓವರ್ಗಳ ಇನ್ನಿಂಗ್ಸ್ನಲ್ಲಿ 84 ರನ್ ಗಳಿಸಿದೆ. ಲೀಸ್ಕ್ 23 ಎಸೆತಳಲ್ಲಿ 38 ರನ್ ಗಳಿಸಿದರೆ ಗ್ರೇವ್ಸ್ 16 ರನ್ ಗಳಿಸಿ ಉತ್ತಮ ಸಾಥ್ ನೀಡುತ್ತಿದ್ದಾರೆ.
ಸ್ಕಾಟ್ಲೆಂಡ್ ಹೇಗೋ 50 ರನ್ ಪೂರೈಸಿತು, ಆದರೆ 12 ನೇ ಓವರ್‌ನಲ್ಲಿ ಐದನೇ ವಿಕೆಟ್ ಕೂಡ ಪತನವಾಯಿತು. ಆರಂಭಿಕರಾಗಿ ಬಂದ ಮ್ಯಾಥ್ಯೂ ಕ್ರಾಸ್ (19) 12ನೇ ಓವರ್‌ನ ಮೊದಲ ಎಸೆತದಲ್ಲಿ ಯಾನ್ ಫ್ರೀಲಿಂಕ್ಗೆ ಬಲಿಯಾದರು. ಸ್ಕಾಟ್ಲೆಂಡ್ – 12 ಓವರ್‌ಗಳಲ್ಲಿ 58/5
ರೂಬೆನ್ ಟ್ರಂಪೆಲ್‌ಮನ್ ಅವರು ಪಂದ್ಯದ ಮೊದಲ ಓವರ್‌ನಲ್ಲಿ 3 ವಿಕೆಟ್‌ಗಳನ್ನು ಪಡೆದರು ಮತ್ತು ಸ್ಕಾಟ್‌ಲೆಂಡ್‌ನ್ನು ಆಫ್‌ನಿಂದಲೇ ಹಿಮ್ಮೆಟ್ಟಿಸಿದರು. ನಮೀಬಿಯಾ ಬೌಲರ್‌ಗಳು ಒತ್ತಡವನ್ನು ಹೇರಿದ್ದಲ್ಲದೆ ಡೇವಿಡ್ ವೈಸ್ ಕೂಡ ಪವರ್‌ಪ್ಲೇ ಒಳಗೆ ವಿಕೆಟ್ ಪಡೆದರು. ಅಲ್ಲಿಂದೀಚೆಗೆ, ಮ್ಯಾಥ್ಯೂ ಕ್ರಾಸ್ ಮತ್ತು ಮೈಕೆಲ್ ಲೀಸ್ಕ್ ಕೆಲವು ದುರಸ್ತಿ ಕಾರ್ಯಗಳನ್ನು ಮಾಡಿದ್ದಾರೆ ಮತ್ತು ಅವರು ತಮ್ಮ ತಂಡವನ್ನು ಇಲ್ಲಿಂದ ಯೋಗ್ಯ ಮೊತ್ತಕ್ಕೆ ತರಲು ನೋಡುತ್ತಿದ್ದಾರೆ.
10 ಓವರ್ಗಳ ಇನ್ನಿಂಗ್ಸ್ ಮುಗಿಸಿರುವ ಸ್ಕಾಟ್ಲೆಂಡ್ ತನ್ನ ಪ್ರಮುಖ 4 ವಿಕೆಟ್ ಕಳೆದುಕೊಂಡು 43 ರನ್ ಗಳಿಸಿದೆ. ನಮೀಬಿಯಾ ಬೌಲರ್ಗಳ ಕರಾರುವಕ್ಕಾದ ದಾಳಿಗೆ ಸ್ಕಾಟ್ಲೆಂಡ್ ಬ್ಯಾಟರ್ಗಳ ಬಳಿ ಉತ್ತರವೇ ಇಲ್ಲದಂತ್ತಾಗಿದೆ.
ಡೇವಿಡ್ ವೈಸ್ ಟು ಕ್ರೇಗ್ ವ್ಯಾಲೇಸ್, ಔಟ್! ಎಲ್ಬಿಡಬ್ಲ್ಯೂ! ಡೇವಿಡ್ ವೈಸ್ ತಮ್ಮ ಮೊದಲ ಓವರ್‌ನಲ್ಲಿ ವಿಕೆಟ್ ಪಡೆಯುವ ಮೂಲಕ ಸ್ಕಾಟ್ಲೆಂಡ್‌ಗೆ ಮತ್ತೊಂದು ಆಘಾತ ನೀಡಿದ್ದಾರೆ. ಪವರ್‌ಪ್ಲೇ ಒಳಗೆ ಸ್ಕಾಟ್ಲೆಂಡ್ ತನ್ನ ನಾಲ್ಕನೇ ವಿಕೆಟ್ ಅನ್ನು ಕಳೆದುಕೊಂಡಿತು.
ಡೇವಿಡ್ ವೈಸ್ ಟು ಮೈಕೆಲ್ ಲೀಸ್ಕ್, ಫೋರ್! ಸ್ಕಾಟ್ಲೆಂಡ್‌ಗೆ ಸ್ವಾಗತಾರ್ಹ ಬೌಂಡರಿ ಸಿಕ್ಕಿದೆ. ಲೀಸ್ಕ್ ಬ್ಯಾಟಿನ್ ಒಳಗಿನ ಅಂಚನ್ನು ತಾಗಿ ಚೆಂಡು ಲೆಗ್ ಸ್ಟಂಪ್‌ನ ಹಿಂದೆ ಫೈನ್ ಲೆಗ್ ಕಡೆ ಬೌಂಡರಿ ಗೆರೆ ದಾಟಿತು.
ಸ್ಕಾಟ್ಲೆಂಡ್ ತಂಡ ಮೊದಲ ಓವರ್ನಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಇನ್ನಿಂಗ್ಸ್ನ 5ನೇ ಓವರ್ ಮುಕ್ತಾಯವಾಗಿದ್ದು 3 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿದೆ.
ಎರಡಲ್ಲ, ಮೊದಲ ಓವರ್‌ನಲ್ಲಿಯೇ 3 ವಿಕೆಟ್‌ಗಳು. ಟ್ರಂಪ್‌ಮನ್ ಅವರು ಹೊಸ ಬ್ಯಾಟ್ಸ್‌ಮನ್ ಮತ್ತು ಸ್ಟ್ಯಾಂಡ್-ಇನ್ ನಾಯಕ ರಿಚಿ ಬ್ಯಾರಿಂಗ್ಟನ್ ಅವರನ್ನು ಓವರ್‌ನ ನಾಲ್ಕನೇ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಮೂಲಕ ಔಟ್ ಮಾಡಿದರು. ಮೊದಲ ಓವರ್ ನಲ್ಲಿ ಸ್ಕಾಟ್ಲೆಂಡ್ ಕೇವಲ 2 ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು.
ಸ್ಕಾಟ್ಲೆಂಡ್ ಮೊದಲ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಬೀಳುವ ಮೂಲಕ ಅತ್ಯಂತ ಕಳಪೆ ಆರಂಭವನ್ನು ಹೊಂದಿತ್ತು. ಎಡಗೈ ವೇಗದ ಬೌಲರ್ ರುಬನ್ ಟ್ರಂಪೆಲ್ಮನ್ ಮೊದಲ ಎಸೆತದಲ್ಲಿ ಆರಂಭಿಕ ಜಾರ್ಜ್ ಮಾಂಜಿ ಬೌಲ್ಡ್ ಮಾಡಿದರು. ನಂತರ ಬ್ಯಾಟಿಂಗ್ ಗೆ ಬಂದ ಮೂರನೇ ಕ್ರಮಾಂಕದ ಬ್ಯಾಟ್ಸ್ ಮನ್ ಕ್ಯಾಲಮ್ ಮೆಕ್ ಲಿಯೋಡ್ ಮೂರನೇ ಎಸೆತದಲ್ಲಿ ವಿಕೆಟ್ ಕೀಪರ್ ಕೈಗೆ ಸಿಕ್ಕಿಬಿದ್ದರು.
ಅಬುಧಾಬಿಯಲ್ಲಿ ಎಂತಾ ಪ್ರಾರಂಭ. ಜಾರ್ಜ್ ಮುನ್ಸಿ ಒಂದೂ ರನ್ ಗಳಿಸದೆ ಶೂನ್ಯಕ್ಕೆ ಔಟಾಗಿದ್ದಾರೆ. ನಮೀಬಿಯಾ ಮೊದಲ ಎಸೆತದಲ್ಲೇ ವಿಕೆಟ್ ಪಡೆದುಕೊಂಡಿದೆ.
ಆಡಿದ ಒಟ್ಟು ಪಂದ್ಯಗಳು: 8
ಸ್ಕಾಟ್ಲೆಂಡ್ ಗೆಲುವು: 4
ನಮೀಬಿಯಾ ಗೆಲುವು: 4
ನಮೀಬಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ
ಜಾರ್ಜ್ ಮುನ್ಸಿ, ಕ್ರೇಗ್ ವ್ಯಾಲೇಸ್, ಮ್ಯಾಥ್ಯೂ ಕ್ರಾಸ್, ರಿಚಿ ಬೆರಿಂಗ್ಟನ್, ಕ್ಯಾಲಮ್ ಮ್ಯಾಕ್ಲಿಯೋಡ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫ್ಯಾನ್ ಷರೀಫ್, ಬ್ರಾಡ್ ವ್ಹೀಲ್ .
ಪಿಕ್ಕಿ ಯಾ ಫ್ರಾನ್ಸ್, ಜೇನ್ ಗ್ರೀನ್, ಕ್ರೇಗ್ ವಿಲಿಯಮ್ಸ್, ಗೆರ್ಹಾರ್ಡ್ ಎರಾಸ್ಮಸ್ , ಡೇವಿಡ್ ವೈಸ್, JJ ಸ್ಮಿಟ್, ಜಾನ್ ಫ್ರಿಲಿಂಕ್, ಮೈಕೆಲ್ ವ್ಯಾನ್ ಲಿಂಗೆನ್, ನಿಕೋಲ್ ಲಾಫ್ಟಿ-ಈಟನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಶಾಲ್ಟ್ಜ್.
Published On - 7:14 pm, Wed, 27 October 21