VIDEO: ಕಪಿಲ್ ದೇವ್ ಕಿಡ್ನಾಪ್ ವಿಡಿಯೋ? ಕಳವಳ ವ್ಯಕ್ತಪಡಿಸಿದ ಗಂಭೀರ್
Kapil Dev Viral Video: ಈ ವಿಡಿಯೋದಲ್ಲಿರುವುದು ಕಪಿಲ್ ದೇವ್ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಯಾವುದೊ ಜಾಹೀರಾತಿನ ಚಿತ್ರೀಕರಣದ ವೇಳೆ ತೆಗೆದುಕೊಂಡ ವಿಡಿಯೋ ಇದಾಗಿರಬಹುದು. ಇದೇ ಕಾರಣದಿಂದಾಗಿ ಪ್ರತಿಭಟಿಸದೇ ಅವರು ಮುಂದೆ ಸಾಗುತ್ತಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಕಿಡ್ನಾಪ್ ಮಾಡಲಾಗಿದೆ ಎಂಬ ಶೀರ್ಷಿಕೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವೈರಲ್ ವಿಡಿಯೋವನ್ನು ಹಂಚಿಕೊಂಡಿರುವ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ನಿಮಗೂ ಬಂದಿದೆಯಾ?. ಆದರೆ ಇದರಲ್ಲಿರುವುದು ಕಪಿಲ್ ದೇವ್ ಅಲ್ಲ. ಅವರು ಕ್ಷೇಮವಾಗಿದ್ದಾರೆ ಎಂದು ಭಾವಿಸುತ್ತೇನೆ ಎಂದು ಗೌತಮ್ ಗಂಭೀರ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಕಪಿಲ್ ದೇವ್ ಅವರನ್ನು ಹೋಲುವ ವ್ಯಕ್ತಿಯೊಬ್ಬರ ಬಾಯಿ ಹಾಗೂ ಕೈಗಳನ್ನು ಕಟ್ಟಿ ಇಬ್ಬರು ವ್ಯಕ್ತಿಗಳು ಕೋಣೆಯೊಳಗೆ ಕರೆದೊಯ್ಯುತ್ತಿರುವ ದೃಶ್ಯಗಳನ್ನು ಕಾಣಬಹುದು.
Anyone else received this clip, too? Hope it’s not actually @therealkapildev 🤞and that Kapil Paaji is fine! pic.twitter.com/KsIV33Dbmp
— Gautam Gambhir (@GautamGambhir) September 25, 2023
ಇದರ ಬೆನ್ನಲ್ಲೇ ಕಪಿಲ್ ದೇವ್ ಅವರನ್ನು ಅಪಹರಿಸಲಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಇದೇ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಗೌತಮ್ ಗಂಭೀರ್ ಕೂಡ ಅವರು ಅಲ್ಲದಿರಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಜಾಹೀರಾತಿನ ಚಿತ್ರೀಕರಣ?
ಈ ವಿಡಿಯೋದಲ್ಲಿರುವುದು ಕಪಿಲ್ ದೇವ್ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಯಾವುದೊ ಜಾಹೀರಾತಿನ ಚಿತ್ರೀಕರಣದ ವೇಳೆ ತೆಗೆದುಕೊಂಡ ವಿಡಿಯೋ ಇದಾಗಿರಬಹುದು. ಇದೇ ಕಾರಣದಿಂದಾಗಿ ಪ್ರತಿಭಟಿಸದೇ ಅವರು ಮುಂದೆ ಸಾಗುತ್ತಿದ್ದಾರೆ.
ಅಥವಾ ಚಿತ್ರೀಕರಣದ ವೇಳೆ ತಮಾಷೆಗಾಗಿ ಕಪಿಲ್ ದೇವ್ ಅವರೇ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿರುವ ಸಾಧ್ಯತೆಗಳಿವೆ ಎಂದು ಅನೇಕರು ಬರೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ಪರ ಸತತ 4 ಸಿಕ್ಸ್ ಸಿಡಿಸಿದ್ದು ಮೂವರು ಬ್ಯಾಟರ್ಗಳು ಮಾತ್ರ..!
ಒಟ್ಟಿನಲ್ಲಿ ವಿಡಿಯೋದಲ್ಲಿರುವ ವ್ಯಕ್ತಿಯು ಕಪಿಲ್ ದೇವ್ ಅವರಂತೆ ಕಾಣುತ್ತಿರುವುದರಿಂದ ಇತ್ತ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಇದಾಗ್ಯೂ ಕಪಿಲ್ ದೇವ್ ಕಡೆಯಿಂದ ಅಥವಾ ಅವರ ಆಪ್ತರಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.
Published On - 7:13 pm, Mon, 25 September 23