2024 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ವೈಯಕ್ತಿಕ ಬದುಕಿನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುವ ಸುಳಿವು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಚೆಂದುಳ್ಳಿ ಚೆಲುವೆಯೊಂದಿಗೆ ಓಡಾಟ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಪ್ರಸ್ತುತ ಧವನ್ ಜೊತೆಗೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಈ ಮಿಸ್ಟ್ರಿ ಗರ್ಲ್ ಯಾರೆಂಬುದು ತಿಳಿದುಬಂದಿಲ್ಲ ಆದಾಗ್ಯೂ ಧವನ್, ಈ ಸುಂದರಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪಾಪರಾಜಿಗಳ ಕ್ಯಾಮರಾ ಕಣ್ಣಿನಲ್ಲಿ ಸೆರೆ ಸಿಕ್ಕಿರುವ ವಿಡಿಯೋದಲ್ಲಿ ಶಿಖರ್ ಧವನ್ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಧವನ್ ನೀಲಿ ಟಿ-ಶರ್ಟ್ ಮತ್ತು ಕಪ್ಪು ಕಾರ್ಗೋವನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಧವನ್ ಜೊತೆಗೆ ಹುಡುಗಿ ಕೂಡ ಕಾರಿನಿಂದ ಇಳಿದಿದ್ದು, ಪಾಪರಾಜಿಗಳ ಕ್ಯಾಮೆರಾ ಅವರತ್ತ ವಾಲಿದೆ. ಕೂಡಲೇ ಆಕೆ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಕ್ಯಾಮೆರಾ ನೋಡಿದ ಕೂಡಲೇ ಅವರು ತಮ್ಮ ಮುಖವನ್ನು ಬೇರೆ ಕಡೆ ತಿರುಗಿಸಿದ್ದಾಳೆ. ಆದಾಗ್ಯೂ, ಅವರು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
Cricketer Shikhar Dhawan spotted at the airport today with a mystery girl.
📸: Pallav Paliwal#shikhar #shikhardhawan #cricketer pic.twitter.com/Vl4K2HCUPc
— HT City (@htcity) November 4, 2024
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಮಿಸ್ಟರಿ ಗರ್ಲ್ ಯಾರು ಎಂಬುದು ಎಲ್ಲರ ಪ್ರಶ್ನೆಯಾಗಿದೆ. ವೀಡಿಯೊದ ಕಾಮೆಂಟ್‌ಗಳಲ್ಲಿ, ಜನರು ಗಬ್ಬರ್‌ನ ಹೊಸ ಪ್ರೇಮಿಯಾಗಿರಬಹುದು ಎಂದು ಹೇಳಿದ್ದಾರೆ. ಹುಡುಗಿ ವಿದೇಶಿಯಂತೆ ಕಾಣುತ್ತಿದ್ದು, ಹೀಗಿರುವಾಗ ಮತ್ತೆ ಗಬ್ಬರ್ ಜೀವನದಲ್ಲಿ ವಿದೇಶಿ ಹುಡುಗಿಯೊಬ್ಬಳು ಬಂದಿದ್ದಾಳೆ ಎಂದು ಜನ ಕಮೆಂಟ್ ಮಾಡಿದ್ದಾರೆ. ಆದರೆ, ಇದುವರೆಗೂ ಈ ವಿದೇಶಿ ಚೆಲುವೆ ಯಾರೆಂಬುದು ಸ್ಪಷ್ಟವಾಗಿಲ್ಲ.
ವಾಸ್ತವವಾಗಿ ಶಿಖರ್ ಧವನ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪತ್ನಿ ಆಯೇಷಾ ಮುಖರ್ಜಿಯೊಂದಿಗೆ ವಿಚ್ಛೇದನ ಪಡೆದಿದ್ದರು. ಆಯೇಷಾ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ತಮ್ಮ ಮಕ್ಕಳೊಂದಿಗೆ ನೆಲೆಸಿದ್ದಾರೆ. ವಿಚ್ಛೇದನದ ನಂತರ ಹೊಸ ಹುಡುಗಿಯೊಂದಿಗೆ ಧವನ್ ಕಾಣಿಸಿಕೊಂಡಿರುವುದು ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಶಿಖರ್ ಧವನ್ ಅವರ ಈ ಹೊಸ ಸಂಬಂಧ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆ ಎಂಬುದು ಈಗ ಕುತೂಹಲಕಾರಿಯಾಗಿದೆ.
ಈ ವರ್ಷವಷ್ಟೇ ಕ್ರಿಕೆಟ್‌ಗೆ ಹೇಳಿದ ಧವನ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 269 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 24 ಶತಕ ಮತ್ತು 44 ಅರ್ಧ ಶತಕಗಳನ್ನು ಸೇರಿದಂತೆ 10867 ರನ್ ಗಳಿಸಿದ್ದಾರೆ. 2015ರ ಏಕದಿನ ವಿಶ್ವಕಪ್‌ನಲ್ಲಿ ಧವನ್ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಆಡಿದ 8 ಪಂದ್ಯಗಳಲ್ಲಿ ಧವನ್ 51.50 ಸರಾಸರಿಯಲ್ಲಿ 412 ರನ್ ಗಳಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Mon, 4 November 24