ಬಾಂಗ್ಲಾದೇಶ ಪ್ರವಾಸದಲ್ಲಿರುವ ಪಾಕಿಸ್ತಾನ (Bangladesh vs Pakistan) ತಂಡ ಟಿ20 ಸರಣಿಯನ್ನು ಆಡುತ್ತಿದೆ. ಈಗಾಗಲೇ ಆಡಿರುವ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಬಾಬರ್ ಅಜಾಮ್ (Babar Azam) ಪಡೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿಕೊಂಡು ಸರಣಿ ವಶಪಡಿಸಿಕೊಂಡಿದೆ. ಶನಿವಾರ ನಡೆದ ಎರಡನೇ ಟಿ20 ಪಂದ್ಯ (BAN vs PAK 2nd T20I) ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಪಂದ್ಯದ ನಡುವೆ ಪಾಕಿಸ್ತಾನದ ಸ್ಟಾರ್ ಬೌಲರ್ ಶಹೀನ್ ಆಫ್ರಿದಿ (Shaheen Afridi) ಸಿಟ್ಟಿನಿಂದ ಚೆಂಡನ್ನು ವಿಕೆಟ್ಗೆ ಥ್ರೋ ಮಾಡುವ ಬದಲು ಬಾಂಗ್ಲಾ ಬ್ಯಾಟರ್ನ ಕಾಲಿಗೆ ಎಸೆದ ಪರಿಣಾಮ ಬ್ಯಾಟರ್ ಅಲ್ಲೇ ಕುಸಿದು ಬಿದ್ದ ಘಟನೆ ಕೂಡ ನಡೆದಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Video Viral) ಆಗುತ್ತಿದೆ. ಪಾಕ್ ಬೌಲರ್ನ ವರ್ತನೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ನಾಯಕನ ತೀರ್ಮಾನ ಆರಂಭದಲ್ಲೇ ತಲೆಕೆಳಗಾಯಿತು. 2 ಓವರ್ ಆಗುವ ಹೊತ್ತಿಗೆ ಕೇವಲ 5 ರನ್ ಗಳಿಸಿದ್ದಲ್ಲದೆ 2 ಪ್ರಮುಖ ವಿಕೆಟ್ ಕೂಡ ಪತನಗೊಂಡವು. ನಂತರ 3ನೇ ಓವರ್ ಬೌಲಿಂಗ್ ಮಾಡಲು ಬಂದ ಶಹೀನ್ ಆಫ್ರಿದಿಯ ಎರಡನೇ ಎಸೆತದಲ್ಲಿ ಬಾಂಗ್ಲಾ ಬ್ಯಾಟರ್ ಅಫಿಫ್ ಹುಸೈನ್ ಚೆಂಡನ್ನು ಸಿಕ್ಸರ್ಗೆ ಅಟ್ಟಿದರು.
ಇದರಿಂದ ಹತಾಶೆಗೊಂಡ ಆಫ್ರಿದಿ ಮೂರನೇ ಎಸೆತವನ್ನು ಫುಲ್ ಲೆಂತ್ ಹಾಕಿದರು. ಬ್ಯಾಟರ್ ಅಫಿಫ್ ಚೆಂಡನ್ನು ಜಸ್ಟ್ ಟಚ್ ಮಾಡಿ ಬಿಟ್ಟರಷ್ಟೆ. ಈ ಸಂದರ್ಭ ಚೆಂಡನ್ನು ಎತ್ತಿಗೊಂಡ ಶಹೀನ್ ವೇಗವಾಗಿ ಕ್ರೀಸ್ನಲ್ಲೇ ಇದ್ದ ಅಫಿಫ್ ಬಳಿ ವಿಕೆಟ್ಗೆಂದು ಎಸೆದರು. ಆದರೆ, ಚೆಂಡು ವಿಕೆಟ್ಗೆ ತಾಗದೆ ನೇರವಾಗಿ ಬ್ಯಾಟರ್ ಅಫಿಫ್ ಅವರ ಕಾಲಿನ ಹಿಂಭಾಗಕ್ಕೆ ಬಡಿದಿದೆ. ನೋವು ತಾಳಲಾರದೆ ಬ್ಯಾಟರ್ ಅಫಿಫ್ ಅಲ್ಲೇ ಕುಸಿದು ಬಿದ್ದರು. ತಕ್ಷಣ ಶಹೀನ್ ಹಾಗೂ ಪಾಕ್ ನಾಯಕ ಬಾಬರ್ ಬಂದು ಅವರನ್ನು ವಿಚಾರಿಸಿದರು.
Gets hit for a 6 and Shaheen Shah loses his control next ball!
I get the aggression but this was unnecessary. It was good however that he went straight to apologize after this.#BANvPAK pic.twitter.com/PM5K9LZBiu
— Israr Ahmed Hashmi (@IamIsrarHashmi) November 20, 2021
ಮೀರ್‌ಪುರದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಗಳಿಸಲು ಸಾಧ್ಯವಾದದ್ದು 7 ವಿಕೆಟಿಗೆ ಕೇವಲ 108 ರನ್. ನಜ್ಮುಲ್ ಹೊಸೇನ್ (40; 34 ಎ, 5 ಬೌಂ) ಹೊರತುಪಡಿಸಿದರೆ ಪಾಕ್ ದಾಳಿಯನ್ನು ತಡೆದು ನಿಲ್ಲಲು ಯಾರಿಂದಲೂ ಸಾಧ್ಯವಾಗಲಿಲ್ಲ. ಇನ್ನೊಂದು ತುದಿಯಲ್ಲಿ ಅವರಿಗೆ ಸಮರ್ಪಕ ಸಹಕಾರ ಸಿಗಲಿಲ್ಲ. ವೇಗಿಗಳಾದ ಶಹೀನ್ ಶಾ ಅಫ್ರಿದಿ ಮತ್ತು ಲೆಗ್ ಬ್ರೇಕ್ ಬೌಲರ್ ಶಾದಬ್ ಖಾನ್ ಅವರ ಪರಿಣಾಮಕಾರಿ ದಾಳಿಯಿಂದಾಗಿ ಬಾಂಗ್ಲಾದೇಶ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು.
109 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ತಂಡ ಇನ್ನೂ 11 ಎಸೆತ ಬಾಕಿ ಇರುವಾಗ ಗೆಲುವಿನ ನಗೆ ಸೂಸಿತು. ಮೂರನೇ ಓವರ್‌ನಲ್ಲೇ ತಂಡ ನಾಯಕ ಬಾಬರ್ ಅಜಾಮ್ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಮೊಹಮ್ಮದ್ ರಿಜ್ವಾನ್ ಅವರ ಜೊತೆಗೂಡಿದ ಫಖರ್ ಜಮಾನ್ (57; 51 ಎಸೆತ, 2 ಬೌಂಡರಿ, 3 ಸಿಕ್ಸ್) 85 ರನ್‌ಗಳ ಜೊತೆಯಾಟದ ಮೂಲಕ ಆಸರೆಯಾದರು. ಗೆಲುವಿಗೆ 12 ರನ್ ಬೇಕಾಗಿದ್ದಾಗ ರಿಜ್ವಾನ್ (39; 45 ಎ, 4 ಬೌಂ) ಔಟಾದರು. ಆದರೆ ಜಮಾನ್ ದಿಟ್ಟ ಆಟವಾಡಿ ಗೆಲುವಿಗೆ ಕಾರಣರಾದರು.
Rohit Sharma: ವಿರಾಟ್ ಕೊಹ್ಲಿಯ ಎರಡು ಮಹತ್ವದ ದಾಖಲೆ ಪುಡಿ ಮಾಡಲು ಸಜ್ಜಾದ ರೋಹಿತ್ ಶರ್ಮಾ: ಏನದು?
(Shaheen Afridi failed to control his temper hurts Afif Hossain during Bangladesh vs Pakistan T20I)