ಸೂಪರ್ ಓವರ್ ಆಡಲು ನಿರಾಕರಿಸಿದ ಶಕೀಬ್ ಅಲ್ ಹಸನ್: ಟೂರ್ನಿಯಿಂದಲೇ ತಂಡ ಔಟ್

Global T20: ಆಗಸ್ಟ್ 11 ರಂದು ನಡೆಯಲಿರುವ ಗ್ಲೋಬಲ್ ಟಿ20 ಲೀಗ್ ಫೈನಲ್ ಪಂದ್ಯದಲ್ಲಿ ಟಿಮ್ ಸೀಫರ್ಟ್ ನಾಯಕತ್ವದ ಮಾಂಟ್ರಿಯಲ್ ಟೈಗರ್ಸ್ ಮತ್ತು ಕಾಲಿನ್ ಮನ್ರೊ ಮುಂದಾಳತ್ವದ ಟೊರೊಂಟೊ ನ್ಯಾಷನಲ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ.

ಸೂಪರ್ ಓವರ್ ಆಡಲು ನಿರಾಕರಿಸಿದ ಶಕೀಬ್ ಅಲ್ ಹಸನ್: ಟೂರ್ನಿಯಿಂದಲೇ ತಂಡ ಔಟ್
Bangla Tigers Mississauga
Follow us
ಝಾಹಿರ್ ಯೂಸುಫ್
|

Updated on: Aug 11, 2024 | 12:41 PM

ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಲೀಗ್ ಟೂರ್ನಿಯಿಂದ ಬಾಂಗ್ಲಾ ಟೈಗರ್ಸ್ ಮಿಸ್ಸಿಸೌಗಾ ತಂಡ ಹೊರಬಿದ್ದಿದೆ. ಅದು ಕೂಡ ನಿರ್ಣಾಯಕ ಪಂದ್ಯದಲ್ಲಿ ಸೂಪರ್ ಓವರ್ ಆಡಲು ನಿರಾಕರಿಸುವ ಮೂಲಕ ಎಂಬುದೇ ಅಚ್ಚರಿ. ಈ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ಮಿಸ್ಸಿಸೌಗಾ ಮತ್ತು ಟೊರೊಂಟೊ ನ್ಯಾಷನಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಮಳೆಯ ಕಾರಣ ಪಂದ್ಯವು ನಿಗದಿತ ಸಮಯದಲ್ಲಿ ಆರಂಭವಾಗಿರಲಿಲ್ಲ. ಇದಾಗ್ಯೂ ಫಲಿತಾಂಶ ನಿರ್ಧರಿಸಲು ಆಯೋಜಕರು ಸೂಪರ್ ಓವರ್ ಆಡಲು ನಿರ್ಧರಿಸಿದ್ದರು. ಆದರೆ ಬಾಂಗ್ಲಾ ಟೈಗರ್ಸ್ ಮಿಸ್ಸಿಸೌಗಾ ತಂಡದ ನಾಯಕ ಶಕೀಬ್ ಅಲ್ ಹಸನ್ ಸೂಪರ್ ಓವರ್ ಅಡಲು ನಿರಾಕರಿಸಿದ್ದಾರೆ.

ಐಸಿಸಿ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲು ಕನಿಷ್ಠ 5 ಓವರ್​ಗಳ ಪಂದ್ಯವನ್ನು ಆಯೋಜಿಸಬೇಕೆಂದು ಶಕೀಬ್ ಹಾಗೂ ಬಾಂಗ್ಲಾ ಟೈಗರ್ಸ್ ಮಿಸ್ಸಿಸೌಗಾ ತಂಡವು ಆಗ್ರಹಿಸಿದೆ. ಆದರೆ ಅದಾಗಲೇ ಮೈದಾನವು ಸಂಪೂರ್ಣ ಒದ್ದೆಯಾಗಿದ್ದರಿಂದ 5 ಓವರ್​ಗಳ ಪಂದ್ಯ ನಡೆಸುವಂತಹ ಯಾವುದೇ ಪರಿಸ್ಥಿತಿ ಇರಲಿಲ್ಲ.

ಇತ್ತ ಸೂಪರ್ ಓವರ್​ ಮೂಲಕ ಪಂದ್ಯದ ಫಲಿತಾಂಶ ನಿರ್ಧರಿಸಲು ಆಯೋಜಕರು ಮುಂದಾದರೂ ಶಕೀಬ್ ಅಲ್ ಹಸನ್ ಅದಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ಹೀಗಾಗಿ ಎಲಿಮಿನೇಟರ್ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಪಂದ್ಯದ ರದ್ದತಿಯಿಂದಾಗಿ ಬಾಂಗ್ಲಾ ಟೈಗರ್ಸ್ ಮಿಸ್ಸಿಸೌಗಾ ತಂಡವು ಗ್ಲೋಬಲ್ ಟಿ20 ಲೀಗ್​ನಿಂದ ಹೊರಬಿದ್ದಿದೆ.

ಅತ್ತ ಎಲಿಮಿನೇಟರ್ ಪಂದ್ಯವಾಡದೇ ಟೊರೊಂಟೊ ನ್ಯಾಷನಲ್ಸ್ ತಂಡವು ಕ್ವಾಲಿಫೈಯರ್-2 ಗೆ ಅರ್ಹತೆ ಪಡೆದುಕೊಂಡಿದೆ. ಅಲ್ಲದೆ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಟೊರೊಂಟೊ ನ್ಯಾಷನಲ್ಸ್ ಹಾಗೂ ಬ್ರಾಂಪ್ಟನ್ ವೋಲ್ವ್ಸ್ ತಂಡಗಳು ಮುಖಾಮುಖಿಯಾಗಿದೆ.

ಈ ಮ್ಯಾಚ್​ನಲ್ಲಿ 5 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಟೊರೊಂಟೊ ನ್ಯಾಷನಲ್ಸ್ ತಂಡವು ಇದೀಗ ಫೈನಲ್​ಗೆ ಪ್ರವೇಶಿಸಿದೆ. ಅದರಂತೆ ಆಗಸ್ಟ್ 11 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಮಾಂಟ್ರಿಯಲ್ ಟೈಗರ್ಸ್ ಮತ್ತು ಟೊರೊಂಟೊ ನ್ಯಾಷನಲ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ.

ಟೊರೊಂಟೊ ನ್ಯಾಷನಲ್ಸ್ ತಂಡ: ಕಾಲಿನ್ ಮನ್ರೊ (ನಾಯಕ), ಉನ್ಮುಕ್ತ್ ಚಂದ್, ಆಂಡ್ರೀಸ್ ಗೌಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಅರ್ಮಾನ್ ಕಪೂರ್, ಮೊಹಮ್ಮದ್ ನವಾಜ್, ರೊಮಾರಿಯೋ ಶೆಫರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಜುನೈದ್ ಸಿದ್ದಿಕ್, ಜತೀಂದ್ರಪಾಲ್ ಮಥಾರು, ನಿಖಿಲ್ ದತ್ತಾ, ಸಾದಾಬ್ ಜಾಫ್ ಅಲೆನ್, ರೋಸ್ಟನ್ ಚೇಸ್, ರೋಹಿತ್ ಪೌಡೆಲ್, ನಿಕೋಲಸ್ ಕಿರ್ಟನ್, ಕನ್ವರ್ ಮನ್, ದಿಲ್ರಾಜ್ ಡಿಯೋಲ್, ಜಗನ್‌ದೀಪ್ ಸಿಂಗ್, ಮುಹಮ್ಮದ್ ರೋಹಿದ್ ಖಾನ್.

ಇದನ್ನೂ ಓದಿ: Rohit Sharma: ಈ ಒಂದು ದಾಖಲೆ ಬರೆಯಲು ರೋಹಿತ್ ಶರ್ಮಾ ಮುಂದಿನ ವರ್ಷದವರೆಗೆ ಕಾಯಲೇಬೇಕು..!

ಮಾಂಟ್ರಿಯಲ್ ಟೈಗರ್ಸ್ ತಂಡ: ದಿಲ್‌ಪ್ರೀತ್ ಬಾಜ್ವಾ, ಆಷ್ಟನ್ ಅಗರ್, ಪರ್ವೀನ್ ಕುಮಾರ್, ಟಿಮ್ ಸೀಫರ್ಟ್ (ನಾಯಕ), ಗೆರ್ಹಾರ್ಡ್ ಎರಾಸ್ಮಸ್, ಶೆರ್ಫೇನ್ ರುದರ್‌ಫೋರ್ಡ್, ಅಜ್ಮತುಲ್ಲಾ ಒಮರ್‌ಜಾಯ್, ಕಾರ್ಬಿನ್ ಬಾಷ್, ಅಯಾನ್ ಅಫ್ಜಲ್ ಖಾನ್, ಜಹೂರ್ ಖಾನ್, ಕಲೀಮ್ ಸನಾ, ಕ್ರಿಸ್‌ಮದ್ ಲಿನ್‌ಫ್ಯಾನ್, ಕ್ರಿಸ್‌ಮದ್ ಲಿನ್‌ಫ್ಯಾನ್ ಸೈಫುದ್ದೀನ್, ಬೆನ್ ಮಾನೆಂಟಿ, ಆದಿತ್ಯ ವರದರಾಜನ್, ಯುವರಾಜ್ ಹುಂಡಾಲ್, ಅನೂಪ್ ರವಿ, ಪ್ರಭಾಸೀಸ್ ರೈನಾ, ನವೀನ್-ಉಲ್-ಹಕ್, ಚರಂಜಿತ್ ರಾಂಧವಾ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ