ODI World Cup 2023: ನಮ್ಮ ಗುರಿ ಭಾರತದ ವಿರುದ್ಧ ಗೆಲ್ಲುವುದಲ್ಲ ಎಂದ ಪಾಕ್ ಆಟಗಾರ

| Updated By: ಝಾಹಿರ್ ಯೂಸುಫ್

Updated on: Jul 04, 2023 | 6:13 PM

India vs Pakistan: ನಾವು ಭಾರತದ ವಿರುದ್ಧ ಗೆದ್ದು, ಆ ಬಳಿಕ ವಿಶ್ವಕಪ್‌ನಲ್ಲಿ ಸೋತರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ನನ್ನ ಪ್ರಕಾರ, ಭಾರತ ವಿರುದ್ಧ ಸೋತರೂ, ಆ ಬಳಿಕ ನಾವು ವಿಶ್ವಕಪ್ ಗೆದ್ದರೆ ಸಾಕು.

ODI World Cup 2023: ನಮ್ಮ ಗುರಿ ಭಾರತದ ವಿರುದ್ಧ ಗೆಲ್ಲುವುದಲ್ಲ ಎಂದ ಪಾಕ್ ಆಟಗಾರ
Team India
Follow us on

ODI World Cup 2023: ಏಕದಿನ ವಿಶ್ವಕಪ್​ಗಾಗಿ ಕೌಂಟ್ ಡೌನ್ ಶುರುವಾದ ಬೆನ್ನಲ್ಲೇ ಈ ಬಾರಿ ಕಪ್ ಗೆಲ್ಲುವ ತಂಡ ಯಾವುದೆಂಬ ಚರ್ಚೆಗಳು ಪ್ರಾರಂಭವಾಗಿದೆ. ಅದರಲ್ಲೂ ಅಕ್ಟೋಬರ್ 15 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ್ ಮುಖಾಮುಖಿಯಲ್ಲಿ ಗೆಲ್ಲೋರು ಯಾರು ಎನ್ನುವ ಚರ್ಚೆಗಳು ಜೋರಾಗಿವೆ. ಇತ್ತ ತವರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಗೆಲ್ಲುವ ಫೇವರೇಟ್ ತಂಡವಾಗಿ ಟೀಮ್ ಇಂಡಿಯಾ ಗುರುತಿಸಿಕೊಂಡಿದೆ. ಇದನ್ನು ಪಾಕ್ ತಂಡದ ಆಲ್​ರೌಂಡರ್ ಶಾದಾಬ್ ಖಾನ್ ಕೂಡ ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಶಾದಾಬ್ ಖಾನ್, ತಾಯ್ನಾಡಿನಲ್ಲಿ ಭಾರತವನ್ನು ತಂಡವನ್ನು ಎದುರಿಸುವುದು ದೊಡ್ಡ ಸವಾಲು. ಆದಾಗ್ಯೂ, ಭಾರತದ ವಿರುದ್ಧ ಗೆಲ್ಲುವುದು ನಮ್ಮ ಪ್ರಾಥಮಿಕ ಗುರಿಯಲ್ಲ. ಬದಲಾಗಿ ನಮ್ಮ ಮುಖ್ಯ ಗಮನವು ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವುದರ ಮೇಲೆ ಇರಲಿದೆ ಎಂದು ತಿಳಿಸಿದ್ದಾರೆ.

ನಾವು ಭಾರತದ ವಿರುದ್ಧ ಗೆದ್ದು, ಆ ಬಳಿಕ ವಿಶ್ವಕಪ್‌ ಗೆಲ್ಲುವಲ್ಲಿ ವಿಫಲವಾದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ನನ್ನ ಪ್ರಕಾರ, ಭಾರತ ವಿರುದ್ಧ ಸೋತರೂ, ಆ ಬಳಿಕ ನಾವು ವಿಶ್ವಕಪ್ ಗೆದ್ದರೆ ಸಾಕು. ಅದಕ್ಕಿಂತ ದೊಡ್ಡ ಸಂತೋಷ ಬೇರೆ ಇರುವುದಿಲ್ಲ. ಹೀಗಾಗಿ ಭಾರತದಲ್ಲಿ ವಿಶ್ವಕಪ್ ಗೆಲ್ಲುವುದೇ ನಮ್ಮ ಮುಖ್ಯ ಗುರಿಯಾಗಿರಲಿದೆ ಎಂದು ಶಾದಾಬ್ ಖಾನ್ ತಿಳಿಸಿದ್ದಾರೆ.

ಇದನ್ನೂ ಓದಿ: IND vs AUS: ಏಕದಿನ ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾದ ಮಾಸ್ಟರ್​ ಪ್ಲ್ಯಾನ್..!

ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 5 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಹಾಗೆಯೇ ಅಕ್ಟೋಬರ್ 15 ರಂದು ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆದ್ದರೂ, ಸೋತರೂ ನಮ್ಮ ಗುರಿ ಮಾತ್ರ ವಿಶ್ವಕಪ್​ ಜಯಿಸುವುದಾಗಿರಲಿದೆ ಎಂದು ಪಾಕ್ ಆಟಗಾರ ಶಾದಾಬ್ ಖಾನ್ ಹೇಳಿದ್ದಾರೆ.