Shabnim Ismail: ಅತೀ ವೇಗದಲ್ಲಿ ಚೆಂಡೆಸೆದು ವಿಶ್ವ ದಾಖಲೆ ಬರೆದ ಶಬ್ನಿಮ್

| Updated By: ಝಾಹಿರ್ ಯೂಸುಫ್

Updated on: Mar 06, 2024 | 9:28 AM

WPL 2024: ವುಮೆನ್ಸ್ ಪ್ರೀಮಿಯರ್ ಲೀಗ್​ನ 13ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಆಟಗಾರ್ತಿ ಶಬ್ನಿಮ್ ಇಸ್ಲಾಯಿಲ್ ಮಹಿಳಾ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಅತೀ ವೇಗವಾಗಿ ಚೆಂಡೆಸೆಯುವ ಮೂಲಕ ಎಂಬುದೇ ವಿಶೇಷ. ಅಂದರೆ ಮಹಿಳಾ ಕ್ರಿಕೆಟ್​ನಲ್ಲಿ ಅತೀ ವೇಗದಲ್ಲಿ ಬೌಲಿಂಗ್ ಮಾಡಿದ ದಾಖಲೆಯನ್ನು ಶಬ್ನಿಮ್ ನಿರ್ಮಿಸಿದ್ದಾರೆ.

Shabnim Ismail: ಅತೀ ವೇಗದಲ್ಲಿ ಚೆಂಡೆಸೆದು ವಿಶ್ವ ದಾಖಲೆ ಬರೆದ ಶಬ್ನಿಮ್
Shabnim Ismail
Follow us on

ಸೌತ್ ಆಫ್ರಿಕಾದ ವೇಗದ ಬೌಲರ್ ಶಬ್ನಿಮ್ ಇಸ್ಮಾಯಿಲ್ (Shabnim Ismail) ಮಹಿಳಾ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅದು ಕೂಡ ವುಮೆನ್ಸ್ ಪ್ರೀಮಿಯರ್ ಲೀಗ್​ ಮೂಲಕ ಎಂಬುದು ವಿಶೇಷ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಶಬ್ನಿಮ್ ಬರೋಬ್ಬರಿ 132.1 Kmph ವೇಗದಲ್ಲಿ ಚೆಂಡೆಸೆದಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ಬೌಲಿಂಗ್ ಮಾಡಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಶೇಷ ಎಂದರೆ ಇದಕ್ಕೂ ಮುನ್ನ ಈ ದಾಖಲೆ ಶಬ್ನಿಮ್ ಇಸ್ಮಾಯಿಲ್ ಅವರ ಹೆಸರಿನಲ್ಲಿಯೇ ಇತ್ತು. 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶಬ್ನಿಮ್ 128kph ವೇಗದಲ್ಲಿ ಚೆಂಡೆಸೆದು ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ತನ್ನದೇ ದಾಖಲೆಯನ್ನು ಮುರಿದು ಸೌತ್ ಆಫ್ರಿಕಾ ಆಟಗಾರ್ತಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್​ನ 3ನೇ ಓವರ್​ನ 2ನೇ ಎಸೆತವನ್ನು 132.1 Kmph ವೇಗದಲ್ಲಿ ಎಸೆದ ಶಬ್ನಿಮ್ ಇಸ್ಮಾಯಿಲ್ ಮಹಿಳಾ ಕ್ರಿಕೆಟ್​ನಲ್ಲಿ 130+ Kmph ವೇಗದಲ್ಲಿ ಚೆಂಡೆಸೆದ ಮೊದಲ ಬೌಲರ್​ ಹಾಗೂ ಅತೀ ವೇಗವಾಗಿ ಬೌಲಿಂಗ್ ಮಾಡಿದ ಆಟಗಾರ್ತಿ ಎಂಬ ವಿಶ್ವ ದಾಖಲೆಯನ್ನು ಬರೆದರು.

ಶಬ್ನಿಮ್ ಇಸ್ಮಾಯಿಲ್ ಬೌಲಿಂಗ್ ವಿಡಿಯೋ:

ದುಬಾರಿಯಾದ ಶಬ್ನಿಮ್:

ವಿಶ್ವ ದಾಖಲೆಯ ಬೌಲಿಂಗ್​ನೊಂದಿಗೆ ಗಮನ ಸೆಳೆದ ಶಬ್ನಿಮ್ ಇಸ್ಮಾಯಿಲ್ ಈ ಪಂದ್ಯದಲ್ಲಿ ದುಬಾರಿಯಾಗಿದ್ದು ಮಾತ್ರ ವಿಪಯಾರ್ಸ. 4 ಓವರ್​ಗಳನ್ನು ಬೌಲಿಂಗ್ ಮಾಡಿದ್ದ ಶಬ್ನಿಮ್ ಬರೋಬ್ಬರಿ 46 ರನ್ ನೀಡಿದರು. ಅಲ್ಲದೆ ಕೇವಲ 1 ವಿಕೆಟ್ ಕಬಳಿಸಲಷ್ಟೇ ಶಕ್ತರಾದರು.

ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಮೆಗ್ ಲ್ಯಾನಿಂಗ್ (53) ಹಾಗೂ ಜೆಮಿಮಾ ರೊಡ್ರಿಗಾಸ್ (69) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ವಿಕೆಟ್ ಕಳೆದುಕೊಂಡು 192 ರನ್ ಕಲೆಹಾಕಿತು.

ಇದನ್ನೂ ಓದಿIPL 2024: CSK ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರ ಐಪಿಎಲ್​ನಿಂದ ಔಟ್..!

193 ರನ್​ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಅಮನ್ಜೋತ್ ಕೌರ್ 42 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 163 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು 29 ರನ್​ಗಳ ಜಯ ಸಾಧಿಸಿತು.