ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಮ್ (Babar Azam) ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಆಗಾಗ್ಗೆ ಹೋಲಿಕೆಗಳು ಕೇಳಿ ಬರುತ್ತಿರುತ್ತವೆ. ಅದರಲ್ಲೂ ಇಬ್ಬರು ಕೂಡ ಕವರ್ ಡ್ರೈವ್ ಶಾಟ್ ಮೂಲಕ ಕ್ರಿಕೆಟ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಹೀಗಾಗಿಯೇ ಕೊಹ್ಲಿಗೆ ಸರಿಸಾಟಿಯಾಗಿ ಬಾಬರ್ ನಿಲ್ಲಲಿದ್ದಾರೆ ಎಂಬ ಅಭಿಪ್ರಾಯಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿರುತ್ತವೆ. ಆದರೆ ಈ ಹೋಲಿಕೆಯನ್ನು ಖಂಡತುಂಡವಾಗಿ ನಿರಾಕರಿಸಿದ್ದಾರೆ ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್. ಕೊಹ್ಲಿಗೆ ಬಾಬರ್ ಆಜಮ್ನ್ನು ಹೋಲಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಖ್ತರ್, ಬಾಬರ್ ಉತ್ತಮ ಆಟಗಾರನಾಗುವ ಎಲ್ಲ ಸಾಮರ್ಥ್ಯವನ್ನು ಹೊಂದಿದ್ದಾನೆ. ಅದಕ್ಕಾಗಿ ಕೊಹ್ಲಿಯಂತೆ ಸ್ಥಿರವಾಗಿ ಸ್ಕೋರ್ ಮಾಡಬೇಕಾಗುತ್ತದೆ. ಪಾಕ್ ಬ್ಯಾಟ್ಸ್ಮನ್ನ್ನು ಎಲ್ಲರೂ ಈಗಲೇ ವಿರಾಟ್ ಜೊತೆ ಹೋಲಿಕೆ ಮಾಡುತ್ತಿದ್ದಾರೆ. ನನ್ನ ಪ್ರಕಾರ ಕೊಹ್ಲಿಗೆ ಸರಿಸಾಟಿಯಾಗಲು ಬಾಬರ್ ಕನಿಷ್ಠ 20 ರಿಂದ 30 ಸಾವಿರ ರನ್ ಗಳಿಸಬೇಕಾಗುತ್ತದೆ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅಖ್ತರ್, ‘ವೇಗದ ಬೌಲರ್‌ಗಳ ಕೊರತೆಯಿರುವ ಸಮಯದಲ್ಲಿ ಬಾಬರ್ ಆಜಮ್ ಕ್ರಿಕೆಟ್ ಆಡುತ್ತಿದ್ದಾರೆ. ಅದಕ್ಕೂ ಮುಂಚೆಯೇ ಅವರನ್ನು ವಿರಾಟ್ ಕೊಹ್ಲಿಯೊಂದಿಗೆ ಹೋಲಿಸಲಾಗುತ್ತಿದೆ. ವಿರಾಟ್ ಕೊಹ್ಲಿ ಮಾಡಿದಂತೆ ಮೊದಲು 20 ರಿಂದ 30 ಸಾವಿರ ರನ್ ಗಳಿಸಲು ಅವಕಾಶ ಮಾಡಿಕೊಡಿ. ಆ ಬಳಿಕ ಹೋಲಿಕೆ ಮಾಡುವುದು ಉತ್ತಮ. ಕಳೆದ ಕೆಲವು ವರ್ಷಗಳಿಂದ ಬಾಬರ್ ಆಜಮ್ ತಮ್ಮ ಬ್ಯಾಟಿಂಗ್‌ನಲ್ಲಿ ಸಫಲರಾಗಿದ್ದಾರೆ ಮತ್ತು ಶ್ರೇಷ್ಠ ಆಟಗಾರನಾಗುವ ಗುಣ ಅವರಲ್ಲಿದೆ ಎಂದು ರಾವಲ್ಪಿಂಡಿ ಎಕ್ಸ್ಪ್ರೆಸ್ ಅಭಿಪ್ರಾಯಪಟ್ಟರು.
ಶೋ’ಬಾಬರ್ ಆಜಮ್ ಇನ್ನೂ ಕಲಿಯುತ್ತಿದ್ದಾನೆ. ಈ ಮೊದಲು ಅವರನ್ನು ಏಕದಿನ ತಂಡದಿಂದ ಹೊರಗಿಡಲಾಗಿತ್ತು. ಸತತ ಪರಿಶ್ರಮದ ಮೂಲಕ ಈಗ ಅವರು ಏಕದಿನ ತಂಡದಲ್ಲಿ ಸ್ಥಾನ ಪಡೆದರು. ಅನೇಕರು ಅವರನ್ನು ಟಿ 20 ಆಟಗಾರ ಎಂದು ಪರಿಗಣಿಸಲಿಲ್ಲ . ಆದರೆ ಈಗ ಅವರು ಟಿ 20 ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಒಂದೇ ದಿನದಲ್ಲಿ ಎಲ್ಲವೂ ಬದಲಾಗುವುದಿಲ್ಲ. ವಿರಾಟ್ ಕೊಹ್ಲಿ 2009-10ರಲ್ಲಿ ಏನೂ ಆಗಿರಲಿಲ್ಲ. ಆದರೆ ಅದರ ನಂತರ ವಿರಾಟ್ ಕೊಹ್ಲಿ ತಮ್ಮ ವೇಗವನ್ನು ಬದಲಾಯಿಸಿಕೊಂಡರು. ಅವರ ಆಟ ಮತ್ತು ಫಿಟ್‌ನೆಸ್ ಕಡೆ ಗಮನ ಹರಿಸಿದರು. ಆ ಮೂಲಕ ವಿರಾಟ್ ಕೊಹ್ಲಿ ಬೆಳೆದರು ಎಂದು ಅಖ್ತರ್ ತಿಳಿಸಿದರು.
ಬಾಬರ್ ಆಜಮ್ ಇತ್ತೀಚೆಗೆ ಅತೀ ವೇಗವಾಗಿ 14 ಏಕದಿನ ಶತಕಗಳನ್ನು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 81 ಇನ್ನಿಂಗ್ಸ್ ಮೂಲಕ ಬಾಬರ್ 14 ಶತಕ ಬಾರಿಸಿದರೆ, ವಿರಾಟ್ ಕೊಹ್ಲಿ ಈ ಸಾಧನೆ ಮಾಡಲು 103 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಇನ್ನು ಬಾಬರ್ ಆಜಮ್ ಅವರ ಟೆಸ್ಟ್ ಸರಾಸರಿ 42.5 ಮತ್ತು ಏಕದಿನ ಪಂದ್ಯಗಳಲ್ಲಿ 56.9 ಹಾಗೂ ಟಿ20 ಗಳಲ್ಲಿ ಇನ್ನಿಂಗ್ಸ್‌ಗೆ 46.8 ಸರಾಸರಿ ಹೊಂದಿದ್ದರೆ, ವಿರಾಟ್ ಕೊಹ್ಲಿ ವಿಶ್ವದ ಮೂರು ಸ್ವರೂಪಗಳಲ್ಲಿ ಸರಾಸರಿ ಐವತ್ತಕ್ಕೂ ಹೆಚ್ಚು ಸರಾಸರಿ ಹೊಂದಿದ್ದಾರೆ.
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!
(Shoaib akhtar big statement on Pakistan captain babar azam virat kohli comparison)