ಟೀಮ್ ಇಂಡಿಯಾ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅರ್ಧಂಬರ್ಧ ಆಟಗಾರ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಆಟಗಾರ ಮಾರ್ಕ್ ವಾ ಟೀಕಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಶಾರ್ದೂಲ್ ಅವರನ್ನು ವಾ ಬಿಟ್ಸ್ ಅ್ಯಂಡ್ ಪೀಸಸ್ ಕ್ರಿಕೆಟಿಗ ಎಂದು ಜರಿದರು.
ಏಕೆಂದರೆ ವಿಶ್ವಕಪ್ ತಂಡದಲ್ಲಿರುವ ಆಟಗಾರನಾಗಿರುವ ಶಾರ್ದೂಲ್ ಠಾಕೂರ್ ಈ ಪಂದ್ಯದಲ್ಲಿ 4 ಓವರ್ಗಳಲ್ಲಿ 35 ರನ್ ನೀಡಿದ್ದರು. ಅಲ್ಲದೆ ಒಂದೇ ಒಂದು ವಿಕೆಟ್ ಕಬಳಿಸಿರಲಿಲ್ಲ. ಇದಾಗ್ಯೂ ಶಾರ್ದೂಲ್ ಠಾಕೂರ್ಗೆ ಸತತ ಅವಕಾಶ ನೀಡುತ್ತಿರುವುದು ಅಚ್ಚರಿ ಎಂದು ಮಾರ್ಕ್ ವಾ ವಾದಿಸಿದರು.
ನನ್ನ ಪ್ರಕಾರ ಶಾರ್ದೂಲ್ ಠಾಕೂರ್ ಬಿಟ್ಸ್ ಅ್ಯಂಡ್ ಪೀಸಸ್ ಕ್ರಿಕೆಟರ್. ಅಂದರೆ ಅರ್ಧಂಬರ್ಧ ಆಟಗಾರ. ಏಕೆಂದರೆ ಆತ ಅತ್ತ ಬೌಲರ್ ಆಗಿಯೂ ಮಿಂಚುತ್ತಿಲ್ಲ. ಇತ್ತ ಬ್ಯಾಟ್ಸ್ಮನ್ ಆಗಿಯೂ ಯಶಸ್ಸು ಕಾಣುತ್ತಿಲ್ಲ ಎಂದು ಮಾರ್ಕ್ ವಾ ತಿಳಿಸಿದರು.
ಮಾರ್ಕ್ ವಾ ಅವರ ಹೇಳಿಕೆಯಂತೆ ಶಾರ್ದೂಲ್ ಠಾಕೂರ್ ಟೀಮ್ ಇಂಡಿಯಾ ಪರ ಸತತ ಕಳಪೆ ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 10 ಓವರ್ಗಳಲ್ಲಿ 78 ರನ್ ಬಿಟ್ಟುಕೊಟ್ಟಿದ್ದ ಠಾಕೂರ್ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ. ಇನ್ನು 2ನೇ ಪಂದ್ಯದಲ್ಲೂ 4 ಓವರ್ಗಳಲ್ಲಿ 35 ರನ್ ನೀಡಿ ದುಬಾರಿ ಎನಿಸಿಕೊಂಡರು.
ಹಾಗೆಯೇ ಇತ್ತೀಚೆಗೆ ಮುಗಿದ ಏಷ್ಯಾಕಪ್ನಲ್ಲಿ 4 ಪಂದ್ಯಗಳನ್ನಾಡಿದ್ದ ಶಾರ್ದೂಲ್ ಕಲೆಹಾಕಿದ್ದು ಕೇವಲ 14 ರನ್ಗಳು ಮಾತ್ರ. ಇನ್ನು ಬೌಲಿಂಗ್ನಲ್ಲಿ ಪಡೆದಿದ್ದು ಕೇವಲ 5 ವಿಕೆಟ್ಗಳು. ಇದಾಗ್ಯೂ ಏಕದಿನ ವಿಶ್ವಕಪ್ ತಂಡದಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಉಳಿಸಿಕೊಂಡಿರುವುದು ಅಚ್ಚರಿ.
ಇದನ್ನೂ ಓದಿ: Shubman Gill: ಗಿಲ್ ಗಿಲಕ್ಗೆ ಹಳೆಯ ದಾಖಲೆಗಳು ಧೂಳೀಪಟ
ಏಕದಿನ ವಿಶ್ವಕಪ್ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.