India vs New Zealand, 1st Test: ಮತ್ತಷ್ಟು ರೋಚಕತೆಯತ್ತ ಇಂಡೋ-ಕಿವೀಸ್ ಟೆಸ್ಟ್: ಭೋಜನ ವಿರಾಮದ ವೇಳೆಗೆ ನ್ಯೂಜಿಲೆಂಡ್: 79-1
IND vs NZ, 1st Test: ಐದನೇ ದಿನದಾಟ ಅದಾಗಲೇ ಅರ್ಧದಷ್ಟು ಪೂರ್ಣಗೊಂಡಿದ್ದು ಟೀಮ್ ಇಂಡಿಯಾ ಕೇನ್ ಪಡೆಯ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಸದ್ಯ ಕಿವೀಸ್ ಗೆಲುವಿಗೆ 280 ರನ್‌ಗಳ ಅವಶ್ಯಕತೆಯಿದ್ದರೆ, ಟೀಮ್ ಇಂಡಿಯಾ ಗೆಲುವಿಗಾಗಿ ಎದುರಾಳಿಯ 9 ವಿಕೆಟ್ ಬೇಕಾಗಿದೆ.
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand 1st Test) ನಡುವಣ ಪ್ರಥಮ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಅಂತಿಮ ಕೊನೇ ದಿನದಾಟ ನಡೆಯುತ್ತಿದ್ದು ನ್ಯೂಜಿಲೆಂಡ್ ವಿಕೆಟ್ ಕೀಳಲು ಭಾರತ ಹರಸಾಹಸ ಪಡುತ್ತಿದೆ. ಸದ್ಯ ಭೋಜನ ವಿರಾಮದ ವೇಳೆಗೆ ನ್ಯೂಜಿಲೆಂಡ್ 1 ವಿಕೆಟ್ ಕಳೆದುಕೊಂಡು 79 ರನ್ ಗಳಿಸಿದೆ. ಐದನೇ ದಿನದಾಟ ಅದಾಗಲೇ ಅರ್ಧದಷ್ಟು ಪೂರ್ಣಗೊಂಡಿದ್ದು ಟೀಮ್ ಇಂಡಿಯಾ (Team India) ಕೇನ್ ಪಡೆಯ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಸದ್ಯ ಕಿವೀಸ್ (New Zealand Cricket Team) ಗೆಲುವಿಗೆ 205 ರನ್‌ಗಳ ಅವಶ್ಯಕತೆಯಿದ್ದರೆ, ಟೀಮ್ ಇಂಡಿಯಾ ಗೆಲುವಿಗಾಗಿ ಎದುರಾಳಿಯ 9 ವಿಕೆಟ್ ಬೇಕಾಗಿದೆ. ಇನ್ನು 59 ಓವರ್ ಬಾಕಿ ಉಳಿದಿದ್ದು ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಇದಕ್ಕೂ ಮುನ್ನ ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 234 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ, ನ್ಯೂಜಿಲೆಂಡ್‌ಗೆ 284 ರನ್ ಗೆಲುವಿನ ಗುರಿ ನೀಡಿತು. ನಾಲ್ಕನೇ ದಿನದ ಆಟದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಕಳೆದುಕೊಂಡು 4 ರನ್ ಗಳಿಸಿತ್ತು. ಆರ್.ಅಶ್ವಿನ್ ಅವರು 1 ವಿಕೆಟ್ ಪಡೆದಿದ್ದರು.
ಟಾಮ್ ಲ್ಯಾಥಂ ಹಾಗೂ ವಿಲಿಯಂ ಸೊಮರ್ವಿಲ್ಲೆ ಅಂತಿಮ ದಿನದಾಟವನ್ನು ಭರ್ಜರಿ ಆಗಿ ಆರಂಭಿಸಿದರು. ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿ ಕ್ರೀಸ್ನಲ್ಲಿದೆ. ಭಾರತ ವಿಕೆಟ್ ಪಡೆಯಲು ನಾನಾ ಪ್ರಯೋಗ ನಡೆಸಿದರೂ ಪ್ರಯೋಜವಾಗಿಲ್ಲ. ಅಕ್ಷರ್, ಅಶ್ವಿನ್ಗೆ ಸಾಕಷ್ಟು ಓವರ್ ನೀಡಿದರೂ ವಿಕೆಟ್ ಸಿಗಲಿಲ್ಲ. ಸದ್ಯ ಮುಂದಿನ ಸೆಷನ್ ಮೇಲೆ ಎಲ್ಲರ ಕಣ್ಣಿದೆ.
ನಾಲ್ಕನೇ ದಿನದಾಟದಲ್ಲಿ ಎರಡನೇ ಇನ್ನಿಂಗ್ಸ್ ಆಡುತ್ತಿದ್ದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಒಂದು ಹಂತದಲ್ಲಿ ಕೇವಲ 51 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಆಡುತ್ತಿದ್ದ ತಂಡಕ್ಕೆ ಶ್ರೇಯಸ್ ಅಯ್ಯರ್, ರವಿಚಂದ್ರನ್ ಅಶ್ವಿನ್ ಹಾಗೂ ವೃದ್ದಿಮಾನ್ ಸಾಹ ಆಸರೆಯಾದರು. ಟೀಮ್ ಇಂಡಿಯಾ ಪರವಾಗಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿರು ಅಯ್ಯರ್ ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ಇವರು ಎರಡನೇ ಇನ್ನಿಂಗ್ಸ್‌ನಲ್ಲಿ 65 ರನ್‌ಗಳ ಕೊಡುಗೆ ನೀಡಿದರು.
ಆರ್ ಅಶ್ವಿನ್ 32 ರನ್‌ಗಳ ಕೊಡುಗೆ ನೀಡಿ ವಿಕೆಟ್ ಕಳೆದುಕೊಂಡರು. ಶ್ರೇಯಸ್ ಅವರು ಕೂಡ ಜೇಮಿಸನ್ ಎಸೆತಕ್ಕೆ ಔಟಾದ ಬಳಿಕ ವೃದ್ಧಿಮಾನ್ ಸಾಹಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಸಾಹ ಆಕರ್ಷಕ ಆಟದ ಮೂಲಕ ಆಧಾರವಾದರು. ಇವರು ಔಟಾಗದೆ 61 ರನ್ ಗಳಿಸಿದರೆ, ಅಕ್ಷರ್ ಪಟೇಲ್ ಕೂಡ ಅಜೇಯ 28 ರನ್‌ಗಳಿಸಿದರು. ಈ ಮೂಲಕ ಭಾರತ 234 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
India vs New Zealand 1st Test: ಟೀಮ್ ಇಂಡಿಯಾ ಡಿಕ್ಲೇರ್ ಮಾಡಿದ ಹಿಂದಿನ ರೋಚಕ ಸತ್ಯ ಬಿಚ್ಚಿಟ್ಟ ಶ್ರೇಯಸ್ ಅಯ್ಯರ್
(India vs New Zealand 1st Test New Zealand need 205 runs India need 9 wickets to win the Match)