Shikhar Dhawan Birthday: ಕ್ರಿಕೆಟ್ ಲೋಕದಿಂದ ಕಣ್ಮರೆಯಾದ ಶಿಖರ್ ಧವನ್ ಈಗ ಎಲ್ಲಿದ್ದಾರೆ?, ಏನು ಮಾಡುತ್ತಿದ್ದಾರೆ?

|

Updated on: Dec 05, 2023 | 7:45 AM

Happy Birthday Shikhar Dhawan: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆರಂಭಿಕ ಆಟಗಾರ ಶಿಖರ್ ಧವನ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 38ನೇ ವರ್ಷಕ್ಕೆ ಕಾಲಿಟ್ಟಿರುವ ಧವನ್​ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸದ್ಯ ಕ್ರಿಕೆಟ್ ಲೋಕದಿಂದ ದೂರ ಉಳಿದಿರುವ ಧವನ್ ಈಗ ಎಲ್ಲಿದ್ದಾರೆ?, ಏನು ಮಾಡುತ್ತಿದ್ದಾರೆ? ನೋಡಿ.

Shikhar Dhawan Birthday: ಕ್ರಿಕೆಟ್ ಲೋಕದಿಂದ ಕಣ್ಮರೆಯಾದ ಶಿಖರ್ ಧವನ್ ಈಗ ಎಲ್ಲಿದ್ದಾರೆ?, ಏನು ಮಾಡುತ್ತಿದ್ದಾರೆ?
Shikhar Dhawan
Follow us on

ಟೀಮ್ ಇಂಡಿಯಾ ಇತ್ತೀಚೆಗೆ ಐಸಿಸಿ ಏಕದಿನ ವಿಶ್ವಕಪ್ 2023 ರ ಅಭಿಯಾನವನ್ನು ಮುಗಿಸಿ, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನೂ ಕೊನೆಗೊಳಿಸಿತು. ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಯಾರಾಗುತ್ತಿದೆ. ಏಕದಿನ ವಿಶ್ವಕಪ್​ನಲ್ಲಿ, ಭಾರತ ತಂಡವು ತನ್ನ ಸಂಪೂರ್ಣ ಆಟದ ಯೋಜನೆಯನ್ನು ಬದಲಾಯಿಸಿತ್ತು. ಈ ಬದಲಾದ ಯೋಜನೆಯಲ್ಲಿ ಕಣ್ಮರೆಯಾದ ಒಬ್ಬ ಆಟಗಾರ ಎಂದರೆ ಅದು ಶಿಖರ್ ಧವನ್ (Shikhar Dhawan). ಸದ್ಯ ಕ್ರಿಕೆಟ್ ಲೋಕದಿಂದ ದೂರ ಉಳಿದಿರುವ ಧವನ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಶಿಖರ್ 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಡಿಸೆಂಬರ್ 5 ರಂದು ಶಿಖರ್ ಧವನ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಸದ್ಯ ಕ್ರಿಕೆಟ್ ಲೋಕದಿಂದ ದೂರ ಉಳಿದಿರುವ ಧವನ್ ತಮ್ಮ ಊರಿನಲ್ಲಿ ಸಮಯ ಕಳೆಯುತ್ತಿದ್ದಾರೆ. ವಿಶ್ವಕಪ್‌ಗೂ ಮುನ್ನ ಕೆಲವು ಸರಣಿಗಳಲ್ಲಿ ಟೀಮ್ ಇಂಡಿಯಾ ನಾಯಕತ್ವವನ್ನು ವಹಿಸಿದ್ದರು, ಇದರಲ್ಲಿ ಯಶಸ್ವಿಯಾಗಿದ್ದರೂ ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿರಲಿಲ್ಲ.

38 ವರ್ಷದ ಶಿಖರ್ ಧವನ್ 2022ರ ಡಿಸೆಂಬರ್‌ನಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಪಂದ್ಯವನ್ನು ಆಡಿದ್ದರು. 2013 ರ ಚಾಂಪಿಯನ್ಸ್ ಟ್ರೋಫಿ, 2015 ಮತ್ತು 2019 ಕ್ರಿಕೆಟ್ ವಿಶ್ವಕಪ್‌ನಲ್ಲಿ ಧವನ್ ಟೀಮ್ ಇಂಡಿಯಾದ ಸ್ಟಾರ್ ಆಗಿದ್ದರು. ಆದರೆ 2019ರ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತನ್ನ ಪ್ಲಾನ್ ಬದಲಿಸಿ ಯುವ ಆಟಗಾರರು ಎಂಟ್ರಿ ಪಡೆದ ತಕ್ಷಣ ಶಿಖರ್ ಧವನ್ ಅವರನ್ನು ಕೈಬಿಡಲಾಯಿತು.

ಇದನ್ನೂ ಓದಿ
ವಿಶ್ವಕಪ್ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡ ರೋಹಿತ್: ಬೇಸರಗೊಂಡ ಫ್ಯಾನ್ಸ್
IPL 2024: ಕೈ ಕೊಡುವ ಭಯದಲ್ಲೇ ಸ್ಟಾರ್ ಆಟಗಾರನ ಕೈ ಬಿಟ್ಟ RCB..!
ಧೋನಿ ನಿವೃತ್ತಿ ಬಳಿಕ CSK ತಂಡಕ್ಕೆ ರಿಷಭ್ ಪಂತ್ ಎಂಟ್ರಿ..!
IPL 2024: CSK ರಾಯುಡು ಸ್ಥಾನಕ್ಕೆ ಕನ್ನಡಿಗ: ಅಶ್ವಿನ್ ಭವಿಷ್ಯ

ಆ ನಂತರ ಶಿಖರ್ ಧವನ್ ಆಡಿದ್ದು ಕೆಲವೇ ಪಂದ್ಯಗಳಲ್ಲಿ ಮಾತ್ರ. ಯಾವ ಪಂದ್ಯಗಳಲ್ಲಿ ಅವಕಾಶ ಸಿಕ್ಕರೂ ಟೀಮ್ ಇಂಡಿಯಾಕ್ಕೆ ಕೊಡುಗೆ ನೀಡಿದ್ದಾರೆ. 2023ರ ವಿಶ್ವಕಪ್ ಭಾರತದಲ್ಲಿಯೇ ಇದ್ದುದರಿಂದ ಅವರಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗಿತ್ತು. ಆದರೆ, ಟೀಮ್ ಇಂಡಿಯಾಕ್ಕೆ ಶುಬ್​ಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್ ಮತ್ತು ರುತುರಾಜ್ ಗಾಯಕ್ವಾಡ್ ಆಯ್ಕೆ ಇದ್ದರಿಂದ ಧವನ್​ಗೆ ಸ್ಥಾನ ಸಿಗಲಿಲ್ಲ.

ಶಿಖರ್ ಧವನ್ ಟೀಮ್ ಇಂಡಿಯಾದಲ್ಲಿ ಸಾಕಷ್ಟು ತಡವಾಗಿ ಅವಕಾಶ ಪಡೆದರು, 2010 ರಲ್ಲಿ ಚೊಚ್ಚಲ ಏಕದಿನ ಆಡಿದರೆ 2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರ ಅದೃಷ್ಟ ಬದಲಾಯಿತು. ಎಂಎಸ್ ಧೋನಿ ಅವರು ಧವನ್ ಮತ್ತು ರೋಹಿತ್ ಅವರನ್ನು ಆರಂಭಿಕರಾಗಿ ಸಿದ್ಧಪಡಿಸಿದರು. ಅಂದಿನಿಂದ ಸತತ 6-7 ವರ್ಷಗಳಿಂದ ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಶಿಖರ್ 167 ODIಗಳಲ್ಲಿ 6793 ರನ್ ಗಳಿಸಿದ್ದಾರೆ, 45 ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ, ಇದರಲ್ಲಿ 17 ಶತಕಗಳೂ ಸೇರಿವೆ.

ODI ಹೊರತುಪಡಿಸಿ, ಶಿಖರ್ 34 ಟೆಸ್ಟ್‌ಗಳಲ್ಲಿ 2315 ರನ್ ಮತ್ತು 7 ಶತಕಗಳನ್ನು ಹೊಂದಿದ್ದಾರೆ. 68 T20 ಪಂದ್ಯಗಳಲ್ಲಿ, ಶಿಖರ್ ಧವನ್ 1800 ರನ್ ಗಳಿಸಿದ್ದಾರೆ. ಶಿಖರ್ 2018ರಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಟೆಸ್ಟ್, 2022ರಲ್ಲಿ ಕೊನೆಯ ODI ಮತ್ತು 2021ರಲ್ಲಿ ಕೊನೆಯ T20 ಆಡಿದ್ದರು. ಈಗ ಅವರಿಗೆ 38 ವರ್ಷ ವಯಸ್ಸಾಗಿದ್ದು, ಟೀಮ್ ಇಂಡಿಯಾಗೆ ಮರಳುವುದು ಅನುಮಾನ ಎನ್ನಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ