L Sivaramakrishnan: ನನ್ನದು ಕೃಷ್ಣ ವರ್ಣ; ಅದಕ್ಕೇ ಜೀವನದಲ್ಲಿ ವರ್ಣಭೇದ ಹಿಂಸೆ ಅನುಭವಿಸಿದೆ ಎಂದ ಖ್ಯಾತ ಲೆಗ್ಸ್ಪಿನ್ನರ್ ಶಿವರಾಮಕೃಷ್ಣನ್
Colour Discrimination: ನನ್ನ ವಿರುದ್ಧ ಜೀವಮಾನವಿಡೀ ಚರ್ಮದ ಬಣ್ಣದ ಕಾರಣಕ್ಕಾಗಿ ತಾರತಮ್ಯ ಮಾಡಲಾಗಿದೆ ಹಾಗೂ ಟೀಕಿಸಲಾಗಿದೆ ಎಂಬುದಾಗಿ ಟೀಮ್ ಇಂಡಿಯಾ ಮಾಜಿ ಆಟಗಾರ ಲಕ್ಷ್ಮಣ್ ಶಿವರಾಮ ಕೃಷ್ಣನ್ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.
ಕಪ್ಪು ಮತ್ತು ಬಿಳಿಯರ (Black and White) ನಡುವಿನ ತಾರತಮ್ಯದ ವಿರುದ್ಧ ಅನೇಕ ಹೋರಾಟಗಳು ನಡೆದಿವೆ. ಆದರೂ ಸದ್ದಿಲ್ಲದೇ ಈ ರೀತಿಯ ಭೇದ ಭಾವ ಈಗಲೂ ನಡೆಯುತ್ತಲೇ ಇದೆ. ಸದ್ಯ ಇದೇ ವಿಚಾರವಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ನಿನ್ನರ್ ಲಕ್ಷ್ಮಣ್ ಶಿವರಾಮ ಕೃಷ್ಣನ್ (Laxman Sivaramakrishnan) ಮಾತನಾಡಿದ್ದು ನನ್ನ ಚರ್ಮದ ಬಣ್ಣದಿಂದಾಗಿ ಬದುಕಿನುದ್ದಕ್ಕೂ ಅವಮಾನಗಳನ್ನು ಎದುರಿಸುತ್ತಾ ಬಂದಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ (Twitter) ಟ್ವೀಟ್ ಮಾಡಿರುವ ಇವರು, ನನ್ನ ವಿರುದ್ಧ ಜೀವಮಾನವಿಡೀ ಚರ್ಮದ ಬಣ್ಣದ ಕಾರಣಕ್ಕಾಗಿ ತಾರತಮ್ಯ ಮಾಡಲಾಗಿದೆ ಹಾಗೂ ಟೀಕಿಸಲಾಗಿದೆ. ಹಾಗಾಗಿ, ಈಗ ನನಗೆ ಆ ಬಗ್ಗೆ ಏನೂ ಅನಿಸುವುದಿಲ್ಲ. ದುರದೃಷ್ಟವಶಾತ್ ನನ್ನನ್ನು ನನ್ನದೇ ದೇಶದಲ್ಲಿ ಅವಮಾನಿಸಲಾಗಿದೆ” ಎಂಬುದಾಗಿ ಬರೆದುಕೊಂಡಿದ್ದಾರೆ.
ಈ ಹಿಂದೆ ಕೂಡ ಇದೇ ವಿಚಾರವಾಗಿ ಲಕ್ಷ್ಮಣ್ ಶಿವರಾಮ ಕೃಷ್ಣನ್ ಮಾತನಾಡಿದ್ದರು. 16 ನೇ ವಯಸ್ಸಿನಲ್ಲಿ ನಾನು ಭಾರತೀಯ ತಂಡಕ್ಕೆ ಆಯ್ಕೆಯಾಗಿದ್ದೇನೆ. ನನ್ನ ಮೊದಲ ಪಂದ್ಯಕ್ಕೂ ಮುಂಚಿತವಾಗಿ, ಮುಂಬೈನ ಪಂಚತಾರಾ ಹೋಟೆಲ್‌ಗೆ ನಾನು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿತ್ತು. ಹೋಟೆಲ್ ಉದ್ಯೋಗಿ 16 ವರ್ಷದ ಹುಡುಗ ಭಾರತಕ್ಕಾಗಿ ಹೇಗೆ ಆಡುತ್ತಾನೆ ಎಂಬುದನ್ನು ಯೋಚಿಸಿದ ಮತ್ತು ನನ್ನ ಮೈಬಣ್ಣ ಕಪ್ಪು ಆಗಿದ್ದರಿಂದ ಅವನು ನನ್ನನ್ನು ಹೋಟೆಲ್ ಒಳಗೆ ಬಿಡಲಿಲ್ಲ ಎಂದಿದ್ದರು.
ಸದ್ಯ ಮತ್ತೊಮ್ಮೆ ಬೇಸರ ಹೊಹಾಕಿರುವ ಇವರು, ”ನನ್ನ ವಿರುದ್ಧ ಜೀವಮಾನವಿಡೀ ಚರ್ಮದ ಬಣ್ಣದ ಕಾರಣಕ್ಕಾಗಿ ತಾರತಮ್ಯ ಮಾಡಲಾಗಿದೆ ಹಾಗೂ ಟೀಕಿಸಲಾಗಿದೆ. ಹಾಗಾಗಿ, ಈಗ ನನಗೆ ಆ ಬಗ್ಗೆ ಏನೂ ಅನಿಸುವುದಿಲ್ಲ. ದುರದೃಷ್ಟವಶಾತ್ ನನ್ನನ್ನು ನನ್ನದೇ ದೇಶದಲ್ಲಿ ಅವಮಾನಿಸಲಾಗಿದೆ” ಎಂಬುದಾಗಿ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.
I have been criticised and colour discriminated all my life, so it doesn’t bother me anymore. This unfortunately happens in our own country
— Laxman Sivaramakrishnan (@LaxmanSivarama1) November 26, 2021
”ನಾನು ಇದನ್ನು ಇಂದು ಬರೆಯುತ್ತಿರುವುದು ಸಹಾನುಭೂತಿ ಪಡೆಯಲು ಅಥವಾ ಗಮನ ಸೆಳೆಯಲು ಅಲ್ಲ. ನಾನು ಆಕ್ರೋಶ ಹೊಂದಿರುವ ವಿಷಯದಲ್ಲಿ ಜನರ ಮನೋಭಾವ ಬದಲಾಗಬಹುದು ಎನ್ನುವ ಆಶೆಯಿಂದ. ಹದಿನೈದನೇ ವರ್ಷದ ಬಳಿಕ ನಾನು ಭಾರತದ ಒಳಗೆ ಮತ್ತು ಹೊರಗೆ ವ್ಯಾಪಕವಾಗಿ ಓಡಾಡಿದ್ದೇನೆ. ನನ್ನ ಚರ್ಮದ ಬಣ್ಣದ ಬಗ್ಗೆ ಜನರು ಹೊಂದಿರುವ ಗೀಳನ್ನು ಈಗಲೂ ನನಗೆ ಅರ್ಥ ಮಾಡಿಕೊಳ್ಳಲು ಆಗಲಿಲ್ಲ” ಎಂದು ಹೇಳಿದ್ದಾರೆ.
ಭಾರತವೂ ವರ್ಣಭೇದ ನೀತಿಯನ್ನು ಎದುರಿಸುತ್ತಿದೆಯೇ ಎಂಬ ಪ್ರಶ್ನೆಗೆ, ನಾನು ಭಾರತದ ಉತ್ತರ ಭಾಗಕ್ಕೆ ಭೇಟಿ ನೀಡಿದಾಗ, ನನ್ನನ್ನು ಹಿಂದಿ ಹೆಸರಿನಿಂದ ಕರೆಯಲಾಯಿತು. ಕೆಲವು ವರ್ಷಗಳ ಹಿಂದೆ ಬ್ರಾಡ್‌ಕಾಸ್ಟರ್ ಆಗಿ ಕೆಲಸ ಮಾಡುವಾಗ, ನನ್ನ ಬಳಿ ಅಧಿಕೃತ ದಾಖಲೆಗಳು ಇದ್ದರೂ ನನ್ನನ್ನು ಪೊಲೀಸರು ತಡೆದರು. ಆದರೆ ನನ್ನ ಮುಂದೆ ಮುನ್ನಡೆಸುತ್ತಿರುವ ಇನ್ನೊಬ್ಬ ಸದಸ್ಯನನ್ನು ಏನನ್ನೂ ಕೇಳದೆ ನೇರವಾಗಿ ಒಳಗೆ ಅನುಮತಿಸಲಾಯಿತು. ಇದು ವರ್ಣಭೇದ ನೀತಿಯೊಂದಿಗೆ ಮಾತ್ರ ಸಂಬಂಧಿಸಿದೆ ಮತ್ತು ಇನ್ನೇನೂ ಇಲ್ಲ ಎಂದು ತಮಗಾದ ಅನುಭವಗಳ ಬಗ್ಗೆ ಈ ಹಿಂದೆ ಕೂಡ ಹೇಳಿಕೊಂಡಿದ್ದರು.
IND vs NZ 1st Test, Day 5 LIVE Score:
India vs New Zealand 1st Test: ಟೀಮ್ ಇಂಡಿಯಾ ಡಿಕ್ಲೇರ್ ಮಾಡಿದ ಹಿಂದಿನ ರೋಚಕ ಸತ್ಯ ಬಿಚ್ಚಿಟ್ಟ ಶ್ರೇಯಸ್ ಅಯ್ಯರ್
(Laxman Sivaramakrishnan said that he has faced insults because of his skin tone)
Published On - 11:04 am, Mon, 29 November 21