ಪಾಕಿಸ್ತಾನ ಪ್ರವಾಸ ಬೆಳೆಸಿರುವ ಆಸ್ಟ್ರೇಲಿಯಾ (Pakistan vs Australia) ಕ್ರಿಕೆಟ್ ತಂಡ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಈಗಾಗಲೇ ನಡೆದಿರುವ ಎರಡು ಪಂದ್ಯ ಡ್ರಾ ಮೂಲಕ ಅಂತ್ಯಕಂಡಿದ್ದರೆ ಸದ್ಯ ಲಾಹೋರ್ನಲ್ಲಿ ಸಾಗುತ್ತಿರುವ ಮೂರನೇ ಟೆಸ್ಟ್ ಕೂಡ ರೋಚಕ ಘಟ್ಟದತ್ತ ಸಾಗುತ್ತಿದೆ. ಆಸ್ಟ್ರೇಲಿಯಾವನ್ನು 391 ರನ್ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ 268 ರನ್ಗೆ ಸರ್ವಪತನ ಕಂಡಿತು. ಉತ್ತಮ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಶುರು ಮಾಡಿರುವ ಪ್ಯಾಟ್ ಕಮಿನ್ಸ್ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿದೆ. ಕಾಂಗರೂ ಪಡೆ ಒಟ್ಟು 134 ರನ್ಗಳ ಮುನ್ನಡೆ ಸಾಧಿಸಿದೆ. ಇದರ ನಡುವೆ ಮೂರನೇ ದಿನದಾಟದಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಆಸ್ಟ್ರೇಲಿಯಾ ಬ್ಯಾಟರ್ ಡೇವಿಡ್ ವಾರ್ನರ್ (David Warner) ಮತ್ತು ಪಾಕಿಸ್ತಾನ ಬೌಲರ್ ಶಾಹಿನ್ ಶಾ ಅಫ್ರಿದಿ (Shaheen Shah Afridi) ನಡುವೆ ದೊಡ್ಡ ಜಗಳ ನಡೆಯುವುದರಲ್ಲಿತ್ತು.
ಹೌದು, ಪಾಕಿಸ್ತಾನ ತಂಡವನ್ನು 268 ರನ್ಗೆ ಆಲೌಟ್ ಮಾಡಿ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲು ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಕಣಕ್ಕಿಳಿದರು. ದಿನದಾಟದ ಅಂತಿಮ 3ನೇ ಓವರ್ ಬೌಲಿಂಗ್ ಮಾಡಲು ಬಂದ ಪಾಕ್ ಸ್ಟಾರ್ ಬೌಲರ್ ಶಾಹಿನ್ ಶಾ ಅಫ್ರಿದಿಯ ಎರಡನೇ ಎಸೆತದಲ್ಲಿ ವಾರ್ನರ್ ಚೆಂಡನ್ನು ಬೌಂಡರಿಗೆ ಅಟ್ಟಿದರು. ಮೂರನೇ ಎಸೆತವನ್ನು ಅಫ್ರಿದಿ ಶಾರ್ಟ್ ಬಾಲ್ ಎಸೆದರು. ವಾರ್ನರ್ ಚೆಂಡನ್ನು ಡಿಫೆಂಡ್ ಮಾಡಿ ಕೊಂಚ ಮುಂದೆ ಬಂದರು. ಆಗ ಅಫ್ರಿದಿ ಚೆಂಡು ಕೈಯಲ್ಲಿ ಹಿಡಿದು ಕೊಂಡು ವಾರ್ನರ್ ಬಳಿ ಬಂದಾಗ ನೋ ರನ್ ಎಂದು ಕೂಗಿದರು. ಇದೇವೇಳೆ ಅಫ್ರಿದಿ ನೇರವಾಗಿ ವಾರ್ನರ್ ಹತ್ತಿರ ಬಂದು ಎದುರು ನಿಂತರು. ಹೆದರದ ವಾರ್ನರ್ ಕೂಡ ಅಫ್ರಿದಿ ಎದುರಿಗೆ ನಿಂತು ಮೈಗೆ ಮೈ ತಾಕಿಸಿಕೊಂಡರು. ಬಳಿಕ ತಮಾಷೆಯಾಗಿ ನಕ್ಕರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
What a way to conclude the day ? #BoysReadyHain l #PAKvAUS pic.twitter.com/FafG8lkVTT
— Pakistan Cricket (@TheRealPCB) March 23, 2022
ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 133.3 ಓವರ್ನಲ್ಲಿ 391 ರನ್ಗೆ ಆಲೌಟ್ ಆಯಿತು. ಉಸ್ಮಾನ್ ಖ್ವಾಜಾ 219 ಎಸೆತಗಳಲ್ಲಿ 91 ರನ್ ಗಳಿಸಿದರೆ, ಕ್ಯಾಮೆರಾನ್ ಗ್ರೀನ್ 163 ಎಸೆತಗಳಲ್ಲಿ 79 ರನ್, ಅಲೆಕ್ಸ್ ಹೇಲ್ಸ್ 67 ಮತ್ತು ಸ್ಟೀವ್ ಸ್ಮಿತ್ 59 ರನ್ ಬಾರಿಸಿದರು. ಪಾಕಿಸ್ತಾನ ಪರ ಶಾಹಿನ್ ಶಾ ಅಫ್ರಿದಿ ಹಾಗೂ ನಸೀಂ ಶಾ ತಲಾ 4 ವಿಕೆಟ್ ಕಿತ್ತು ಮಿಂಚಿದರು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆರಂಭದಲ್ಲೇ ಪಾಕ್ ಇಮಾಮ್ ಉಲ್ ಹಖ್ (11) ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟ್ಗೆ ಅದ್ಬುಲ್ ಶಫೀಖ್ ಮತ್ತು ಅಝರ್ ಅಲಿ 150 ರನ್ಗಳ ಅಮೋಘ ಜೊತೆಯಾಟ ಆಡಿದರು. ಶಫೀಖ್ 228 ಎಸೆತಗಳಲ್ಲಿ 81 ರನ್ ಗಳಿಸಿದರೆ, ಅಝರ್ ಅಲಿ 208 ಎಸೆತಗಳಲ್ಲಿ 78 ರನ್ ಬಾರಿಸಿದರು. ಬಳಿಕ ಬಂದ ನಾಯಕ ಬಾಬರ್ ಅಜಾಮ್ 131 ಎಸೆತಗಳಲ್ಲಿ 67 ರನ್ ಸಿಡಿಸಿ ಔಟಾದರು.
4 ರನ್ಗೆ 5 ವಿಕೆಟ್ ಪತನ:
256 ರನ್ಗೆ 5ನೇ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 268 ರನ್ಗೆ ಆಲೌಟ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದರಲ್ಲೂ 268 ರನ್ ಗಳಿಸಿದ್ದಾಗ ಬರೋಬ್ಬರಿ 4 ವಿಕೆಟ್ ಪತನಗೊಂಡಿತು. ಅಂತಿಮವಾಗಿ ಪಾಕ್ 116.4 ಓವರ್ನಲ್ಲಿ 268 ರನ್ಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ಪರ ನಾಯಕ ಪ್ಯಾಟ್ ಕಮಿನ್ಸ್ 5 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದರು. 123 ರನ್ಗಳ ಉತ್ತಮ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿದೆ.
IPL 2022: ಹೊಸ ದಾಖಲೆ: ಬರೋಬ್ಬರಿ 120 ದೇಶಗಳಲ್ಲಿ ಐಪಿಎಲ್ 2022 ನೇರಪ್ರಸಾರ
Venkatesh Iyer: ಬರೋಬ್ಬರಿ 204 ರನ್: ಐಪಿಎಲ್ ಅಭ್ಯಾಸ ಪಂದ್ಯದಲ್ಲಿ ಕೆಕೆಆರ್ ಬ್ಯಾಟರ್ನ ಸಿಡಿಲಬ್ಬರದ ಆಟ