ಭಾರತದ ವೇಗದ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮುಂಬೈ ಆಟಗಾರ ನವೆಂಬರ್ 29 ರಂದು ತನ್ನ ಗೆಳತಿ ಮಿಥಾಲಿ ಪರುಲ್ಕರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಕಾರ್ಯಕ್ರಮ ಮುಂಬೈನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದಿದೆ. ನಿಶ್ಚಿತಾರ್ಥದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಕ್ರಮ ನಡೆದಿದ್ದು ಈ ವೇಳೆ ಆಪ್ತರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಭಾರತೀಯ ಕ್ರಿಕೆಟಿಗರು ಬಾಗವಹಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಶಾರ್ದೂಲ್ ಠಾಕೂರ್ ಮದುವೆಯಾಗಬಹುದು ಎಂಬ ಸುದ್ದಿ ಇದೆ.
30 ವರ್ಷದ ಶಾರ್ದೂಲ್ ಠಾಕೂರ್ ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದಿದ್ದು, ವಿಶ್ರಾಂತಿಯಲ್ಲಿದ್ದಾರೆ. ಅವರು ಇಲ್ಲಿಯವರೆಗೆ ನಾಲ್ಕು ಟೆಸ್ಟ್, 15 ODI ಮತ್ತು 24 T20 ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಇತ್ತೀಚೆಗೆ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದ ಭಾಗವಾಗಿದ್ದರು. ಇದಕ್ಕೂ ಮೊದಲು ಐಪಿಎಲ್ 2021 ರಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಇತ್ತೀಚಿನ ದಿನಗಳಲ್ಲಿ ಶಾರ್ದೂಲ್ ಅವರು ಟೀಂ ಇಂಡಿಯಾ ಪರ ಎಲ್ಲಾ ಮೂರು ಮಾದರಿಗಳಲ್ಲಿ ಆಡುತ್ತಿದ್ದಾರೆ. ಟೆಸ್ಟ್‌ನಲ್ಲಿ ಅವರು ಬ್ಯಾಟ್‌ನಲ್ಲೂ ಅದ್ಭುತಗಳನ್ನು ಮಾಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಅರ್ಧಶತಕಗಳನ್ನು ಗಳಿಸಿದರು. ಇದರಿಂದಾಗಿ ಅವರು ಸಾಕಷ್ಟು ಪ್ರಶಂಸೆಗೆ ಪಾತ್ರರಾಗಿದ್ದರು.
Congrats both of u!!?❤ @imShard #shardulthakur #IndiaVsNewZealand pic.twitter.com/9yDq9u4Wvi
— Atharva Deshmukh (@Ro45hitian) November 29, 2021
Shardul Thakur is getting engaged with his love ?❤️.
Congrats Shardul and Mittali #shardulthakur @imShard pic.twitter.com/fBx9ZqAloj
— SHARDUL THAKUR FC™ (@Don_Shardul) November 29, 2021
ಶಾರ್ದೂಲ್ ಅವರ ವೃತ್ತಿಜೀವನ ಹೀಗಿದೆ
ಶಾರ್ದೂಲ್ ಠಾಕೂರ್ ಮುಂಬೈನ ಉಪನಗರ ಪ್ರದೇಶವಾದ ಪಾಲ್ಘರ್‌ನಿಂದ ಬಂದವರು. ಅವರು 2017 ರಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಅದೇ ಸಮಯದಲ್ಲಿ, 2018 ರಲ್ಲಿ ಟೆಸ್ಟ್ ಪದಾರ್ಪಣೆ ನಡೆಯಿತು. ಇದುವರೆಗೆ ಟೆಸ್ಟ್ನಲ್ಲಿ 14, ODI ಗಳಲ್ಲಿ 22 ಮತ್ತು T20 ನಲ್ಲಿ 31 ವಿಕೆಟ್ಗಳನ್ನು ಪಡೆದಿದ್ದಾರೆ. ಶಾರ್ದೂಲ್ ಠಾಕೂರ್ ಮತ್ತು ರೋಹಿತ್ ಶರ್ಮಾ ಜೊತೆಯಾಗಿ ಆಡುತ್ತಾ ಮುನ್ನಡೆದಿದ್ದಾರೆ. ಇಬ್ಬರೂ ಒಂದೇ ತರಬೇತುದಾರ ದಿನೇಶ್ ಲಾಡ್ ಅವರಿಂದ ಆಟದ ಸೂಕ್ಷ್ಮಗಳನ್ನು ಕಲಿತಿದ್ದಾರೆ. ಶಾಲಾ ದಿನಗಳಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸಿದ ಸಾಧನೆಯನ್ನೂ ಮಾಡಿದ್ದರು.
ಬಳಿಕ ದೇಶಿಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಅದ್ಭುತ ಪ್ರದರ್ಶನ ನೀಡಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು. ಮುಂಬೈಯನ್ನು ರಣಜಿ ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಐಪಿಎಲ್‌ನಲ್ಲಿ ಅವರ ಚೊಚ್ಚಲ ಪ್ರವೇಶ ಪಂಜಾಬ್ ಕಿಂಗ್ಸ್‌ನೊಂದಿಗೆ ಆಯಿತು. ಆದರೆ ನಂತರ ಅವರು ಚೆನ್ನೈ ಸೂಪರ್ ಕಿಂಗ್ಸ್‌ಗೆ ಬರುವ ಮೂಲಕ ಯಶಸ್ಸನ್ನು ಪಡೆದರು. ಇಲ್ಲಿ ಅವರು 2018 ಮತ್ತು 2021 ರಲ್ಲಿ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು.